ಚೆಯ್ಯ0ಡಾಣೆ, ಸೆ 26. ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ 2022-23ನೇ ಸಾಲಿನ ಜಮಾಬಂದಿ ಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಮಡಿಕೇರಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕರಾದ ಹೇಮಂತ್ ವಹಿಸಿದರು.
ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ 15 ನೇ ಹಣಕಾಸು ಅನುದಾನದ ಕಾಮಗಾರಿಗಳ ವಿವರಣೆಯನ್ನು ನೀಡಿದರು.
ಗ್ರಾ.ಪಂ.ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಬಿದ್ದಪ್ಪ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯ ಯೋಜನೆಯ ಅಡಿಯಲ್ಲಿ ಕೈಗೊಂಡ ಕಾಮಗಾರಿಗಳ ವಿವರವನ್ನು ನೀಡಿದರು.
ಅದರಲ್ಲಿ ನರಿಯಂದಡ ಗ್ರಾಮದ ತಮ್ಮಪ್ಪ ಮಾತನಾಡಿ ಮನೆ ನಿರ್ಮಾಣದ ಬಾಕಿ ಇರುವ ಹಣ ಜಮಾ ಆಗಿಲ್ಲ ಕಾರಣ ತಿಳಿಸುವಂತೆ ಕೋರಿದರು. ಇದಕ್ಕೆ ಅಭಿವೃದ್ದಿ ಅಧಿಕಾರಿ ಆಶಾ ಕುಮಾರಿ ಉತ್ತರಿಸಿ ನಿಮ್ಮ ಮನೆ ಕಾಮಗಾರಿ ಪೂರ್ಣ ಗೊಂಡಿಲ್ಲ, ಕೂಡಲೇ ಮನೆಗೆ ಶೀಟ್ ಅಳವಡಿಸಿದ ನಂತರ ತಿಳಿಸಿ ಜಿಪಿಎಸ್ ಮಾಡಿದ ಕೂಡಲೇ ಉಳಿದ ಹಣ ಜಮಾ ಆಗಲಿದೆ ಎಂದರು.
ನಂತರ ಅಧ್ಯಕ್ಷತೆ ವಹಿಸಿದ ಮಡಿಕೇರಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕರಾದ ಹೇಮಂತ್ ಮಾತನಾಡಿ ಕಳೆದ ಸಾಲಿನ ಬಿಲ್ ಹಣ ಬಾಕಿ ಇದೆ ಸಂಗ್ರಹಿಸುವವರು ಸಲ್ಪ ಮುತುವರ್ಜಿ ವಹಿಸಿ ಸಂಗ್ರಹಿಸುವಂತೆ ತಿಳಿಸಿದರು.
ಏನಾದರು ಸಮಸ್ಯೆ ಇದ್ದರೆ ಅದನ್ನು ಆದಷ್ಟು ಬೇಗ ಸರಿಪಡಿಸಿ ಉಳಿದಂತೆ ಬೇರೆ ಯಾವುದೇ ಸಮಸ್ಯೆ ಈ ಗ್ರಾಮ ಪಂಚಾಯಿತಿಯಲ್ಲಿ ಕಾಣುತ್ತಿಲ್ಲ ಸಾರ್ವಜನಿಕರು ಕೂಡ ಗ್ರಾಮ ಪಂಚಾಯಿತಿ ಯೊಂದಿಗೆ ಸಹಕರಿಸಿ ಈ ಗ್ರಾಮ ಪಂಚಾಯಿತಿ ಕಳೆದ ಸಾಲಿನಲ್ಲಿ ಉತ್ತಮ ಕಾಮಗಾರಿ ಕೈಗೊಂಡಿದ್ದಾರೆ ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ಉಪಾಧ್ಯಕ್ಷ ವಿನೋದ್ ನಾಣಯ್ಯ,ನಿಕಟ ಪೂರ್ವ ಅಧ್ಯಕ್ಷ ರಾಜೇಶ್ ಅಚ್ಚಯ್ಯ ಗ್ರಾ.ಪಂ.ಸದಸ್ಯರು, ಗ್ರಾಮಸ್ಥರು, ಗ್ರಾ.ಪಂ, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಡೆಸಿದರೆ ಸ್ವಾಗತವನ್ನು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಬಿದ್ದಪ್ಪ ವಂದನೆಯನ್ನು ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ನೆರವೇರಿಸಿದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ