ಇಂದಿನಿಂದ ಕುಂಜಿಲ ಪೈನರಿ ಮಖಾಂ ಉರೂಸ್ ಆರಂಭ

Reading Time: 3 minutes

ನಾಪೋಕ್ಲು: ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಕುಂಜಿಲ ಪೈನರಿ ಮಖಾಂ ಉರೂಸ್ ಸಮಾರಂಭವು ತಾ.23ರಿಂದ 27ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದು ಪೈನರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಸೌಕತ್ ಅಲಿ ತಿಳಿಸಿದ್ದಾರೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕುಂಜಿಲ ಪೈನರಿ ಜಮಾಅತ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉರೂಸ್ ಸಮಾರಂಭ ಕಾರ್ಯಕ್ರಮದಲ್ಲಿ ಹಲವಾರು ಸಾಮಾಜಿಕ ಧಾರ್ಮಿಕ ಹಾಗೂ ರಾಜಕೀಯ ನೇತಾರರು ಭಾಗವಹಿಸಲಿದ್ದು ಜಾತಿ ಧರ್ಮ ಭೇದ ಮರೆತು ಸರ್ವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಜಮಾಅತ್ ಕಾರ್ಯದರ್ಶಿ ಸಹೀದ್ ಪಯ್ಯಡತ್ ಮಾತನಾಡಿ ಫೆ.23 ಶುಕ್ರವಾರ ಜುಮಾ ನಮಾಜ್ ಬಳಿಕ ಪೈನರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಎ.ಸೌಕತ್ ಅಲಿ ದ್ವಜಾರೋಹಣ ನೆರವೇರಿಸುವುದರ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.
ಅಂದು ರಾತ್ರಿ ಕಾಂತಪುರಂ ಅಬ್ದುಲ್ ಲತೀಫ್ ಸಖಾಫಿ ಅವರ ನೇತೃತ್ವದಲ್ಲಿ ಆತ್ಮೀಯ ಮದನಿಯಂ ಮಜ್ಲಿಸ್ ನಡೆಯಲಿದೆ.

ಫೆ.24 ರಂದು ರಾತ್ರಿ ಸ್ವಲಾತ್ ವಾರ್ಷಿಕ ಮತ್ತು ದುಆ ಮಜ್ಲಿಸ್ ಗೆ ರಈಸುಲ್ ಉಲಮಾ ಶೈಖುನಾ ಸುಲೈಮಾನ್ ಮುಸ್ಲಿಯಾರ್ ನೇತೃತ್ವ ವಹಿಸಲಿದ್ದಾರೆ.
ಫೆ.25 ರಂದು ರಾತ್ರಿ ಮುಳ್ಳೂರ್ ಕರ ಮಹಮ್ಮದಲಿ ಸಖಾಫಿ ಧಾರ್ಮಿಕ ಪ್ರಭಾಷಣ ಮಾಡಲಿದ್ದಾರೆ.

ಫೆ.26ರಂದು ಮದ್ಯಾಹ್ನ 1.30ಗಂಟೆಗೆ ಸೌಹಾರ್ದ ಸಮ್ಮೇಳನ ಕಾರ್ಯಕ್ರಮ ನಡೆಯಲಿದ್ದು ಡಾ.ಅಬ್ದುಲ್ ರಶೀದ್ ಝೖನಿ ಕಾಮಿಲ್ ಸಖಾಫಿ ಕಕ್ಕಿಂಜೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಡಾ.ಮೌಲಾನ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಧಾರ್ಮಿಕ ಪ್ರಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬ್ದುಲ್ ಲತೀಫ್ ಸುಂಟಿಕೊಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್ ಸೇರಿದಂತೆ ವಿವಿಧ ಧಾರ್ಮಿಕ ಸಾಮಾಜಿಕ ಹಾಗೂ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ. ಅಂದು ಸಂಜೆ 4ಗಂಟೆಗೆ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ.

ಅಂದು ರಾತ್ರಿ ಅನ್ವರಲಿ ಹುದವಿ ಅವರ ನೇತೃತ್ವದಲ್ಲಿ ಇಸ್ಕ್ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ. ಫೆ.27 ರಂದು ರಾತ್ರಿ ವಲಿಯುದ್ದಿನ್ ಫೈಝಿ ವಝಕ್ಕಾಡ್ ಅವರ ನೇತೃತ್ವದಲ್ಲಿ ನೂರೇ ಅಜ್ಮಿರ್ ಆತ್ಮೀಯ ಮಜ್ಲಿಸ್ ಜರುಗಲಿದೆ.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಮುಶಾವರ ಸದಸ್ಯರಾದ ಅಬ್ದುಲ್ಲ ಫೈಝಿ,ಸಯ್ಯದ್ ಶರಫುದ್ದಿನ್ ಸಅದಿ ಅಲ್ ಮುಖೈಬಿಲಿ ಮುಳವೂರ್ ತಂಙಳ್, ಸಯ್ಯದ್ ಶಿಯಾಬುದ್ದೀನ್ ಅಲ್ ಹೈದರೂಸಿ ಕಿಲ್ಲೂರ್ ತಂಙಳ್, ನಿಝಾರ್ ಅಹ್ಸನಿ ಕಕ್ಕಡಿಪುರಂ, ಅಶ್ರಫ್ ಅಹ್ಸನಿ ಅನ್ವಾರುಲ್ ಹುದಾ ಭಾಗವಹಿಸಲಿದ್ದಾರೆ.

ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಉರೂಸ್ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಸಹೀದ್ ಕೋರಿದರು.

ಸುದ್ದಿಗೊಷ್ಟಿಯಲ್ಲಿ ಜಮಾಅತ್ ಉಪಾಧ್ಯಕ್ಷ ಇಬ್ರಾಹಿಂ(ಇಬ್ಬು )ಸಲಹಾ ಸಮಿತಿ ಸದಸ್ಯರಾದ ಮೂಸಾ ಪತ್ತಂಗೋಡ್, ಹಮೀದ್ ಪಯ್ಯಡತ್,ದರ್ಸ್ ಸಮಿತಿ ಉಪಾಧ್ಯಕ್ಷ ಉಸ್ಮಾನ್ ವಯಕೋಲ್ ಉಪಸ್ಥಿತರಿದ್ದರು.

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments