ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ದ್ರವ್ಯಗಳ ಸೇವನೆ ಅಧಿಕವಾಗುತ್ತಿದ್ದು ಇದರ ವಿರುದ್ದ ಪ್ರತಿಯೊಬ್ಬರಿಗೂ ಜಾಗ್ರತಿ ಮೂಡಿಸಬೇಕಾಗಿದೆ ಇದಕ್ಕೆ ಎಸ್.ಎಸ್. ಎಫ್ ಸಂಘಟನೆಯು ವಿವಿಧ ರೀತಿಯ ಅಭಿಯಾನ ನಡೆಸುತ್ತಿರುವುದು ಇದಕ್ಕೆ ಸ್ಫೂರ್ತಿ ಯಾಗಿದೆ ಎಂದು ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಜುನಾಥ್ ಕರೆನೀಡಿದರು.
,ನಾವು ಭಾರತೀಯರು ಎಂಬ ಧ್ಯೆಯ ವಾಕ್ಯದಡಿ ಸೆಪ್ಟೆಂಬರ್ 10 ಬೆಂಗಳೂರಿನಲ್ಲಿ ನಡೆಯುವ ಎಸ್ ಎಸ್ ಎಫ್ ಕರ್ನಾಟಕ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನದ ಪ್ರಯುಕ್ತ ಕೊಟ್ಟಮುಡಿ ಶಾಖೆಯ ವತಿಯಿಂದ ನಡೆದ ಪೀಪಲ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಸಿ ಮಾತನಾಡಿದರು,.
ಕಾರ್ಯಕ್ರಮದ ಉದ್ಘಾಟನೆಯನ್ನು ಅಶ್ರಫ್ ಕೆ. ಎ ಅವರು ನೆರೆವೇರಿಸಿದರು, ಅಹ್ಮದ್ ಫಾರೂಕ್ ಸಖಾಫಿ ಎಮ್ಮೆಮಾಡು ವಿಷಯ ಮಂಡಿಸಿ ಮುಖ್ಯಪ್ರಭಾಷಣ ನಡೆಸಿದರು,ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹೆಚ್. ಎ ಹಂಸ ಶುಭಹಾರೈಸಿ ಮಾತನಾಡಿದರು,ಅತಿಥಿಗಳಾಗಿ ಪ್ರಮುಖರಾದ ಕೊಟ್ಟಮುಡಿ ಜಮಾಅತ್ ಅಧ್ಯಕ್ಷರಾದ ಕೆ.ಎ ಉಸ್ಮಾನ್, ಕರ್ನಾಟಕ ಮುಸ್ಲಿಂ ಜಮಾಅತ್ ಕೊಟ್ಟಮುಡಿ ಗ್ರಾಮ ಅಧ್ಯಕ್ಷರಾದ ಆರ್ ಎಂ ಎಚ್ ಹುಸೈನಾರ್, ಎಸ್ ವೈ ಎಸ್ ಮಡಿಕೇರಿ ಸೆಂಟರ್ ಕೋಶಾಧಿಕಾರಿ ಬಷೀರ್ ಕೆ.ಎಂ ,SSF ಮಾಜಿ ಕ್ಯಾಂಪಸ್ ಕಾರ್ಯದರ್ಶಿ ಅಬ್ದುಲ್ಲಾ ಕೊಳಕೇರಿ, ಸಂಘಟನೆ ನಾಯಕರಾದ ಹಂಸ,ರಫೀಕ್ ಸಖಾಫಿ, ಅಸ್ಕರ್ ಸಖಾಫಿ, ಸಫ್ವಾನ್ ಕಾರ್ಯಕರ್ತರು ಹಿರಿಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ನೌಫಲ್, ಕಡಂಗ