ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಆ-21ರಂದು ಸೋಮವಾರ ಸಾಮೂಹಿಕ ನಾಗರ ಪಂಚಮಿ ಪೂಜೆ

ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬದ ಪ್ರಯುಕ್ತ ಇದೇ ಆಗಸ್ಟ್- 21ರಂದು ಸೋಮವಾರ ಸಾಮೂಹಿಕ ಆಶ್ಲೇಷ ಬಲಿ ಪೂಜೆ ಹಾಗೂ ನಾಗ ದೇವರಿಗೆ ಪಂಚಾಮೃತಾಭಿಷೇಕ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಯಾರು ಬೇಕಾದರೂ ಪೂಜೆಯನ್ನು ಮಾಡಿಸಬಹುದಾಗಿದೆ.

ಈ ಕುರಿತು ಮಾಹಿತಿ ನೀಡಿರುವ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚಮ್ಮಟೀರ ಸುಗುಣ ಮುತ್ತಣ್ಣ ಇದೇ ಆಗಸ್ಟ್ 21ರಂದು ಸೋಮವಾರ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಾಗರ ಪಂಚಮಿ ಅನುಸಾರವಾಗಿ ವಿಶೇಷ ಪೂಜೆ ನಡೆಯಲಿದ್ದು ಈ ಸಂದರ್ಭದಲ್ಲಿ ಆಶ್ಲೇಷ ಬಲಿ ಹಾಗೂ ಪಂಚಾಮೃತಾಭಿಷೇಕ ಬಳಿಕ ಶ್ರೀ ಭದ್ರಕಾಳಿ ದೇವರಿಗೆ ವಿಶೇಷ ಮಹಾಮಂಗಳಾರತಿ ನಡೆಯಲಿದೆ, ಪ್ರಸಾದ ವಿನಿಯೋಗದ ನಂತರ ಅನ್ನದಾನ ವ್ಯವಸ್ಥೆ ಇರುತ್ತದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಕೇಳಿಕೊಂಡಿದ್ದಾರೆ. ಪಂಚಾಂಮೃತ ಅಭಿಷೇಕ ಮಾಡಿಸುವವರು ಶುದ್ಧ ಹಸುವಿನ ಹಾಲು ತರಬೇಕು ಪ್ಯಾಕೇಟ್ ಹಾಲು ಆಗುವುದಿಲ್ಲ, ಹಾಲು ಇಲ್ಲದವರು ಎಳನೀರು ತರಬಹುದಾಗಿದೆ.
ಹೆಚ್ಚಿನ ಮಾಹಿತಿಗೆ:
ಅರ್ಚಕರು- 9845308910,
ಚಮ್ಮಟೀರ ಸುಗುಣ ಮುತ್ತಣ್ಣ-9448301792,
ಮೂಕಳೇರ ರಮೇಶ್-9483815430,
ಚಮ್ಮಟೀರ ಪ್ರವೀಣ್ ಉತ್ತಪ್ಪ-9880967573 ಸಂಪರ್ಕಿಸಬಹುದಾಗಿದೆ.