ಕಾಫಿ ಮಂಡಳಿ ವಿಸ್ತರಣಾ ವಿಭಾಗ, ಗೊಣೆಕೊಪ್ಪಲು ಇವರ ವತಿಯಿಂದ ಹಾಗೂ ಇಗ್ಗುತಪ್ಪ ಸಂಘ, ನಿಟ್ಟೂರು ಕಾರ್ಮಾಡು ಇವರ ಸಹಕಾರದೊಂದಿಗೆ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಫಿ ಬೆಳೆಗಾರರಿಗೆ ನಿಟ್ಟೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ 13-02-2024ರ ಮಂಗಳವಾರ ಬೆಳಗ್ಗೆ 9.45ಗಂಟೆಗೆ ಮಣ್ಣು ಪರೀಕ್ಷೆ ಅಭಿಯಾನ ಮತ್ತು ಕಾಫಿ ಬೆಳೆಯ ಬಗ್ಗೆ ತಾಂತ್ರಿಕ ಮಾಹಿತಿ ನೀಡುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ನಿಟ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಫಿ ಬೆಳೆಗಾರರು ತಮ್ಮ ತೋಟದ ಮಣ್ಣಿನ ಮಾದರಿಯನ್ನು ಕಾಫಿ ಮಂಡಳಿ ಶಿಫಾರಸು ಮಾಡಿದ ಮಾದರಿಯಲ್ಲಿ ಮಣ್ಣಿನ ಮಾದರಿ ಸಂಗ್ರಹಣೆಯನ್ನು ತಂದು ಅ ದಿನವೇ ಫಲಿತಾಂಶವನ್ನು ಪಡೆದುಕೊಳ್ಳಲು ವಿನಂತಿಸಲಾಗಿದೆ.
ಮಣ್ಣಿನ ಪರೀಕ್ಷೆ ಮಾಡಿಸಿ ಕೊಳ್ಳಲು ಬೆಳಿಗ್ಗೆ 9.45ಗಂಟೆಗೆ ಹಾಜರಿದ್ದು, ಮಣ್ಣಿನ ರಸಸಾರ ಪರೀಕ್ಷೆಗೆ 25₹ ರೂಗಳು(ಸುಣ್ಣದ ಪ್ರಮಾಣ ನಿಗದಿ ಪಡಿಸಲು).ಸಾರಜನಕ,ರಂಜಕ, ಪೊಟ್ಯಾಶ್ ಪರೀಕ್ಷೆಗೆ 150₹ರೂಗಳು (ಗೊಬ್ಬರದ ಶಿಫಾರಸ್ಸು), ಇದರ ಜೊತೆಗೆ ಕಾಫಿ ಬೇಸಾಯದ ಬಗ್ಗೆ ವಿಶೇಷ ಮಾಹಿತಿಯನ್ನು ನುರಿತ ತಜ್ಞರಿಂದ ನೀಡುವ ವ್ಯವಸ್ಥೆ ಇದೆ.
ಈ ಮಣ್ಣು ಪರೀಕ್ಷೆ ಅಭಿಯಾನ ಮತ್ತು ಕಾಫಿ ಬೆಳೆಯ ಬಗ್ಗೆ ತಾಂತ್ರಿಕ ಮಾಹಿತಿ ನೀಡುವ ಕಾರ್ಯಾಗಾರಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸದಸ್ಯರು ಇಗ್ಗುತಪ್ಪ ಸಂಘ, ನಿಟ್ಟೂರು ಕಾರ್ಮಾಡು ಹಾಗೂ, ಮುಖಾರಿಬ್ ಡಿ .ಎಸ್. ಸಂಪರ್ಕ ಅಧಿಕಾರಿ, ಕಾಫಿ ಮಂಡಳಿ ಗೋಣಿಕೊಪ್ಪಲು ಇವರುಗಳು ಕೋರಿಕೊಂಡಿದ್ದಾರೆ.