ಹಣ್ಣು ಪರಿಚಯ
ಹಣ್ಣು ನಮ್ಮ ದೈನಂದಿನ ಆಹಾರದ ಪ್ರಮುಖ ಅಂಶವಾಗಿದೆ. ಭಾರತದಲ್ಲಿ ಹಲವಾರು ವಿಧದ ಹಣ್ಣುಗಳನ್ನು ಬೆಳೆಯುತ್ತಾರೆ. ಉಷ್ಣ ಮತ್ತು ಅರೆ ಉಷ್ಣವಲಯದ ಮಾವು, ಬಾಳೆಹಣ್ಣು, ಕಿತ್ತಳೆ, ಅನಾನಸ್, ಪಪ್ಪಾಯಿ, ಸೀಬೆ, ಸಪೋಟ, ಸೇಬು, ಹಲಸು, ಲಿಚ್ಚಿ, ದ್ರಾಕ್ಷಿ, ಸಮಶೀತೋಷ್ಣವಲಯದ ಮರ ಸೇಬು, ಸೇಬು, ಪೇರ್, ಪೀಚ್, ಪ್ಲಮ್, ಎಪ್ರಿಕಾಟ್, ವಾಲ್‍ನಟ್ ಹಾಗು ಶಷ್ಕವಲಯದ ನೆಲ್ಲಿ, ಬೆರ್, ದಾಳಿಂಬೆ, ಸೀತಾಫಲ, ಫಿಗ್, ಫಲ್ಸಾ ಮುಂತಾದವು ಪ್ರಮುಖ ಹಣ್ಣಿನ ಬೆಳೆಗಳು. ಅನುಕ್ರಮವಾಗಿ ಚೈನಾ ಮತ್ತು ಭಾರತ ಜಗತ್ತಿನಲ್ಲೇ ಅತೀ ಹೆಚ್ಚು ಹಣ್ಣು ಉತ್ಪಾದಿಸುವ ರಾಷ್ಟ್ರಗಳು. 2007-08ರಲ್ಲಿ ದೇಶದ 5.77 ಮಿಲಿಯ ಹೆಕ್ಟೇರು ಪ್ರದೇಶದಿಂದ ಒಟ್ಟು 63.50 ಮಿಲಿಯ ಟನ್ ಹಣ್ಣು ಉತ್ಪಾದಿಸಲಾಯಿತು. ಭಾರತ ಹೆಚ್ಚು ಹಣ್ಣು ಉತ್ಪಾದಿಸುವ ರಾಷ್ಟ್ರವಾದರೂ ತಲಾ ಉತ್ಪಾದನೆ ದಿನಕ್ಕೆ 107 ಗ್ರಾಂ. ಮಾತ್ರ ಇದೆ. ಅಂದಾಜು 20-22% ಹಣ್ಣು ಕೊಯ್ಲು ನಂತರ ವಿವಿಧ ಹಂತಗಳಲ್ಲಿ ಹಾಳಾಗುತ್ತಿದೆ. ಹಾಗಾಗಿ ಶಿಫಾರಿಸಿದ 120 ಗ್ರಾಂ. ದಿನ ಲಭ್ಯತೆಗೆ ಹೋಲಿಸಿದರೆ ದೇಶದ ದಿನದ ಲಭ್ಯತೆ 80 ಗ್ರಾಂ.ಗೆ ಇಳಿದಿದೆ. ಭಾರತವು ಮಾವು (65%), ಬಾಳೆ (11%), ನಿಂಬೆ (10%) ಮತ್ತು ಸಪೋಟ (9%) ಹಣ್ಣನ್ನು ಜಗತ್ತಿನಲ್ಲಿ ಅತೀ ಹೆಚ್ಚು ಉತ್ಪಾದಿಸುವ ರಾಷ್ಟ್ರವಾಗಿದೆ. ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳು ನಾಡು ಮತ್ತು ಕರ್ನಾಟಕ ರಾಷ್ಟ್ರದಲ್ಲಿ ಹೆಚ್ಚು ಹಣ್ಣು ಬೆಳೆಯುವ ರಾಜ್ಯಗಳು. ಮಹಾರಾಷ್ಟ್ರ (17.39%), ಆಂಧ್ರ ಪ್ರದೇಶ (16.88%), ತಮಿಳು ನಾಡು (11.86%) ಗುಜರಾತ್ (9.21%) ಕರ್ನಾಟಕ (7.22%) ಮತ್ತು ಉತ್ತರ ಪ್ರದೇಶದಲ್ಲಿ (5.91%) ಹಣ್ಣು ಉತ್ಪಾದಿಸಲಾಗುತ್ತಿದೆ. ಸರಾಸರಿ ಹೆಚ್ಚಿನ ಉತ್ಪಾದನೆ ಮಧ್ಯ ಪ್ರದೇಶ ಮತ್ತು ತಮಿಳು ನಾಡು (26.6 ಮತ್ತು 25.8 ಟನ್/ಹೆಕ್ಟೇರು) ರಾಜ್ಯಗಳಲ್ಲಿದೆ. ಸ್ವಾತಂತ್ರ್ಯ ನಂತರ ದೇಶದ ಹಣ್ಣಿನ ಉತ್ಪಾದನೆ 12 ಪಟ್ಟು ಹೆಚ್ಚಿದೆ. 1952-53 ರಲ್ಲಿ 5.5 ಮಿಲಿಯ ಟನ್‍ಗಳಿಷ್ಟಿದ್ದ ಉತ್ಪಾದನೆ 2007-08ರಲ್ಲಿ 63.50 ಮಿಲಿಯ ಟನ್‍ಗಳಿಗೆ ಹೆಚ್ಚಿದೆ. ಆದರೂ ಸಹ ವಿವಿಧ ಕೃಷಿ ವಲಯಗಳ ಸರಾಸರಿ ಉತ್ಪಾದನೆ ಬೇರೆ ಬೇರೆಯಾಗಿದೆ. ದ್ರಾಕ್ಷಿ ಹೊರತು ಪಡಿಸಿದರೆ ಭಾರತದ ಸರಾಸರಿ ಉತ್ಪಾದಕತೆ ಜಗತ್ತಿನ ಸರಾಸರಿ ಉತ್ಪಾದಕತೆಗಿಂತ ತುಂಬಾ ಕಡಿಮೆ ಇದೆ.
1. ಹೆಚ್ಚಿನ ಉತ್ಪಾದಕತೆ
ಕೃಷಿ ಬೆಳೆಗಳಿಗೆ ಹೋಲಿಸಿದರೆ ಪ್ರತೀ ಹೆಕ್ಟೇರ್ ಭೂ ಪ್ರದೇಶದ ತೋಟಗಾರಿಕೆ ಬೆಳೆಯಿಂದ ಸಿಗುವ ಇಳುವರಿ ಅತೀ ಹೆಚ್ಚು. ಹಣ್ಣು ಬೆಳೆಯುವ ಪ್ರದೇಶದಿಂದ ಹೆಚ್ಚು ಇಳುವರಿ ದೊರೆಯುತ್ತದೆ. ಉದಾ: ಭತ್ತದ ಬೆಳೆಯಿಂದ ದೊರೆಯುವ ಗರಿಷ್ಟ ಇಳುವರಿ 30 ಕ್ವಿಂಟಾಲ್/ಹೆಕ್ಟೇರ್. ಆದರೆ ಬಾಳೆಯಿಂದ 300 ರಿಂದ 500 ಕ್ವಿಂಟಾಲ್/ಹೆಕ್ಟೇರ್, ಅನಾನಸ್ 450 ಕ್ವಿಂಟಾಲ್/ಹೆಕ್ಟೇರ್ ಮತ್ತು ದ್ರಾಕ್ಷಿ 90-150 ಕ್ವಿಂಟಾಲ್/ಹೆಕ್ಟೇರು ಇಳುವರಿ ಸಿಗುತ್ತದೆ. ಆಹಾರ ಮತ್ತು ಭೂಮಿಯ ಕೊರತೆಯ ಕಾಲದಲ್ಲಿ ಹಣ್ಣುಗಳನ್ನು ಬೆಳೆದು ಹೆಚ್ಚು ಆಹಾರ ಉತ್ಪಾದÉ ಮಾಡಬಹುದು.
2. ಹೆಚ್ಚಿನ ಆದಾಯ
ಪ್ರತೀ ಘಟಕ ಪ್ರದೇಶದ ತೋಟಗಾರಿಕೆ ಬೆಳೆಯಿಂದ ಬರುವ ಆದಾಯ ಕೃಷಿಯಿಂದ ದೊರೆಯುವ ಆದಾಯಕ್ಕಿಂತ ಹೆಚ್ಚು. ಸುಸ್ಥಿತಿಯಲ್ಲಿ ಇಟ್ಟಿರುವ ಹಣ್ಣಿನ ತೋಟಗಳಾದ ಸೇಬು, ದ್ರಾಕ್ಷಿ, ದಾಳಿಂಬೆ ಮತ್ತು ಮೂಸಂಬಿಯಿಂದ ಸಾಧಾರಣವಾಗಿ ರೂ. 1,00,000 ನಿವ್ವಳ ಆದಾಯ ಸಿಗುತ್ತದೆ.
3. ಹೆಚ್ಚಿನ ಉದ್ಯೋಗವಕಾಶ
ವರ್ಷಪೂರ್ತಿ ಉದ್ಯೋಗ ದೊರೆಯುವುದರಿಂದ ಕಾರ್ಮಿಕರು ಕಠಿಣ ಪರಿಸ್ಥತಿಯನ್ನು ಸುಲಭವಾಗಿ ನಿಭಾಯಿಸಬಹುದು.
4. ಪಾಳು ಭೂಮಿಯ ಉಪಯೋಗ
ಪಾಳು ಭೂಮಿಯನ್ನು ಕೆಲವೊಂದು ಹಣ್ಣಿನ ಬೆಳೆಗಳಾದ ಮರಸೇಬು, ಸೀತಾಫಲ, ನೆಲ್ಲಿಕಾಯಿ, ಕರೋಂಡಾ ಇತ್ಯಾದಿಯನ್ನು ಬೆಳೆಯಲು ದಕ್ಷವಾಗಿ ಬಳಸಿಕೊಳ್ಳಬಹುದು.
5. ಕೈಗಾರಿಕೆಗಳಿಗೆ ಕಚ್ಛಾವಸ್ತುಗಳ ಪೂರೈಕೆ
ತೋಟಗಾರಿಕೆ ಉತ್ಪನ್ನಗಳು ಹಲವಾರು ಕೈಗಾರಿಕೆಗಳಿಗೆ ಬೇಕಾಗುವಂತಹ ಎಣ್ಣೆ ಬೀಜ, ಸಂಸ್ಕರಿಸಲು ಹಣ್ಣುಗಳನ್ನು ಒದಗಿಸುವುದರಿಂದ ಜನರಿಗೆ ಉದ್ಯೋಗ ಅವಕಾಶ ಹೆಚ್ಚುತ್ತದೆ.
6. ಪೌಷ್ಠಿಕಾಂಶ
ಒಬ್ಬ ಮನುಷ್ಯನು ವರ್ಷದ ಆಹಾರದಲ್ಲಿರುವ ಪೌಷ್ಟಿಕಾಂಶದ ಅವಶ್ಯಕತೆಯನ್ನು ಪೂರೈಸಲು 0.44 ಹೆಕ್ಟೇರ್ ಗೋಧಿ, ಅಥವಾ 0.03 ಹೆಕ್ಟೇರು ಬಾಳೆಹಣ್ಣು ಅಥವಾ 0.06 ಹೆಕ್ಟೇರ್ ಮಾವು ಉತ್ಪಾದನೆ ಮಾಡಬೇಕಾಗುತ್ತದೆ. ಗೋಧಿಕ್ಕಿಂತ 9 ಪಟ್ಟು ಅಧಿಕ ಶಕ್ತಿಯುತ ಆಹಾರ ಮಾವಿನ ಪ್ರತೀ ಘಟಕ ಪ್ರದೇಶದಲ್ಲಿ ಪಡೆಯಬಹುದು. ಹಣ್ಣು ಮತ್ತು ತರಕಾರಿ ಮಾನವನಿಗೆ ಬೇಕಾದ ಪ್ರಮುಖ ವಿಟಮಿನ್ ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ. ಹಣ್ಣಿನ ಸೇವನೆಯಿಂದ ಪೌಷ್ಟಿಕಾಂಶದ ಕೊರತೆಯಿಂದ ಉಂಟಾಗುವ ಹಲವಾರು ರೋಗಗಳನ್ನು ತಡೆಗಟ್ಟಬಹದು.
ಅಡಕ ಮೂಲ ಮಾನವನ ಆರೋಗ್ಯದ ಮೇಲೆ ಬೀರುವ ಪರಿಣಾಮ
ವಿಟಮಿನ್ ಸಿ (ಎಸ್ಕಾರ್‍ಬಿಕ್ ಆಮ್ಲ) ಕಿತ್ತಳೆ, ಸೀಬೆ, ಕಿವಿ, ಅನನಾಸ್, ಆಲೂಗೆಡ್ಡೆ, ಸ್ರ್ಟಾಬೆರಿ, ನೆಲ್ಲಿ. ಸ್ಕ್ವರ್ವಿ ರೋಗ ನಿರೋಧಕ, ಗಾಯ ಮಾಗುವಿಕೆ, ದೇಹ ನಿರೋಧಕ ಶಕ್ತಿ, ಹೃದ್ರೋಗ ನಿವಾರಣೆ.
ವಿಟಮಿನ್ ಎ (ಕ್ಯಾರೊಟೆನೊಯಿಡ್)್ಸ ಅಪ್ರಿಕೊಟ್, ಮಾವು, ನೆಕ್ಟಾರೈನ್, ಕಿತ್ತಳೆ, ಪಪ್ಪಾಯ, ಪೀಚ್, ಮತ್ತು ಅನನಾಸ್. ರಾತ್ರಿ ಕುರುಡುತನ, ಸೊರಾಸಿಸ್, ಹೃದಯದ ಕಾಯಿಲೆ, ಪಾಶ್ರ್ವವಾಯು ಮತ್ತು ಕಣ್ಣಿನ ತೊಂದರೆ ತಡೆಗಟ್ಟುತ್ತದೆ.
ವಿಟಮಿನ್ ಕೆ ಬಾದಾಮಿ, ಗೇರು ಬೀಜ, ಫಿಲ್ ಬೆರ್‍ಟ್ಸ್, ಮೆಕಡೆಮಿಯ, ಪೀನಟ್ಸ್ ಮತ್ತು ವಾಲ್‍ನಟ್. ರಕ್ತ ಹೆಪ್ಪುಗಟ್ಟುವ ಅಂಶಗಳನ್ನು ಉತ್ಪಾದಿಸುತ್ತದೆ.
ವಿಟಮಿನ್ ಇ (ಟೆಕೊಫೆರೊಲ್ಸ್) ಬಾದಾಮಿ, ಗೇರುಬೀಜ ಹೃದಯ ಸಂಬಂಧಿಕಾಯಿಲೆ, ಸಕ್ಕರೆ ಕಾಯಿಲೆ, ದಣಿವು, ಕ್ಯಾನ್ಸರ್ ತಡೆಗಟ್ಟುವಿಕೆ.
ಕ್ಯಾಲ್ಸಿಯಮ್ ಪಪ್ಪಾಯ, ಒಣದ್ರಾಕ್ಷಿ, ಕಿತ್ತಳೆ, ಬಾದಾಮಿ. ಸ್ನಾಯು ತೊಂದರೆ, ಮೂಳೆ, ಹಲ್ಲು ಮತ್ತು ರಕ್ತದೊತ್ತಡ ತೊದರೆಗಳ ತಡಗಟ್ಟುವಿಕೆ.
ಮೆಗ್ನೇಶಿಮ್ ಬಾಳೆಹಣ್ಣು , ಗೇರು ಬೀಜ ನರವ್ಯೂಹ, ಹಲ್ಲು, ರೋಗ ನಿರೋಧಕ ಶಕ್ತಿ.
ಪೊಟ್ಯಾಶಿಮ್ ಬಾಳೆ ಹಣ್ಣು, ಒಣಕಾಳು, ಅಪ್ರಿಕೊಟ್, ಪ್ರುನೆಸ್. ರಕ್ತದೊತ್ತಡ, ಪಾಶ್ರ್ವವಾಯು, ನಿರೋಧಕ ಶಕ್ತಿ.
ಹಣ್ಣಿನ ಬೆಳೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ಹಣ್ಣಿನ ತಲಾ ಲಭ್ಯತೆ ಉಪಯೋಗÀ ಭಾರತದಲ್ಲಿ ಬಹಳ ಕಡಿಮೆ. ಉದಾ; ವಾರ್ಷಿಕ ತಲಾ ಉಪಯೋಗ ಅಮೇರಿಕದಲ್ಲಿ 202 ಕೆ.ಜಿ, ಪಾಕಿಸ್ತಾನದಲ್ಲಿ 100 ಕೆ.ಜಿ ಇದ್ದರೆ ಭಾರತದಲ್ಲಿ ಇದು ಕೇವಲ 10 ಕೆ.ಜಿ ಇದೆ. ಕೃಷಿ ಚಟುವಟಿಕೆಯಲ್ಲಿ ಹಣ್ಣು ಬೆಳೆಯುವ ಪ್ರದೇಶ ಕಡಿಮೆ ಇರುವುದರಿಂದ ಹಣ್ಣಿನ ಬಳಕೆಯ ಪ್ರಮಾಣ ಕೂಡ ಕಡಿಮೆ. ಭಾರತ ಉತ್ಪಾದನೆ ಹೆಚ್ಚಿಸಿ ಹಣ್ಣಿನ ಲಭ್ಯತೆ ಮತ್ತು ಸಂಸ್ಕರಣೆಯಲ್ಲಿ ಸ್ವಾವಲಂಬಿಯಾಗಲು ಪ್ರಯತ್ನಿಸಬೇಕು. ನೀರಾವರಿ ಸೌಲಭ್ಯ ಹೆಚ್ಚಿಸಿದರೆ ಭವಿಷ್ಯದಲ್ಲಿ ಖಂಡಿತವಾಗಿಯೂ ಹಣ್ಣು ಬೆಳೆಯುವ ಪ್ರದೇಶವನ್ನು ವಿಸ್ತರಿಸಲು ಸಾಧ್ಯವಾಗುತ್ತದೆ.