Reading Time: < 1 minute
ಮೈಸೂರಿನ ರೋಟೆರ್ಯಾಕ್ಟ್ ಮೈಸೂರು ಈಸ್ಟ್ ಕ್ಲಬ್ ನ ವತಿಯಿಂದ ನಾಗರಹೊಳೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಅಲ್ಲಿ ವಾಸವಿರುವ ಜನರಿಗೆ ಸುಮಾರು 180 ಹೊದಿಕೆಗಳು ಹಾಗೂ ದಿನಸಿ ಸಾಮಾನುಗಳ ಕಿಟ್ ಅನ್ನು ಕ್ಲಬ್ಬಿನ ಪ್ರತಿನಿಧಿ ರೋಟರಿ ನಿಖಿಲ್ ಅವರ ನೇತೃತ್ವದಲ್ಲಿ ವಿತರಿಸಲಾಯಿತು. ಹಾಗೆ ಅಲ್ಲಿನ ಸರಕಾರಿ ವಾಲ್ಮೀಕಿ ಆಶ್ರಮ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.
ಈ ಸಂದರ್ಭ ರೋಟರಿ ಅಂತರಾಷ್ಟ್ರೀಯ ಜಿಲ್ಲೆ-3181ನ ಮಾಜಿ ಜಿಲ್ಲಾ ಪ್ರತಿನಿಧಿ ರೋಟರಿ ಡಾರೆಲ್, ರೋಟರಿ ಅಂತರಾಷ್ಟ್ರೀಯ ಜಿಲ್ಲೆ -3192ನ ಜಿಲ್ಲಾ ಪ್ರತಿನಿಧಿ ರೋಟರಿ ಕಿರಣ್, ರೋಟರಿ ರಕ್ಷಿತ್, ರೋಟರಿ ಅಭಿ, ರೋಟರಿ ಜಿಶಾನ್ ಉಪಸ್ಥಿತರಿದ್ದರು.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
✍️….ವರದಿ: ಝಕರಿಯ ನಾಪೋಕ್ಲು