ಚೆಟ್ಟಳ್ಳಿಯಲ್ಲಿ ನಡೆದ “ಆಫ್ ಸೀಜನ್ ಲಿಚ್ಚಿ ಹಣ್ಣಿನ ಕ್ಷೇತ್ರೋತ್ಸವ ಹಾಗೂ ಬೇಸಾಯ ಕ್ರಮಗಳ ಬಗ್ಗೆಗಿನ ಕಾರ್ಯಾಗಾರ”
ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ಭಾರತೀಯ ತೋಟಗಾರಿಕಾ ಸಂಶೋದನಾ ಸಂಸ್ಥೆ-ಚೆಟ್ಟಳ್ಳಿ. ಇವರ ಸಂಯುಕ್ತಾಶ್ರಯದಲ್ಲಿ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದಲ್ಲಿ ಹಣ್ಣುಗಳ- ಅಖಿಲ ಭಾರತ ಸಂಘಟಿತ ಸಂಶೋದನಾ ಯೋಜನೆಯಡಿ ಡಿ.7ರಂದು ಆಫ್ ಸೀಜನ್ ಲಿಚ್ಚಿ ಹಣ್ಣಿನ ಕ್ಷೇತ್ರೋತ್ಸವ ಹಾಗೂ ಬೇಸಾಯ ಕ್ರಮಗಳ ಬಗ್ಗೆ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದಲ್ಲಿ ಲಿಚ್ಚಿ ಹಣ್ಣಿನ ವಸ್ತು ಪ್ರದರ್ಶನ, ಕ್ಷೇತ್ರ ಭೇಟಿ, ರೈತ-ವಿಜ್ಞಾನಿಗಳ ಸಂವಾದ, ಲಿಚ್ಚಿಯಲ್ಲಿ ಗರ್ಡಲಿಂಗ್ ತಂತ್ರಜ್ಞಾನದ ಮಾಹಿತಿ ಕಾರ್ಯಾಗಾರ ನಡೆಯಿತು. ಆಫ್ ಸೀಜನ್ ಲಿಚ್ಚಿ ಹಣ್ಣಿಗೆ ಬರುವ ಸಮಸ್ಯೆಗಳ ಬಗ್ಗೆ ಕೇಂದ್ರದ ಹಣ್ಣು ವಿಜ್ಞಾನಿ ಡಾ.ಮುರುಳಿದರ್ ಹಾಗೂ ಯಶಸ್ವಿ ಲಿಚ್ಚಿ ಬೇಸಾಯಕ್ಕೆ ಬೇಕಾಗುವ ತಾಂತ್ರಿಕತೆಗಳು ಎಂಬ ವಿಷಯದ ಬಗ್ಗೆ ಐ.ಸಿ. ಏ. ಅರ್ – ಎನ್.ಆರ್ .ಸಿ ಯ ನುರಿತ ತಜ್ಞರು ಹಾಗೂ ನಿರ್ದೇಶಕ ಡಾ.ಬಿಕಾಸ್ ದಾಸ್ ಬೆಳೆಗಾರರಿಗೆ ಮಾಹಿತಿ ನೀಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ಐ.ಸಿ.ಎ.ಆರ್ – ಐ.ಐ.ಹೆಚ್.ಆರ್ ನ ನಿರ್ದೇಶಕ ಡಾ.ಸಂಜಯ್ ಕುಮಾರ್ ಸಿಂಗ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐ.ಸಿ.ಎ.ಆರ್– ಎನ್ಆರ್.ಸಿಯ ನುರಿತ ತಜ್ಞರು ಹಾಗೂ ನಿರ್ದೇಶಕ ಡಾ. ಬಿಕಾಸ್ ದಾಸ್, ಅತಿಥಿಗಳಾಗಿ ಎಐಸಿಆರ್ ಪಿ ಆನ್ ಫೂಟ್ ಐ.ಸಿ.ಎ.ಆರ್ – ಐ.ಐ.ಹೆಚ್.ಆರ್ ಬೆಂಗಳೂರಿನ ಪ್ರೋಜೆಕ್ಟ್ ಕೋಡಿನೇಟರ್ ಡಾ.ಪ್ರಕಾಶ್ ಪಾಟಿಲ್, ಪ್ರಗತಿಪರ ಕಾಫಿ ಬೆಳೆಗಾರ ಹಾಗೂ ಕಾಫಿ ಮಂಡಳಿಯ ಮಾಜಿ ಅಧ್ಯಕ್ಷ ಬೋಸ್ ಮಂದಣ್ಣ, ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಕೇಂದ್ರದ ಮೇಲ್ವಿಚಾರಕ ಡಾ. ರಾಜೇಂದಿರನ್ ಪಾಲ್ಗೊಂಡಿದ್ದರು.
ಆಫ್ ಸೀಜನ್ ಲಿಚ್ಚಿ ಹಣ್ಣಿನ ಕ್ಷೇತ್ರೋತ್ಸವ ಹಾಗೂ ಬೇಸಾಯ ಕ್ರಮಗಳ ಬಗ್ಗೆಗಿನ ಕಾರ್ಯಾಗಾರದಲ್ಲಿ 200ಕ್ಕೂ ಅಧಿಕ ಮಂದಿ ಭಾಗವಹಿಸಿ ಈ ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡರು.
ಆಫ್ ಸೀಜನ್ ಲಿಚ್ಚಿ ಹಣ್ಣಿನ ಬೇಸಾಯ ಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ: 7892882351, 9005847283 ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದು.