ಸರಕಾರಕ್ಕೆ ಮನವಿ ಮಾಡಿ ವನ್ಯ ಪ್ರಾಣಿಗಳ ಹಾವಳಿ ನಿಯಂತ್ರಿಸಲು ಒತ್ತಡ ತರಲಾಗಿದೆ; ಪೆಮ್ಮಂಡ ಕಾವೇರಮ್ಮ ದಿನೇಶ್
ಪೆಮ್ಮಂಡ ಕಾವೇರಮ್ಮ ದಿನೇಶ್: ಅಧ್ಯಕ್ಷರು ಗ್ರಾ.ಪಂ. ನರಿಯಂದಡ
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ನರಿಯಂದಡ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪೆಮ್ಮಂಡ ಕಾವೇರಮ್ಮ ದಿನೇಶ್ ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಪೆಮ್ಮಂಡ ಕಾವೇರಮ್ಮ ದಿನೇಶ್ ರವರು “ನಾನು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಮುಖ್ಯ ಕಾರಣವೇನೆಂದರೆ, ನಾನೂ ಈ ಮೊದಲು ನಮ್ಮ ಗ್ರಾಮದ ಮಹಿಳಾ ಸಮಾಜದ ಅಭಿವೃದ್ಧಿಗಾಗಿ ಹಾಗೂ ಗ್ರಾಮದ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದು, ನನ್ನ ಈ ಕಾರ್ಯವನ್ನು ಗಮನಿಸಿದ ಗ್ರಾಮಸ್ಥರು ನನ್ನನ್ನು ಗ್ರಾ.ಪಂ ಚುಣಾವಣೆಯಲ್ಲಿ ಸ್ಪರ್ಧಿಸಲು ಸಲಹೆ ನೀಡಿದರು. ಹಾಗಾಗಿ ಅವರ ಒತ್ತಾಸೆಯ ಮೇರೆಗೆ ನಾನು ಮೊದಲ ಬಾರಿಗೆ ಕೋಕೇರಿ ವಾರ್ಡ್ ನಿಂದ ಗ್ರಾ.ಪಂ. ಚುಣಾವಣೆಯಲ್ಲಿ ಸ್ಪರ್ಧಿಸಿ ಅತೀ ಹೆಚ್ಚು ಮತಗಳಿಂದ ಗೆಲವನ್ನು ಸಾಧಿಸಿ ಸದಸ್ಯಳಾಗಿ ಆಯ್ಕೆಯಾದೆ, ನಂತರ ಪಂಚಾಯಿತಿಯ 2ನೇ ಅವಧಿಗೆ ಅಧ್ಯಕ್ಷಳಾಗಿ ಅಧಿಕಾರ ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದೇನೆ.
ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿನ ಕಾಮಗಾರಿಯು ಪ್ರಗತಿಯಲ್ಲಿದೆ, ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಗ್ರಾಮೀಣ ರಸ್ತೆ ಪ್ರಗತಿಯಲ್ಲಿದೆ, ಬೀದಿ ದೀಪಗಳ ವ್ಯವಸ್ಥೆಯು ಸುಸಜ್ಜಿತವಾಗಿದೆ. ಸ್ಚಚ್ಚ ಭಾರತ ಅಭಿಯಾನದಡಿಯಲ್ಲಿ ಮನೆಮನೆಗೆ ಶೌಚಾಲಯ ನಿರ್ಮಾಣದ ಕಾಮಗಾರಿಯು ಶೇಕಡ 100% ಪೂರ್ಣಗೊಂಡಿದೆ.
ಸುಮಾರು 11ಲಕ್ಷ ವೆಚ್ಚದಲ್ಲಿ ಹಸಿ ಮತ್ತು ಒಣ ಕಸ ವೀಲೇವಾರಿ ಘಟಕವು ಪೊದವಾಡ (ಅರಪಟ್ಟು) ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಶಿಘ್ರದಲ್ಲೆ ಅದು ಕಾರ್ಯಾಚರಿಸುತ್ತದೆ. ಅಮೃತ ಸರೋವರ ಯೋಜನೆ ಅಡಿಯಲ್ಲಿ ಅರಪಟ್ಟು ಗ್ರಾಮದ ಬೊಳ್ಳಂಗೆರೆ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಕೆರೆಯ ದಡಗಳಲ್ಲಿ ಔಷಧಿ ಸಸ್ಯಗಳನ್ನು ನೆಡುವ ಕಾರ್ವನ್ನು ಹಮ್ಮಿಕೊಳ್ಳಲಾಗಿದೆ.
15ನೇ ಹಣಕಾಸಿನ ಯೋಜನೆಯ ಹಣವನ್ನು ಎಲ್ಲಾ ಸದಸ್ಯರಿಗೆ ಸಮಾನಾವಾಗಿ ಹಂಚಲಾಗಿದೆ. ಆಶ್ರಯ ಯೋಜನೆ ಅಡಿಯಲ್ಲಿ ಕೋಕೇರಿ ಗ್ರಾಮದಲ್ಲಿ 30 ಮನೆಗಳಲ್ಲಿ 13 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. 15 ಪ್ರಗತಿಯಲ್ಲಿದೆ. ಉಳಿದ ಮನೆಗಳಿಗೆ ಸೂಕ್ತ ಜಾಗದ ಕೊರತೆ ಇದ್ದು, ಶೀಘ್ರದಲ್ಲೇ ಜಾಗವನ್ನು ಗುರುತು ಮಾಡಿ ಮನೆಗಳನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಲಾಗಿದೆ.
ನಮ್ಮ ಪಂಚಾಯಿತಿಯಲ್ಲಿ 17 ಲಕ್ಷ ವೆಚ್ಚದಲ್ಲಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಿ ಸುಸಜ್ಜಿತವಾದ ಡಿಜಿಟಲ್ ಲೈಬ್ರರಿಯನ್ನು ಪ್ರಾಂಭಿಸಿದ್ದು, ಉತ್ತಮ ಲೈಬ್ರರಿ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದೆ. ನರಿಯಂದಡ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ನೂತನವಾದ ಸುಸಜ್ಜಿತವಾದ ಕಟ್ಟಡ ನಿರ್ಮಾಣಗೊಂಡು ಉತ್ತಮ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ.
ಕಡಂಗ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆಯು ಪೂರ್ಣವಾಗಿದೆ. ಚೆಯ್ಯಂಡಾಣೆಯಲ್ಲಿ ಆಟೋ ನಿಲ್ದಾಣ ವ್ಯವಸ್ಥೆಯನ್ನು ಮಾಡಲಾಗಿದೆ. ಸರಿ ಸುಮಾರು 7 ಲಕ್ಷ ವೆಚ್ಚದಲ್ಲಿ ಅರಪಟ್ಟು ಭಗವತಿ ದೇವಾಲಯದ ಕಲ್ಯಾಣಿ ಕಾಮಗಾರಿಯು ಪ್ರಗತಿಯಲ್ಲಿದೆ, ಮಾಚೆಟ್ಟಿ ಕೆರೆ, ಕೋಕೇರಿ ಪಟ್ರೋಟ್ ಕೆರೆಗಳಾನ್ನು ಅಭಿವೃದ್ಧಿ ಮಾಡಲಾಗಿದೆ.
ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಿದೆ, ಸರಕಾರಕ್ಕೆ ಮನವಿ ಮಾಡಿ ವನ್ಯ ಪ್ರಾಣಿಗಳ ಹಾವಳಿ ನಿಯಂತ್ರಿಸಲು ಒತ್ತಡ ತರಲಾಗಿದೆ. ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳ ಆಟದ ಮೈದಾನದ ಅಭಿವೃದ್ದಿ ಮಾಡಲು ಯೋಜನೆ ರೂಪಿಸಲಾಗಿದೆ. ಅಲ್ಲದೆ ಪಂಚಾಯಿತಿಯಲ್ಲಿ ಸಂಜೀವಿನೀ ಒಕ್ಕೂಟಕ್ಕಾಗಿ ನೂತನ ಪಂಚಾಯಿತಿಯ ಮೆಲ್ಮಹಡಿಯಲ್ಲಿ ಒಂದು ಸಭಾಂಗಣವನ್ನು ನಿರ್ಮಿಸಲು ಯೋಜನೆ ಇದೆ. ಚೇಲಾವರ ಜಲಪಾತ ಅಭಿವೃದ್ದಿಗಾಗಿ ಅದರ ಸುರಕ್ಷತೆಗಾಗಿ ಕ್ರಮಕೈಗೊಳ್ಳಲಾಗಿದೆ. ವಿಶ್ವಕರ್ಮ ಯೋಜನೆಯಡಿಯಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಠಿಸಲು ಯೋಜನೆ ಮಾಡಲಾಗಿದೆ. ಒಟ್ಟಿನಲ್ಲಿ ಮಾದರಿ ಗ್ರಾಮ ಮಾಡಲು ನಾವು ಪಣತೊಟ್ಟಿದ್ದೇವೆ.
ನಮ್ಮ ಪಂಚಾಯಿತಿಯ ಆಡಳಿತ ವ್ಯವಸ್ಥೆಯನ್ನು ಉತ್ತಮ ವಾಗಿಸಲು ಒಂದು ಪ್ರಯೋಗವನ್ನು ಮಾಡಲಾಗಿದೆ. ಅದೇನೆಂದರೆ ಪಂಚಾಯಿತಿಯ ಸದಸ್ಯರ ಒಂದು ಹಾಜರಾತಿ ಸಹಿ ಸಂಗ್ರಹ ವ್ಯವಸ್ಥೆ. ಅವರು ಪ್ರತಿ ಬಾರಿ ಪಂಚಾಯಿತಿಗೆ ಭೇಟಿ ನೀಡುವ ಸಂದರ್ಭ ಒಂದು ಪುಸ್ತಕದಲ್ಲಿ ಅವರು ಸಹಿಯನ್ನು ಹಾಕಬೇಕು. ಸದಸ್ಯರು ಆಗಾಗ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಹಾಗೂ ಪಂಚಾಯಿತಿಯ ಆಡಳಿತಕ್ಕೆ ಉತ್ತಮ ಸ್ಫಂದನೆ ನೀಡಲು ಈ ವ್ಯವಸ್ಥೆಯು ಸಹಾಯಕವಾಗಿದೆ.
ಪ್ರಸ್ತುತ ನರಿಯಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 1 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದೆ. ನಮ್ಮ ಪಂಚಾಯಿತಿಯಲ್ಲಿ ಬೇರೆ ಬೇರೆ ಪಕ್ಷಗಳ ಬೆಂಬಲದಿಂದ ಆಯ್ಕೆಯಾದ ಎಲ್ಲಾ ಸದಸ್ಯರುಗಳು ಪಕ್ಷಾತೀತವಾಗಿ ತಮ್ಮೆಲ್ಲಾ ರಾಜಕೀಯವನ್ನು ಬದಿಗಿಟ್ಟು ಪಂಚಾಯಿತಿಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಹಾಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಸಹಕಾರವು ಉತ್ತಮವಾಗಿ ದೊರಕುತ್ತಿದೆ”
ಮೂಲತಃ ಕೃಷಿಕರಾಗಿರುವ ಪೆಮ್ಮಂಡ ಕಾವೇರಮ್ಮ ದಿನೇಶ್‌ರವರು ರಾಜಕೀಯ ಕ್ಷೇತ್ರದಲ್ಲಿ ನರಿಯಂದಡ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಯಾಗಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಕೋಕೇರಿ ಮಹಿಳಾ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಹಾಗೆ ನಾಪೋಕ್ಲು ಕೊಡವ ಪೊಮ್ಮಕ್ಕಡ ಪರಿಷತ್‌ನ ನಿರ್ದೇಶಕರಾಗಿದ್ದಾರೆ.
ಪೆಮ್ಮಂಡ ಕಾವೇರಮ್ಮ ದಿನೇಶ್‌ರವರ ಕುಟುಂಬ ಪರಿಚಯ:
ಪೆಮ್ಮಂಡ ಕಾವೇರಮ್ಮ ದಿನೇಶ್‌ರವರ ತಂದೆ: ಪಾಲೇಂಗಡ ಪಳಂಗಪ್ಪ.ತಾಯಿ: ಸೊಮವ್ವ. ಪತಿ: ಪೆಮ್ಮಂಡ ದಿನೇಶ್, ಕೃಷಿಕರು. ಹಿರಿಯ ಪುತ್ರಿ: ಕೃತ್ಯಾ ಬೋಜಮ್ಮ ವೈದ್ಯಕೀಯ ವಿದ್ಯಾರ್ಥಿಯಗಿದ್ದಾರೆ. ಕಿರಿಯ ಪುತ್ರಿ: ಶ್ರಾವ್ಯ ಮುತ್ತಮ್ಮ, ವ್ಯಾಸಂಗ ನಿರತರಾಗಿದ್ದಾರೆ. ಪ್ರಸ್ತುತ ಇವರು ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೋಕೇರಿ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 29-01-2024