Reading Time: < 1 minute
ಚೆಟ್ಟಳ್ಳಿ: ಪ್ರಸಕ್ತ ವರ್ಷ (2023-24) ನೇ ಸಾಲಿನ “ಬಿತ್ತನೆ ಕಾಫಿ ಬೀಜ”ಕ್ಕೆ (Seed Coffee) ಆಸಕ್ತ ಕಾಫಿ ಬೆಳೆಗಾರ ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರೆಬಿಕಾ ಹಾಗು ರೋಬಷ್ಟಾ ಬಿತ್ತನೆ ಬೀಜಕ್ಕೆ ಅರ್ಜಿ ಸಲ್ಲಿಸಲಿಚ್ಛಿಸುವ ಆಸಕ್ತ ಕಾಫಿ ಬೆಳೆಗಾರರು ಮಂಡಳಿಯ ಕಛೇರಿಯ ಸಮಯದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಅರೆಬಿಕಾ ಹಾಗು ರೊಬಷ್ಟಾದ ಪ್ರತಿ ಕೆಜಿ ಬಿತ್ತನೆ ಬೀಜಕ್ಕೆ ರೂ.400ನ್ನು ಮುಂಗಡವಾಗಿ ಪಾವತಿಸಿ ತಮ್ಮ ಹೆಸರನ್ನು ನೊಂದಾಯಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ನವೆಂಬರ್ 2023 ಆಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿ ಕಛೇರಿಗಳನ್ನು ಸಂಪರ್ಕಿಸುವಂತೆ ಕಾಫಿಮಂಡಳಿ ತಿಳಿಸಿದೆ.