ಮಡಿಕೇರಿ: ಮಂಗಳೂರಿನ ಗುರುಗೋಜು ರಾಯು ಕರಾಟೆ ಅಕಾಡೆಮಿ ಇಂಡಿಯಾ ವತಿಯಿಂದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಷಿಪ್ ಟೂರ್ನಮೆಂಟನ್ನು ಮಂಗಳೂರಿನ ಕುದ್ರೋಳಿ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದು, ಈ ಟೂರ್ನಮೆಂಟನಲ್ಲಿ ರಾಜ್ಯದ ಅನೇಕ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
10 ವರ್ಷದೊಳಗಿನ ಕರಾಟೆ ವಿಭಾಗದಲ್ಲಿ ದಿಗಂತ್ (ದ್ವಿತೀಯ) ಹಾಗೂ ಕುಮಿತೆ ವಿಭಾಗದಲ್ಲಿ (ತೃತೀಯ), 9 ವರ್ಷದೊಳಗಿನ ಕರಾಟೆ ವಿಭಾಗದಲ್ಲಿ ಪೊನ್ನಮ್ಮ (ತೃತೀಯ), ಕಟಾವಿಭಾಗದಲ್ಲಿ ಜಿ.ವಿ.ಲಿಖಿತ್ (ದ್ವಿತೀಯ), 11 ವರ್ಷದೊಳಗಿನವರಲ್ಲಿ ಕರಾಟೆ ವಿಭಾಗದಲ್ಲಿ ಜನಿತ್ (ದ್ವಿತೀಯ), 12 ವರ್ಷದವರಲ್ಲಿ ಕಟಾವಿಭಾಗದಲ್ಲಿ ಕಾವೇರಿಮನೋಜ್ (ಪ್ರಥಮ), ಶೋಭಿತ್ (ದ್ವಿತೀಯ), ಕಟಾ ವಿಭಾಗದಲ್ಲಿ 13 ವರ್ಷದವರಲ್ಲಿ ಮೋಹಿತ್(ಪ್ರಥಮ) ಹಾಗೂ ಕುಮಿತೆ ವಿಭಾಗದಲ್ಲಿ (ತೃತೀಯ), ಶಶಿರಾ (ದ್ವಿತೀಯ) ಹಾಗೂ ಕುಮಿತೆ ವಿಭಾಗದಲ್ಲಿ 14 ವರ್ಷದ ವರುಣ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆಯನ್ನು ಸಾಧಿಸಿದ್ದಾರೆ ಹಾಗೂ ತರಬೇತಿದಾರರಾದ ಮುಖೇಶ್ ಅವರು ಮಕ್ಕಳ ಪ್ರತಿಭೆಯಲ್ಲಿ ವಿಶ್ವಾಸವನ್ನು ಇಟ್ಟು ಉತ್ತಮ ರೀತಿಯ ತರಬೇತಿ ನೀಡಿ ವಿದ್ಯಾರ್ಥಿಗಳು ಟೂರ್ನಿಯಲ್ಲಿ ಪ್ರಶಸ್ತಿ ಪಡೆದುಕೊಳ್ಳಲು ಸಹಕರಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಮುಖೇಶ್ ಅವರು ಕರಾಟೆ ಚಾಂಪಿಯನ್ ಷಿಪ್‍ನಲ್ಲಿ ಉತ್ತಮ ಸಾಧನೆ ಮಾಡಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ.
ಕ್ರೀಡಾ ಚಟುವಟಿಕೆಗಳಲ್ಲಿ ಶಾಲೆಯ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಶಾಲೆಯ ಆಡಳಿತ ಮಂಡಳಿಯು ಪ್ರೋತ್ಸಾಹ ನೀಡಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಸರಸ್ವತಿ ಅವರು ತಿಳಿಸಿ ಮಕ್ಕಳಿಗೆ ಮತ್ತು ತರಬೇತಿದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.