ಕಡಂಗದ ವಿಜಯ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ

ಕಡಂಗ: ಕಡಂಗ ವಿಜಯ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ಶಾಲೆಯ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಸಲಾಯಿತು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಸಮಾರಂಭದ ಅಧ್ಯಕ್ಷತೆಯನ್ನು ವಿಜಯ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಲ್ಲ್ಯಾ0ಡ ಪಿ ಬಿದ್ದಪ್ಪನವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು ಬಳಿಕ ಮಾತನಾಡಿದ ಅವರು ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಮುಂದಿನ ವರ್ಷ ಶಾಲೆ ಮುಚ್ಚುವ ಹಂತದಲ್ಲಿದ್ದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಯಲ್ಲಿ ಹಾಜರಾಗಿ ಎಂದು ವಿದ್ಯಾ ಸಂಸ್ಥೆಯ ಪರವಾಗಿ ಸಂಸ್ಥೆಯ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿ ಸಭಿಕರಲ್ಲಿ ಕರೆ ನೀಡಿದರು.

ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ನರಿಯ0ದಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೌಶಿ ಕಾವೇರಮ್ಮನವರು ಮಾತನಾಡಿ ಕನ್ನಡ ಶಾಲೆಗಳಿಂದ ಕಲಿತಿರುವ ಅದೆಷ್ಟೋ ಪ್ರತಿಭಾವಂತ ವಿದ್ಯಾವಂತರು ಇಂದಿನ ಸಮಾಜದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದೆ, ಕನ್ನಡ ಮಾಧ್ಯಮ ಶಾಲೆಯಿಂದ ಕಲಿಯಲು ಎಲ್ಲರೂ ಪ್ರೇರಿತರಾಗಿ ಎಂದು ನುಡಿದರು.

ಮತ್ತೊಬ್ಬ ಮುಖ್ಯ ಅತಿಥಿಗಳಾಗಿ ಆಗಮಿಸಿದ ನರಿಯ0ದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ ನವರು ಮಾತನಾಡಿ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಶಿಸ್ತು ಅಳವಡಿಸಿ ಸಂಸ್ಥೆಗೆ ಉನ್ನತ ಹೆಸರು ತರಬೇಕು ಹಾಗೂ ಜೀವನ ಪ್ರಮುಖ ಹಂತಗಳಲ್ಲಿ ವಿಜಯಶಾಲಿಗಳಾಗಬೇಕು ಎಂದು ನುಡಿದರು. ಗ್ರಾಮ ಪಂಚಾಯಿತಿ ಸದಸ್ಯ ಸುಗುಣ ರವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯರಾದ ಸುಬೀರ್ ಸಿ.ಇ. ರವರು ಮಾತನಾಡಿ ಸಂಸ್ಥೆಯ ಹಿರಿಯರ ಪರಿಶ್ರಮದಿಂದ ಈ ಒಂದು ಸುಸಜ್ಜಿತ ವಿದ್ಯಾ ಸಂಸ್ಥೆ ನಿರ್ಮಿಸಲು ಸಾಧ್ಯವಾಯಿತು ಎಂದು ತಿಳಿಸಿದರು

ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥೆಯ ಪ್ರಾರಂಭಿಕ ಹಂತದಿಂದ ಇದುವರೆಗಿನ ಸಂಕ್ಷಿಪ್ತ ವರದಿಯನ್ನು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ಸೋಮಶೇಖರ್ ಸಂಕ್ಷಿಪ್ತವಾಗಿ ವಿವರಿಸಲಾಯಿತು. ಸಂಸ್ಥೆಯ ಕ್ರೀಡಾ ವರದಿಯನ್ನು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಗೀತಾ ಭೋಜಮ್ಮ ರವರು ಬೋಧಿಸಿದರು.

ವಾರ್ಷಿಕೋತ್ಸವದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಪ್ರಾರ್ಥಮಿಕ ವಿಭಾಗದಲ್ಲಿರುವ 222 ವಿದ್ಯಾರ್ಥಿಗಳು ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸಭಾ ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ರೋಮಾಂಚನಗೊಂಡಿತ್ತು

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಕೋದಂಡ ಪಿ ಸುಬ್ಬಯ್ಯ, ಮುಕ್ಕಾಟಿರ ಸಿ ಬೊಪ್ಪಯ್ಯ,ಸಂಸ್ಥೆಯ ನಿರ್ದೇಶಕರಾದ ಬಲ್ಲಚಂಡ ಗೌತಮ್ ,ಕಾಕೋಟು ಪರ0ಬು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಟ್ಟೆಕಾಳ0ಡ ಕಾಮಿ ಸುರೇಶ್, ಕಾಂಗಿರಾ ಎಸ್. ರವಿಮಾಚಯ್ಯ, ಕೊಡಿರ ಪೊನ್ನು ಮಂದಣ್ಣ , ಚೋಳಂಡ ತಾರಾ ಬೆಳ್ಳಿಯಪ್ಪ, ಪತ್ರಕರ್ತ ನೌಫಲ್ ಮತ್ತು ಶಾಲೆಯ ಶಿಕ್ಷಕರು, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ನೌಫಲ್ ಕಡಂಗ

0 0 votes
Article Rating
Subscribe
Notify of
guest
0 Comments
Inline Feedbacks
View all comments