ಗೋಣಿಕೊಪ್ಪಲು ಕಾಫಿ ಮಂಡಳಿ ವಿಸ್ತರಣಾ ವಿಭಾಗ ಹಾಗೂ ಕೊಟ್ಟಗೇರಿ ಲಕ್ಷ್ಮಣತೀರ್ಥ ಸಂಘದ ವತಿಯಿಂದ ಬಾಳೆಲೆ ಹೋಬಳಿ ವ್ಯಾಪ್ತಿಯ ಕಾಫಿ ಬೆಳೆಗಾರರಿಗೆ ಫೆ.29 ರಂದು ಮಣ್ಣು ಪರೀಕ್ಷೆ ಅಭಿಯಾನ ಮತ್ತು ಕಾಫಿ ಬೆಳೆಯ ಬಗ್ಗೆ ತಾಂತ್ರಿಕ ಮಾಹಿತಿ ನೀಡುವ ಕಾರ್ಯಾಗಾರ ನಡೆಯಲಿದೆ.
ಅಂದು ಬೆಳಗ್ಗೆ 9.45ಗಂಟೆಗೆ ಕೊಟ್ಟಗೇರಿ ಸಮುದಾಯ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಬಾಳೆಲೆ ಹೋಬಳಿ ವ್ಯಾಪ್ತಿಯ ಕಾಫಿ ಬೆಳೆಗಾರರು ತಮ್ಮ ತೋಟದ ಮಣ್ಣಿನ ಮಾದರಿಯನ್ನು ಕಾಫಿ ಮಂಡಳಿ ಶಿಫಾರಸು ಮಾಡಿದ ರೀತಿಯಲ್ಲಿ ಮಣ್ಣಿನ ಮಾದರಿಯ ಸಂಗ್ರಹಣೆಯನ್ನು ತಂದು ಅ ದಿನವೇ ಫಲಿತಾಂಶವನ್ನು ಪಡೆದುಕೊಳ್ಳಲು ಮನವಿ ಮಾಡಿದ್ದಾರೆ.
ಮಣ್ಣಿನ ಪರೀಕ್ಷೆ ಮಾಡಿಸಿ ಕೊಳ್ಳಲು ಬೆಳೆಗಾರರು ಬೆಳಿಗ್ಗೆ 9.45ಗಂಟೆಗೆ ಹಾಜರಿರತಕ್ಕದ್ದು, ಮಣ್ಣಿನ ರಸಸಾರ ಪರೀಕ್ಷೆಗೆ ರೂ.25, ಸಾರಜನಕ, ರಂಜಕ, ಪೊಟ್ಯಾಶ್ ಪರೀಕ್ಷೆಗೆ ರೂ.150 ಪಾವತಿಸತಕ್ಕದ್ದು, ಇದರ ಜೊತೆಗೆ ನುರಿತ ತಜ್ಞರಿಂದ ಕಾಫಿ ಬೇಸಾಯದ ಬಗ್ಗೆ ವಿಶೇಷ ಮಾಹಿತಿಯನ್ನು ನೀಡಲಾಗುವುದೆಂದು ಕೊಟ್ಟಗೇರಿ ಲಕ್ಷ್ಮಣತೀರ್ಥ ಸಂಘದ ಅಧ್ಯಕ್ಷರು ಹಾಗೂ ಗೋಣಿಕೊಪ್ಪಲು ಕಾಫಿ ಮಂಡಳಿ ಸಂಪರ್ಕ ಅಧಿಕಾರಿ ಡಿ.ಎಸ್.ಮುಖಾರಿಬ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.