ಜನವರಿ 13 ರಿಂದ 26 ರವರೆಗೆ ಕೇರಳದ ಬೈತೂರು ಹಬ್ಬ
ಕೇರಳದ ಬೈತೂರಿನಲ್ಲಿ ವಾರ್ಷಿಕ ಉತ್ಸವ ಜನವರಿ 13 ರಿಂದ 26ರ ವರೆಗೆ ನಡೆಯಲಿದೆ.
ಪ್ರಮುಖವಾಗಿ 22ರಂದು 8 ನೇ ಊಟ ಉತ್ಸವ 23 ರಂದು 9ನೇ ಊಟ ಉತ್ಸವ ನಡೆಯಲಿದೆ.
24ರಂದು ಪ್ರಮುಖವಾದ ಪತ್ ಊಟ ( ಹತ್ತು ಊಟ ) ನಡೆಯಲಿದ್ದು ಅಂದು ವಿಶೇಷ ಪೂಜಾ ಕಾರ್ಯಕ್ರಮಗಳು ಜರಗಲಿದೆ. ಅಂದು ಮಧ್ಯಾಹ್ನ ಆನೆ ಅಂಬಾರಿಯೊಂದಿಗೆ ದೇವಾಲಯದಲ್ಲಿ ಪ್ರದಕ್ಷಿಣೆ ನಡೆಯಲಿದೆ.
ಜ. 25ರಂದು ಕೊಡಗಿನ ದೇವರ ಸಮಾಗಮ ದೇವರ ದರ್ಶನ ನಡೆಯಲಿದೆ.
ಕೇರಳದ ಕಣ್ಣೂರು ಜಿಲ್ಲೆಯ ಇರಿಟಿ ಸಮೀಪದ ಉಲಿಕಲ್ ನಲ್ಲಿರುವ ಬೈತೂರು ಶಿವ ದೇವಾಲಯ ಕೊಡಗು ಹಾಗೂ ಕಣ್ಣೂರು ಜಿಲ್ಲೆಯ ಮಲೆಯಾಳಿಗಳು ಒಟ್ಟಿಗೆ ಸೇರಿ ಪೂಜಿಸುವ ದೇವಾಲಯವಾಗಿದೆ. ಇಲ್ಲಿ ಕೊಡವರು ಮತ್ತು ಮಲೆಯಾಳಿಗಳು ಒಟ್ಟಿಗೆ ಸೇರಿ ಟ್ರಸ್ಟ್ ಮೂಲಕ ದೇವಾಲಯವನ್ನು ನಡೆಸುತ್ತಿದ್ದಾರೆ. ಹಿಂದಿನ ಸಂಪ್ರದಾಯದಂತೆ ಎತ್ತಿನ ಮೂಲಕ ಅಕ್ಕಿಯನ್ನು ಈ ವಾರ್ಷಿಕೋತ್ಸವಕ್ಕೆ ಕೊಡಗಿನಿಂದ ಸಾಗಿಸಿ ದೇವರ ಉತ್ಸವಕ್ಕೆ ಸಲ್ಲಿಸಲಾಗುತ್ತದೆ. ಜನವರಿ 24ರಂದು ಹಾಗೂ 25ರಂದು ವಿಶೇಷವಾಗಿ ಕೊಡಗಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಪಾಲ್ಗೊಂಡು ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಪುಗ್ಗೇರ ತಕ್ಕರಾದ ಪೊನ್ನಪ್ಪ 9663977304 ಸಂಪರ್ಕಿಸುವಂತೆ ಕೋರಲಾಗಿದೆ.