ವಿರಾಜಪೇಟೆ ಸಮೀಪದ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮಿಯಾಲ ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ಕಾಫಿ, ಅಡಿಕೆ ಬಾಳೆ ಹಾಗೂ ನಾಟಿ ಮಾಡಿದ ಗದ್ದೆಯನ್ನೇ ತುಳಿದು ನಾಶ ಪಡಿಸಿದೆ.
ಪಾಲೇಕಂಡ ಕುಮಾರ,ಮುಕಂಡ ಉಮೇಶ್, ಮಾಚಯ್ಯ,ರವಿ ಮತಿತ್ತರರ ತೋಟಕ್ಕೆ ಲಗ್ಗೆ ಇಟ್ಟ 3 ಕಾಡಾನೆಗಳ ಹಿಂಡು ಫಸಲು ಭರಿತ ಕಾಫಿ, ಅಡಿಕೆ, ಬಾಳೆ ಹಾಗೂ ನಾಟಿ ಮಾಡಿದ ಗದ್ದೆಯನ್ನು ತುಳಿದು ನಾಶ ಪಡಿಸಿದೆ.
ಕೂಡಲೇ ಅರಣ್ಯ ಇಲಾಖೆ ಕಾಡಾನೆ ಕಾರ್ಯಾಚರಣೆ ನಡೆಸಿ ಕಾಡಾನೆ ತೋಟಕ್ಕೆ ನುಸುಳದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ವಿರಾಜಪೇಟೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸೈಪುದ್ದೀನ್ ಚಾಮಿಯಾಲ ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತು ಕಾಡಾನೆ ಕಾರ್ಯಾಚರಣೆ ನಡೆಸಬೇಕು,ಸರಕಾರ ಕಾಡಾನೆ ಯನ್ನು ಹಿಡಿಯಲು ಅನುಮತಿ ನೀಡಬೇಕು, ನಷ್ಟ ಅನುಭವಿಸಿದ ಗ್ರಾಮಸ್ಥರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ