ಚೆಟ್ಟಳ್ಳಿ ವಿವಿದೊದ್ದೇಶ ಪ್ರಾಥಮಿಕ ಕ್ರಷಿ ಗ್ರಾಮೀಣ ಸಹಕಾರ ಸಂಘದ ಚುನಾವಣೆಯಲ್ಲಿ ಬಲ್ಲಾರಂಡ ಮಣಿ ಉತ್ತಪ್ಪ ಅವರ ತಂಡದ ಎಲ್ಲಾ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಚೆಟ್ಟಳ್ಳಿ ವಿವಿಧ್ದೋಶ ಪ್ರಾಥಮಿಕ ಕ್ರಷಿ ಗ್ರಾಮೀಣ ಸಹಕಾರ ಸಂಘದ 2023-24 ನೇ ಸಾಲೀನ ಮುಂದಿನ 5ವರ್ಷಗಳಿಗೆ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಿತು.
ಆಡಳಿತ ಮಂಡಳಿಗೆ ಒಟ್ಟು12 ಸ್ಥಾನಗಳಲ್ಲಿ 11ಸಾಲಗಾರರ ಸ್ಥಾನವಾದರೆ ಸಾಲಗಾರರಲ್ಲದ ಮತ್ತು ಠೇವಣಿದಾರರ 1 ಸ್ಥಾನದಲ್ಲಿ 2ಮಹಿಳಾ ಮೀಸಲು ಸ್ಥಾನಕ್ಕೆ ಕೊಂಗೇಟಿರ ವಾಣಿಕಾಳಪ್ಪ ಹಾಗು ಮುಳ್ಳಂಡ ಮಾಯಮ್ಮ ,ಪರಿಶಿಷ್ಟ ಜಾತಿ ಸ್ಥಾನಕ್ಕೆ ಪಿ.ಟಿ.ಗಣೇಶ್ ಹಾಗು ಪರಿಶಿಷ್ಟ ಪಂಗಡ ಸ್ಥಾನಕ್ಕೆ ಜೆ.ಅರ್.ರವಿ,ಹಿಂದುಳಿದ ವರ್ಗದ ಪ್ರವರ್ಗ- ಎ ಸ್ಥಾನಕ್ಕೆ ಬಿ.ಎಂ.ಕಾಶಿ ಹಾಗುಪ್ರವರ್ಗ- ಬಿ ಸ್ಥಾನಕ್ಕೆ ಪೇರಿಯನ ಪೂರ್ಣಚ್ಚ, ಸಾಲಗಾರರಲ್ಲದ ಸ್ಥಾನಕ್ಕೆ ಮರದಾಳು ಚೇತನ್ (ಹರಿ), ಸ್ಥಾನಕ್ಕೆ ಯಾರು ಪ್ರತಿಸ್ಪರ್ಧಿ ಗಳಿಲ್ಲದೆ ಬಲ್ಲಾರಂಡ ಮಣಿ ಉತ್ತಪ್ಪವರ ನೇತ್ರತ್ವದ ತಂಡದ 7 ಸ್ಪರ್ಧಿಗಳು ನೇರ ಗೆಲುವನ್ನು ಸಾಧಿಸಿದ್ದಾರೆ. ಉಳಿದ ಸಾಲಗಾರ ಕೇತ್ರದ 5ಸ್ಥಾನಕ್ಕೆ 7ಅಭ್ಯರ್ಥಿಗಳು ಸ್ಪರ್ಧಿಸಿದ್ದ ಕಾರಣಕ್ಕೆ ಚುನಾವಣೆ ನಡೆಯಿತು.
ಒಟ್ಟು 530ಮತಗಳಲ್ಲಿ ಬಲ್ಲಾರಂಡ ಮಣಿ ಉತ್ತಪ್ಪ(497), ನಂಜಪ್ಪ ಪುತ್ತರಿರ (473),ವೇಣುಗೋಪಾಲ ಬಟ್ಟೀರ(465 ) ದಯಾನಂದ ಅಕ್ಕಾರಿ(406),ಪ್ರಜ್ವಲ್ ಕರ್ನಯ್ಯನ (422) ತೀರ್ಥ ಕುಮಾರ್ ಚೆಟ್ಟೋಳಿರ (123), ತಿಮ್ಮಯ್ಯ ಪುತ್ತರಿರ(110), ಮತಪಡೆದಿದ್ದು ಮಣಿ ಉತ್ತಪ್ಪ ನವರ ತಂಡ ಗೆಲುವನ್ನು ಸಾಧಿಸಿಸುವ ಮೂಲಕ 4ನೇ ಬಾರಿಗೆ ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷರಾಗಲಿದ್ದಾರೆ. ಸತತ 15 ವರ್ಷಗಳಿಂದ ಮಣಿ ಉತ್ತಪ್ಪ ಗೆಲವು ಸಾಧಿಸುತ್ತಾ ಬಂದಿದ್ದಾರೆ.