ನಾಪೋಕ್ಲು : ನಾಪೋಕ್ಲು ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ನಡೆಯಿತು.
ನಾಪೋಕ್ಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ವನಜಾಕ್ಷಿ ರೇಣುಕೇಶ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕುಲ್ಲೇಟಿರ ಹೇಮಾವತಿ ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿಯ 23 ಸದಸ್ಯರ ಪೈಕಿ ಸದಸ್ಯೆ ಆಫ್ಸತ್ ಗೈರಾಗಿದ್ದು 22 ಸದಸ್ಯರು ಪಾಲ್ಗೊಂಡಿದ್ದರು.
ಹಿಂದುಳಿದ ವರ್ಗದ ಎ ಮಹಿಳೆಯ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಜುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವನಜಾಕ್ಷಿ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಆಮಿನ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಆಮೀನ 3ಮತ ಪಡೆದರೆ 4ನೋಟಾ ಮತಗಳಾಗಿದ್ದು, ವನಜಾಕ್ಷಿ 15 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.
ಸಾಮಾನ್ಯ ಮಹಿಳೆಯ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕುಲ್ಲೇಟಿರ ಹೇಮಾವತಿ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೋಟೆರ ನೀಲಮ್ಮ ಸ್ಪರ್ಧಿಸಿದ್ದರು. ಇದರಲ್ಲಿ 8 ಮತಗಳು ಕೋಟೆರ ನೀಲಮ್ಮ ಪಡೆದರೆ, ಕುಲ್ಲೇಟಿರ ಹೇಮಾವತಿ 14ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾ ಲಕ್ಷ್ಮಿ ಕಾರ್ಯನಿರ್ವಹಿಸಿದರು.
ಈ ಸಂದರ್ಭ, ನಾಪೋಕ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಚ್.ಎಸ್ ಪಾರ್ವತಿ, ಮಾಜಿ ಉಪಾಧ್ಯಕ್ಷ ಟಿ.ಎ. ಮಹಮ್ಮದ್, ಸದಸ್ಯರಾದ ಕೆ.ಎ.ಇಸ್ಮಾಯಿಲ್,ಮಾಚೆಟ್ಟಿರ ಕುಶು ಕುಶಾಲಪ್ಪ,ಸಾಬಾ ತಿಮ್ಮಯ್ಯ,ಮಹಮ್ಮದ್ ಖುರೇಶಿ,ಅರುಣ್ ಬೇಬ,ಕೆ.ವೈ. ಅಶ್ರಫ್,ಶಶಿ ಮಂದಣ್ಣ, ಗಂಗಮ್ಮ, ರೇಖಾ,ಯಶೋಧ, ಲಲಿತಾ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹಾಜರಿದ್ದರು.
✍️….ವರದಿ: ಝಕರಿಯ ನಾಪೋಕ್ಲು