ನಾಪೋಕ್ಲು : ಕೊಡಗು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತ್ ,ನಾಪೋಕ್ಲು ಗ್ರಾಮ ಪಂಚಾಯತ್, ಪಶುಪಾಲನಾ ವೈದ್ಯಕೀಯ ಸೇವಾ ಇಲಾಖೆ ಕೊಡಗು ಹಾಗೂ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ಸೇವಾ ಕಾರ್ಯ ಪಡೆ ಇವರ ಸಂಯುಕ್ತ ಆಶ್ರಯದಲ್ಲಿ ನ.8ರಂದು ಬೇತು ಗ್ರಾಮದ ಊರ್ ಮಂದ್ ನಲ್ಲಿ ಉಚಿತ ಪಶು ಚಿಕಿತ್ಸಾ ಶಿಬಿರ ಮತ್ತು ಸಾಕು ನಾಯಿಗಳಿಗೆ ರೇಬೀಸ್ ಮುಂಜಾಗ್ರತಾ ಲಸಿಕಾ ಶಿಬಿರವನ್ನು ಏರ್ಪಡಿಸಲಾಗಿದೆ.
ನ.8ರಂದು ಬೆಳಗ್ಗೆ10 ಗಂಟೆಯಿಂದ ಮಧ್ಯಾಹ್ನ 1.ಯವರೆಗೆ ಶಿಬಿರ ನಡೆಯಲಿದೆ.
ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಸಾಬಾ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು. ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗುಜಿಲ್ಲಾ ಪಶುಪಾಲನಾ ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಲಿಂಗರಾಜು ದೊಡ್ಡಮನಿ ಹಾಗೂ ತಾಲೂಕು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಪ್ರಸನ್ನ ಪಾಲ್ಗೊಳ್ಳಲಿದ್ದಾರೆ.
ಶಿಬಿರದಲ್ಲಿ ತಜ್ಞ ವೈದ್ಯರಿಂದ ಉಚಿತ ಪಶು ಆರೋಗ್ಯ ತಪಾಸಣೆ,ಹಸುಗಳ ಗರ್ಭ ಪರೀಕ್ಷೆ, ಬಂಜೆ ರಾಸುಗಳ ಪರೀಕ್ಷೆ, ಅವರ್ಣಿತ ಹೋರಿಗಳ ಕಸಿ ಹಾಗೂ ಉತ್ತಮ ರಾಸುಗಳಿಗೆ ಪ್ರೋತ್ಸಾಹಕ ಬಹುಮಾನ ವಿತರಣೆ ನಡೆಯಲಿದೆ.
ಶಿಬಿರದಲ್ಲಿ ಜಾನುವಾರುಗಳ ವೈಜ್ಞಾನಿಕ ಸಾಕಾಣಿಕೆ ಬಗ್ಗೆ ಹಾಗೂ ಇಲಾಖೆಯ ವಿವಿಧ ಹೊಸ ಕಾರ್ಯಕ್ರಮಗಳ ಬಗ್ಗೆ ವೈದ್ಯರು ಮಾಹಿತಿ ನೀಡಲಿದ್ದಾರೆ.
ನಾಪೋಕ್ಲುವಿನ ವಿವಿಧ ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.