ಪ್ಯಾಕೇಜಿಂಗ್ ಮತ್ತು ಮಾರಾಟ ನರ್ಸರಿ ಗಿಡಗಳ ಮಾರಾಟ Packaging and Sales Nursery plant sales

ಪ್ಯಾಕೇಜಿಂಗ್ ಮತ್ತು ಮಾರಾಟ

ನರ್ಸರಿ ಗಿಡಗಳ ಮಾರಾಟ:  ನರ್ಸರಿ ಉತ್ಪಾದನೆಯು ನರ್ಸರಿ ಮತ್ತು ಹಸಿರು ಮನೆಯ ಉತ್ಪತ್ತಿಯನ್ನು ಒಳಗೊಂಡಿದೆ. ಇದು ದೇಶದ ಅರ್ಥವ್ಯವಸ್ಥೆಗೆ ಕೊಡುಗೆ ನೀಡುತ್ತದೆ ಮತ್ತು ಉದ್ಯೋಗವನ್ನು ಸೃಷ್ಟಿ ಮಾಡುತ್ತದೆ. ಕರ್ನಾಟಕದಲ್ಲಿ ಸರಿಯಾದ ಮಾರುಕಟ್ಟೆಯ ವ್ಯವಸ್ಥೆ ಇಲ್ಲದಿರುವುದರಿಂದ ನರ್ಸರಿಯವರಿಗಾಗಲಿ, ಬಳಕೆದಾರರಿಗಾಗಲಿ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಉದ್ಧೇಶ ವಾಣಿಜ್ಯ ನರ್ಸರಿಗಳಿಗೆ ಹೊಸ ಮಾರುಕಟ್ಟೆಯ ಅನ್ವೇಷಣೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಸಸಿಗಳ ಮಾರಾಟದಲ್ಲಿರುವ ಅಡಚಣೆ: ನರ್ಸರಿ ಮಾರಾಟದಲ್ಲಿ ಮೂರು ಮಗ್ಗಲುಗಳಿವೆ.
ಉತ್ಪನ್ನ, ಬೆಲೆ ಮತ್ತು ಸಾಗಾಣಿಕೆ.

ಉತ್ಪನ್ನ
ಬೀಜದ ಗಿಡದ ಸ್ವೀಕಾರ ಮತ್ತು ರೋಗ ರಹಿತ ಕಸಿಗಿಡ
ವಿವರ ಸಂಖ್ಯೆ ಶೇಕಡವಾರು
ಬೀಜದ ಗಿಡಗಳು 36 80
ರೋಗ ರಹಿತ ಕಸಿ ಗಿಡಗಳು 9 20

ಗಿಡಗಳ ಸ್ವೀಕಾರತೆಯನ್ನು ಗಮನಿಸಿದಾಗ ಶೇಕಡ 80 ರಷ್ಟು ಜನರು ಬೀಜದ ಗಿಡವನ್ನು ಬಯಸಿದರೆ, ಬರೇ ಶೇಕಡ 20 ರಷ್ಟು ಜನರು ರೋಗರಹಿತ ಕಸಿ ಗಿಡವನ್ನೂ ಬಯಸುತ್ತಾರೆ.

ಬೀಜದ ಗಿಡ ಅಥವಾ ಕಸಿ ಗಿಡ ಪಡೆಯುವ ಮೂಲ
ಕ್ರಮ ಸಂಖ್ಯೆ ಮೂಲ ಸಂಖ್ಯೆ ಶೇಕಡ
1 ಸ್ವಂತ ನರ್ಸರಿ 2 4.44
2 ಖಾಸಗಿ ನರ್ಸರಿ 14 31.11
3 ಸರ್ಕಾರದ ನರ್ಸರಿ 7 15.66

ಹೆಚ್ಚಿನ ಬೆಳೆಗಾರರು ಬೀಜದ ಗಿಡ ಅಥವಾ ಕಸಿಗಿಡವನ್ನು ಖಾಸಗಿ ನರ್ಸರಿಯಿಂದ (31.11%) ಖರೀದಿಸುತ್ತಾರೆ. ನಂತರ ಸರಕಾರಿ ನರ್ಸರಿ (15.56%) ಮತ್ತು ಸ್ವಂತ ನರ್ಸರಿ (4.44%). ಸರಕಾರಿ ನರ್ಸರಿಯಿಂದ ಬೆಳೆಗಾರರು ರೋಗ ರಹಿತ ಕಸಿಗಿಡಗಳನ್ನು ಮಾತ್ರ ಖರೀದಿಸಿದರು.

ಸಸಿಗಳ ಮಾರಾಟದಲ್ಲಿ ಕಂಡು ಬರುವ ಸಮಸ್ಯೆಗಳು
• ನರ್ಸರಿಯ ಆರೈಕೆ ಮತ್ತು ನಾಟಿಮಾಡುವಾಗ ಹೆಚ್ಚಿನ ಗಮನ ಕೊಡಲು ಸಮಯ ಮತ್ತು ಕಾರ್ಮಿಕರ ಅಗತ್ಯವಿದೆ. ಆದರೆ ಅದರ ಪೂರೈಕೆಯಲ್ಲಿ ಕೊರತೆ ಇದೆ.
• ಗಿಡಗಳ ಮರುನಾಟಿ ಮಾಡಲು ಸಮುದಾಯ ಸೌಕರ್ಯದ ಕೊರತೆ.
• ರೈತರು, ಸಂಶೋಧಕರು ಮತ್ತು ವಿಸ್ತರಣೆ ತಜ್ಞರೊಳಗೆ ಸಂಪರ್ಕ ಕೊರತೆ.
• ನಾಲ್ಕಾರು ವರ್ಷಗಳ ನಂತರ ಕಸಿ ಗಿಡಗಳು ಬ್ಯಾಕ್ಟೀರಿಯ ಮತ್ತು ನಂಜು ರೋಗಗಳಿಗೆ ತುತ್ತಾಗುವುದು.
• ಮಧ್ಯ ವರ್ತಿಗಳ ಪ್ರವೇಶದಿಂದ ಕಸಿ ಗಿಡಗಳ ಬೆಲೆ ನರ್ಸರಿಯಿಂದ ನರ್ಸರಿಗೆ ಬೇರೆ ಬೇರೆಯಾಗಿದೆ.
• ರೋಗ ರಹಿತ ಕಸಿಗಿಡ ಉತ್ಪಾದಿಸಲು ಮತ್ತು ಸಾವಯವ ಕೃಷಿಗೆ ಸಾಕಷ್ಟು ಮಾರ್ಗದರ್ಶನ ಇಲ್ಲದಿರುವುದು.

ಬೆಳೆಗಾರರು ಕ್ರಮಿಸಿದ ಮಾರಾಟದ ಹಾದಿ
ನರ್ಸರಿ ಉತ್ಪಾದಕರು ಬೆಳೆಗಾರ
ನರ್ಸರಿ ಉತ್ಪಾದಕರು ಸಗಟು ವ್ಯಾಪಾರಿಗಳು ಬೆಳೆಗಾರ
ನರ್ಸರಿ ಉತ್ಪಾದಕರು ಸಗಟು ವ್ಯಾಪಾರಿಗಳು ಚಿಲ್ಲರೆ ವ್ಯಾಪಾರಿಗಳು ಬೆಳೆಗಾರ

ಮಾರಾಟ ವೆಚ್ಚ
• ಗಿಡ ಮಾರಾಟದ ವೆಚ್ಚ ನರ್ಸರಿ ಮಾರುಕಟ್ಟೆಯ ಪ್ರಮುಖ ಸಮಸ್ಯೆಯಾಗಿದೆ.
• ನರ್ಸರಿಯವರು ತಮ್ಮ ಗಿಡದ ಮಾರಾಟಕ್ಕೆ ತಾವೇ ವೆಚ್ಚ ಮಾಡಬೇಕಾಗುತ್ತದೆ.
• ಸಾಗಾಟ ವೆಚ್ಚ ಬೆಳೆಗಾರರಿಗೆ.
• ಗಿಡ ತುಂಬುವ ಮತ್ತು ಇಳಿಸುವ ವೆಚ್ಚ.
• ಕಮಿಷನ್ ವೆಚ್ಚ.
• ಪ್ಯಾಕಿಂಗ್ ವೆಚ್ಚ.
• ನರ್ಸರಿಯ ಅಂತರ.
• ಆಕ್ಟ್ರಾಯಿ ವೆಚ್ಚ.

ಗಿಡಗಳಿಗೆ ಬೆಲೆ ನಿಗದಿ ಪಡಿಸಲು ಕಾರಣವಾಗುವ ಅಂಶಗಳು
ಕ್ರಮ ಸಂಖ್ಯೆ ಬೆಲೆ ನಿಗದಿ ಅಂಶ ಬೆಲೆ (%) ಸ್ಥಾನ
1 ಉತ್ಪಾದನಾ ವೆಚ್ಚ 3.27 I
2 ವರ್ಗೀಕರಣ 3.14 II
3 ಬೇಡಿಕೆ 2.99 III
4 ಗುಣಮಟ್ಟ 2.79 Iಗಿ
5 ಇತರ ನರ್ಸರಿ ಗಿಡಗಳ ಬೆಲೆ 2.72 ಗಿ
6 ಸಲಕರಣೆ, ಕಾರ್ಮಿಕರ ವೆಚ್ಚ 2.41 ಗಿI
7 ಕಸಿ ಗಿಡಗಳ ಕಳೆದ ವರ್ಷದ ಬೆಲೆ 2.33 ಗಿII
8 ಕಚ್ಛಾ ವಸ್ತುಗಳ ಬೆಲೆ ಏರಿಕೆ 2.00 ಗಿIII

ನರ್ಸರಿಯಲ್ಲಿ ಸಸಿಗಳಿಗೆ ಬೆಲೆ ನಿಗದಿ ಪಡಿಸಲು ಕಾರಣವಾಗುವ ಪ್ರಮುಖ ಅಂಶಗಳೆಂದರೆ ಉತ್ಪಾದನಾ ವೆಚ್ಚ (3.27%), ಗಿಡದ ವರ್ಗೀಕರಣ (3.14%), ಬೇಡಿಕೆ (2.99%), ಗುಣಮಟ್ಟ (2.79%) ಮತ್ತು ಇತರ ನರ್ಸರಿ ಗಿಡಗಳ ಬೆಲೆ (2.72%) ಈ ಎಲ್ಲಾ ಅಂಶಗಳು ಗ್ರಾಹಕರ ಅಭಿವೃದ್ದಿಗೆ ಸಹಕಾರವಾಗಿದೆ.

ಮಾರಾಟದಲ್ಲಿ ವಿವಿಧ ವ್ಯವಹಾರ ರೀತಿಗಳು
ಕ್ರಮ ಸಂಖ್ಯೆ ವ್ಯವಹಾರ ರೀತಿ ಮಾರಾಟ (%) ಸ್ಥಾನ
1 ಖುದ್ದಾಗಿ 53.1 I
2 ದೂರವಾಣಿ ಮೂಲಕ 34.1 II
3 ಅಂಚೆ ಮೂಲಕ 3.4 III
4 ಮಾರಾಟ ಪ್ರದರ್ಶನ 2.6 Iಗಿ
5 ಇಂಟರ್ ನೆಟ್ 2.3 ಗಿ

ಸಾಗಾಣಿಕೆ
• ನರ್ಸರಿ ಮಾರುಕಟ್ಟೆಯಲ್ಲಿ ಸ್ಪರ್ಧಿಸ ಬೇಕಾದರೆ ಗುಣ ಮಟ್ಟದ ಗಿಡಗಳನ್ನು ಉತ್ಪಾದಿಸಿ ಗ್ರಾಹಕರನ್ನು ಆಕರ್ಷಿಸಬೇಕು.
• ಕುಂಡ ಮತ್ತು ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ಸಸಿಗಳನ್ನು ಉತ್ಪಾದಿಸಬೇಕು.
• ಗಿಡಗಳು ಚಿಕ್ಕದಾದರೂ ಅವುಗಳ ಬೇರುಗಳು ವಿಸ್ತಾರವಾಗಿ ಬೆಳೆದಿದ್ದರೆ ಗಿಡ ವೇಗವಾಗಿ ಮತ್ತು
• ಆರೋಗ್ಯಭರಿತವಾಗಿ ಬೆಳೆಯುತ್ತದೆ.
• ಚಿಕ್ಕ ಪೆಟ್ಟಿಗೆಯಲ್ಲಿ ನೂರಾರು ಗಿಡಗಳು ಹಿಡಿಸುವಂತಿರಬೇಕು. ಇದು ಸಾಗಾಣಿಕೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಸಾಗಾಣಿಕೆ ಸುಲಭ.
• ಸಸಿಗಳನ್ನು ಹಾನಿಯಾಗದೇ ಅನೇಕ ದಿನ ಇಟ್ಟು ಕೊಳ್ಳುವಂತೆ ಇರಬೇಕು. ನೆಟ್ಟನಂತರ ಅವುಗಳು ಬೆಳವಣಿಗೆ ಸಧೃಢವಾಗಿರಬೇಕು.

ವಾಣಿಜ್ಯ ನರ್ಸರಿಯ ಗುಣಗಳು
• ಬೆಳೆ ಮತ್ತು ರೈತರ ಹಿತಾಶಕ್ತಿಯ ಗಮನದಲ್ಲಿಡಬೇಕು ಮತ್ತು ಆಚರಣೆಯಲ್ಲಿರುವ ಕ್ರಮ ಅನುಸರಿಸಿ ಸಸಿಗಳನ್ನು ಉತ್ಪಾದಿಸಬೇಕು.
• ನರ್ಸರಿ ಗಿಡಗಳಿಗೆ ಇರುವ ಮಾರಾಟ ಅವಕಾಶವನ್ನು ಅನ್ವೇಷಿಸಬೇಕು.
• ರೈತರ ಸ್ವಸಹಾಯ ಗುಂಪುಗಳನ್ನು ಸಧೃಡಗೊಳಿಸಬೇಕು.
• ಸ್ವಸಹಾಯ ಗುಂಪು ಮತ್ತು ಪ್ರಗತಿ ಪರ ರೈತರಿಗೆ ತರಬೇತಿ ಮತ್ತು ತಾಯಿಗಿಡಗಳನ್ನು ಹಂಚಿ ಬೇಸಾಯದ ಬಗ್ಗೆ ಅರಿವು ಮೂಡಿಸಬೇಕು.
• ಸಮುದಾಯ ನರ್ಸರಿ ಸ್ಥಾಪಿಸಿ, ವರ್ಷಪೂರ್ತಿ ಉದ್ಯೋಗ ದೊರೆಯುವಂತೆ ಮಾಡಬೇಕು. ಕೂರ್ಗ್ ಫೌಂಡೇಷನ್ ಸಿ.ಹೆಚ್.ಇ.ಎಸ್. ಚೆಟ್ಟಳ್ಳಿಯೊಂದಿಗೆ ಕೈಜೋಡಿಸಿ ರೋಗ ರಹಿತ ಗಿಡಗಳನ್ನು ಉತ್ಪಾದಿಸುವ ಯೋಜನೆಯಿದೆ.
• ಕಸಿ ಗಿಡಗಳನ್ನು ರೈತರೆ ಉತ್ಪಾದಿಸುವಂತೆ ಮಾಡಿದರೆ ಸಾಗಾಣಿಕೆ ವೆಚ್ಚ ಉಳಿಯುತ್ತದೆ ಮತ್ತು ಸಾಗಾಟದಲ್ಲಿ ಗಿಡಗಳಿಗೆ ಹಾನಿಯಾಗುವುದು ತಪ್ಪುತ್ತದೆ.
• ಕಸಿ ಗಿಡಗಳು ಸುಲಭವಾಗಿ ದೊರಕಿದರೆ ಹೆಚ್ಚು ಗಿಡಗಳನ್ನು ನೆಡಲು ಪ್ರೇರಣೆ ದೊರಕುತ್ತದೆ.
• ಸ್ತ್ರೀಯರು ತಮ್ಮ ಜ್ಞಾನ ಮತ್ತು ಕೌಶಲಗಳನ್ನು ಕೃಷಿಗೆ ಬಳಸಬೇಕು.
• ನರ್ಸರಿ ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸಬೇಕು.

ನರ್ಸರಿ ಉತ್ಪಾದಕರ ಸಹಕಾರ ಸಂಘ
• ಮುಖ್ಯ ಕಛೇರಿ ಬೆಂಗಳೂರಿನ ಲಾಲ್‍ಭಾಗ್‍ನಲ್ಲಿದ್ದು, ಶಾಖೆಗಳು ಮೈಸೂರು ಮತ್ತು ಹಾಸನದಲ್ಲಿವೆ
• ನರ್ಸರಿ ಗಿಡಗಳಿಗೆ ಉತ್ತಮ ಬೆಲೆ ಮತ್ತು ಗ್ರಾಹಕರಿಗೆ ಗುಣಮಟ್ಟದ ಗಿಡ ದೊರಕುವುದು ಇವು ಅದರ ಎರಡು ಗುರಿಗಳು
• ಈ ಸಂಘದಲ್ಲಿ 610 ಸದಸ್ಯರಿದ್ದು ರೂ 13.11 ಲಕ್ಷ ಶೇರು ಬಂಡವಾಳವಿದೆ. ಸದಸ್ಯತನ ನರ್ಸರಿ ಮತ್ತು ಬೀಜ ಉತ್ಪಾದಕರಿಗೆ ಮಾತ್ರ ಮೀಸಲಾಗಿದೆ.
• ತೋಟಗಾರಿಕ ಗಿಡ, ಬೀಜ, ಗೆಡ್ಡೆ ಮತ್ತು ಇನ್ನಿತರ ಸಂಭಂಧ ಪಟ್ಟ ತೋಟಗಾರಿಕ ವಸ್ತುಗಳ ಮಾರಾಟದಲ್ಲಿ ನಿರತವಾಗಿದೆ.
• ಉತ್ಪಾದಕರು ನೇರವಾಗಿ ಗಿಡಗಳನ್ನು ತಂದು ವಿವಿಧ ಭಾಗಗಳಲ್ಲಿ ಆಕರ್ಷಣೀಯವಾಗಿ ಪ್ರದರ್ಶಿಸಿ ಮಾರಾಟ ಮಾಡುತ್ತಾರೆ.
ನರ್ಸರಿ ಉತ್ಪಾದಕರು ಬದಲಾವಣೆಗೆ ಹೊಂದಿಕೊಳ್ಳುವುದು ಅತೀ ಸೂಕ್ತ. ಹೊಸ ಹೊಸ ಆವಿಸ್ಕಾರಗಳನ್ನು ಅಳವಡಿಸಿ ಬದಲಾಗುತ್ತಿರುವ ಗ್ರಾಹಕರ ಆಸಕ್ತಿಗೆ ಸ್ಪಂದಿಸಬೇಕು.

ಜೇನು ಮತ್ತು ಅದರ ಉತ್ಪನ್ನಗಳ ಮಾರಾಟ
ಗುಡ್ಡ ಪ್ರದೇಶದಲ್ಲಿ ಕೃಷಿ, ಹಣ್ಣು, ತರಕಾರಿ, ಸಾಕು ಪ್ರಾಣಿ ಮತ್ತು ಜೇನು ಸಾಕಾಣಿಕೆಯಿಂದ ರೈತರು ಸ್ವಾವಲಂಬಿಯಾಗಲು ಸಾಧ್ಯವಿದೆ. ಜೇನು ಸಾಕಾಣೆ ಅನೇಕ ರೈತರ ಉಪಕಸುಬು ಆಗಿದೆ. ಜೇನು ನೊಣಗಳು ಪರಾಗಸ್ಪರ್ಷ ಕ್ರಿಯೆಯಿಂದ ಬೆಳೆಗಳ ಹೆಚ್ಚಿನ ಇಳುವರಿ ಮತ್ತು ಗುಣಮಟ್ಟದ ಉತ್ಪಾದನೆಯಲ್ಲಿ ಸಹಾಯಕವಾಗಿದೆ. ಪರಾಗಸ್ಪರ್ಷ ಕ್ರಿಯೆಯಿಂದ ಹೆಚ್ಚು ಬೀಜ ಉತ್ಪಾದನೆಯಾಗುತ್ತದೆ. ಇದರಿಂದ ಹೆಚ್ಚು ಗಿಡಗಳು ಬೆಳೆದು ಪಕ್ಷಿ ಮತ್ತು ಪ್ರಾಣಿಗಳಿಗೆ ಆಹಾರ ಮತ್ತು ಆಶ್ರಯ ನೀಡುತ್ತದೆ. ಥಾಯಿ ಸ್ಯಾಕ್ ಬ್ರೂಡ್ ಕಾಯಿಲೆಯಿಂದ ಕೊಡಗಿನಲ್ಲಿ ಜೇನು ಸಾಕಾಣೆಗೆ ಹಿನ್ನಡೆಯಾಗಿದೆ. ಥೈಲೆಂಡ್ ಮೂಲದ ಈ ರೋಗ ರಾಣಿ ನೊಣ ಸಮೇತ ಎಲ್ಲಾ ಜೇನು ನೊಣಗಳನ್ನು ನಾಶಪಡಿಸುತ್ತದೆ. ಸೂಕ್ತ ಪರಿಹಾರ ಕ್ರಮವನ್ನು ಸೂಚಿಸಲು ಇದುವರೆಗು ಸಾಧ್ಯವಾಗಿಲ್ಲ. 1990ರಲ್ಲಿ ಕಾಣಿಸಿಕೊಂಡ ಈ ರೋಗ ದೇಶದ ಎಲ್ಲೆಡೆ ಹರಡಿದೆ.

ಜೇನು ಮಾರಾಟದ ಸ್ಥಿತಿ
• ಜೇನು ತುಂಬಿರುವ ಎರಿಯನ್ನು ಆಯ್ದು, ಅದರ ಮೇಲಿರುವ ಮೇಣದ ಪೊರೆಯನ್ನು ತೆಗೆಯಬೇಕು. ನಂತರ ಜೇನು ತೆಗೆಯುವ ಯಂತ್ರ ಬಳಸಿ ಜೇನು ತೆಗೆಯಲಾಗುವುದು.
• ಜೇನನ್ನು ಸ್ಥಳದಲ್ಲೆ ಮಾರಾಟ ಮಾಡಲಾಗುತ್ತದೆ. ಸಗಟು ವ್ಯಾಪಾರಿಗಳು ಜೇನು ಸಾಕಣೆ ಸ್ಥಳಕ್ಕೆ ಬಂದು ಜೇನನ್ನು ಖರೀದಿಸುತ್ತಾರೆ.
• ಸಗಟು ವ್ಯಾಪಾರಿಗಳು ಕೊಟ್ಟ ಪ್ಲಾಸ್ಟಿಕ್ ಕ್ಯಾನುಗಳಲ್ಲಿ ಜೇನು ತುಂಬಲಾಗುತ್ತದೆ.
• ಭಾಗಮಂಡಲ ಮತ್ತು ವಿರಾಜಪೇಟೆಯಲ್ಲಿರುವ 2 ಸಹಕಾರ ಸಂಘಗಳು ಬೆಳೆಗಾರರಿಗೆ ಸಹಾಯಕವಾಗಿದೆ. ಬೆಳೆಗಾರರಿಂದ ಜೇನು ಖರೀದಿಸಿ, ಸಂಸ್ಕರಿಸಿ ಅಗ್‍ಮಾರ್ಕಿನೊಂದಿಗೆ ‘ಕೂರ್ಗ್ ಹನಿ’ ಎಂದು ಮಾರಾಟ ಮಾಡುತ್ತಾರೆ.
• ಇತರ ಖರೀದಿದಾರರೆಂದರೆ ಇಸ್ಕಾನ್ ಮತ್ತು ಶಬರಿಮಲೆ ದೇವಸ್ಥಾನ. ಸ್ವಲ್ಪಾಂಶ ಇಂಗ್ಲೇಂಡಿಗೆ ರಫ್ತು ಮಾಡಲಾಗುತ್ತದೆ.
• ಕೊಡಗಿನಲ್ಲಿ 1 ಲಕ್ಷ ಕೆ.ಜಿ ಜೇನಿಗೆ ಬೇಡಿಕೆ ಇದೆ. ಆದರಿಂದ ಜೇನು ಬೆಳೆಗಾರರು ಹೆಚ್ಚೆಚ್ಚು ಜೇನು ಕೃಷಿಯತ್ತ ಗಮನ ಹರಿಸಬೇಕು.

ಮಾರಾಟದಲ್ಲಿರುವ ತೊಂದರೆಗಳು
• ನೇರ ಮಾರಾಟ ಮಾಡುವ ಸಹಕಾರ ಸಂಘಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದು.
• ಜೇನಿನ ಕಲಬೆರಕೆ ಮುಖ್ಯ ಅಡಚಣೆ. ಕಲಬೆರಕೆಯಿಂದಾಗಿ ಯುರೋಪು ಒಕ್ಕೂಟ ಭಾರತದಿಂದ ಜೇನಿನ ಆಮದನ್ನು ನಿರ್ಬಂಧಿಸಿದೆ.
• ಮಾರಾಟಗಾರರಿಗೆ ಕೆಲವೊಮ್ಮೆ ಮಾರುಕಟ್ಟೆ, ಬೆಲೆ ಮತ್ತು ಮಾರಾಟ ವಿಧಾನಗಳ ಬಗ್ಗೆ ಅರಿವಿರುವುದಿಲ್ಲ. ಸಂಘಟನೆ, ಆಥಿರ್üಕ ಸಹಾಯ ಮತ್ತು ಸಾಕಷ್ಟು ಸೌಕರ್ಯಗಳಿಂದ ಹತಾಸೆಯ ಮಾರಾಟವನ್ನು ನಿಲ್ಲಿಸಬಹುದು.
• ಬೆಳೆಗಾರರಲ್ಲಿ ಉತ್ಪಾದನೆಯ ಬಗ್ಗೆ ಯೋಜನೆಗಳಿರುವುದಿಲ್ಲ ಮತ್ತು ಮಾರುಕಟ್ಟೆಯ ಅರಿವು ಕಡಿಮೆ.
• ಜೇನು ಸಾಕಣೆ ಸಲಕರಣೆಗಳ ಅಧಿಕ ಬೆಲೆ.

ವಾಣಿಜ್ಯ ಮಾರಾಟ
• ಬೆಳೆಗಾರರಿಗೆ ಸಾಲ ಸೌಲಭ್ಯ, ಶೇಖರಣಾ ವ್ಯವಸ್ಥೆ ಮತ್ತು ಸಾಗಾಟಕ್ಕೆ ಸಹಾಯ ಧನ ಒದಗಿಸಬೇಕು.
• ಜೇನು ಮತ್ತು ಜೇನಿನ ಇತರ ಉತ್ಪಾದನೆಗಳಿಗೆ ಮೂಲ ಬೆಲೆ ನಿಗದಿಪಡಿಸಬೇಕು. ಇದರಿಂದ ಬೆಳೆಗಾರರಿಗೆ ಒಂದು ನಿರ್ಧಿಷ್ಟ ಆದಾಯ ದೊರಕುತ್ತದೆ.
• ಬೆಳೆಗಾರರ ಸಮಗ್ರ ಅಭಿವೃದ್ಧಿಗೆ ಉತ್ಪತ್ತಿಯ ಮಾರಾಟ ಸೇವೆಯಿರಬೇಕು.
• ಉದ್ಯಮದಾರರಿಗೆ ಮೂಲ ಸೌಕರ್ಯ, ಮಾಯಿತಿ ವ್ಯವಸ್ಥೆ ಮತ್ತು ಸಂಸ್ಕರಣೆ ವ್ಯವಸ್ಥೆಗಳನ್ನು ಒದಗಿಸಿದರೆ ಉತ್ಪನ್ನಗಳನ್ನು ಲಾಭದಾಯಕವಾಗಿ ಮಾರಾಟ ಮಾಡಬಹುದು.
• ಪಾರದರ್ಶಕತೆ, ಸಮಾನ ಅವಕಾಶ ಮತ್ತು ಪ್ರೋತ್ಸಾಹದ ಅವಶ್ಯಕತೆ ಇದೆ.
• ಅಗ್‍ಮಾರ್ಕಿನ ಜೇನನ್ನು ಮಾರಾಟ ಮಾಡಬೇಕು.
• ಯುವ ಉದ್ಯಮಿಗಳಿಗೆ ಗುಣಮಟ್ಟ ಕಾಪಾಡುವ ಬಗ್ಗೆ ತರಬೇತಿ, ಸ್ವಾಭಾವಿಕ ಮತ್ತು ಸ್ಥಳೀಯ ಮೂಲಸಂಪತ್ತಾದ ಬೇವಿನೆಣ್ಣೆ, ಜೇನು, ಜೇನು ಮೇಣ ಮತ್ತು ಸ್ಥಳೀಯ ವನಸಂಪತ್ತಿನ ಮಹತ್ಹದ ಬಗ್ಗೆ ಅರಿವು ಮೂಡಿಸಬೇಕು.

ಅಗ್ ಮಾರ್ಕ್ ಜೇನಿನ ಮಾನದಂಡ

ಗುಣ ವಾಣಿಜ್ಯ ಜೇನು ವಿಶೇಷ ವರ್ಗ ಎ ವರ್ಗ ಸಾಧಾರಣ ವರ್ಗ ಹಿಂಡಿದ ಜೇನು
ನಿರ್ಧಿಷ್ಟ ತೂಕ(ಕನಿಷ್ಟ) 1.41 1.39 1.37 1.37
ಶೇಕಡ ತೇವಾಂಶ (ಕನಿಷ್ಟ) 20.0 22.0 25.0 25.0
ವಿಭಜನೆ ಸಕ್ಕರೆ (ಕನಿಷ್ಟ) 70.0 65.0 55.0 65.0
ಅವಿಭಜನೆ ಸಕ್ಕರೆ (ಕನಿಷ್ಟ) 5.0 5.0 5.0 5.0
ಪರಾಗ (ಸಂಖ್ಯೆ – – – 50,000
ರಂಜಕ(%) 0.3 0.5 0.5 0.5

ಶೇಖರಣೆ ಮತ್ತು ಸಂಸ್ಕರಣೆ
• ಜೇನು ತೆಗೆದ ನಂತರ, ಮಸ್ಲಿನ್ ಬಟ್ಟೆಯ ಶೋಧಕ ಬಳಸಿ ಜೇನನ್ನು ಮೇಣದಿಂದ ಬೇರ್ಪಡಿಸಬೇಕು.
• ಜೇನಿನೊಂದಿಗೆ ಎರಿ ಮತ್ತು ಮೇಣ ಸೇರಿಕೊಳ್ಳದಂತೆ ನೋಡಿಕೊಳ್ಳಬೇಕು.
• ಸುವಾಸನೆ ಹಾಳಾಗದಂತೆ ಎಚ್ಚರ ವಹಿಸಬೇಕು.
• ಧೂಳು ಸೇರದಂತೆ ಗಮನ ಹರಿಸಬೇಕು.
• ನ್ಯೂನತೆ ಇರುವ ಡಬ್ಬಿಗಳನ್ನು ಬಳಸಿದರೆ ಜೇನಿನ ಗುಣಮಟ್ಟ ಹಾಳಾಗುತ್ತದೆ.
• ಜೇನಿನ ಘನೀಕರಣ, ಬೆಳೆಗಾರರಿಗೆ ಇರುವ ಪ್ರಮುಖ ತೊಂದರೆ.
• ಜೇನು ಗಾಢ ಸಕ್ಕರೆ ದ್ರಾವಣವೆಂದು ಗ್ರಾಹಕರಿಗೆ ಅರಿವಿಲ್ಲದಿರುವುದು.

ಜೇನು ಉತ್ಪಾದನೆಗಳು
ಜೇನು ಮೇಣ
• ಜೇನು ಎರಿ ಮೇಣದಿಂದಾಗಿರುತ್ತದೆ. ಜೇನು ತೆಗೆದ ನಂತರ ಬೆಚ್ಚನೆಯ ನೀರಿನಲ್ಲಿ ಕರಗಿಸಬಹುದು.
• ಮೇಣ ಬೇಗನೆ ಹಾಳಾಗುವುದಿಲ್ಲ. ಸಂಗ್ರಹಿಸಿ, ಒಗ್ಗೂಡಿಸಿ ಮಾರಾಟ ಮಾಡಬಹುದು.
• ಮೇಣವನ್ನು ನೀರು ನಿರೋಧಕವಾಗಿ ಚರ್ಮದ ಉದ್ಯಮದಲ್ಲಿ, ಹತ್ತಿ ನೂಲಿನ ಗಿರಣಿಗಳಲ್ಲಿ ಮೇಣದ ಬತ್ತಿ ತಯಾರಿಸಲು ಮತ್ತು ಕೂದಲು ಹಾಗು ಚರ್ಮದ ಮುಲಾಮಿನ ತಯಾರಿಕೆಯಲ್ಲಿ ಬಳಸುತ್ತಾರೆ.
• ಹಲವು ಬೆಳೆಗಾರರು ಒಂದಾಗಿ ಮೇಣವನ್ನು ಒಗ್ಗೂಡಿಸಿ ಮಾರಾಟ ಮಾಡಬಹುದು.
• ರಫ್ತಿಗಾಗಿರುವ ಮೇಣ ಅತ್ಯಂತ ಶುದ್ಧವಾಗಿರಬೇಕು ಮತ್ತು ಅತ್ಯಂತ ಕಡಿಮೆ ಸಂಸ್ಕರಣೆ ಮಾಡಿರಬೇಕು.
• ಅಚ್ಚುಕಟ್ಟಾದ ಕ್ಯಾನ್‍ವಾಸ್ ಚೀಲದಲ್ಲಿ ಇರಿಸಿ ಹೆಚ್ಚಾಗಿ ಆಫ್ರಿಕಾ ದೇಶಕ್ಕೆ ರಫ್ತು ಮಾಡಲಾಗುತ್ತದೆ.

ಜೇನು ವಿಷ
• ಕೆಲಸಗಾರ ನೊಣದ ಮುಳ್ಳು ವಿಷ ತುಂಬಿದ ಚೀಲಕ್ಕೆ ಜೋಡಿಸಲ್ಪಟ್ಟಿದೆ.
• ಜೇನು ವಿಷದಿಂದ ಅನೇಕ ರೋಗಗಳನ್ನು ನಿವಾರಿಸಬಹುದು.

ರಾಳ
• ರಾಳವನ್ನು ಜೇನು ನೊಣ ಅಂಟು ಹೊರಸೂಸುವ ಮರಗಳಿಂದ ಸಂಗ್ರಹಿಸುತ್ತದೆ.
• ಜೇನು ಚೌಕಟ್ಟುಗಳಿಂದ ರಾಳವನ್ನು ಸಂಗ್ರಹಿಸಬಹುದು.
• ಗಾಯವನ್ನು ವಾಸಿ ಮಾಡುವ ಗುಣವಿದೆ.

ರಾಯಲ್ ಜೆಲ್ಲಿ (ರಾಜಶಾಹಿರಸ)
• 6-12 ದಿವಸದ ಆರೈಕೆ ಮಾಡುವ ಕೆಲಸಗಾರ ನೊಣಗಳು ರಾಜಶಾಹಿ ರಸವನ್ನು ಸ್ರವಿಸುತ್ತವೆ.
• ಮಾನವನಿಗೆ ಪೌಷ್ಠಿಕ ಆಹಾರವಾಗಿದ್ದು ಚೈತನ್ಯ ಮತ್ತು ಶಕ್ತಿ ಕೊಡುತ್ತದೆ.

ಪರಾಗ
• ಸಮೃದ್ಧ ಪ್ರೊಟೀನ್ ಮೂಲವಾಗಿದ್ದು, ಆಹಾರದಲ್ಲಿ ಬಳಸಬಹುದು.

ಬ್ರಾಹ್ಮೀ ಜೇನಿನ ಜಾಮ್
• ಆಯುರ್ವೇದಿಕ್ ಸಸ್ಯಗಳಾದ ಬ್ರಾಹ್ಮೀ ಮತ್ತು ಶಂಕಪುಷ್ಪವನ್ನು ಒಳಗೊಂಡಿದೆ.
• ನೆಲ್ಲಿ ಇನ್ನೊಂದು ಮುಖ್ಯ ಘಟಕ.
• ಜಾಮ್ ಯಾವುದೇ ರಾಸಾಯನಿಕ ಘಟಕ ಅಥವಾ ಕೃತಕ ರುಚಿಯನ್ನು ಒಳಗೊಂಡಿಲ್ಲ.

ಜೇನು ಮಾರಾಟ
ಮಾರಾಟವನ್ನು ನಿರ್ಧರಿಸುವ ವಿವಿಧ ಮಾಹಿತಿಗಳು
• ಉತ್ಪತ್ತಿ
• ಪ್ಯಾಕೇಜು
• ವ್ಯಾಪಾರದ ಗುರುತು
• ಬೆಲೆ
• ಮಾರುಕಟ್ಟೆ ಮಾಹಿತಿ

ಪ್ರಚಾರ
• ದಿನಪತ್ರಿಕೆ, ನಿಯತಕಾಲಿಕೆ, ಆಕಾಶವಾಣಿ, ದೂರದರ್ಶನದ ಮೂಲಕ ಪ್ರಚಾರದ ಅವಶ್ಯಕತೆಯಿದೆ.
• ಮಾದ್ಯಮಗಳ ಪ್ರಚಾರದ ರೀತಿಯಲ್ಲಿ ಮಾರುಕಟ್ಟೆ ನಿರ್ಧರಿತವಾಗುತ್ತದೆ.

ಬೆಳೆಗಾರರಿಗೆ ಉತ್ತೇಜನ
• ಸಹಕಾರ ಸಂಘಗಳು ಬೆಳೆಗಾರರಿಗೆ ಜೇನು ಸಾಕಣೆಯ ಸಲಕರಣೆಗಳನ್ನು ರಿಯಾಯಿತಿ ಬೆಲೆಯಲ್ಲಿ ಪೂರೈಸಿ, ಅವರಿಂದ ಜೇನು ಖರೀದಿಸಬೇಕು.
• ತೇಗದಿಂದಾದ ಒಂದು ಜೇನು ಪೆಟ್ಟಿಗೆಯ ಬೆಲೆ ರೂ 2000/. ಇದನ್ನು ಖರೀದಿಸಲು ಬೆಳೆಗಾರರಿಗೆ ಶೇಕಡ 25 ಸಹಾಯ ಧನ ನೀಡಲಾಗುವುದು. ಜೇನು ಗೂಡು ಮತ್ತು ಎರಿಗಳಿಗೆ ಶೇಕಡ 50 ಸಹಾಯ ಧನವಿದೆ.
• ತೋಟಗಾರಿಕೆ ಇಲಾಖೆ ಶೇಕಡ 25 ರಿಯಾಯಿತಿ ದರದಲ್ಲಿ ಜೇನು ಪೆಟ್ಟಿಗೆ ಮಾರಾಟ ಮಾಡುತ್ತದೆ.
• ಧರ್ಮಸ್ಥಳ ಗ್ರಾಮ ಅಭ್ಯುದಯ ಸಂಸ್ಥೆ ಸಹ ಜೇನು ಗೂಡನ್ನು ರಿಯಾಯಿತಿ ದರದಲ್ಲಿ ಒದಗಿಸುತ್ತದೆ.

ಮಾರುಕಟ್ಟೆ ಮತ್ತು ಮಾರಾಟದಿಂದ ಬೆಳೆಗಾರರಿಗೆ ಜೇನು ಹಾಗು ಅದರ ಇತರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆಯನ್ನು ಗಳಿಸಲು ಸಾಧ್ಯವಾಗುತ್ತದೆ. ಪರಾಗ ಸ್ಪರ್ಷ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿ ಬೆಳೆಯ ಇಳುವರಿ ಹೆಚ್ಚಿಸಿ, ಗ್ರಾಮೀಣ ಅಭಿವೃದ್ಧಿಯಿಂದ ಸುರಕ್ಷಿತ ಸುಖ ಜೀವನ ನಡೆಸಲು ಸಹಾಯವಾಗುತ್ತದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments