Reading Time: < 1 minute
ಹೊಸತೋಟದಲ್ಲಿ ಮುಳಿಯ ನೂತನ ಬಸ್ ತಂಗುದಾಣ ಉದ್ಘಾಟನೆ
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಮಡಿಕೇರಿ ಜ.16: ಸೋಮವಾರಪೇಟೆ ಲಯನ್ಸ್ ಕ್ಲಬ್ ಹಾಗೂ ಮುಳಿಯ ಆಭರಣ ಮಳಿಗೆಯ ಸಹಯೋಗದಲ್ಲಿ ಹೊಸ ತೋಟ ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಯಿತು.
ಲಯನ್ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಲೀಕರಾದ ಕೇಶವಪ್ರಸಾದ್ ಮುಳಿಯ, ಲಯನ್ಸ್ ಪ್ರಾಂತ್ಯ ಅಧ್ಯಕ್ಷ ನವೀನ್ ಅಂಬೆಕಲ್, ವಲಯ ಅಧ್ಯಕ್ಷ ಸಿ.ಕೆ.ರೋಹಿತ್ , ಬಸ್ ನಿಲ್ದಾಣಕ್ಕೆ ಸ್ಥಳದಾನಿಗಳದ ಕೋದಂಡ ಅಪ್ಪಣ್ಣ, ಮುದ್ದಪ್ಪ, ಗ್ರಾ.ಪಂ ಅಧ್ಯಕ್ಷರಾದ ಟಿ.ಪಿ.ಉಷಾ, ರೋಟರಿ ಕ್ಲಬ್ ಸಹಾಯಕ ಗೌರ್ನರ್ ಎಂ.ಡಿ.ಲಿಖಿತ್, ಮಡಿಕೇರಿಯ ಲಯನ್ಸ್ ಅಧ್ಯಕ್ಷ ಮಧುಕರ್ ಶೇಟ್, ಮೋಹನದಾಸ್ ಮತ್ತು ಇತರರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಸಿ.ಕೆ.ಲಯನ್ ಶಿವಕುಮಾರ್ ಸ್ವಾಗತಿಸಿದರು. ಯನ್ ಯೋಗೀಶ್ ವಂದಿಸಿದರು.