ವಾರ್ಷಿಕ ಹೂಗಳು Annual Flowers

Reading Time: 7 minutes

ವಾರ್ಷಿಕ ಹೂಗಳು

ವಾರ್ಷಿಕ ಹೂಗಳು ತಮ್ಮ ಜೀವನ ಚಕ್ರವನ್ನು ಒಂದೇ ಋತುವಿನಲ್ಲಿ ಪೂರೈಸುತ್ತದೆ. ಕೆಲವೊಂದು ಬೇಗನೆ ಹೂ ಬಿಡುವ ಬಹುವಾರ್ಷಿಕ ಹೂಗಳನ್ನು ವಾರ್ಷಿಕದಂತೆ ಬೆಳೆದು ಋತುವಿನ ಅಂತ್ಯದಲ್ಲಿ ಕಿತ್ತುಹಾಕಲಾಗುತ್ತದೆ. ವಾರ್ಷಿಕ ಹೂಗಳು ಉದ್ಯಾನವನಕ್ಕೆ ಶೋಭೆಯನ್ನು ಕೊಡುತ್ತದೆ. ಬಗೆ ಬಗೆಯ ಬಣ್ಣಗಳಿಂದ ಕೂಡಿದ ಹಲವಾರು ವಿಧದ ವಾರ್ಷಿಕ ಹೂಗಳನ್ನು ನಿಶ್ಚಿತ ಋತುವಿನಲ್ಲಿ ಬೆಳೆಯಲ್ಪಡುತ್ತವೆ ಮತ್ತು ಇವುಗಳನ್ನು ಸಾಧಾರಣವಾಗಿ ಗುಂಪಾಗಿ ನೆಡುವುದರಿಂದ ಸುಂದರವಾಗಿ ಗೋಚರಿಸುತ್ತದೆ. ಹೂಗಳನ್ನು 1) ಚಳಿಗಾಲದ 2) ಬೇಸಿಗೆಗಾಲದ 3) ಮಳೆಗಾಲದ ಹೂಗಳೆಂದು 3 ವಿಭಾಗಗಳಾಗಿ ವಿಂಗಡಿಸಲಾಗಿದೆ.
ಆಯಾಯ ಋತುವಿಗೆ ಮತ್ತು ಸ್ಥಳಕ್ಕೆ ಹೊಂದಿಕೊಳ್ಳುವಂತಹ ಹೂವಿನ ಗಿಡ ನೆಡುವುದರಿಂದ ಹೆಚ್ಚಿನ ಯಶಸ್ಸು ಪಡೆಯಬಹುದು. ಗಿಡ ಆರಿಸುವ ಮೊದಲು ಸ್ಥಳವನ್ನು ವಿಶ್ಲೇಷಿಸಬೇಕು. ಉತ್ತಮವಾಗಿ ನೀರು ಬಸಿದು ಹೋಗದ ಮಣ್ಣಿನಲ್ಲಿ ಗಿಡ ಚೆನ್ನಾಗಿ ಬೆಳೆಯಲಾರದು. ಯಾವುದೇ ಪ್ರದೇಶಕ್ಕೆ ಗಿಡಗಳನ್ನು ಆಯ್ಕೆ ಮಾಡುವಾಗ ಅಲ್ಲಿ ದೊರೆಯುವ ಸೂರ್ಯನ ಬೆಳಕು, ವಾತಾವರಣದ ಉಷ್ಣತೆ, ಮರದ ಬೇರುಗಳಿಂದ ಪೋಷಕಾಂಶಕ್ಕಾಗಿರುವ ಪೈಪೋಟಿ, ನೀರು ಬಸಿದು ಹೋಗುವ ಮಣ್ಣಿನ ಗುಣ ಮತ್ತು ಗಾಳಿಯಾಡುವಿಕೆಯನ್ನು ಅರಿಯಬೇಕು. ಹೆಚ್ಚಿನ ವಾರ್ಷಿಕ ಹೂವಿನ ಗಿಡವನ್ನು ವಸಂತ ಋತುವಿನಲ್ಲಿ ನೆಡಲಾಗುತ್ತದೆ ಮತ್ತು ಅವು ಬೇಸಿಗೆಯುದ್ದಕ್ಕೂ ಹೂ ಬಿಟ್ಟು ನಶಿಸುತ್ತದೆ. ಚಳಿಗಾಲದ ವಾರ್ಷಿಕ ಹೂ ಗಿಡಗಳಾದ ಪೇನ್ಸಿ, ವಯೋಲ, ಹೂ ಬಿಡುವ ಕೋಸು ಮುಂತಾದುವುಗಳನ್ನು ಚಳಿಗಾಲದ ಪ್ರಾರಂಭದಲ್ಲಿ ನೆಟ್ಟು ಚಳಿಗಾಲ ಮತ್ತು ವಸಂತ ಋತುವಿನಲ್ಲಿ ಹೂಬಿಟ್ಟು ಬೇಸಿಗೆಯಲ್ಲಿ ನಶಿಸುತ್ತದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಪ್ರಾಕಾರಗಳು
ವಾರ್ಷಿಕ ಹೂಗಳು ಶೀತಲ ಹವಾಮಾನ ಮತ್ತು ಹಿಮಪಾತಕ್ಕೆ ಬೇರೆ ಬೇರೆ ನಿರೋಧಕ ಶಕ್ತಿ ಹೊಂದಿದೆ. ಗಟ್ಟಿಮುಟ್ಟಾದ ವಾರ್ಷಿಕ ಹೂವಿನ ಗಿಡ ಶೀತಲ ಹವಮಾನಕ್ಕೆ ನಿರೋಧಕ ಶಕ್ತಿ ಹೊಂದಿದೆ. ಸಾಧಾರಣ ಹಿಮಪಾತ ಮತ್ತು ಹೆಪ್ಪುಗಟ್ಟುವ ವಾತಾವರಣದಲ್ಲಿ ಬದುಕಬಲ್ಲವು. ಅರೆಗಡುಸಾದ ಗಿಡ ಶೀತಲ ತೇವಾಂಶದ ವಾತಾವರಣವನ್ನು ತಾಳಿಕೊಳ್ಳಬಲ್ಲವು. ಮಣ್ಣಿನಲ್ಲಿ ಬೆಚ್ಚನೆಯ ಉಷ್ಣಾಂಶ ಅವಶ್ಯವಿಲ್ಲದ್ದರಿಂದ ವಸಂತ ಋತುವಿನ ಪ್ರಾರಂಭದಲ್ಲಿ ಬೀಜ ಬಿತ್ತನೆ ಮಾಡಬಹುದು. ಮೆದು ವಾರ್ಷಿಕ ಹೂ ಬೆಚ್ಚನೆಯ ಉಷ್ಣವಲಯಕ್ಕೆ ಸೇರಿದ್ದು, ಶೀತ ಹವಾಮಾನಕ್ಕೆ ಹೊಂದಿಕೊಳ್ಳಲಾರದು ಮತ್ತು ಸುಲಭವಾಗಿ ಹಿಮಪಾತಕ್ಕೆ ತುತ್ತಾಗುತ್ತದೆ.
ಸಾಮಾನ್ಯವಾಗಿ ಬೆಳೆಯುವ ವಾರ್ಷಿಕ ಹೂಗಳ ಪಟ್ಟಿ ಕೆಳಗಿನಂತಿವೆ

 

ಕೋಷ್ಟಕ-1 ಸಾಮಾನ್ಯ ವಾರ್ಷಿಕ ಹೂಗಳು
ಚಾಲ್ತಿ ಹೆಸರು ಸಸ್ಯಶಾಸ್ತ್ರೀಯ ಹೆಸರು ಬಣ್ಣ
ರೈಲ್ವೆಕ್ರೀಪರ್ Ipomea lobata ಕೆಂಪು, ಬಿಳಿ, ಕಿತ್ತಳೆ, ಹಳದಿ
ಕೆಲುಂಡುಲಾ Calendula officinalis ಕಿತ್ತಳೆ, ಕೆಂಪು, ಹಳದಿ
ಡೈಯಾಂತಸ್ D.barbatus, ಬಿಳಿ, ಗುಲಾಬಿ, ಕೆಂಪು, ನೇರಳೆ
ಗೆಲಾರ್ಡಿಯಾ Gaillardia pulchella ಕೆಂಪು, ಹಳದಿ
ಗೋಂಫ್ರೀನಾ Gomphrena globosa ಕಿತ್ತಳೆ, ಗುಲಾಬಿ, ನೇರಳೆ, ಕೆಂಪು, ಬಿಳಿ, ಲೇವಂಡರ್
ಹೆಲಿಯೋಟ್ರೋಪ್ Heliotropium arborescens ನೀಲಿ
ಸಾಲ್ವಿಯ Silvia farinacea ನೀಲಿ, ಬಿಳಿ, ಕೆಂಪು
ಬಿಗೋನಿಯ Silvia farinacea ಕಿತ್ತಳೆ, ಗುಲಾಬಿ, ಕೆಂಪು, ಬಿಳಿ, ಹಳದಿ
ಹಿಯಾಸಿಂಥ್ ಬೀನ್ Begonia x tuberhybrida ಗುಲಾಬಿ-ನೇರಳೆ, ಬಿಳಿ, ತಿಳಿಗುಲಾಬಿ
ಮಾಂಡಿವಿಲ್ಲಾ Dolichos lablab ಗುಲಾಬಿ
ಮೂನ್ ಫ್ಲವರ್ Mandevilla x amabalis ಬಿಳಿ
ಮಾರ್ನಿಂಗ್ ಗ್ಲೋರಿ Ipomea alba ನೀಲಿ, ಗುಲಾಬಿ, ಲೇವಂಡರ್, ಬಿಳಿ
ನಾಸ್ಟುರಿಯಂ Ipomea purpurea ಹಳದಿ, ಕಿತ್ತಳೆ
ಸ್ಕಾರ್ಲೆಟ್ ಬೀನ್ Tropaeolum majus ಕೆಂಪು, ಬಿಳಿ
ಸ್ವೀಟ್ ಪೀ Phaseolus coccineus ಕೆಂಪು, ಹಳದಿ, ಪೀಚ್, ಬಿಳಿ, ಗುಲಾಬಿ, ಕೇಸರಿ
ಅಗೇರೆಟಮ್ Latyhrus odoratus ಕೆಂಪು, ಹಳದಿ, ಪೀಚ್, ಬಿಳಿ, ಗುಲಾಬಿ, ಕೇಸರಿ
ಬ್ಲಾಂಕೆಟ್ ಹೂ Ageratum houstonianum ಕೆಂಪು, ಹಳದಿ, ಪೀಚ್, ಬಿಳಿ, ಗುಲಾಬಿ, ಕೇಸರಿ
ಕ್ಯಾಲಿಫೋರ್ನಿಯ ಪೊಪ್ಪಿ Gaillardia pulchella ಕೆಂಪು, ಹಳದಿ, ಪೀಚ್, ಬಿಳಿ, ಗುಲಾಬಿ, ಕೇಸರಿ
ಕೋಳಿ ಜುಟ್ಟು ಹೂ Eschscholzia California ಕೆಂಪು, ಹಳದಿ, ಪೀಚ್, ಬಿಳಿ, ಗುಲಾಬಿ, ಕೇಸರಿ
ಕಾಸ್ಮೋಸ್ Celosia cristata ಕೆಂಪು, ಹಳದಿ, ಪೀಚ್, ಬಿಳಿ, ಗುಲಾಬಿ, ಕೇಸರಿ
ತಂಬಾಕಿನ ಹೂ Cosmos bipinnatus ಕೆಂಪು, ಹಳದಿ, ಪೀಚ್, ಬಿಳಿ, ಗುಲಾಬಿ, ಕೇಸರಿ
ಫಾಕ್ಸ್ ಗ್ಲೋವ್ Nicotiana alata ಕೆಂಪು, ಹಳದಿ, ಪೀಚ್, ಬಿಳಿ, ಗುಲಾಬಿ, ಕೇಸರಿ
ಜಿರೇನಿಯಮ್ Digitalis purpurea ಕೆಂಪು, ಹಳದಿ, ಪೀಚ್, ಬಿಳಿ, ಗುಲಾಬಿ, ಕೇಸರಿ,
ಗ್ಲೋಬ್ ಅಮರಾಂತ್ Pelargonium ಕೆಂಪು, ಹಳದಿ, ಪೀಚ್, ಬಿಳಿ, ಗುಲಾಬಿ, ಕೇಸರಿ
ಪೆರಿವಿಂಕಲ್ Gomphrena globosa ಕೆಂಪು, ಹಳದಿ, ಪೀಚ್, ಬಿಳಿ, ಗುಲಾಬಿ, ಕೇಸರಿ
ಚೆಂಡು ಹೂ Catharanthus roseus ಕೆಂಪು, ಹಳದಿ, ಪೀಚ್, ಬಿಳಿ, ಗುಲಾಬಿ, ಕೇಸರಿ
ಪೋರ್ಚ್‍ಲೇಕ Tagetes erecta ಕೆಂಪು, ಹಳದಿ, ಪೀಚ್, ಬಿಳಿ, ಗುಲಾಬಿ, ಕೇಸರಿ
ಪೆಟುನಿಯ Portulaca grandiflora ಕೆಂಪು, ಹಳದಿ, ಪೀಚ್, ಬಿಳಿ, ಗುಲಾಬಿ, ಕೇಸರಿ
ಸ್ನೇಪ್‍ಡ್ರೇಗನ್ Petunia x hybrid ಕೆಂಪು, ಹಳದಿ, ಪೀಚ್, ಬಿಳಿ, ಗುಲಾಬಿ, ಕೇಸರಿ
ಜೇಡರ ಹೂ Antirrhinum majus ಕೆಂಪು, ಹಳದಿ, ಪೀಚ್, ಬಿಳಿ, ಗುಲಾಬಿ, ಕೇಸರಿ
ವರ್ಬಿನ Cleome hasslerana ಕೆಂಪು, ಹಳದಿ, ಪೀಚ್, ಬಿಳಿ, ಗುಲಾಬಿ, ಕೇಸರಿ
ಜಿನ್ನಿಯ Verbela spp. and hybrids ಕೆಂಪು, ಹಳದಿ, ಪೀಚ್, ಬಿಳಿ
ಗುಲಾಬಿ, ಕೇಸರಿ

ವಾರ್ಷಿಕ ಮತ್ತು ದ್ವೈವಾರ್ಷಿಕ ಹೂವನ್ನು ಒಳಾಂಗಣದಲ್ಲಿ ನೇರವಾಗಿ ಬೀಜ ಬಿತ್ತನೆ ಮಾಡುವುದರ ಮೂಲಕ ಬೆಳೆಸಬಹುದು. ನೆಡುವುದಕ್ಕಿಂತ 8-10 ವಾರಗಳ ಮೊದಲೇ ಬೀಜ ಬಿತ್ತನೆ ಮಾಡಿರಬೇಕು. ನರ್ಸರಿಯಿಂದ ಗಿಡ ಕೀಳುವ ಮೊದಲು ನೀರುಣಿಸಿ ತಂಪಾದ ಅಥವಾ ಮೋಡದ ವಾತಾವರಣದಲ್ಲಿ ನಾಟಿ ಮಾಡಬೇಕು. ನೆಲೆಗೊಳ್ಳುವವರೆಗೆ ನೆಟ್ಟ ಗಿಡಗಳ ಬುಡಕ್ಕೆ ನೀರೊದಗಿಸಬೇಕು. ಪಾತಿಯ ಮಣ್ಣಿನ ರಸಸಾರ 5.5 ರಿಂದ 6.5 ರಷ್ಟಿರಬೇಕು. 100 ಅಡಿ ಚದರ ಪ್ರದೇಶದ ಪಾತಿಗಳಿಗೆ 10-10-10 ಪ್ರಮಾಣದ 1.5 ಕೆ.ಜಿ ರಾಸಾಯನಿಕ ಗೊಬ್ಬರವನ್ನು ಕೊಡಬೇಕು.

ನೀರಾವರಿ
ಕೆಲವೊಂದು ಹೂಗಿಡಗಳು ಸಾಧಾರಣ ಒಣ ಪರಿಸ್ಥಿತಿಯನ್ನು ತಾಳಿಕೊಳ್ಳಬಲ್ಲವಾದರೂ ಇನ್ನಿತರ ಹೂಗಡಗಳಿಗೆ ಮಣ್ಣಿನ ತೇವಾಂಶ ಅವಶ್ಯ. ಬೇಸಿಗೆಯಲ್ಲಿ ಉಷ್ಣತೆ ಅತೀ ಹೆಚ್ಚಾದರೆ ಹೂ ಬಿಡುವುದು ನಿಲ್ಲುತ್ತದೆ ಅಥವಾ ಕಡಿಮೆಯಾಗುತ್ತದೆ ಮತ್ತು ಇಂತ ಸಮಯದಲ್ಲಿ ಹೆಚ್ಚಿನ ನೀರು ಒದಗಿಸುವುದು ಅಗತ್ಯ.
ಕಳೆ ನಿರ್ವಹಣೆ
ಸಾಧಾರಣವಾಗಿ ಕಳೆ ಕೈಯಿಂದ ಕೀಳಲಾಗುತ್ತದೆ. ಗಿಡಗಳು ಬೆಳೆದಂತೆ ಬೇರುಗಳು ಹರಡಿಕೊಳ್ಳುತ್ತವೆ. ಕೊಚ್ಚುವುದರಿಂದ ಬೇರಿಗೆ ಹಾನಿಯಾಗುತ್ತದೆ. ಎಚ್ಚರಿಕೆಯಿಂದ ಆರಿಸಿದ ಕಳೆನಾಶಕದಿಂದ ಕಳೆ ನಿಯಂತ್ರಣ ಮಾಡಬಹುದು.

ಆಧಾರ
ಗಾಳಿ ಮತ್ತು ಮಳೆಯಿಂದ ರಕ್ಷಿಸಲು ವಾರ್ಷಿಕ ಹೂ ಗಿಡಗಳಿಗೆ ಆಧಾರ ಅಗತ್ಯ. ಗಿಡಗಳು ತಮ್ಮ ಗಾತ್ರದ 1/3 ರಷ್ಟು ಬೆಳೆದಾಗ ಆಧಾರ ಒದಗಿಸಬೇಕು. ಆಧಾರವಾಗಿ ತಂತಿಯ ಬಲೆ, ತಂತಿಯ ರಿಂಗ್, ಬಿದಿರು ಕಡ್ಡಿಗಳನ್ನು ಉಪಯೋಗಿಸಬೇಕು.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments