ಕೊಂಡಂಗೇರಿಯ ಹಯಾತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ವಾರ್ಷಿಕ ರಿಫಾಇಯ್ಯ ರಾತೀಬ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ರಾತೀಬ್ ಸಂಘದ ಖಲ್ಫ ಯಾಹ್ಯ ಹಾಜಿ ರಾತೀಬ್ ಗೆ ನೇತ್ರತ್ವ ವಹಿಸಿದರು. ಕೊಂಡಂಗೇರಿ ಮುದರ್ರಿಸ್ ಜುನೈದ್ ಸಖಾಫಿ ಜೀರ್ಮುಕ್ಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕೊಂಡಂಗೇರಿ ಖತೀಬ್ ಅಬೂಬಕ್ಕರ್ ಝುಹ್ರಿ ಎಡಕ್ಕರ ಮುಖ್ಯ ಭಾಷಣ ಮಾಡಿದರು. ನಝಿರ್ ನಿಜಾಮಿ (ರಾತೀಬ್ ಖಲ್ಫ) ಪ್ರಾಸ್ತವಿಕವಾಗಿ ಮಾತನಾಡಿದರು. ಸಯ್ಯದ್ ಅಸ್ಸಯ್ಯಿದ್ ಖಮರ್ ಅಲಿ ತಂಗಳ್ ಅಲ್ ಬುಖಾರಿ ಕಾಸರಗೋಡು ರಾತೀಬಿನ ಮಹತ್ವದ ಕುರಿತು ಹಾಗೂ ಇದರಿಂದ ದೊರೆಯುವ ಪುಣ್ಯ ಕಾರ್ಯಗಳ ಬಗ್ಗೆ ವಿವರಿಸಿ ಪ್ರಾರ್ಥನೆ ನಡೆಸಿದರು.
ವೇದಿಕೆಯಲ್ಲಿ ಕೊಂಡಂಗೇರಿ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಕೆ.ಕೆ.ಯೂಸುಫ್ ಹಾಜಿ,ತಕ್ಕ ಮುಖ್ಯಸ್ಥರಾದ ಪಿ.ಎ.ಕುಂಜಾಹ್ಮದ್ ಮುಸ್ಲಿಯಾರ್,ಎಂ.ಐ.ಇಕ್ಬಾಲ್, ಕೆ. ಎಂ.ಶಾದುಲಿ,ಮುಹ್ಯದ್ದೀನ್ ರಾತೀಬ್ ಖಲ್ಫ ಅಬ್ದುಲ್ ಲತೀಫ್ ಮುಸ್ಲಿಯಾರ್,ಹಾರಿಸ್ ಸಅದಿ, ರಿಪಾಇಯ್ಯ ರಾತೀಬ್ ಸಂಘದ ಅಧ್ಯಕ್ಷರಾದ ಪಿ.ಎ.ಆಲಿ ಮತ್ತಿತ್ತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.