ಬೆಂಗಳೂರುವಿನಲ್ಲಿ ನಡೆಯಲಿರುವ ಎಸ್ ಎಸ್ ಎಫ್ ಗೋಲ್ಡನ್ ಫಿಫ್ಟಿಗೆ ಪ್ರಚಾರ
ಚೆಯ್ಯಂಡಾಣೆ, ಆ 20: ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ ಎಸ್ ಎಫ್ ) ಕಡಂಗ ಸೆಕ್ಟರ್ ವತಿಯಿಂದ ಸೆಪ್ಟೆಂಬರ್ 10 ರಂದು ಬೆಂಗಳೂರುವಿನಲ್ಲಿ ನಡೆಯಲಿರುವ ಎಸ್ ಎಸ್ ಎಫ್ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನದ ಪ್ರಚಾರಾರ್ಥ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿತ್ತು.
*lಶೈಖುನಾ ಮಹ್ಮೂದ್ ಉಸ್ತಾದರ ಮಖ್ಬರ ಝಿಯಾರತ್ ನೊಂದಿಗೆ ಕಿಕ್ಕರೆ ಯಿಂದ ಪ್ರಾರಂಭಗೊಂಡ ಬೈಕ್ ಜಾಥಾ ಎಡಪಾಲ, ಕೊಕ್ಕಂಡಬಾಣೆ ಮೂಲಕ ಸಂಚರಿಸಿ ಕಡಂಗ ಪಟ್ಟಣದಲ್ಲಿ ಸಮಾಪ್ತಿ ಗೊಂಡಿತ್ತು.
ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಎಸ್ ಎಸ್ ಎಫ್ ಕಡಂಗ ಸೆಕ್ಟರ್ ಅಧ್ಯಕ್ಷ ಶಮೀರ್ ಸಖಾಫಿ ಸೆಪ್ಟೆಂಬರ್ 10ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಲಕ್ಷಾಂತರ ಕಾರ್ಯಕರ್ತರು ಸಂಗಮಗೊಳ್ಳುವ ಎಸ್ ಎಸ್ ಎಫ್ ಗೋಲ್ಡನ್ 50 ಮಹಾ ಸಮ್ಮೇಳನ ನಡೆಯಲಿಕ್ಕಿದೆ ಇದರ ಪ್ರಚಾರಾರ್ಥ ಕಡಂಗ ಸೆಕ್ಟರ್ ಹಮ್ಮಿಕೊಂಡ ಬೈಕ್ ಜಾಥಾ ನಿಜಕ್ಕೂ ಶ್ಲಾಘನೀಯ. ಎಸ್ ಎಸ್ ಎಫ್ 50 ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ ಎಸ್ ಎಸ್ ಎಫ್ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಏನೆಂಬುದು ಗಮನಿಸುವಾಗ ಇತ್ತೀಚಿನ ಆಧುನಿಕ ಕಾಲದಲ್ಲಿ ಮಾದಕ ವಸ್ತುಗಳಿಗೆ ಬಲಿಯಾಗಿ ತಮ್ಮ ವಿದ್ಯಾಭ್ಯಾಸವನ್ನು ಮೊಟಕು ಗೊಳಿಸಿ, ಪೋಷಕರಿಗೆ ಗೌರವ ಕೊಡದ ಸಂದರ್ಭ ಒದಗಿ ಬಂದಾಗ ಆ ಯುವಕರನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವಲ್ಲಿ ಎಸ್ ಎಸ್ ಎಫ್ ಪ್ರಮುಖ ಪಾತ್ರ ವಹಿಸಿದೆ ಎಂದರು.
ಈ ಸಂದರ್ಭ ಎಸ್ ಎಸ್ ಎಫ್ ವಿರಾಜಪೇಟೆ ಡಿವಿಷನ್ ಕೋಶಾಧಿಕಾರಿ ಇಸ್ಮಾಯಿಲ್ ಅಹ್ಸನಿ,ಕಡಂಗ ಸೆಕ್ಟರ್ ಕಾರ್ಯದರ್ಶಿ ಶಮೀರ್, ಕಡಂಗ ಶಾಖಾ ಅಧ್ಯಕ್ಷ ರಾಫಿ ಝೈನಿ, ಕಾರ್ಯದರ್ಶಿ ರಾಝಿಕ್, ಎಸ್ ಎಸ್ ಎಫ್, ಎಸ್ ವೈ ಎಸ್, ಕೆಎಂಜೆ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ