ಮಾದರಿ ಗ್ರಾಮ  ಪಂಚಾಯಿತಿಯಾಗಿ ಮಾಡುವ ನಿಟ್ಟಿನಲ್ಲಿ ನನ್ನ ಹೆಜ್ಜೆ; ಪಂದಿಕಂಡ ದಿನೇಶ್ (ಕುಶ)

ಪಂದಿಕಂಡ ದಿನೇಶ್ (ಕುಶ),  ಅಧ್ಯಕ್ಷರು: ಗ್ರಾಮ ಪಂಚಾಯಿತಿ ಹಾಲುಗುಂದ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಹಾಲುಗುಂದ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪಂದಿಕಂಡ ದಿನೇಶ್(ಕುಶ) ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಪಡೆಯಲಾಯಿತು.

“ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಪಂದಿಕಂಡ ದಿನೇಶ್(ಕುಶ) ರವರು, “ಸಾಮಾಜಿಕ ಸೇವೆಯನ್ನು ಮೈಗೂಡಿಸಿಕೊಂಡು ನಮ್ಮ ಗ್ರಾಮದ ಅಭಿವೃದ್ಧಿಗೆ ನನ್ನಿಂದ ಆಗುವ ಸೇವೆಯನ್ನು ಮಾಡುವ ನಿಟ್ಟಿನಲ್ಲಿ ನಾನು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ. ಗ್ರಾಮಸ್ಥರ ಒತ್ತಾಸೆಯ ಮೇರೆಗೆ ನಾನು 2010 ರಲ್ಲಿ ಮೊದಲ ಬಾರಿಗೆ ಹಾಲುಗುಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದೆ. ಆ ಸಂದರ್ಭದಲ್ಲಿ ನನ್ನ ಮೇಲೆ ನಂಬಿಕೆಯಿಟ್ಟು ನಮ್ಮ ಗ್ರಾಮದ ಮತದಾರರು ಮತ ಚಲಾಯಿಸಿ ಅತ್ಯಧಿಕ ಬಹುಮತದಿಂದ ನನ್ನನ್ನು ಆಯ್ಕೆ ಮಾಡಿದರು. 2010-15 ರ ಅವಧಿಯಲ್ಲಿ ನನ್ನ ಪಾಲಿಗೆ ಬಂದ ಜವಾಬ್ಧಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ ಕಾರಣ ಮರಳಿ ಎರಡನೇಯ ಅವಧಿಗೆ ಅಂದರೆ 2015-20 ನೇ ಸಾಲಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಗೊಂಡು ಸದಸ್ಯನಾಗಿ ಕಾರ್ಯನಿರ್ವಹಿಸಿದೆ. ತದ ನಂತರ 3ನೇ ಅವಧಿಗೆ 2020-25 ರ ಸಾಲಿನಲ್ಲಿ ಆಯ್ಕೆಗೊಂಡು ಉಪಾಧ್ಯಕ್ಷನಾಗಿ ಹಾಗೂ ಪ್ರಸ್ತುತ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ.

ನಾನು ಜನಪ್ರತಿನಿಧಿಯಾಗಿ ಆಯ್ಕೆಗೊಂಡ ನಂತರ ಮಾಡಿದ ಅಭಿವೃದ್ಧಿ ಕಾರ್ಯಗಳಲ್ಲಿ ಮೊದಲಿಗೆ ನಮ್ಮ ಗ್ರಾಮದಲ್ಲಿ ಹಾಲುಗುಂದ – ಬೈರಂಬಾಡ ಗ್ರಾಮಗಳನ್ನು ಸಂಪರ್ಕಿಸುವ 2.50 ಕಿ.ಮೀ ರಸ್ತೆಯು ಕಿರಿದಾಗಿದ್ದು, ಕೇವಲ ಒಂದೇ ವಾಹನ ಹೋಗುವಂತಿತ್ತು, ಮುಂಬರುವ ವಾಹನಕ್ಕೆ ದಾರಿ ಮಾಡಿಕೊಡುವಲ್ಲಿನ ಸಮಸ್ಯೆಯು ದಶಕಗಳಿಂದ ಇತ್ತು. ಇದನ್ನು ಮನಗಂಡ ನಾನು ರಸ್ತೆಯ ಎರಡು ಬದಿಯಲ್ಲಿರುವ ತೋಟಗಳ ಮಾಲೀಕರ ಮನವೋಲಿಸಿ ಒಟ್ಟು 15 ಅಡಿ ಅಗಲ ರಸ್ತೆ ಅಗಲೀಕರಣವನ್ನು ಮಾಡಿಸಿ ಉತ್ತಮ ಸಂಪರ್ಕ ರಸ್ತೆಯನ್ನು ಮಾಡಿಸಿದ ತೃಪ್ತಿ ನನಗೆ ಇದೆ ಎಂದು ತಿಳಿಸಲು ಈ ಸಂದರ್ಭದಲ್ಲಿ ಇಚ್ಚಿಸುತ್ತೇನೆ. ಇದರಿಂದ ಈ ಮೊದಲು ಗ್ರಾಮಸ್ಥರು ಹಾಲುಗುಂದದಿಂದ ಬೈರಂಬಾಡದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ತೆರಳಲು, ಅಮ್ಮತ್ತಿ ಪಟ್ಟಣಕ್ಕೆ ತೆರಳಲು ಹಾಗೆ ಮುಂತಾದ ಅಗತ್ಯ ಕಾರ್ಯಗಳಿಗೆ ಈ ಹಿಂದೆ ಸುತ್ತಿ ಬಳಸಿ ತೆರಳುತ್ತಿದ್ದ ಕಾರ್ಯವು ಈ ರಸ್ತೆ ಅಗಲೀಕರಣದಿಂದ ಸುಲಲಿತವಾಗಿದೆ. ಒಟ್ಟಿನಲ್ಲಿ ನಮ್ಮ  ಗ್ರಾಮೀಣ ರಸ್ತೆಗಳು ಶೇಕಡ 90%ರಷ್ಟು ಅಭಿವೃದ್ಧಿಯನ್ನು ಕಂಡಿದೆ. 

ವಿದ್ಯುಚ್ಚಕ್ತಿ ವ್ಯವಸ್ಥೆಯು ಹಾಗೂ ಬೀದಿದೀಪಗಳ ವ್ಯವಸ್ಥೆಗಳು ಸಮರ್ಪಕವಾಗಿ ಆಗಿದೆ. ಕುಡಿಯುವ ನೀರಿನ ವ್ಯವಸ್ಥೆಯು ಮನೆಮನೆಗಳಿ ಪೂರ್ಣಗೊಂಡಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಜಲಜೀವನ್‌ ಮಿಷನ್‌ ಅಡಿಯಲ್ಲಿ ಕುಡಿಯುವ ನೀರಿನ ಕಾಮಗಾರಿಯನ್ನು ಸಂಪೂರ್ಣವಾಗಿ ಪೂರ್ತಿಗೊಳಿಸಲಾಗುವುದು. ಗ್ರಾಮದ ವಸತಿ ರಹಿತರಿಗೆ ವಸತಿ ಒದಗಿಸುವ ವ್ಯವಸ್ಥೆಯು ಶೇಕಡ 85% ರಿಂದ90%ರಷ್ಟು ಪೂರ್ಣಗೊಂಡಿದೆ. ಉದ್ಯೋಗ ಖಾತ್ರಿ ಯೋಜನೆಯು ಕೊಡಗಿನ ಪರಿಸರಕ್ಕೆ ಪೂರಕವಾದುದ್ದಲ್ಲ ಎಂಬುವುದು ನನ್ನ ಅಭಿಮತವಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ಮಾನದಂಡಗಳನ್ನು ಸಡಿಲಗೊಳಿಸಿ ಕೊಡಗಿನ ಪರಿಸರಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಹೊಸದಾದ ವ್ಯವಸ್ಥೆಯನ್ನು ರೂಡಿಸುವಲ್ಲಿ ಸರಕಾರವು ಗಮನ ಹರಿಸಬೇಕಾಗಿದೆ ಎಂದು ನಾನು ಈ ಮೂಲಕ ಒತ್ತಾಯಿಸುತ್ತಿದ್ದೇನೆ. 14ನೇ ಹಣಕಾಸು ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲು ಮುಕ್ತವಾದ ವಾತವರಣವಿತ್ತು. ಆದರೆ 15ನೇ ಹಣಕಾಸು ಯೋಜನೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ವಿಂಗಡಿಸಿ ಪ್ರತಿಯೊಂದಕ್ಕೂ ಶೇಕಡಾವಾರು ಅನುದಾನವನ್ನು ಮೀಸಲಿಟ್ಟ ಕಾರಣ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕಾಮಗಾರಿಗಳು ಪೂರ್ಣ ಪ್ರಮಾಣದಲ್ಲಿ ಪೂರ್ತಿಯಾಗದಿರುವುದಕ್ಕೆ ಕಾರಣವಾಗಿದೆ. ಮುಂದಿನ ದಿನಮಾನಗಳಲ್ಲಿ ಈ ಬಗ್ಗೆ ಸರಕಾರವು ಗಮನ ಹರಿಸಬೇಕಾಗಿದೆ ಎಂದು ನಾನು ತಿಳಿಸಲು ಇಚ್ಚಿಸುತ್ತಿದ್ದೇನೆ.

ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಎಂದರೆ ಜನರಿಗೆ ಹಾಗೂ ಗ್ರಾಮದ ಅಭಿವೃದ್ಧಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವ ಮಧ್ಯವರ್ತಿಯಂತೆ ಕೆಲಸ ಮಾಡಬೇಕು ಎಂಬುವುದು ನನ್ನ ಅನಿಸಿಕೆಯಾಗಿದೆ. ಗ್ರಾಮದ ಅಭಿವೃದ್ಧಿಗೆ ಹಾಲುಗುಂದ ಗ್ರಾಮ ಪಂಚಾಯಿತಿಯನ್ನು ಮಾದರಿ ಗ್ರಾಮ  ಪಂಚಾಯಿತಿಯಾಗಿ ಮಾಡುವ ನಿಟ್ಟಿನಲ್ಲಿ  ನನ್ನ ಪ್ರಮುಖವಾದ ಕನಸಾಗಿದೆ. ನನ್ನ ಗ್ರಾಮ ಪಂಚಾಯಿತಿಯಲ್ಲಿನ ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರ ಸಹಕಾರವು ಉತ್ತಮವಾಗಿ ದೊರೆಯುತ್ತಿದೆ. ಕ್ರೀಯಾಶೀಲರಾದ ಉತ್ತಮ ಶಾಸಕರು ಎ.ಎಸ್.‌ ಪೊನ್ನಣ್ಣನವರು ದೊರೆತ್ತಿದ್ದು, ಅವರ ಮಾರ್ಗದರ್ಶನದಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸಲಾಗುವುದು.

ಪಾರದರ್ಶಕವಾದ ಸ್ವಾರ್ಥ ರಹಿತವಾದ ಭ್ರಷ್ಟಚಾರ ಮುಕ್ತ ಆಡಳಿತ ನೀಡುವಲ್ಲಿ ಪ್ರತಿಯೊಬ್ಬ ಜನಪ್ರತಿನಿಧಿಯು ತಮ್ಮ ಜವಾಬ್ಧಾರಿಯನ್ನು ನಿಭಾಯಿಸಿದರೆ,. ಗ್ರಾಮ ರಾಜ್ಯ-ರಾಮ ರಾಜ್ಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುವುದು ರಾಜಕೀಯ ಕ್ಷೇತ್ರಕ್ಕೆ ನನ್ನ ಸಲಹೆಯಾಗಿದೆ. ಅದೇ ರೀತಿ ಹೆಚ್ಚೆಚ್ಚು ಯುವ ಶಕ್ತಿಯು ರಾಜಕೀಯ ಕ್ಷೇತ್ರದಲ್ಲಿ ಪಾಲ್ಗೊಂಡು ತಮ್ಮ ತಮ್ಮ ಗ್ರಾಮಗಳ ಅಭಿವೃದ್ದಿಯೊಂದಿಗೆ ರಾಷ್ಟ್ರದ ಅಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಂಡಲ್ಲಿ ಸದೃಡ್ಡವಾದ ಬಲಿಷ್ಠ ಭಾರತವುನ್ನು ಕಟ್ಟಲು ಸಾಧ್ಯವಾಗುತ್ತದೆ ಹೀಗಾಗಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಭಾವಿ ಯುವ ಶಕ್ತಿಗೆ ನನ್ನ ಸಂದೇಶವಾಗಿದೆ”. 

ಮುಂಬರುವ ಕೊಡಗು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸಿದ್ದಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೇಟ್‌ ಆಕಾಂಕ್ಷಿಯಾಗಿರುವ ಪಂದಿಕಂಡ(ಕುಶ) ದಿನೇಶ್‌ ರವರು ರಾಜಕೀಯ ಕ್ಷೇತ್ರದಲ್ಲಿ ಹಾಲುಗುಂದ ಯೂತ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಂದಿನ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾಗಿದ್ದ ದಿವಂಗತ ಬಿ.ಟಿ. ಪ್ರದೀಪ್‌ ರವರಿದ್ದ ಸಂದರ್ಭ ಕೆ.ಡಿ.ಪಿ. ನಾಮನಿರ್ದೇಶಿತ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್‌ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಹಾಲುಗುಂದ ಭಗವತಿ ಯುವಕ ಸಂಘದ ಕ್ರೀಡಾ ಸಮಿತಿ ಕಾರ್ಯದರ್ಶಿಯಾಗಿ ಸೇವೆ, ಹಾಲುಗುಂದ ಪ್ರಾಥಮಿಕ ಶಾಲೆಯ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಸರಿ ಸುಮಾರು 300 ವರ್ಷಗಳಿಂದ ಪಾಲು ಬಿದ್ದಿದ್ದ ಹಾಲುಗುಂದ ಶ್ರೀ ವನ ಭದ್ರಕಾಳಿ ದೇವಾಲಯವನ್ನು ಗ್ರಾಮಸ್ಥರ ಸಹಕಾರದೊಂದಿಗೆ ನೇತ್ರತ್ವವನ್ನು ವಹಿಸಿಕೊಂಡು ಒಂದು ವರ್ಷ ಒಂದು ತಿಂಗಳಿನಲ್ಲಿ ಜೀರ್ಣೋದ್ದಾರಗೊಳಿಸಿ ಪುನರ್‌ ಪ್ರತಿಷ್ಠಾಪಿಸಿದ ಕೀರ್ತಿ ಪಂದಿಕಂಡ ದಿನೇಶ್ (ಕುಶ) ಇವರಿಗೆ ಸಲ್ಲುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹಾಲುಗುಂದ ಪ್ರಾಥಮಿಕ ಶಾಲೆಯ ಶಾಲಾಭೀವೃದ್ಧಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪಂದಿಕಂಡ ದಿನೇಶ್ (ಕುಶ) ಅವರ ಕುಟುಂಬ ಪರಿಚಯ:

ಮೂಲತಃ ಕೃಷಿಕರು ಹಾಗೂ ಉದ್ಯಮಿಯಾಗಿರುವ ಪಂದಿಕಂಡ ದಿನೇಶ್ (ಕುಶ) ಇವರ ತಂದೆ: ದಿವಂಗತ ಪಂದಿಕಂಡ ಅಯ್ಯಪ್ಪ, ತಾಯಿ: ಪಿ.ಎ.ರಾಧಮ್ಮ, ಪತ್ನಿ: ಪಿ.ಡಿ. ರೂಪ(ಗೃಹಿಣಿ), ಮಕ್ಕಳು: ಶೋಭಿತಾ ಹಾಗೂ ಬಬಿತಾ. ಪಂದಿಕಂಡ ದಿನೇಶ್ (ಕುಶ) ರವರು ಪ್ರಸ್ತುತ ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಾಲುಗುಂದ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

ಸಂದರ್ಶನ ದಿನಾಂಕ: 07-01-2024

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments