ಪಂಚಾಯಿತಿ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯುವುದು ನನ್ನ ಕನಸಾಗಿದೆ; ಈ.ಬಿ. ಜೋಸೆಫ್

ಈ.ಬಿ. ಜೋಸೆಫ್,  ಅಧ್ಯಕ್ಷರು: ಗ್ರಾಮ ಪಂಚಾಯಿತಿ 7ನೇ ಹೊಸಕೋಟೆ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಒಂದೇ ಕಂದಾಯ ಗ್ರಾಮವನ್ನು ಹೊಂದಿದ್ದು ಭಾಗ-1, ಭಾಗ-2, ಭಾಗ-3. ಎಂಬ ಮುರು ವಾರ್ಡುಗಳಿರುತ್ತೆದೆ. 7ನೇ ಹೊಸಕೋಟೆ ಗ್ರಾಮ ಪಂಚಾಯಿತಿಯು ಬಿ.ಎಂ ರಸ್ತೆ ಬದಿಯಲ್ಲಿದ್ದು ಕೇಂದ್ರ ಸ್ಥಾನ ಮಡಿಕೇರಿಗೆ 20.ಕಿ.ಮೀ. ಹೋಬಳಿ ಕಛೇರಿ ಸುಂಟಿಕೊಪ್ಪಕ್ಕೆ 5.ಕಿ.ಮೀ, ಕುಶಾಲನಗರಕ್ಕೆ 10.ಕಿ.ಮೀ, ಸೋಮವಾರಪೇಟೆ ತಾಲ್ಲೂಕು ಕಛೇರಿಗೆ 42.ಕಿ.ಮೀ ದೂರವನ್ನು ಹೊಂದಿರುತ್ತದೆ. ಈ ಗ್ರಾಮ ಪಂಚಾಯಿತಿಯು ಕಂಬಿಬಾಣೆ, ಕೊಡಗರಹಳ್ಳಿ, ನಾಕೂರು ಶಿರಂಗಾಲ ಮತ್ತು ಗುಡ್ಡೆಹೊಸೊರು ಗ್ರಾಮ ಪಂಚಾಯಿತಿಗಳ ಮಧ್ಯ ಭಾಗದಲ್ಲಿದೆ.

ಇಲ್ಲಿನ ಭೌಗೋಳಿಕ ವಿಸ್ತೀರ್ಣ 3453 ಎಕರೆ ಇದ್ದು 1455 ಕೃಷಿ ಯೋಗ್ಯವಾದ ಸ್ಥಳವಾಗಿರುತ್ತದೆ. ಇಲ್ಲಿನ ಮುಖ್ಯ ಬೆಳೆ ಕಾಫಿ, ಭತ್ತ, ಮತ್ತು ಒಳ್ಳೆ ಮೆಣಸು ಹೆಚ್ಚಿನ ಜನರು ಕೂಲಿ ಕೆಲಸಕ್ಕೆ ಹೋಗುತ್ತಾರೆ, ಇಲ್ಲಿ ಕಲ್ಲುಕೋರೆಗಳಿದ್ದು ಇದರಲ್ಲಿ ಕೂಲಿ ಕೆಲಸ ಮಾಡುತ್ತಾರೆ ಮತ್ತು ನರ್ಸರಿ ಇಲ್ಲಿನ ಮುಖ್ಯ ಕಸುಬಾಗಿರುತ್ತದೆ. ವಾಸಕ್ಕೆ ಈ ಸ್ಥಳವು ತುಂಬಾ ಅನುಕೂಲಕರವಾಗಿರುತ್ತದೆ. ಗ್ರಾಮ ಪಂಚಾಯಿತಿ ವ್ತಾಪ್ತಿಯಲ್ಲಿ ಹಿಂದು, ಮುಸ್ಲಿಂ, ಸಮ ಪ್ರಮಾಣದಲ್ಲಿದ್ದು, ಕ್ರಿಶ್ಚನ್ನರು ಸುಮಾರಾಗಿ ವಾಸವಿರುತ್ತಾರೆ. ಎಲ್ಲಾ ಜಾತಿಯವರು ಸಮಾನತೆಯಿಂದ ಬಾಳ್ವೆ ನಡೆಸುತ್ತಿದ್ದಾರೆ, ಇಲ್ಲಿ ಎಲ್ಲಾ ಕೋಮಿನವರು ವಿಧ್ಯಾವಂತರಾಗಿರುತ್ತಾರೆ, ಕೃಷಿ ಇಲ್ಲಿಯ ಮುಖ್ಯ ಕಸುಬು. 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಅದ್ಬುತ ವಿಷಯವೇನೆಂದರೆ ಹಿಂದೂಗಳ ಮಹಾಗಣಪತಿ ದೇವಾಲಯ ಅದರ ಎದುರುಗಡೆ ಕ್ರಿಶ್ಚಿಯನ್ ಚರ್ಚ್ ಅದರ ಒಟ್ಟಿಗೆ ಮುಸ್ಲಿಂರ ಮಸೀದಿಯು ಇರುತ್ತದೆ. ಒಂದು ಕೋಮಿನ ಜನರು ಇನ್ನೊಂದು ಕೋಮಿನ ಹಬ್ಬಗಳಲ್ಲಿ ಭಾಗವಹಿಸುತ್ತಾರೆ ಮತ್ತು ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದಾರೆ. 

7ನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಈ.ಬಿ. ಜೋಸೆಫ್ ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಪಡೆಯಲಾಯಿತು.

“ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಈ.ಬಿ. ಜೋಸೆಫ್ “ನಾನು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಮುಖ್ಯವಾದ ಪ್ರೇರಣೆ ಎಂದರೆ, ನಮ್ಮ ವಾರ್ಡ್‌ನ ಯುವಕರು. ನಮ್ಮ ವಾರ್ಡಿನಲ್ಲಿ ಯುವಕರೇ ಹೆಚ್ಚಾಗಿದ್ದು ನಾವೆಲ್ಲರೂ ಸೇರಿ ಚಾಮುಂಡೇಶ್ವರಿ ಸೇವಾ ಸಮಿತಿಯಲ್ಲಿ ಸೇವಾಕಾರ್ಯವನ್ನು ಮಾಡುತ್ತಾ ಬರುತ್ತಿದ್ದು, ಅದರ ಉಪಾಧ್ಯಕ್ಷನಾಗಿ ನಾನು ಸೇವೆ ಸಲ್ಲಿಸುತ್ತಿದ್ದೆ. ಈ ಸಂದರ್ಭದಲ್ಲಿ ಗ್ರಾಮದ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದೆ ಅಂದು  ನನಗೆ 21 ವರ್ಷ ಪ್ರಾಯವಿತ್ತು. ನಮ್ಮ ಸೇವಾ ಸಮಿತಿ ವತಿಯಿಂದ ಗ್ರಾಮದಲ್ಲಿ ಯಾವುದಾದರೂ ಬಡ ಕುಟುಂಬದಲ್ಲಿ ಮರಣ ಹೊಂದಿದ್ದರೆ ಆ ಕುಟುಂಬಕ್ಕೆ ಸಹಾಯಧನವನ್ನು ಕೊಡಲಾಗುವುದು. ಅಲ್ಲದೆ ನಮ್ಮ ಗ್ರಾಮದ ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಗ್ರಾಮದಲ್ಲಿ ಆಗುವ ಯಾವುದೇ ಮನಸ್ತಾಪಗಳಿಗೆ ರಾಜಿ ತೀರ್ಮಾನವನ್ನು ಮಾಡಿ ಬಹುಪಾಲು ಕುಟುಂಬಗಳ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಿದ ಹೆಗ್ಗಳಿಕೆ ಇದೆ”.

ಈ ರೀತಿಯ ಸಾಮಾಜಿಕ ಸೇವೆಯಿಂದ ಪ್ರೇರಿತನಾಗಿ 2015ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ನಮ್ಮ ಗ್ರಾಮದ ಯುವಕರ ಒತ್ತಾಸೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ 16 ಜನ ಪ್ರತಿಸ್ಪರ್ಧಿಗಳ ನಡುವೆ ಸ್ಪರ್ಧಿಸಿ ಹೆಚ್ಚು ಬಹುಮತದ ಅಂತರದಲ್ಲಿ ಗೆದ್ದು ಗ್ರಾಮಸ್ಥರೆಲ್ಲರ ವಿಶ್ವಾಸವನ್ನು ಗಳಿಸಿಕೊಲ್ಲುವಲ್ಲಿ ಯಶಸ್ವಿಯಾದೆ. ನಂತರ ಬಿಜೆಪಿ ಬೆಂಬಲಿತ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಂತರ ಎರಡನೇ ಬಾರಿಗೆ 2020ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡನೇ ಬಾರಿಯೂ ಕೂಡ ಗೆದ್ದು ಗ್ರಾಮ ಪಂಚಾಯಿತಿ ಆಡಳಿತದ ಒಂದನೇ ಅವಧಿಯಲ್ಲಿ ಉಪಾಧ್ಯಕ್ಷನಾಗಿ ಹಾಗೂ ಎರಡನೇ ಅವಧಿಗೆ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ.

ನಾನು ಜನಪ್ರತಿನಿಧಿಯಾಗಿ ಆಯ್ಕೆಗೊಂಡ ನಂತರ ಮಾಡಿದ ಅಭಿವೃದ್ಧಿ ಕಾರ್ಯಗಳಲ್ಲಿ ಮೊದಲಿಗೆ ನಮ್ಮ ಗ್ರಾಮದಲ್ಲಿ ಇಷ್ಟು ವರ್ಷಗಳಾದರೂ ಒಂದು ಸಾರ್ವಜನಿಕ ರುದ್ರಭೂಮಿ ಇರಲಿಲ್ಲ. ಇದಕ್ಕಾಗಿ ನಮ್ಮ ಗ್ರಾಮದಲ್ಲಿ ಎಲ್ಲಾ ಸಮುದಾಯಕ್ಕೂ ಸೇರುವಂತಹ ಸಾರ್ವಜನಿಕ ರುದ್ರ ಭೂಮಿಯನ್ನು ಚಿಕ್ಲಿ ಹೊಳೆ ಜಲಾಶಯದ ಪಕ್ಕ 60 ಸೆಂಟ್ ಜಾಗದಲ್ಲಿ ಚಿತಾಗಾರವನ್ನು ನಿರ್ಮಿಸಲಾಯಿತು.

ಗ್ರಾಮದಲ್ಲಿ ಬೀದಿ ದೀಪದ ವ್ಯವಸ್ಥೆ ಸುಮಾರು 75 ಪ್ರತಿಶತ ಪೂರ್ಣಗೊಂಡಿದ್ದು, ಬಾಕಿ ಉಳಿದ 25 ಪ್ರತಿಶತ ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ಅದರಲ್ಲಿ 10 ಕಡೆಗಳಲ್ಲಿ ಸೋಲಾರ್ ಬೀದಿ ದೀಪವನ್ನು ಜಿಲ್ಲಾ ಪಂಚಾಯಿತಿ ಅನುದಾನದಿಂದ ನಿರ್ಮಿಸಲಾಗಿದೆ.

ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಗಿರಿಜನ ಹಾಡಿ ಇದ್ದು, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಅಲ್ಲದೆ ಹಾಡಿಯಲ್ಲಿ ಎರಡು ವರ್ಷಕ್ಕೊಮ್ಮೆ ಚರಂಡಿಯ ಸ್ವಚ್ಛತೆಯನ್ನು ಮಾಡಲಾಗುವುದು. ಉಜ್ವಲ ಯೋಜನೆಯನ್ನೂ ಕೂಡ ಅನುಷ್ಟಾನ ಗೊಳಿಸಲಾಗಿದೆ. ಹಾಡಿಯಲ್ಲಿ ಅಂಗನವಾಡಿಯು ಇದೆ. ಹಾಡಿಯ ಎಲ್ಲಾ ಮಕ್ಕಳಿಗೂ ವಿದ್ಯಾಭ್ಯಾಸವನ್ನು ನೀಡಲು ಕ್ರಮವಹಿಸಲಾಗಿದೆ.  ಜೊತೆಗೆ SC /ST  ಸಮುದಾಯಕ್ಕೆ ಸೇರಿದ ಯಾರಾದರೂ ಮರಣ ಹೊಂದಿದರೆ ಪಂಚಾಯಿತಿಯಿಂದ ಮರಣ ನಿಧಿಯಾಗಿ 5000 ಗಳನ್ನು ನೀಡಲಾಗುವುದು. 

ಕಳೆದ ಐದು ವರ್ಷದಲ್ಲಿ ನಮ್ಮ ಗ್ರಾಮದ ಸುಮಾರು 150 ಮನೆಗಳಿಗೆ  ರಸ್ತೆಯ ಸೌಕರ್ಯವನ್ನು ಮಾಡಿಕೊಳ್ಳಲಾಗಿದೆ. ಸ್ವಚ್ಛ ಭಾರತ್ ಯೋಜನೆ ಪೂರ್ಣವಾಗಿ ಜಾರಿಯಾಗಿದ್ದು, ನಮ್ಮ ಗ್ರಾಮ ಪಂಚಾಯಿತಿ ಬಯಲು ಶೌಚ ಮುಕ್ತ ಗ್ರಾಮವಾಗಿದೆ. ಗ್ರಾಮದ ಪ್ರತಿ ಮನೆಯಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಾಗಿದ್ದು, ಎರಡು ದಿನಕ್ಕೊಮ್ಮೆ ನೀರನ್ನು ಸರಬರಾಜು ಮಾಡಲಾಗುವುದು. ಪಂಚಾಯಿತಿ ವ್ಯಾಪ್ತಿಯಲ್ಲಿನ ಕಸ ವಿಲೇವಾರಿಗೆ ಒಣ ಕಸದ ಕಸ ವಿಲೇವಾರಿ ಘಟಕಕ್ಕೆ ಜಾಗ ಗುರುತಿಸಲಾಗಿದ್ದು, ಮುಂದಿನ ದಿನಗಳಲ್ಲಿ ಶೀಘ್ರವಾಗಿ ಕಸ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಲಾದುವುದು.

ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದೇಶಿ ತೋಟ ಕಾರ್ಮಿಕರ ಓಡಾಟ ಹೆಚ್ಚಾಗಿದೆ ಎಂದು ಸುದ್ದಿ ಕೇಳಿ ಬರುತ್ತಿದ್ದು.  ತೋಟದ ಮಾಲೀಕರು ಯಾರು ಸರಿಯಾದ ಮಾಹಿತಿಯನ್ನು ಕೊಡುತ್ತಿಲ್ಲ ಇದರಿಂದ ಸ್ಥಳೀಯ ಗ್ರಾಮಸ್ಥರಿಗೆ ಭಯದ ವಾತಾವರಣವಿದ್ದು, ಹಲವು ಬಾರಿ ತೋಟದ ಮಾಲೀಕರನ್ನು ವಿಚಾರಿಸಿದರು ಸರಿಯಾದ ದಾಖಲೆಯನ್ನು ಕೊಡುತ್ತಿಲ್ಲ .ಇದರ ಬಗ್ಗೆ  ಪಂಚಾಯಿತಿ ವತಿಯಿಂದ ಶೀಘ್ರದಲ್ಲಿ ಸೂಕ್ತವಾದ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು.

 ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆ ಹಾವಳಿಯ ತೊಂದರೆ ಇದೆ ಅದನ್ನು ತಡೆಗಟ್ಟಲು ಕ್ರಮವಹಿಸಲಾಗಿದೆ. 

ಕುಡಿಯುವ ನೀರಿನ ಘಟಕವು ಪ್ರಾರಂಭವಾಗಿದ್ದು ಪ್ರತಿ ಲೀಟರ್‌ಗೆ ಐದು ರೂಪಾಯಿ ನಂತೆ ನೀರು ದೊರೆಯುತ್ತಿದ್ದು, ಶುದ್ಧ ಕುಡಿಯುವ ನೀರು ದೊರಕುವುದರಿಂದ ಜನರಿಗೆ ಈ ಯೋಜನೆಯು ತುಂಬಾ ಉಪಯುಕ್ತವಾಗಿದೆ. 

ಪಂಚಾಯಿತಿಯಲ್ಲಿ ಮೂರು ರೆಸಾರ್ಟ್ ಗಳು ಇದ್ದು, ಅದರೊಂದಿಗೆ ಹೋಂ ಸ್ಟೇಗಳಿಂದಲೂ ಕೂಡ ಪಂಚಾಯಿತಿಗೆ ಆದಾಯ ಬರುತ್ತಿದೆ.

ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಮಡಿಕೇರಿಯ ರಮೇಶ್‌ ಎಂಬುವವರು ಒಂದು ವೃದ್ದಾಶ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ,  ನಿಕಟ ಪೂರ್ವ ಶಾಸಕರಾದ ಅಪ್ಪಚ್ಚು ರಂಜನ್ ಅವರು ಒಮ್ಮೆ ವೃದ್ದಾಶ್ರಮಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ನೋಡಿ ಅನುಕಂಪದಿಂದ ತಮ್ಮ ಸ್ವಂತ ಖರ್ಚಿನಿಂದ ಒಂದು ಸುಸಜ್ಜಿತವಾದ ವೃದ್ದಾಶ್ರಮವನ್ನು ನಿರ್ಮಾಣ ಮಾಡಿ ಕೊಡುತ್ತಿದ್ದಾರೆ. 

ಪಂಚಾಯಿತಿಯಲ್ಲಿ ಡಿಜಿಟಲ್ ಗ್ರಂಥಾಲಯ ಉತ್ತಮ ಗುಣಮಟ್ಟದಾಗಿದ್ದು, ಪ್ರತಿದಿನ 10 ರಿಂದ 15 ವಿದ್ಯಾರ್ಥಿಗಳು ಡಿಜಿಟಲ್ ಗ್ರಂಥಾಲಯವನ್ನು ಉಪಯೋಗಿಸುತ್ತಿದ್ದಾರೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಇದು ತುಂಬಾ ಅನುಕೂಲಕರವಾಗಿದೆ.

ಗ್ರಾಮದ ಅಭಿವೃದ್ಧಿಗೆ ನನ್ನ ಪ್ರಮುಖವಾದ ಕನಸೆಂದರೆ ಅದು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬುವುದು, ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಉದ್ಯಾನವನಗಳನ್ನು ಹಾಗೂ  ಉತ್ತಮ ಗುಣಮಟ್ಟದ ಮೂಲಭೂತ ಸೌಕರ್ಯವನ್ನು ಒದಗಿಸಿ ಕೊಡಲು ಶ್ರಮಿಸುತ್ತಿದ್ದೇನೆ.  ನಮ್ಮ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗಲು ಸರ್ಕಾರಿ ಶಾಲೆಗಳು ಕೊಟ್ಟ ಕೊಡುಗೆ ಅಪಾರವಾದದ್ದು, ಅದರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ ನಮ್ಮ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕರು, ಪೊಲೀಸರು, ರಾಜಕಾರಣಿಗಳು, ವಿಜ್ಞಾನಿಗಳು ಹಾಗೆ ಉಳಿದ ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹೆಚ್ಚಿನವರು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದಿದ್ದವರು. ಅದರಿಂದ ನಮ್ಮ ಸರ್ಕಾರಿ ಶಾಲೆಗಳನ್ನು ಇನ್ನೂ ಹೆಚ್ಚು ಅಭಿವೃದ್ಧಿ ಪಡಿಸುವುದು ನನ್ನ ಕನಸಾಗಿದೆ.

ನಮ್ಮ ಸಮಾಜದಲ್ಲಿ ಭ್ರಷ್ಟಾಚಾರಕ್ಕೆ ಪ್ರಮುಖ ಕಾರಣವೇನೆಂದರೆ ಅದು ಒಂದು ಶಿಕ್ಷಣ ಮತ್ತು ಆರೋಗ್ಯ. ಈ ಎರಡು ವಿಷಯಗಳಿಗೆ ಉತ್ತಮ ಗುಣಮಟ್ಟದ ಹಾಗೂ ಉಚಿತವಾದ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ನೀಡಿದ್ದಲ್ಲಿ ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ ತುಂಬಾ ಪ್ರಮಾಣದಲ್ಲಿ ಕಡಿಮೆಯಾಗುವುದು ಸಾಧ್ಯವಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ.     

ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ದ ಅಮೃತ ಸರೋವರ ಯೋಜನೆಯಲ್ಲಿ  ಲಿಂಗನಕೆರೆ ತೊಂಡೂರು ಗ್ರಾಮದಲ್ಲಿ ಅರ್ಧ ಎಕರೆ ಪ್ರದೇಶದಲ್ಲಿ 30ಸೆಂಟು ಜಾಗದಲ್ಲಿ ಕೆರೆ ಇದ್ದು, ಅದನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೇ 76ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣವನ್ನು ಕೂಡ ಅಲ್ಲೇ ಮಾಡಲಾಯಿತು. 

ನಮ್ಮ ನೆಚ್ಚಿನ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿ ಅವರ ಆಶಯವಾದ ಅಮೃತ್ ಸರೋವರ ಯೋಜನೆ ತುಂಬಾ ಒಳ್ಳೆಯ ಕಲ್ಪನೆಯಾಗಿದ್ದು. ನನ್ನ ಅಭಿಪ್ರಾಯದಲ್ಲಿ ಮುಂದಿನ 20 ವರ್ಷಗಳ ನಂತರ ನೀರು ಅಮೃತ ಸಮಾನವಾಗಲಿದೆ.  ಇತ್ತೀಚಿನ ವರ್ಷಗಳಲ್ಲಿ ಮಳೆಯ ಕೊರತೆ ಇದ್ದು, ಮುಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ ಮುಂತಾದವುಗಳಿಂದ ಜಲಮೂಲಗಳು ಬತ್ತಿಹೋಗುವ ಕಾರಣ ನೀರಿಗೆ ತುಂಬಾ ಬೇಡಿಕೆ ಬರಲಿದೆ. ಅದೇ ರೀತಿ ಒಂದು ಉತ್ತಮವಾದ ಹೆಸರನ್ನು ಕೂಡ ಪ್ರಧಾನಿ ಅವರು ನೀಡಿದ್ದು. ನೀರು ಅಮೃತಕ್ಕೆ ಸರಿಸಮಾನ ಎಂದು ತೋರಿಸಿಕೊಟ್ಟಿದ್ದಾರೆ.

ಮುಂದಿನ ದಿನಗಳಲ್ಲಿ ನಮ್ಮ ಪಂಚಾಯಿತಿಯ ಕೆರೆಯ ಸುತ್ತಲೂ ಸಾರ್ವಜನಿಕರಿಗೆ ವಾಯು ವಿಹಾರಕ್ಕೆ ಉದ್ಯಾನವನವನ್ನು ನಿರ್ಮಾಣ ಮಾಡುವ ಯೋಜನೆಯನ್ನು ಮಾಡಲಾಗುವುದು.  ನಮ್ಮ ದೇಶದಲ್ಲಿ ಒಂದೊಂದು ಕೆರೆಗಳ ಅಭಿವೃದ್ಧಿಯಾಗಿ ಆಗಬೇಕು. ಈ ಯೋಜನೆಯಿಂದ ಜನರಲ್ಲಿ ನೀರಿನ ಮಹತ್ವದ ಬಗ್ಗೆ ತುಂಬಾ ಅರಿವು ಲಭಿಸುತ್ತಿದೆ.

ಈ.ಬಿ. ಜೋಸೆಫ್ ಅವರು ಸಾಮಾಜಿಕ ಕ್ಷೇತ್ರದಲ್ಲಿ ಚಾಮುಂಡೇಶ್ವರಿ ಸೇವಾ ಸಮಿತಿಯ ಪದಾಧಿಕಾರಿಯಾಗಿ, ಧಾರ್ಮಿಕ ಕ್ಷೇತ್ರದಲ್ಲಿ 7ನೇ ಹೊಸಕೋಟೆಯ ಸೇಂಟ್ ಸಬಾಸ್ಟಿನ್ ಕ್ಯಾಥೋಲಿಕ್ ಚರ್ಚಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೇಂಟ್ ಸಬಾಸ್ಟಿನ್ ಕ್ಯಾಥೋಲಿಕ್ ಚರ್ಚಿಗೆ 40 ವರ್ಷಗಳು ತುಂಬಿವೆ. ಮುಂದಿನ ವರ್ಷ ಜೀರ್ಣೋದ್ಧಾರಗೊಂಡು ಸುಸಜ್ಜಿತ ಚರ್ಚ್ ಉದ್ಘಾಟನೆ‌ ನೇರವೇರಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಚಿಕ್ಲಿಹೊಳೆ ಹಿರಿಯ ಪ್ರಾಥಮಿಕ ಶಾಲೆಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ.ಬಿ. ಜೋಸೆಫ್ ಅವರ ಕುಟುಂಬ ಪರಿಚಯ:

ತಂದೆ:  ದಿ. ಬಾಬು, ತಾಯಿ: ಎಲಿಜಬೆತ್, 3 ಜನ ಸಹೋದರಿಯರು. ಮೂಲತ: ಕೃಷಿಕರಾಗಿರುವ ಈ.ಬಿ. ಜೋಸೆಫ್ ರವರು ಪ್ರಸ್ತುತ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಂಬಿಬಾಣೆ  ಚಿಕ್ಲಿ ಹೊಳೆ ಪಕ್ಕದ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ ಹಾಗೂ ಧಾರ್ಮಿಕ, ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

ಸಂದರ್ಶನ ದಿನಾಂಕ: 16-08-2023

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments