ನಾಪೋಕ್ಲುವಿನಲ್ಲಿ ಬೃಹತ್ ಮೀಲಾದ್ ಸಂದೇಶ ಜಾಥಾ

ನಾಪೋಕ್ಲು : ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆಯ ಅಂಗವಾಗಿ ಕೊಟ್ಟಮುಡಿ ಮರ್ಕಝುಲ್ ಹಿದಾಯ ವಿದ್ಯಾಸಂಸ್ಥೆ, ಕರ್ನಾಟಕ ಮುಸ್ಲಿಂ ಜಮಾಅತ್,ಎಸ್ ಜೆ ಎಮ್, ಎಸ್ ವೈ ಎಸ್, ಎಸ್ ಎಸ್ ಎಫ್, ಎಸ್ ಬಿಎಸ್ ಇದರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಮೀಲಾದ್ ಸಂದೇಶ ಜಾಥಾ ನಾಪೋಕ್ಲು ಪಟ್ಟಣದಲ್ಲಿ ನಡೆಯಿತು.

ಹಳೇ ತಾಲ್ಲೂಕು ಪ್ರಾಥಮಿಕ ಶಾಲಾ ಮೈದಾನದಿಂದ ಆರಂಭಗೊಂಡ ಜಾಥಾಕ್ಕೆ ಕೊಡಗು ಜಿಲ್ಲಾ ಜಂಮಿಯ್ಯತುಲ್ ಉಲಮಾ ಕೋಶಾಧಿಕಾರಿ ಉಸೈನ್ ಸಖಾಫಿ ಎಮ್ಮೆಮಾಡು ಚಾಲನೆ ನೀಡಿದರು.

ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಸುನ್ನಿ ಸ್ಟೂಡೆಂಟ್ ಫೆಡರೇಷನ್( ಎಸ್ ಎಸ್ ಎಫ್) ರಾಜ್ಯಾಧ್ಯಕ್ಷರಾದ ಹಫೀಜ್ ಸುಫ್ಯಾನ ಸಖಾಫಿ ಮಾತನಾಡಿ ಕೀಳುವರ್ಗದವರ ಮೇಲೆ ನಡೆಯುತ್ತಿರುವ ದಾಳಿ ಅಮೇರಿಕದಂತ ರಾಷ್ಟ ಗಳಲ್ಲೂ ಕೂಡ ಇಂದು ಕರಿ, ಬಿಳಿಯರೆಂಬ ಅಸ್ಪೃಶ್ಯತೆಯಿಂದ ನೋಡುವಂತಹ ಕಾಲ, ಆದರೆ ಪ್ರವಾದಿ ಮೊಹಮ್ಮದ್ ಪೈಗಂಬರ್ 1,400 ವರ್ಷಗಳ ಹಿಂದೆ ಅರೇಬಿಯನ್ ಜನರ ಮುಂದೆ ಘೋಷಣೆ ಮಾಡುತ್ತಾರೆ ನಿಮ್ಮನ್ನು ನಾವು ವರ್ಗ, ವರ್ಣಗಳನ್ನಾಗಿ ಕರಿ, ಬಿಳಿಯರನ್ನಾಗಿ,ಉಚ್ಛ ನೀಚರನ್ನಾಗಿ ವಿಭಜಸಿದ್ದು ನೀವು ಪರಸ್ಪರ ಹೊಡೆದಾಟ ಬಡಿದಾಟ ದಿಂದ ಸತ್ತು ಶವ ವಾಗಬೇಕೆಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ನೀವು ಪರಸ್ಪರ ಗುರಿತಿಸಿಕೊಂಡು ಪರಸ್ಪರ ಪರಿಚಯಿಸಿಕೊಂಡು ಜೀವಿಸಬೇಕು ಎಂಬ ಉದ್ದೇಶದಿಂದ ಮಾತ್ರವಾಗಿದೆ ಎಂದು ಮೊಹಮ್ಮದ್ ಪೈಗಂಬರ್ ಅವರ ಚರಿತ್ರೆಯನ್ನು ಮನವರಿಕೆ ಮಾಡಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ ಮಾಧ್ಯಮ ದೊಂದಿಗೆ ಮಾತನಾಡಿ ಪ್ರವಾದಿಯವರ ಶಾಂತಿಯ ಸಂದೇಶವನ್ನು ನಾಡಿನ ಸಮಸ್ತ ಜನತೆಗೆ ಸಾರುವ ಸಲುವಾಗಿ ಜಾಥಾವನ್ನು ಹಮ್ಮಿಕೊಂಡಿದ್ದೇವೆ.ಈ ಒಂದು ಸಂದೇಶವನ್ನೇ ಜಗತ್ತಿನೆಲ್ಲೆಡೆ ಕೊಂಡಾಡುತ್ತಿದ್ದಾರೆ. ಅದರ ಅಂಗವಾಗಿ ನಾವು ಕೂಡ ನಾಪೋಕ್ಲು ಪಟ್ಟಣದಲ್ಲಿ ಈ ಜಾಥಾ ವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜಾಥಾದಲ್ಲಿ ವಿದ್ಯಾರ್ಥಿಗಳ ದಫ್ ಪ್ರದರ್ಶನ ಹಾಗೂ ಪುಟ್ಟಮಕ್ಕಳ ಸಮವಸ್ತ್ರ ದೊಂದಿಗೆ ಹೂಗಳ ಪ್ರದರ್ಶನ ನೋಡುಗರಿಗೆ ಆಕರ್ಷಣೆಯಾಗಿತ್ತು.ಪ್ರವಾದಿ ಸಂದೇಶ ವಾಕ್ಯವಾದ ಶಾಂತಿ-ಸೌಹಾರ್ದತೆಯ ಕೂಗು ಮೆರವಣಿಗೆಯಲ್ಲಿ ಕೇಳಿಬಂತು. ಪಟ್ಟಣದ ಮುಖ್ಯ ಬೀದಿಗಳಲ್ಲಿ ನಡೆದ ಜಾಥಾ ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ಸಮಾಪ್ತಿ ಗೊಂಡಿತು.

ಈ ಸಂದರ್ಭ ಸುನ್ನಿ ಜಂಯ್ಯತುಲ್ ಮುಹಲ್ಲಿಮೀನ್ ನಾಪೋಕ್ಲು ವಲಯ ಅಧ್ಯಕ್ಷ ಅಬ್ದುಲ್ಲಾ ಸಖಾಫಿ,ಮರ್ಕಝ್ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಯೂಸುಫ್ ಹಾಜಿ ಕೊಂಡಗೇರಿ,ಎಸ್. ಜೆ.ಎಂ.ಕಾರ್ಯದರ್ಶಿ ಹಂಸ ರಹ್ಮಾನಿ,ಸುಲೈಮಾನ್ ಸಖಾಫಿ,ಅಶ್ರಫ್ ಅಹ್ಸನಿ ಕಾಮಿಲ್ ಸಖಾಫಿ, ಸಿ.ಕೆ.ಅಹಮದ್ ಹಾಜಿ,ಹಮೀದ್ ಕಬಡಕ್ಕೇರಿ,ಮರ್ಕಝ್ ಪ್ರಾಂಶುಪಾಲರಾದ ಸಿಹಾಬುದ್ದೀನ್ ನೂರಾನಿ, ಮರ್ಕಝ್ ಕೋಶಾಧಿಕಾರಿ ಅಬ್ದುಲ್ಲಾ, ಅಬೂಬಕ್ಕರ್ ಸಖಾಫಿ, ಆರಫಾತ್ ನಾಪೋಕ್ಲು,ಸಿ.ಎಚ್. ಅಹಮದ್,ಅದ್ದು ಹಾಜಿ, ಮೊಯ್ದುಕುಟ್ಟಿ ಹಾಜಿ ಕೊಳಕೇರಿ,ಸೇರಿದಂತೆ ಮತ್ತಿತರ ಪ್ರಮುಖರು, ದರ್ಸ್ ವಿದ್ಯಾರ್ಥಿಗಳು, ಸಂಘಟನೆ ಕಾರ್ಯಕರ್ತರು ಹಾಗೂ ಅಧಿಕ ಸಂಖ್ಯೆಯಲ್ಲಿ ಮುಸಲ್ಮಾನ ಬಾಂಧವರು ಪಾಲ್ಗೊಂಡಿದ್ದರು.

ವರದಿ: ಝಕರಿಯ ನಾಪೋಕ್ಲು