ವಿದ್ಯಾರ್ಥಿಗಳಿಗಾಗಿ ನಿತ್ಯ “ಜೀವನದಲ್ಲಿ ಆಯುರ್ವೇದ” ಎಂಬ ವಿಷಯದ ಕುರಿತು ನಡೆದ ಪ್ರಬಂಧ ಸ್ಪರ್ಧೆ

ಸ್ಥಳೀಯ ಆಹಾರ ಬಳಕೆಯಿಂದ ಉತ್ತಮ ಆರೋಗ್ಯ ಸಾಧ್ಯ; ಡಾ. ಶುಭ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಬಲ್ಲಮಾವಟಿ: ತಮ್ಮ ದಿನನಿತ್ಯದ ಆಹಾರದಿಂದ ಉತ್ತಮ ಜೀವನಶೈಲಿಯನ್ನು ರೂಪಿಸಿಕೊಳ್ಳಬೇಕಾದರೆ ಸ್ಥಳೀಯವಾಗಿ ಸಿಗುವ ಆಹಾರ ಪದಾರ್ಥಗಳನ್ನು ಬಳಸಿದರೆ ಮಾತ್ರ ಸಾಧ್ಯ ಎಂದು ಬಲ್ಲಮಾವಟಿ ಆಯುಷ್ ಆರೋಗ್ಯ ಕ್ಷೇಮಕೇಂದ್ರದ ವೈದ್ಯಾಧಿಕಾರಿ ಡಾ. ಶುಭ ಹೇಳಿದರು.

ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದ ಆಯುಷ್ ಆರೋಗ್ಯ ಹಾಗೂ ಕ್ಷೇಮ ಕೇಂದ್ರದ ವತಿಯಿಂದ ಸ್ಥಳೀಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಿತ್ಯ “ಜೀವನದಲ್ಲಿ ಆಯುರ್ವೇದ” ಎಂಬ ವಿಷಯದ ಕುರಿತು ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸ್ಥಳೀಯ ಆಹಾರ ವಸ್ತುಗಳನ್ನು, ಸ್ಥಳೀಯ ಹಣ್ಣುಗಳನ್ನು ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಮ್ಮ ಸುತ್ತಮುತ್ತಲಿನ ಎಲ್ಲಾ ಸಸ್ಯಗಳಲ್ಲಿ ಔಷಧಿ ಗುಣಗಳಿವೆ. ನಮ್ಮ ಶರೀರಕ್ಕೆ ಅನುಗುಣವಾಗಿ ಅವುಗಳನ್ನು ಬಳಕೆ ಮಾಡಬೇಕು. ಸಸ್ಯಗಳು ಔಷಧಿಯು ಹೌದು ಆಹಾರವೂ ಹೌದು. ವಿವೇಚನೆಯಿಂದ ನಿತ್ಯ ಜೀವನದಲ್ಲಿ ಸ್ಥಳೀಯ ಆಹಾರ ವಸ್ತುಗಳನ್ನು ಬಳಸಿದರೆ ಉತ್ತಮ ಆರೋಗ್ಯವನ್ನು ಹೊಂದಬಹುದು ಎಂದರು.

ಸ್ಪರ್ಧೆಯಲ್ಲಿ ನೇತಾಜಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯರಾದ ಅನನ್ಯದೇವೇಂದ್ರ ನಾಯ್ಕ್ ಮತ್ತು ದೀಪಿಕಾ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದರು. 9ನೇ ತರಗತಿಯ ವಿದ್ಯಾರ್ಥಿ ಮುಫೈದ ತೃತೀಯಸ್ಥಾನ ಪಡೆದರು.ವಿದ್ಯಾರ್ಥಿಗಳಾದ ಜಯಕುಮಾರ್,ನಿಧಾ ಫಾತಿಮಾ ಹಾಗೂ ಅಜ್ಮೀನ ಸಮಾಧಾನಕರ ಬಹುಮಾನ ಗಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕವೃಂದ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

0 0 votes
Article Rating
Subscribe
Notify of
guest
0 Comments
Inline Feedbacks
View all comments