ಆಗಸ್ಟ್ 20 ರಂದು ನಂಜರಾಯಪಟ್ಟಣ ಸಹಕಾರ ಸಂಘದ ನೂತನ ಬಹುಸೇವಾ ಕೇಂದ್ರದ ಉದ್ಘಾಟನೆನಬಾರ್ಡ್ ಪ್ರಾಯೋಜಿತದಲ್ಲಿ ನಿರ್ಮಿಸಲಾದ ನಂಜರಾಯಪಟ್ಟಣ ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ನಿ. ಇದರ ನೂತನ ಬಹುಸೇವಾ ಕೇಂದ್ರದ ಗೋದಾಮು, ಮಳಿಗೆಗಳು, ನೂತನ ಕಛೇರಿ, ಆಡಳಿತ ಸಭಾಂಗಣ ಮತ್ತು ನೂತನ ಸಹಕಾರ ಭವನದ ಉದ್ಘಾಟನಾ ಸಮಾರಂಭವು ದಿನಾಂಕ: 20-08-2023ರ ಭಾನುವಾರ ಪೂರ್ವಾಹ್ನ 11.00 ಗಂಟೆಗೆ ನಂಜರಾಯಪಟ್ಟಣದಲ್ಲಿ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ನಂಜರಾಯಪಟ್ಟಣ ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ನಿ. ಇದರ ಅಧ್ಯಕ್ಷರಾದ ಬಿ.ಸಿ. ಮಾದಯ್ಯ (ಮುರಳಿ)ಯವರು ವಹಿಸಲಿದ್ದಾರೆ. ಬಹುಸೇವಾ ಕಟ್ಟಡದ ಗೋದಾಮು ಉದ್ಘಾಟನೆಯನ್ನು ಕೊಡಗು-ಮೈಸೂರು ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ನೆರವೇರಿಸಲಿದ್ದಾರೆ. ಮಳಿಗೆಗಳ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬೋಸರಾಜು ನೆರವೇರಿಸಲಿದ್ದಾರೆ. ಕಛೇರಿ ಮತ್ತು ಬ್ಯಾಂಕಿಂಗ್ ಕೌಂಟರ್ ಉದ್ಘಾಟನೆಯನ್ನು ಕರ್ನಾಟಕದ ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ ನೆರವೇರಿಸಲಿದ್ದಾರೆ. ನಾಮಫಲಕ ಉದ್ಘಾಟನೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಡಾ. ಮಂಥರ್ ಗೌಡ ನೆರವೇರಿಸಲಿದ್ದಾರೆ. ಲಿಫ್ಟ್ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ ನೆರವೇರಿಸಲಿದ್ದಾರೆ. ಭದ್ರತಾ ಕೊಠಡಿಯ ಉದ್ಘಾಟನೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಎ.ಎಸ್. ಪೊನ್ನಣ್ಣ ನೆರವೇರಿಸಲಿದ್ದಾರೆ. ಸಹಕಾರ ಭವನದ ಉದ್ಘಾಟನೆಯನ್ನು ಕರ್ನಾಟಕದ ಮಾಜಿ ಸಚಿವರಾದ ಎಂ.ಪಿ ಅಪ್ಪಚ್ಚು ರಂಜನ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಪಿ. ಬಾಂಡ್ ಗಣಪತಿ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಅಪ್ಪಚಟ್ಟೋಳಂಡ ಮನು ಮುತ್ತಪ್ಪ, ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ.ಎಲ್. ವಿಶ್ವ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕರಾದ ವಿ. ರಮೇಶ್ ಬಾಬು, ಕೊಡಗು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಆರ್. ಬಿ. ಸಚಿನ್, ಸಹಕಾರ ಸಂಘಗಳ ಉಪ ನಿಬಂಧಕರಾದ ಎಂ.ಎಸ್. ಕೃಷ್ಣಪ್ರಸಾದ್, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಂ. ಈ. ಮೋಹನ್ ಭಾಗವಹಿಸಲಿದ್ದಾರೆ.
ಈ ಉದ್ಘಾಟನಾ ಸಮಾರಂಭಕ್ಕೆ ನಂಜರಾಯಪಟ್ಟಣ ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ನಿ. ಇದರ ಅಧ್ಯಕ್ಷರಾದ ಬಿ.ಸಿ. ಮಾದಯ್ಯ (ಮುರಳಿ), ಉಪಾಧ್ಯಕ್ಷರಾದ ಎಸ್. ಧನಪಾಲ, ನಿರ್ದೇಶಕರುಗಳಾದ ಡಿ. ಎಲ್. ಮಹೇಶ್ಚಂದ್ರ ,ಪಿ.ಬಿ. ಅಶೋಕ, ಬಿ.ಎನ್. ಕಾಶಿ, ಕೆ.ಡಿ. ದಾದಪ್ಪ, ವಿ. ಎಸ್. ರಾಜಪ್ಪ ಕೆ.ಜಿ. ಲೋಕನಾಥ, ಶ್ರೀಮತಿ ಹೆಚ್. ಎನ್. ಕಮಲಮ್ಮ, ಶ್ರೀಮತಿ ಎಸ್.ಬಿ. ಅನಿತ, ಅರ್.ಕೆ. ಚಂದ್ರ, ಹೆಚ್.ಜೆ. ಕೃಷ್ಣ, ಸಹಕಾರ ಸಂಘಗಳ ಮೇಲ್ವಿಚಾರಕರಾದ ವಿ.ಸಿ. ಅಜಿತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ. ಟಿ.. ಧನಂಜಯ ಮತ್ತು ಸಿಬ್ಬಂದಿ ವರ್ಗದವರು ಹೃತ್ಪೂರ್ವಕ ಸ್ವಾಗತವನ್ನು ಬಯಸಿದ್ದಾರೆ.