ವಿಶ್ವಕರ್ಮ ಯೋಜನೆಯಡಿಯಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಠಿಸಲು ಯೋಜನೆ ರೂಪಿಸಲಾಗಿದೆ; ಕೋಡಿರ ಎಂ. ವಿನೋದ್‌ ನಾಣಯ್ಯ

ವಿಶ್ವಕರ್ಮ ಯೋಜನೆಯಡಿಯಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಠಿಸಲು ಯೋಜನೆ ರೂಪಿಸಲಾಗಿದೆ; ಕೋಡಿರ ಎಂ. ವಿನೋದ್‌ ನಾಣಯ್ಯ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೋಡಿರ ಎಂ. ವಿನೋದ್‌ ನಾಣಯ್ಯ, ಉಪಾಧ್ಯಕ್ಷರು: ಗ್ರಾ.ಪಂ. ನರಿಯಂದಡ

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ನರಿಯಂದಡ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕೋಡಿರ ವಿನೋದ್‌ ನಾಣಯ್ಯ ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು.

“ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ವಿನೋದ್‌ ನಾಣಯ್ಯನವರು, “ನಾನು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಪ್ರೇರಣೆಯೆಂದರೆ ಅದು ನನ್ನ ತಂದೆಯವರಾದ ದಿವಂಗತ ಕೋಡಿರ ಮನು ಮೊಣ್ಣಪ್ಪ ನವರು, ಅವರು ಹಿರಿಯ ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದರು, ಅವರ ಒತ್ತಾಸೆಯ ಮೇರೆಗೆ ನಾನು ನನ್ನ ಕಾಲೇಜು ವಿದ್ಯಾಭ್ಯಾಸದ ನಂತರ ಮೊದಲ ಬಾರಿಗೆ ಮಡಿಕೇರಿ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ 2000 ರಿಂದ 2005 ರ ವರೆಗಿನ ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದೇನೆ. ಆದರಿಂದ ಸಣ್ಣ ವಯಸ್ಸಿನಲ್ಲೆ ಜನಪ್ರತಿನಿದಿಯಾಗುವ ಅವಕಾಶ ನನಗೆ ದೊರೆಯಿತು. ತದ ನಂತರ 2020-25ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಮೊದಲ ಅವಧಿಗೆ ಸದಸ್ಯನಾಗಿ ಕಾರ್ಯನಿರ್ವಹಿಸಿ ಇದೀಗ ಎರಡನೇಯ ಅವಧಿಗೆ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ.

ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲ‌ ಜೀವನ್ ಮಿಷನ್‌ ಅಡಿಯಲ್ಲಿನ ಕಾಮಗಾರಿಯು ಪ್ರಗತಿಯಲ್ಲಿದೆ, ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಗ್ರಾಮೀಣ ರಸ್ತೆ ಪ್ರಗತಿಯಲ್ಲಿದೆ, ಬೀದಿ ದೀಪಗಳ ವ್ಯವಸ್ಥೆಯು ಸುಸಜ್ಜಿತವಾಗಿದೆ. ಸ್ಚಚ್ಚ ಭಾರತ ಅಭಿಯಾನದಡಿಯಲ್ಲಿ ಮನೆಮನೆಗೆ ಶೌಚಾಲಯ ನಿರ್ಮಾಣದ ಕಾಮಗಾರಿಯು ಶೇಕಡ 100% ಪೂರ್ಣಗೊಂಡಿದೆ.

ಸುಮಾರು 11ಲಕ್ಷ ವೆಚ್ಚದಲ್ಲಿ ಹಸಿ ಮತ್ತು ಒಣ  ಕಸ ವೀಲೇವಾರಿ ಘಟಕವು ಪೊದವಾಡ (ಅರಪಟ್ಟು) ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಶಿಘ್ರದಲ್ಲೆ ಅದು ಕಾರ್ಯಾಚರಿಸುತ್ತದೆ. ಅಮೃತ ಸರೋವರ ಯೋಜನೆ ಅಡಿಯಲ್ಲಿ ಅರಪಟ್ಟು ಗ್ರಾಮದ ಬೊಳ್ಳಂಗೆರೆ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಕೆರೆಯ ದಡಗಳಲ್ಲಿ ಔಷಧಿ ಸಸ್ಯಗಳನ್ನು ನೆಡುವ ಕಾರ್ವನ್ನು ಹಮ್ಮಿಕೊಳ್ಳಲಾಗಿದೆ.

15ನೇ ಹಣಕಾಸಿನ ಯೋಜನೆಯ ಹಣವನ್ನು ಎಲ್ಲಾ ಸದಸ್ಯರಿಗೆ ಸಮಾನಾವಾಗಿ ಹಂಚಲಾಗಿದೆ. ಆಶ್ರಯ ಯೋಜನೆ ಅಡಿಯಲ್ಲಿ ಕೋಕೇರಿ ಗ್ರಾಮದಲ್ಲಿ 30 ಮನೆಗಳಲ್ಲಿ 13 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. 15 ಪ್ರಗತಿಯಲ್ಲಿದೆ. ಉಳಿದ ಮನೆಗಳಿಗೆ ಸೂಕ್ತ ಜಾಗದ ಕೊರತೆ ಇದ್ದು, ಶೀಘ್ರದಲ್ಲೇ ಜಾಗವನ್ನು ಗುರುತು ಮಾಡಿ ಮನೆಗಳನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಲಾಗಿದೆ.

ನಮ್ಮ ಪಂಚಾಯಿತಿಯಲ್ಲಿ 17 ಲಕ್ಷ ವೆಚ್ಚದಲ್ಲಿ ಹೊಸ ಕಟ್ಟಡವನ್ನು  ನಿರ್ಮಾಣ ಮಾಡಿ  ಸುಸಜ್ಜಿತವಾದ ಡಿಜಿಟಲ್‌ ಲೈಬ್ರರಿಯನ್ನು ಪ್ರಾಂಭಿಸಿದ್ದು, ಉತ್ತಮ ಲೈಬ್ರರಿ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದೆ. ನರಿಯಂದಡ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ನೂತನವಾದ ಸುಸಜ್ಜಿತವಾದ ಕಟ್ಟಡ ನಿರ್ಮಾಣಗೊಂಡು ಉತ್ತಮ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ. 

ಕಡಂಗ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆಯು ಪೂರ್ಣವಾಗಿದೆ. ಚೆಯ್ಯಂಡಾಣೆಯಲ್ಲಿ ಆಟೋ ನಿಲ್ದಾಣ ವ್ಯವಸ್ಥೆಯನ್ನು ಮಾಡಲಾಗಿದೆ. ಸರಿ ಸುಮಾರು 7 ಲಕ್ಷ ವೆಚ್ಚದಲ್ಲಿ ಅರಪಟ್ಟು ಭಗವತಿ ದೇವಾಲಯದ ಕಲ್ಯಾಣಿ ಕಾಮಗಾರಿಯು ಪ್ರಗತಿಯಲ್ಲಿದೆ, ಮಾಚೆಟ್ಟಿ ಕೆರೆ, ಕೋಕೇರಿ ಪಟ್ರೋಟ್‌ ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ.

ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಿದೆ, ಸರಕಾರಕ್ಕೆ ಮನವಿ ಮಾಡಿ ವನ್ಯ ಪ್ರಾಣಿಗಳ ಹಾವಳಿ ನಿಯಂತ್ರಿಸಲು ಒತ್ತಡ ತರಲಾಗಿದೆ.  ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳ ಆಟದ ಮೈದಾನದ ಅಭಿವೃದ್ದಿ ಮಾಡಲು ಯೋಜನೆ ರೂಪಿಸಲಾಗಿದೆ. ಅಲ್ಲದೆ ಪಂಚಾಯಿತಿಯಲ್ಲಿ ಸಂಜೀವಿನೀ ಒಕ್ಕೂಟಕ್ಕಾಗಿ ನೂತನ ಪಂಚಾಯಿತಿಯ ಮೇಲಿನ ಮಹಡಿಯಲ್ಲಿ ಒಂದು ಸಭಾಂಗಣವನ್ನು ನಿರ್ಮಿಸಲು ಯೋಜನೆ ಇದೆ. ಚೇಲಾವರ ಜಲಪಾತ ಅಭಿವೃದ್ದಿಗಾಗಿ ಅದರ ಸುರಕ್ಷತೆಗಾಗಿ ಕ್ರಮಕೈಗೊಳ್ಳಲಾಗಿದೆ. ವಿಶ್ವಕರ್ಮ ಯೋಜನೆಯಡಿಯಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಠಿಸಲು ಯೋಜನೆ ಮಾಡಲಾಗಿದೆ. ಒಟ್ಟಿನಲ್ಲಿ ಮಾದರಿ ಗ್ರಾಮ ಮಾಡಲು ನಾವು ಪಣತೊಟ್ಟಿದ್ದೇವೆ.

ನಮ್ಮ ಪಂಚಾಯಿತಿಯ ಆಡಳಿತ ವ್ಯವಸ್ಥೆಯನ್ನು ಉತ್ತಮ ವಾಗಿಸಲು ಒಂದು ಪ್ರಯೋಗವನ್ನು ಮಾಡಲಾಗಿದೆ. ಅದೇನೆಂದರೆ ಪಂಚಾಯಿತಿಯ ಸದಸ್ಯರ ಒಂದು ಹಾಜರಾತಿ ಸಹಿ ಸಂಗ್ರಹ ವ್ಯವಸ್ಥೆ. ಅವರು ಪ್ರತಿ ಬಾರಿ ಪಂಚಾಯಿತಿಗೆ ಭೇಟಿ ನೀಡುವ ಸಂದರ್ಭ ಒಂದು ಪುಸ್ತಕದಲ್ಲಿ ಅವರು ಸಹಿಯನ್ನು ಹಾಕಬೇಕು. ಸದಸ್ಯರು ಆಗಾಗ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಹಾಗೂ ಪಂಚಾಯಿತಿಯ ಆಡಳಿತಕ್ಕೆ ಉತ್ತಮ ಸ್ಫಂದನೆ ನೀಡಲು ಈ ವ್ಯವಸ್ಥೆಯು ಸಹಾಯಕವಾಗಿದೆ.

ಪ್ರಸ್ತುತ ನರಿಯಂಡ  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 1 ಕೋಟಿ ವೆಚ್ಚದ  ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದೆ. ನಮ್ಮ ಪಂಚಾಯಿತಿಯಲ್ಲಿ ಬೇರೆ ಬೇರೆ ಪಕ್ಷಗಳ ಬೆಂಬಲದಿಂದ ಆಯ್ಕೆಯಾದ ಎಲ್ಲಾ ಸದಸ್ಯರುಗಳು ಪಕ್ಷಾತೀತವಾಗಿ ತಮ್ಮೆಲ್ಲಾ ರಾಜಕೀಯವನ್ನು ಬದಿಗಿಟ್ಟು ಪಂಚಾಯಿತಿಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಹಾಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಸಹಕಾರವು ಉತ್ತಮವಾಗಿ ದೊರಕುತ್ತಿದೆ”

ಮೂಲತಃ ಕೃಷಿಕರಾಗಿರುವ ಕೋಡಿರ ವಿನೋದ್‌ ನಾಣಯ್ಯನವರು, ರಾಜಕೀಯ ಕ್ಷೇತ್ರದಲ್ಲಿ ಕಾಂಗ್ರೆಸ್‌ ಚೆಯ್ಯಂಡಾಣೆ ವಲಯ ಅಧ್ಯಕ್ಷರಾಗಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಕಡಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ವಿರಾಜಪೇಟೆ ಸ್ಪೋರ್ಸ್ಟ್‌ & ರಿ ಕ್ರೀಯೇಶನ್‌ ಕ್ಲಬ್‌ ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಅರಪಟ್ಟುವಿನ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಕೋಡಿರ ವಿನೋದ್‌ ನಾಣಯ್ಯನವರ ಕುಟುಂಬ ಪರಿಚಯ:

ಕೋಡಿರ ವಿನೋದ್‌ ನಾಣಯ್ಯನವರು ತಂದೆ: ದಿವಂಗತ ಕೋಡೀರ ಮನು ಮೊಣ್ಣಪ್ಪ. ತಾಯಿ: ಕೋಡಿಮನಿಯಂಡ ಪೂವಿ ಪೊನ್ನಮ್ಮ.ಪತ್ನಿ: ಚೋಂದಮ್ಮ(ತಾಮನೆ ಪಾಲೇಕಂಡ), ಉಪನ್ಯಾಸಕಿ,  ಮೈಸೂರಿನ ವಿದ್ಯಾಶ್ರಮ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೋಡಿರ ವಿನೋದ್‌ ನಾಣಯ್ಯನವರು ಪ್ರಸ್ತುತ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅರಪಟ್ಟು ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

ಸಂದರ್ಶನ ದಿನಾಂಕ: 29-01-2024

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments