ಮೂರ್ನಾಡು: ಜಪಾನ್ ಶೋಟೋಕನ್ ಕರಾಟೆ ಆಸೋಶಿಯೇಷನ್ ವತಿಯಿಂದ ಇತ್ತೀಚೆಗೆ ನಡೆಸಲಾದ ಕರಾಟೆ ಪರೀಕ್ಷೆಯಲ್ಲಿ ಭಾಗವಿಸಿದ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಬ್ಲಾಕ್ ಬೆಲ್ಟ್ಗಳನ್ನು ಪಡೆದುಕೊಂಡಿದ್ದಾರೆ.
ಮೂರ್ನಾಡಿನ ಸಮುದಾಯ ಭವನದಲ್ಲಿ ನಡೆಸಲಾದ ಕರಾಟೆ ಪರೀಕ್ಷೆಯಲ್ಲಿ ಮೂರ್ನಾಡು ಜ್ಞಾನ ಜ್ಯೋತಿ ವಿದ್ಯಾಸಂಸ್ಥೆ ಹಾಗೂ ಸಮುದಾಯ ಭವನದಲ್ಲಿ ನಡೆಯುವ ತರಗತಿಗಳಿಗೆ ಹಾಜರಾಗುವ ಕೆ.ಡಿ. ತಿಮ್ಮಯ್ಯ, ಕೆ.ಆರ್. ಆದಿತ್ಯ ನಾಯಕ್, ಡಿ.ಎಸ್. ಮೌಲ್ಯ ಮತ್ತು ಸಿ. ಲಹರಿ ತಿಮ್ಮಯ್ಯ ವಿದ್ಯಾರ್ಥಿಗಳು, ಜಪಾನ್ ಶೋಟೋಕನ್ ಕರಾಟೆ ಆಸೋಶಿಯೇಷನ್ ಮುಖ್ಯ ತರಬೇತುದಾರ ಕೇರಳದ ಪಾಲೆಕ್ಕಾಡುವಿನ ಗೋಪಾಲ ಕೃಷ್ಣ ಅವರ ನೇತೃತ್ವದಲ್ಲಿ ನಡೆದ ಕರಾಟೆ ಪರೀಕ್ಷೆಯಲ್ಲಿ ಬ್ಲಾಕ್ ಬೆಲ್ಟ್ಗಳನ್ನು ಪಡೆದುಕೊಂಡರು.
ಮೂರ್ನಾಡು ಕರಾಟೆ ಶಾಲೆಯ ತರಬೇತುದಾರ ಟಿ.ಬಿ. ಶ್ಯಾಮ್ ಹಾಜರಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೂರ್ನಾಡು ಉಪಠಾಣಾಧಿಕಾರಿ ಪಿ.ಟಿ. ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.