ನಾಪೋಕ್ಲು: ಕ್ಷೇತ್ರದ ಜನರಿಗೋಸ್ಕರ ನಡೆಸುವ ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ರಾಜಕೀಯ ಕೂಡದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎಎಸ್ ಪೊನ್ನಣ್ಣಅವರು ಹೇಳಿದರು.
ಲೋಕೋಪಯೋಗಿ ಇಲಾಖೆಯಿಂದ 35 ಲಕ್ಷ ರೂ ಅನುದಾನದಲ್ಲಿ ಮರು ಡಾಂಬರೀಕರಣಗೊಂಡ ನಾಪೋಕ್ಲು ಬಳಿಯ ನೆಲಜಿ ಗ್ರಾಮದಿಂದ ಕಕ್ಕಬ್ಬೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಕಳೆದ ಮೂರು ನಾಲ್ಕು ತಿಂಗಳುಗಳಿಂದ ಪ್ರಾರಂಭಿಸಿದ ಎಲ್ಲಾ ಕಾಮಗಾರಿಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಂಡಿದೆ. ಅದರಂತೆ ಕಳೆದ ಎರಡು ತಿಂಗಳ ಹಿಂದೆ ಈ ರಸ್ತೆಗೆ ಚಾಲನೆ ನೀಡಲಾಗಿತ್ತು.ಈಗ ರಸ್ತೆ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ನಿರ್ವಹಿಸಯಿಸಲಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ನಾವು ರಾಜಕೀಯ ಮಾಡೋದು ಸರಿಯಲ್ಲ. ಅಭಿವೃದ್ಧಿಕಾರ್ಯಗಳು ಜನರಿಗೋಸ್ಕರವಾಗಿದೆ.ಅಭಿವೃದ್ಧಿಕಾರ್ಯಗಳು ಯಾವುದೇ ಪಕ್ಷಕ್ಕೆ ಅಥವಾ ಪಕ್ಷದ ನಾಯಕರಿಗೆ ಸೀಮಿತವಲ್ಲ. ಈ ರಸ್ತೆಯಲ್ಲಿ ಎಲ್ಲಾ ಪಕ್ಷದವರು, ಸಂಘ ಸಂಸ್ಥೆಯವರು ಓಡಾಡುತ್ತಾರೆ. ಅಭಿವೃದ್ಧಿ ಕಾಮಗಾರಿಯಲ್ಲಿ ನೋಡಬೇಕಾಗಿರುವುದು ಗುಣಮಟ್ಟ ಮತ್ತು ನಿಗದಿತ ಸಮಯಕ್ಕೆ ಸರಿಯಾಗಿ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ. ಅದು ನನ್ನ ಕ್ಷೇತ್ರದಲ್ಲಿ ನಡೀತಿದೆ ಎಂದು ಶಾಸಕ ಪೊನಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಎ.ಇಸ್ಮಾಯಿಲ್, ಬಲ್ಲಮಾವಟಿ ವಲಯ್ಯಾಧ್ಯಕ್ಷ ತಾಪಂಡ ಅಪ್ಪಣ್ಣ, ಬೂತ್ ಅಧ್ಯಕ್ಷ ಕೈಬುಲಿರ ಸಾಬು ಗಣಪತಿ, ನಾಪೋಕ್ಲು ವಲಯ್ಯಾಧ್ಯಕ್ಷ ಮಾಚೆಟ್ಟಿರ ಕುಸು ಕುಶಾಲಪ್ಪ,ಬಲ್ಲಮಾವಟಿ ಗ್ರಾಮ ಪಂಚಾಯಿತಿ ಸದಸ್ಯ ಮಚ್ಚುರ ರವೀಂದ್ರ,ಬಲ್ಲಮಾವಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮಣವಟ್ಟಿರ ಹರೀಶ್,ಪಕ್ಷದ ಹಿರಿಯ ಮುಖಂಡರಾದ ನೆರವಂಡ ಉಮೇಶ್,ಮಣವಟ್ಟಿರ ಪಾಪು,ಗ್ರಾಮಸ್ಥರಾದ ಕೋಟೆರ ರಘು, ಮಣವಟ್ಟಿರ ಸ್ವರೂಪ್, ಅಯ್ಯಪ್ಪ, ಬಿದ್ದಪ್ಪ, ಚಿಯಕಪೂವಂಡ ಮಾಚಯ್ಯ,ಚಿಯಕಪೂವಂಡ ಕಂಬು ನಂಜಪ್ಪ,ಸಚಿನ್, ಅಪಚ್ಚು, ಮಿಥುನ್,ಬಾಚಮಂಡ ಲವ ಚಿಣ್ಣಪ್ಪ, ಬೊಳ್ಳಂಡ ಶರಿ ಮತ್ತಿತರರು ಹಾಜರಿದ್ದರು.