ಪೊನ್ನಂಪೇಟೆ ತಾಲ್ಲೂಕು ಬೊಟ್ಟಿಯತ್ ನಾಡ್ ಶ್ರೀ ಈಶ್ವರ ದೇವರ ವಾರ್ಷಿಕ ಉತ್ಸವ ಇದೇ ಮಾರ್ಚ್-04 ಹಾಗೂ 05ರಂದು ನಡೆಯಲಿದೆ ಎಂದು ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕುಂದಾ ಮುಗಟಗೇರಿ ಗ್ರಾಮದಲ್ಲಿರುವ ಸಾವಿರಾರು ವರ್ಷಗಳ ಇತಿಹಾಸವಿರುವ ನಾಡ್ ದೇವಸ್ಥಾನ ಎಂದು ಕರೆಯಲ್ಪಡುವ ಶ್ರೀ ಈಶ್ವರ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಫೆಬ್ರವರಿ-26ರಂದು ಕೊಡಿಮರ ನಿಲ್ಲಿಸುವ ಮೂಲಕ ಆರಂಭಗೊಂಡಿದ್ದು, ಇದೇ ಮಾರ್ಚ್-04ರಂದು ಸೋಮವಾರ ಸಂಜೆ ನೆರ್ಪು ಹಾಗೂ 05ರಂದು ಮಂಗಳವಾರ ಸಂಜೆ ದೇವರ ಅವಭೃತ ಸ್ನಾನ (ದೇವ ಕುಳಿಪೊ) ಕಾರ್ಯಕ್ರಮ ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ತಕ್ಕಮುಖ್ಯಸ್ಥರು ಕೇಳಿಕೊಂಡಿದ್ದಾರೆ.
ಬೊಟ್ಟಿಯತ್ ನಾಡಿಗೆ ಸೇರಿದ ಮುಗಟಗೇರಿ, ಕುಂದಾ, ಹುದೂರು, ಹಳ್ಳಿಗಟ್ಟು, ಈಚೂರು, ಆರ್ವತೋಕ್ಲು ಸುತ್ತಾಮುತ್ತಲ ಗ್ರಾಮಗಳು ಒಂದೆಡೆ ಸೇರಿ ನಡೆಸುವ ವಾರ್ಷಿಕ ಉತ್ಸವ ಇದಾಗಿದ್ದು, ನಿರಂತರವಾಗಿ ಒಂಬತ್ತು ದಿನಗಳ ಕಾಲ ಅನ್ನಸಂತರ್ಪಣೆ ಇರುತ್ತದೆ. ಭಕ್ತರು ಯಾರು ಬೇಕಾದರೂ ಅನ್ನಸಂತರ್ಪಣೆಗೆ ಬೇಕಾದ ಸಾಮಗ್ರಿಗಳನ್ನು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9901262398, 8105401819, 9448620974 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.