Reading Time: < 1 minute
ವಿರಾಜಪೇಟೆಜ 8. ಕರ್ನಾಟಕ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಷನ್ ಹಾಗೂ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಡ್ಯಾನ್ಸ್ ಫೆಡರೇಷನ್ ವತಿಯಿಂದ ಮಂಡ್ಯದ ಡಾ-ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಶಾಸ್ತ್ರೀಯ ನೃತ್ಯ ಹಾಗೂ ಜಾನಪದ ನೃತ್ಯ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿ ವಿರಾಜಪೇಟೆಯ ಎ.ಯೆದ್ವಿಕ್ 3 ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ವಿರಾಜಪೇಟೆ ಸಮೀಪದ ಅರಮೇರಿ ಎಸ್.ಎಂ.ಎಸ್.ಶಾಲೆಯ 2 ನೇ ತರಗತಿ ವಿದ್ಯಾರ್ಥಿ ಯಾಗಿರುವ ಯ
ಯೆದ್ವಿಕ್, ವಿರಾಜಪೇಟೆಯ ಅಜಿತ್ ಹಾಗೂ ಶೋಭಿಕ ದಂಪತ್ರಿಯ ಪುತ್ರ. ಕಳೆದ 3ವರ್ಷದಿಂದ ವಿರಾಜಪೇಟೆಯ ನಾಟ್ಯಂಜಲಿ ನೃತ್ಯ ಹಾಗೂ ಸಂಗೀತ ಸಂಸ್ಥೆಯ ಗುರುಗಳಾದ ವಿದುಷಿ ಹೇಮಾವತಿ ಕಾಂತ್ ರಾಜ್ ಹಾಗೂ ಕಾವ್ಯಶ್ರೀ ಯವರಲ್ಲಿ ತರಬೇತಿ ಪಡೆದುಕೊಂಡಿದ್ದಾನೆ.