Reading Time: < 1 minute
ಕೊಡಗು ಜಿಲ್ಲೆಯ ದೇವರಕಾಡಿನಲ್ಲಿ ಸ್ಥಳೀಯ ಮರಗಳನ್ನು ನೆಡಲು ಬೇಕಾದ ಸಸಿಗಳನ್ನು ವಿತರಿಸುವ ಅಭಿಯಾನವನ್ನು ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆಯಲ್ಲಿ 25/08/2023, ಶುಕ್ರವಾರ, ಮುಂಜಾನೆ 11.00 ಗಂಟೆಗೆ ಆಯೋಜಿಸಲಾಗಿದೆ. ಕೊಡಗಿನ ದೇವರಕಾಡುಗಳಲ್ಲಿ ನೆಡಲು ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಮರಗಳ ಸಸಿಗಳನ್ನು ಉಚಿತವಾಗಿ ನೀಡಲಾಗುವುದು. ಈ ಅಭಿಯಾನದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ದೇವರಕಾಡು/ದೇವಸ್ಥಾನದ ಸಮಿತಿಗಳು ನಾಣಯ್ಯ ಕೋಣೇರಿರ, (8105919596) ಸಹಾಯಕ ಪ್ರಾಧ್ಯಾಪಕರು, ಅರಣ್ಯ ಮಹಾವಿದ್ಯಾಲಯ, (Forestry College) ಪೊನ್ನಂಪೇಟೆ ಅವರನ್ನು ಸಂಪರ್ಕಿಸಬಹುದು.