ಆಂಥೂರಿಯಂ Anthurium

Reading Time: 11 minutes

ಆಂಥೂರಿಯಂ

ಆಂಥೋರಿಯಂ ಉಷ್ಣ ವಲಯದ ಸುಂದರವಾದ ಹೂವಿನ ಬೆಳೆಯಾಗಿದ್ದು ಇದನ್ನು ಕತ್ತರಿಸಿದ ಹೂವು ಮತ್ತು ಅದರ ಆಕರ್ಷಕ ಅಗಲವಾದ ಎಲೆಗಳಿಗಾಗಿ ಬೆಳೆಯಲಾಗುತ್ತಿದೆ. ಆಂಥೋರಿಯಂ ಹೂವನ್ನು ಮತ್ತು ಅದರ ಎಲೆಗಳನ್ನು ಹೂದಾನಿಗಳಲ್ಲಿ ದೀರ್ಘ ಕಾಲದವರೆಗೆ ಆಕರ್ಷಕವಾಗಿ ಇರುವಂತೆ ಜೋಡಿಸಲು ಹಾಗು ಹೆಚ್ಚಿನ ಬೆಲೆಯ ಹೂ ಗುಚ್ಛಗಳನ್ನು ತಯಾರಿಸಲು ಕೂಡ ಉಪಯೋಗಿಸುತ್ತಾರೆ.
ಹೂವು ಮತ್ತು ಎಲೆಗೆ ಅಂತರರಾಷ್ಟ್ರೀಯ ಪುಷ್ಪ ಮಾರುಕಟ್ಟೆಯಲ್ಲಿ ಅಂದರೆ ಹಾಲೆಂಡ್, ಜಪಾನ್, ಅಮೇರಿಕಾ ಮುಂತಾದ ದೇಶಗಳಲ್ಲಿ ಬಾರಿ ಬೇಡಿಕೆ ಇದೆ. ಇದಲ್ಲದೆ ನಮ್ಮ ದೇಶದ ಪ್ರಮುಖ ನಗರಗಳಲ್ಲೂ ಕೂಡ ಆಂಥೋರಿಯಂ ಹೂವಿಗೆ ಅಧಿಕ ಬೇಡಿಕೆಯಿದೆ.
ಇದು ಬಹಳ ಅಕರ್ಷಕವಾದ ಹೂವು. ಈ ಹೂವಿನ ಒಂದು ಪ್ರಮುಖ ಗುಣವೆಂದರೆ ವರ್ಷವಿಡೀ ಹೂ ಬಿಡುವುದು ಮತ್ತು ಹೂದಾನಿಯಲ್ಲಿ ದೀರ್ಘಕಾಲದವರೆಗೆ (3-4 ವಾರಗಳವರೆಗೆ) ಕೆಡದೆ ಇರುವುದು. ಗಿಡಗಳು ನಯವಾದ ಹೊಳೆಯುವ ಮತ್ತು ವಿಶಾಲವಾದ ಎಲೆಗಳನ್ನು ಹೊಂದಿರುವುದರಿಂದ ಹೂಗಳನ್ನೊಳಗೊಂಡ ಇಡೀ ಸಸ್ಯವನ್ನು ಕುಂಡದಲ್ಲಿ ಒಳಾಂಗಣ ಅಲಂಕಾರಿಕ ಸಸ್ಯವಾಗಿ ಸೂಕ್ತವಾಗಿ ಬೆಳೆಸಲು ಸಾಧ್ಯ.
ಆಂಥೋರಿಯಂ ‘ಆರೇಸಿ’ ಕುಟುಂಬಕ್ಕೆ ಸೇರಿದ್ದು, ಇದರ ಮೂಲ ಸ್ಥಾನ ಮಧ್ಯ ದಕ್ಷಿಣ ಅಮೇರಿಕಾ ಮತ್ತು ಕೆರೇಬಿಯನ್ ದ್ವೀಪಗಳು. ಆಂಥೋರಿಯಂ ಎಂಬ ಪದವನ್ನು ಗ್ರೀಕ್ ಭಾಷೆಯಿಂದ ಆರಿಸಿಕೊಳ್ಳಲಾಗಿದೆ. ಇದರಲ್ಲಿ ಆಂತೋಸ್ (ಂಟಿಣhos) ಎಂದರೆ ಹೂವು ಮತ್ತು ಆರಾ (ಂuಡಿಚಿ) ಎಂದರೆ ಬಾಲ (ಖಿಚಿiಟ) ಎಂದರ್ಥ.
ಆಂಥೋರಿಯಂನ್ನು ಜಾಸ್ತಿ ಪ್ರಮಾಣದಲ್ಲಿ ಹಾಲೆಂಡ್, ಮೌರಿಷಿಯಸ್, ಫಿಲಿಪೈನ್ಸ್, ಶ್ರೀಲಂಕಾ, ಹವಾಯ್, ಥೈಲ್ಯಾಂಡ್ ಮತ್ತು ಸಿಂಗಾಪುರ ದೇಶಗಳಲ್ಲಿ ರಫ್ತಿಗಾಗಿಯೇ ಬೆಳೆಸುತ್ತಾರೆ.
ನಮ್ಮ ದೇಶದಲ್ಲಿ ರಾಷ್ಟ್ರ ‘ಪುಷ್ಪ’ ತಾವರೆ ಇದ್ದ ಹಾಗೆ ಆಂಥೋರಿಯಂ ಮೌರಿಷಿಯಸ್ ದೇಶದ ರಾಷ್ಟ್ರ ಪುಷ್ಪ. ನಮ್ಮ ದೇಶದಲ್ಲಿ ಆಂಥೋರಿಯಂನ್ನು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಬೆಳೆಯುತ್ತಾರೆ. ನಮ್ಮ ರಾಜ್ಯದಲ್ಲಿ ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಮಂಗಳೂರು ಮತ್ತು ಕಾರ್ಕಳದಲ್ಲಿ ಇದರ ವ್ಯವಸಾಯ ಹೆಚ್ಚಾಗುತ್ತಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ತಳಿಗಳು
ಆಂಥೋರಿಯ್‍ಂನಲ್ಲಿ ಮುಖ್ಯವಾಗಿ ಎರಡು ಪ್ರಭೇದಗಳಿವೆ. ಅವು ಆಂಥೋರಿಯಂ ಆಂಡ್ರಿಯಾನಂ (ಂಟಿಣhuಡಿium ಂಟಿಜಡಿiಚಿಟಿum) ಮತ್ತು ಆಂಥೋರಿಯಂ ಸೆರ್ಜೆರಿಯಾನಂ (ಂಟಿಣhuಡಿium Sಛಿheಡಿzeಡಿiಚಿಟಿum) ಆಂಥೋರಿಯಂ ಆಂಡ್ರಿಯಾನಂ ವಾಣಿಜ್ಯ ಉದ್ಧೇಶಕ್ಕಾಗಿ ಬೆಳೆಯಲಾಗುತ್ತಿರುವ ತಳಿಗಳಲ್ಲಿ ವೈಡ್, ಪಿಂಕ್, ಅರೆಂಜ್, ಲೇಡಿಜಾನ್, ಜಾನ್ನನ್ ಪಿಂಕ್, ಹನಿಮೂನ್ ರೆಡ್, ಅಗ್ನಿ ಹೋತ್ರಿ, ಕಾಲಿಪಾಂಗ್ ಆರೆಂಜ್, ಎಂಡೋರಿ, ಚಿಲಿರೆಡ್, ಪ್ರಿಂಕಲ್ ಹೆಡ್ ಮತ್ತು ಆರೆಂಜ್ ಗ್ಲೋರಿ ಮುಖ್ಯವಾದವುಗಳು. ಅಪರೂಪದ ತಳಿಗಳಾದ ಎರಡು ಅಥವಾ ಮೂರು ಬಣ್ಣಗಳನ್ನು ಹೊಂದಿರುವ ಒಬಾಕಿ ಮತ್ತು ಸಣ್ಣ ಗಾತ್ರದ ಮೀನಿಯೇಚರ್ ಮತ್ತು ಡಚ್ಚರು ವೃದ್ಧಿಪಡಿಸಿರುವ ಹೆಡೆಗಳು ಒಂದರ ಮೇಲೊಂದು ಕುಳಿತಂತೆ ತೋರುವ ಟ್ವೈನ್ (ಖಿತಿiಟಿe) ಮುಂತಾದವುಗಳಿಗೆ ತುಂಬಾ ಬೇಡಿಕೆ ಇದೆ. ಅಂತರರಾಷ್ಟ್ರೀಯ ಮಾರುಕಟ್ಟೆ ಅಥವಾ ದೇಶದ ಪ್ರಮುಖ ನಗರಗಳಲ್ಲಿ ಅಧಿಕ ಬೆಲೆ ಪಡೆಯಲು ಹೂವು (ಹೆಡೆ-Sಠಿಚಿಣhe) ಹೃದಯದ ಆಕಾರದಲ್ಲಿದ್ದು, ಉದ್ದವಾದ ಮತ್ತು ದೃಢವಾದ (30-45 ಸೆಂ.ಮೀ) ತೊಟ್ಟನ್ನು ಹೊಂದಿರಬೇಕು. ಹೂವಿನ ಮೇಲೆ ನವಿರಾಗಿರದೆ ಉಬ್ಬು ತಗ್ಗುಗಳಿಂದ ಕೂಡಿರಬೇಕು. ಅದರ ಮೇಲೆ ಬಿದ್ದ ಬೆಳಕು ಪ್ರತಿಫಲಿಸಿದಲ್ಲಿ ಹೂವು ಹೆಚ್ಚು ಅಕರ್ಷಕವಾಗಿ ಕಾಣುವುದು. ಸಾಧಾರಣವಾಗಿ ಕೆಂಪು ಮತ್ತು ಕಿತ್ತಳೆ ಬಣ್ಣದ ಹೂವುಗಳಿಗೆ ಬೇಡಿಕೆ ಜಾಸ್ತಿ. ಸ್ಪೇಡಿಕ್ಸ್ (ಗಣಿಕೆ) ಚಿಕ್ಕದಾಗಿದ್ದು 30 ರಿಂದ 450 ಯವರೆಗೆ ಬಾಗಿರಬೇಕು. ಇದು ಪ್ಯಾಕಿಂಗ್ ಮಾಡಲು ಅನುಕೂಲವಾಗಿರುವುದು.

ಬೇಸಾಯ ಕ್ರಮಗಳು
ಆಂಥೋರಿಯಂ ಸಾಮಾನ್ಯವಾಗಿ ಕುಂಡಗಳಲ್ಲಿ ಆಥವಾ ಮಡಿಗಳಲ್ಲಿ ಬೆಳೆಯಬಹುದು. ಇದಕ್ಕೆ ಶೇ. 70-80 ರಷ್ಟು ನೆರಳು ತುಂಬಾ ಅಗತ್ಯ ಮತ್ತು ಆರ್ದ್ರತೆ ಶೇ. 70-75 ಇರಲೇಬೇಕು. ನೆಟ್ ಅಥವಾ ಮರದ ಮೂಲಕ ನೆರಳನ್ನು ಒದಗಿಸಬಹುದು.
ಸಸ್ಯ ಬೆಳೆಯುವ ಮಾಧ್ಯಮವು ನೀರು ಚೆನ್ನಾಗಿ ಬಸಿದು ಹೋಗುವಂತಿರಬೇಕು ಮತ್ತು ಮೃದುವಾಗಿರಬೇಕು. ಮಾಧ್ಯಮವು ಸಡಿಲವಾಗಿರುವಂತೆ ಮಾಡಲು ಒಡೆದ ಇಟ್ಟಿಗೆ ಚೂರುಗಳನ್ನು ಬಳಸಿ ಮಡಿಗಳನ್ನು ತಯಾರಿಸಬೇಕು. ಇಟ್ಟಿಗೆ ಚೂರುಗಳ ಮೇಲೆ ತೆಂಗಿನ ನಾರಿನ ತುಂಡುಗಳನ್ನು ಅಥವಾ ಪುಡಿ ಮಾಡಿದ ಭತ್ತದ ಹೊಟ್ಟು ಇದ್ದಿಲಿನೊಂದಿಗೆ ಸೇರಿಸಬೇಕು. ಸ್ವಲ್ಪ ಒರಟಾದ ಮರಳು, ಒಣಗಿದ ಎಲೆಗಳು ಮತ್ತು ಮರದ ಸಿಪ್ಪೆ, ಕಬ್ಬಿನ ಬಿಲ್ಲೆ ಮುಂತಾದವುಗಳನ್ನು ಉಪಯೋಗಿಸಬೇಕು ಮತ್ತು ಒಳ್ಳೆಯ ಕೊಳೆತ ಕೊಟ್ಟಿಗೆ ಗೊಬ್ಬರವನ್ನು ಮಿಶ್ರ ಮಾಡಿಕೊಳ್ಳಬೇಕು. ಈ ಬೆಳೆಗೆ ಮಣ್ಣಿನ ರಸ ಸಾರ ಸುಮಾರು 5.5 ರಿಂದ 6.5 ರಷ್ಟಿರಬೇಕು.
ಒಂದು ಮೀಟರ್ ಅಗಲ ಮತ್ತು 30 ಸೆ.ಮಿ. ಆಳವಾದ ಕಾಲುವೆಗಳನ್ನು ತೆಗೆದು ಬೆಳವಣಿಗೆಯ ಮಾದ್ಯಮವನ್ನು ತುಂಬಬೇಕು. ಗಿಡದಿಂದ ಗಿಡಕ್ಕೆ ಸುಮಾರು 35 ರಿಂದ 40 ಸೆ. ಮೀ. ಹಾಗೂ ಸಾಲಿನಿಂದ ಸಾಲಿಗೆ 45 ಸೆ.ಮೀ. ಅಂತರವಿಟ್ಟು ನಾಟಿ ಮಾಡಿದರೆ ಒಂದು ಹೆಕ್ಟೇರ್ ಪ್ರದೇಶಕ್ಕೆ ಸುಮಾರು 30,000 ಸಸ್ಯಗಳು ಬೇಕಾಗುತ್ತದೆ. ಈ ಗಿಡಗಳು ನೇರವಾಗಿ ನಿಲ್ಲುವಂತೆ ಮಾಡಲು ಆಧಾರವನ್ನು ಕೊಡುವುದು ಸೂಕ್ತ. ಆಂಥೋರಿಯಂ ಬೆಳೆಯಲು ಕುಂಡಗಳನ್ನು ಉಪಯೋಗಿಸಬಹುದು. ಸುಮಾರು 9-12 ಅಂಗುಲ ವ್ಯಾಸವಿರುವ ಕುಂಡಗಳು ಅನುಕೂಲಕರ.
ಆಂಥೋರಿಯಂ ಆಂಡ್ರೀಯಾನಂ ಉಷ್ಣವಲಯದ ಸಸ್ಯ, ಸಾಧಾರಣವಾಗಿ ಹಗಲಿನ ಉಷ್ಣಾಂಶ 180 ಸೆ. ನಿಂದ 280 ಸೆ. ಮತ್ತು ರಾತ್ರಿಯ ಉಷ್ಣಾಂಶ 22 ಡಿಗ್ರಿ ಸೆ. ಹಾಗು ಆದ್ರ್ರತೆಯು ಶೇ. 70 ರಿಂದ 75 ರಷ್ಟು ಇರಬೇಕು.
ಆಂಥೋರಿಯಂ ನೆರಳು ಬಯಸುವ ಸಸ್ಯವಾಗಿದ್ದು. ಉತ್ತಮ ಗುಣಮಟ್ಟದ ಹೂವನ್ನು ಪಡೆಯಬೇಕಾದರೆ ಈ ಬೆಳೆಗೆ ಶೇ. 70 ರಿಂದ 75 ರಷ್ಟು ನೆರಳಿರಬೇಕು. ನೆರಳನ್ನು ಪಡೆಯಲು ಪ್ಲಾಸ್ಟಿಕ್ (Poಟಥಿಠಿಡಿoಠಿಥಿಟeಟಿe) ಅಥವಾ ಪಾಲಿಥಿನ್ ನೆರಳು ಬಲೆಗಳನ್ನು ಉಪಯೋಗಿಸಬಹುದು.
ಆಂಥೋರಿಯಂ ಸಸ್ಯಗಳಿಗೆ ನಿಯಮಿತವಾಗಿ ನೀರನ್ನು ಒದಗಿಸಬೇಕು. ಈ ಬೆಳೆಗೆ ಹನಿ ನೀರಾವರಿ ಸೂಕ್ತ ಹಾಗೂ ಸೂಕ್ತ ಆದ್ರ್ರತೆಯನ್ನು ಕಾಪಾಡಲು ನಿಗದಿತ ಸಮಯದಲ್ಲಿ ಮಂಜು ನೀರಾವರಿಯನ್ನು ಅಳವಡಿಸಬೇಕು.
ಹೂವಿನ ಉತ್ಪಾದನೆ ನಾಟಿ ಮಾಡಿದ 1-1/2 ವರ್ಷದಿಂದ ಪ್ರಾರಂಭವಾಗುತ್ತದೆ. 3 ರಿಂದ 5 ಆರೋಗ್ಯವಾದ ಎಲೆಗಳನ್ನು ಉಳಿಸಿಕೊಂಡು ಹಳೆಯ ಎಲೆಗಳನ್ನು ಕ್ರಮಬದ್ಧವಾಗಿ ಕತ್ತರಿಸಿ ತೆಗೆಯಬೇಕು. ಇದರಿಂದ ಸಸ್ಯಗಳು ಆರೋಗ್ಯವಾಗಿ ಬೆಳೆಯುವುದಲ್ಲದೆ ಉತ್ಪಾದಕತೆಯನ್ನು (ಇಳುವರಿ) ಹೆಚ್ಚಿಸಬಹುದು.
ಪೋಷಕಾಂಶಗಳಾದ ಸಾರಜನಕ (1750 ಕಿ.ಗ್ರಾಂ. ಆಮೋನಿಯಂ ಸಲ್ಫೇಟ್) 150 ಕಿ.ಗ್ರಾಂ. ರಂಜಕ (940 ಕಿ.ಗ್ರಾಂ. ಸೂಪರ್ ಫಾಸ್ಪೇಟ್) ಮತ್ತು 100 ಕಿ.ಗ್ರಾಂ. ಪೊಟ್ಯಾಷ್ (1660 ಕಿ.ಗ್ರಾಂ. ಮ್ಯೂರಿಯೇಟ್ ಆಫ್ ಪೊಟ್ಯಾಷ್) ಅನ್ನು ಪ್ರತಿ ವರ್ಷ ಒಂದು ಹೆಕ್ಟೇರ್ ಪ್ರದೇಶಕ್ಕೆ ಎರಡು ತಿಂಗಳಿಗೊಮ್ಮೆ ಸಮ ಪ್ರಮಾಣದಲ್ಲಿ ಕೊಡಬೇಕು. ಕುಂಡಗಳಲ್ಲಿ ಬೆಳೆದ ಗಿಡಗಳಾದರೆ 17:17:17 ಸಂಯುಕ್ತ ಗೊಬ್ಬರವನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ತಿಂಗಳಿಗೊಮ್ಮೆ ಪ್ರತಿ ಕುಂಡಗಳಿಗೆ ಕೊಡುವುದು ಒಳ್ಳೆಯದು.
ಸುಣ್ಣದ ಕೊರತೆ ಕಂಡು ಬಂದಲ್ಲಿ ಹೂವಿನ ಸ್ಪೇಥ್‍ನ (ಹೆಡೆ) ಬಣ್ಣ ಕುಂದುತ್ತದೆ ಮತ್ತು ಸ್ವಲ್ಪ ಬಿಳಿಯ ಬಣ್ಣಕ್ಕೆ ತಿರುಗುತ್ತದೆ. ಇದನ್ನು ನಿವಾರಿಸಲು 500 ಕಿ.ಗ್ರಾಂ. ಸುಣ್ಣವನ್ನು ಪ್ರತಿ ವರ್ಷ ಒಂದು ಹೆಕ್ಟೇರ್ ಪ್ರದೇಶಕ್ಕೆ ಬಳಸಬೇಕು. ನೀರಿನಲ್ಲಿ ನೆನಸಿ ಹದ ಮಾಡಿದ ಬೇವಿನ ಹಿಂಡಿ ಮತ್ತು ಕಡಲೆ ಹಿಂಡಿ ಮಿಶ್ರಣವನ್ನು ತೆಳ್ಳಗೆ ಮಾಡಿ ತಿಂಗಳಿಗೊಮ್ಮೆ ಕೊಡುವುದು ಅಗತ್ಯ.

ಸಸ್ಯಾಭಿವೃದ್ಧಿ
ಆಂಥೋರಿಯಂನ್ನು ಬೀಜ, ನಿರ್ಲಿಂಗ ಮತ್ತು ಅಂಗಾಂಶ ಕೃಷಿ (ಖಿissue ಅuಟಣuಡಿe) ವಿಧಾನಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು. ಆದರೆ ಬೀಜಗಳನ್ನು ಉತ್ಪಾದಿಸಬೇಕಾದರೆ ಆಂಥೋರಿಯಂನ್ನು ಕೃತಕವಾಗಿ ಪರಾಗಸ್ಪರ್ಶ ಮಾಡಬೇಕಾಗುತ್ತದೆ ಮತ್ತು ಬೀಜದಿಂದ ವೃದ್ಧಿಗೊಳಿಸಿದ ಗಿಡಗಳು ಹೂವು ಬಿಡಲು 3 ವರ್ಷ ಬೇಕಾಗುತ್ತದೆ. ನಿರ್ಲಿಂಗ ಪದ್ಧತಿ ಆಂಥೋರಿಯಂ ಸಸ್ಯಾಭಿವೃದ್ಧಿಗೆ ಸೂಕ್ತ ಮತ್ತು ಜನಪ್ರಿಯ.
ಹಳೆ ಸಸಿಗಳ (4-5 ವರ್ಷ) ಮೇಲ್ಭಾಗವನ್ನು ಎಲೆಗಳು ಮತ್ತು ಮೇಲಿರುವ ಬೇರುಗಳ ಜೊತೆಗೆ ಕತ್ತರಿಸಿ ನಾಟಿ ಮಾಡಬಹುದು. ಬಲಿತ ಸಸಿಗಳಿಂದ ಬರುವ ಮರಿಗಳನ್ನು (Suಛಿಞeಡಿs) ಹಲವು ಬೇರುಗಳ ಜೊತೆಗೆ ಕಿತ್ತು ನಾಟಿ ಮಾಡಬಹುದು. ಮೆಲ್ಬಾಗವನ್ನು ಕತ್ತರಿಸಿದ ಮೇಲೆ ಉಳಿದ ಕಾಂಡದ ಭಾಗವನ್ನು ಜಾಗೃತೆಯಾಗಿ ಒಂದು ಅಥವಾ ಎರಡು ಕಣ್ಣುಗಳಿರುವಂತೆ ಕತ್ತರಿಸಿ ತೇವವಿರುವ ಮರಳಿನಲ್ಲಿ ನಾಟಿ ಮಾಡಿ ವೃದ್ಧಿಪಡಿಸಬಹುದು. ಅಂಗಾಂಶ ಕೃಷಿ (ಖಿissue ಅuಟಣuಡಿe) ಯಿಂದ ಸಾವಿರಾರು ಸಸಿಗಳನ್ನು ಕಡಿಮೆ ಸಮಯದಲ್ಲಿ ಗುಣಮಟ್ಟದ ಸಸಿಗಳನ್ನು ಪಡೆಯಬಹುದು.

ಕೀಟ ಹಾಗೂ ರೋಗಗಳು
ಆಂಥೋರಿಯಂ ಬೆಳೆಯನ್ನು ಬಾಧಿಸುವ ರೋಗಗಳಲ್ಲಿ 1) ಎಲೆ ಚುಕ್ಕೆ ರೋಗ ಪ್ರಮುಖವಾದುದು. ಈ ರೋಗವು ಕೊಲ್ಲೇಡೋ ಟ್ರೈಕಂ ಎಂಬ ಶೀಲಿಂದ್ರದಿಂದ ಬರುವ ರೋಗ. ಈ ರೋಗಕ್ಕೆ ತುತ್ತಾದ ಎಲೆ ಮತ್ತು ಸ್ಪೇಡಿಕ್ಸ್‍ನ ಮೇಲೆ ಪ್ರಾರಂಭದಲ್ಲಿ ದುಂಡಾದ ಕಪ್ಪು ಚುಕ್ಕೆ ಕಾಣಿಸಿಕೊಂಡು ನಂತರ ವಿಸ್ತಾರಗೊಂಡು ಎಲೆ ಮತ್ತು ಹೂವು ಒಣಗುತ್ತದೆ.
2) ಬ್ಯಾಕ್ಟೀರಿಯ ಅಂಗಮಾರಿ ರೋಗ (ಃಚಿಛಿಣeಡಿiಚಿಟ ಃಟighಣ) ಈ ರೋಗವು ಕ್ಷಾಂತೋಮೊನಸ್ (ಘಿಚಿಟಿಣhomಚಿಟಿಚಿs) ಎಂಬ ರೋಗಾಣುವಿನಿಂದ ಬರುತ್ತದೆ. ಬಲಿತ ಎಲೆಗಳ ಮೇಲೆ ನೀರು ತುಂಬಿದ ಚುಕ್ಕೆಗಳನ್ನು ಹಳದಿ ಬಣ್ಣ ಸುತ್ತುವರಿದಿರುತ್ತದೆ ನಂತರ ಎಲೆಗಳು ಉದುರಿ ಹೋಗುತ್ತವೆ.
ಎಲೆಚುಕ್ಕೆ ರೋಗ ಮತ್ತು ಅಂಗಮಾರಿ ರೋಗಗಳ ನಿಯಂತ್ರಣಕ್ಕೆ ಕ್ರಮಬದ್ಧವಾಗಿ ಶೇ. 0.3 ರ (3 ಮಿ.ಲಿ./1 ಲೀಟರ್) ಡೈಥೇನ್ ಎಂ. 45 ಅಥವಾ ಶೇ. 01. ರ (1 ಗ್ರಾಂ-1.5 ಗ್ರಾಂ/ಲೀಟರ್) ಬ್ಯಾವಿಸ್ಟೇನ್ ಸಿಂಪಡಣೆ ಮಾಡಬೇಕು. ಹೆಚ್ಚು ರೋಗಕ್ಕೆ ತುತ್ತಾದ ಸಸಿಗಳನ್ನು ಕಿತ್ತು ನಾಶಪಡಿಸಬೇಕು. ರೋಗ ಪೀಡಿತ ಸಸಿಗಳನ್ನು ಕತ್ತರಿಸಲು ಉಪಯೋಗಿಸಿದ ಬ್ಲೇಡ್ ಚಾಕುಗಳನ್ನು ಆರೋಗ್ಯವಂತ ಸಸಿಗಳನ್ನು ಕತ್ತರಿಸಲು ಉಪಯೋಗಿಸಬಾರದು.
ಬೇರು ಕೊಳೆಯುವ ರೋಗಕ್ಕೆ ಪೈಥಿಯಂ (Phಥಿಣhium) ಮತ್ತು ಫೈಟಾಪ್‍ತೇರಾ (Phಥಿಣoಠಿಣhoಡಿಚಿ) ರೋಗಾಣುಗಳ ಕಾರಣವಾಗಿದೆ. ಇದರ ನಿಯಂತ್ರಣಕ್ಕೆ ಶೇ. 0.2 ರ (2 ಗ್ರಾಂ/ಲೀಟರ್) ಕ್ಯಾಪ್ಟಾನ್ ಮಿಶ್ರಣವನ್ನು ಗಿಡದ ಸುತ್ತಲೂ ಸುರಿಯಬೇಕು ಅಥವಾ ಬೋರ್ಡೋ (ಃoಡಿಜeಚಿux) ಶೆ. 1 ದ್ರಾವಣವನ್ನು ಕೂಡ ಉಪಗೋಗಿಸಬಹುದು.
ನಂಜಾಣುವಿನಿಂದ (ಗಿiಡಿus) ಎಲೆಗಳು ವಿಕಾರವಾಗುತ್ತದೆ. ಅಲ್ಲದೇ ಸಸ್ಯದ ಬೆಳವಣಿಗೆ ಸಹ ಕುಂಠಿತವಾಗಿ ಸ್ಪೇತ್‍ನ ಆಕಾರ ಬದಲಾಗುತ್ತದೆ. ರೋಗ ಪೀಡಿತ ಗಿಡಗಳನ್ನು ಕಿತ್ತು ನಾಶ ಮಾಡುವುದರಿಂದ ನಂಜಾಣು ರೋಗಗಳನ್ನು ನಿಯಂತ್ರಿಸಬಹುದು.
ಸಸ್ಯ ಹೇನು, ಹಿಟ್ಟಿನ ತಿಗಣೆ ಮತ್ತು ಶಲ್ಯ ಕೀಡಗಳು ರಸ ಹೀರಿ ಸಸ್ಯ ಬೆಳವಣಿಗೆ ಕುಂಠಿತಗೊಳಿಸಿ, ಎಲೆಗಳು ಮದುಡಿಕೊಳ್ಳುವಂತೆ ಮಾಡುತ್ತವೆ. ಈ ಕೀಟಗಳನ್ನು ನಿಯಂತ್ರಿಸಲು ಶೇ. 0.02 ಕೆಲಥೇನ್ 0.5 ಮೀ/ಲೀಟರ್ ಮಿಶ್ರಣವನ್ನು ಸಿಂಪಡಿಸಬೇಕು.
ಕೆಲವು ಹುಳುಗಳು ಬೇರಿನ ತುದಿಗಳನ್ನು ಕತ್ತರಿಸುವುದಲ್ಲದೆ ಹೊಸ ಚಿಗುರು ಎಲೆಗಳನ್ನು ಕತ್ತರಿಸಿ ತಿನ್ನುತ್ತವೆ. ಇವುಗಳನ್ನು ಸಂಜೆ ಹೊತ್ತಿನಲ್ಲಿ ಹೆಕ್ಕಿ ನಾಶಮಾಡುವುದು ಒಳ್ಳೆಯದು.

ಇಳುವರಿ
ಅನುಕೂಲಕರ ಪರಿಸ್ಥಿತಿಯಲ್ಲಿ ಬಲಿತ ಒಂದು ಗಿಡದಿಂದ ಸುಮಾರು 5-8 ಹೂವುಗಳನ್ನು ಒಂದು ವರ್ಷದಲ್ಲಿ ಪಡೆಯಬಹುದು. ಅಂದರೆ ಒಂದು ಹೆಕ್ಟೇರ್ ಪ್ರದೇಶದಲ್ಲಿ 30,000 ಗಿಡಗಳಿಂದ (45 ಸೆ.ಮೀ 45 ಸೆ.ಮೀ) ಸುಮಾರು 1,50,000 ರಿಂದ 2,00,000 ಹೂಗಳನ್ನು ಪಡೆಯಬಹುದು. ಒಂದು ಹೂವಿಗೆ ರೂ. 5 ರಂತೆ ಮಾರಿದರೆ ವಾರ್ಷಿಕ ಸುಮಾರು ರೂ.10 ಲಕ್ಷ ಆದಾಯ ಪಡೆಯಬಹುದು.
ಕತ್ತರಿಸಿದ ತಾಜಾ ಹೂಗಳನ್ನು ಸಣ್ಣ, ಮಧ್ಯಮ, ದೊಡ್ಡದು ಮತ್ತು ಅತಿ ದೊಡ್ಡದು ಎಂಬು ನಾಲ್ಕು ಗುಂಪುಗಳಾಗಿ ವರ್ಗೀಕರಿಸುತ್ತಾರೆ. ಅತಿ ದೊಡ್ಡ (> 6”) ಹೂಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ದೊರೆಯುತ್ತದೆ. ಆಂಥೋರಿಯಂ ಹೂವಿನ ಗುಣಮಟ್ಟ ಆಧರಿಸಿ ರೂ. 8 ರಿಂದ 40 ರವರೆಗೆ ದರ ಲಭ್ಯವಿದೆ. ಎಲೆ ರೂ. 3 ಕ್ಕೆ ಮೇಲ್ಪಟ್ಟು ಮಾರಾಟವಾಗುತ್ತದೆ. ಜಪಾನ್ ದೇಶದಲ್ಲಂತೂ ಇದರ ಎಲೆಗಳಿಗೆ ಭಾರೀ ಬೇಡಿಕೆ ಇದೆ. ಹೂ ಬಿಡುವ ಗಿಡಕ್ಕೆ ರೂ. 100 ರಿಂದ ರೂ. 2000 ದವರೆಗೆ ಅಧಿಕ ದರ ದೊರೆಯುತ್ತದೆ.
ಆಂಥೋರಿಯಂ ಬೆಳೆಗೆ ರಾಷ್ಟ್ರೀಯ ತೋಟಗಾರಿಕೆ ಮಂಡಳಿ ವತಿಯಿಂದ ಶೇ. 20 ರಷ್ಟು ಸಹಾಯ ಧನವನ್ನು ನೀಡುವ ಯೋಜನೆಯಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments