ವಿರಾಜಪೇಟೆ: ಸುನ್ನಿ ಸ್ಟೂಡೆಂಟ್ ಪೇಡರೇಷನ್ (ಎಸ್ ಎಸ್ ಎಫ್ ) ವಿರಾಜಪೇಟೆ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮ ಬದ್ರಿಯಾ ಮದರಸ ಸಭಾಂಗಣದಲ್ಲಿ ನಡೆಯಲಿದೆ.
ಕಡಂಗ ಬದ್ರಿಯಾ ಮದರಸ ಸಭಾಂಗಣದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಇದರ ಬಗ್ಗೆ ಮಾಹಿತಿ ನೀಡಿದ ಎಸ್ ಎಸ್ ಎಫ್ ವಿರಾಜಪೇಟೆ ಡಿವಿಷನ್ ಅಧ್ಯಕ್ಷ ಕಮರುದ್ದಿನ್ ಅನ್ವಾರಿ ವಿದ್ಯಾರ್ಥಿಗಳ ಪ್ರತಿಭೆಗಳಲ್ಲಿ ಅಡಗಿರುವ ಸುಪ್ತ ಶಕ್ತಿಯನ್ನು ಹೊರತಂದು ಅವರ ಭವಿಷ್ಯವನ್ನು ಬೆಳಗಿಸಲು ಎಸ್ಎಸ್ಎಫ್ ಕಳೆದ ಎರಡು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ವಿದ್ಯಾರ್ಥಿ ಪ್ರತಿಭಾ ಹಬ್ಬವಾಗಿದೆ ಸಾಹಿತ್ಯೋತ್ಸವ, ಭಾಷಣ,ಬರಹ ಹಾಗೂ ಇನ್ನಿತರ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾನ್ವಿತರು ನಮ್ಮಲ್ಲಿ ಹಲವರಿದ್ದಾರೆ ಅವರನ್ನು ಸಮಾಜಕ್ಕೆ ಪರಿಚಯಿಸಿ ಅವರನ್ನು ಸಮಾಜದ ಮುಖ್ಯವಾಹಿಣಿಗೆ ತರುವುದು ನಮ್ಮ ಜವಾಬ್ಧಾರಿಯಾಗಿದೆ. ಈ ನಿಟ್ಟಿನಲ್ಲಿ ಎಸ್ ಎಸ್ ಎಫ್ ಸಾಹಿತ್ಯೋತ್ಸವದ ಮೂಲಕ ಬಹಳಷ್ಟು ಪ್ರತಿಭೆಗಳನ್ನು ಗುರುತಿಸಿ ಸಮಾಜಕ್ಕೆ ಸಮರ್ಪಿಸಿದೆ. ಸಾಹಿತ್ಯೋತ್ಸವ ಹೆಸರಿನಲ್ಲಿ ಎಸ್ ಎಸ್ ಎಫ್ ಒಂದು ವೇದಿಕೆಯಲ್ಲಿ ಎಲ್ಲಾ ಪ್ರತಿಭೆಗಳನ್ನು ಸೇರಿಸಿ ಇತಿಹಾಸ ಬರೆದಿದೆ ಆದ್ದರಿಂದ ಕರ್ನಾಟಕ ಎಸ್ ಎಸ್ ಎಫ್ ಎರಡು ವರ್ಷಕ್ಕೊಮ್ಮೆ ನಡೆಸುತ್ತಿದ್ದ ಕಾರ್ಯಕ್ರಮವನ್ನು ಈ ವರ್ಷದಿಂದ ಎಲ್ಲಾ ವರ್ಷ ನಡೆಸಿಕೊಂಡು ಬರಲು ತೀರ್ಮಾನಿಸಲಾಗಿದೆ. ಅದರಂತೆ ವಿರಾಜಪೇಟೆ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ 2023 ಕಡಂಗದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಎಸ್ ಎಸ್ ಎಫ್ ವಿರಾಜಪೇಟೆ ಡಿವಿಷನ್ ಕಾರ್ಯದರ್ಶಿ ರಶಾದ್ ಹೊಳಮಾಳ ಮಾತನಾಡಿ ವಿರಾಜಪೇಟೆ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ 2023 ಡಿಸೆಂಬರ್ 16 ಹಾಗೂ 17 ರಂದು ಕಡಂಗದಲ್ಲಿ ನಡೆಯಲಿದೆ. ಡಿವಿಷನ್ ವ್ಯಾಪ್ತಿಯ ಐದು ಸೆಕ್ಟರ್ ಗಳಾದ ಸಿದ್ದಾಪುರ, ಪೊನ್ನಂಪೇಟೆ ವಿರಾಜಪೇಟೆ, ಕಡಂಗ ಹಾಗೂ ಪಾಲಿಬೆಟ್ಟ ಸೆಕ್ಟರ್ ಗಳಿಂದ ಆಯ್ಕೆಯಾದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿವಂತೆ ಕೇಳಿಕೊಂಡರು.
ತಾ 16ನೇ ತಾರೀಕೀನ ಶನಿವಾರ 3 ಗಂಟೆಗೆ ಕೊಕ್ಕಂಡಬಾಣೆ ಮಖಾ0 ಝಿಯಾರತ್ ನೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು 17 ರಾತ್ರಿ ಎಸ್ ಎಸ್ ಎಫ್ ಕೇರಳ ರಾಜ್ಯಾಧ್ಯಕ್ಷರಾದ ಫಿರ್ದೌಸ್ ಸುರೈಜಿ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಧಾರ್ಮಿಕ,ಸಾಮಾಜಿಕ,ರಾಜ್ಯಕೀಯ ನೇತಾರರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಎಸ್ ಎಸ್ ಎಫ್ ವಿರಾಜಪೇಟೆ ಡಿವಿಷನ್ ಪದಾಧಿಕಾರಿಗಳಾದ ಸುಫಿಯಾನ್ ಅಮಿನಿ,ಇಸ್ಮಾಯಿಲ್ ಅನ್ವಾರಿ ಅಹ್ಸನಿ ,ಸ್ವಾಗತ ಸಮಿತಿಯ ಕನ್ವಿನರ್ ಮುಜೀಬ್ ಕಡಂಗ, ಇಸ್ಮಾಯಿಲ್ ಹನೀಫಿ ಇದ್ದರು.