ವೀರರಾಜೇಂದ್ರಪೇಟೆಯ ಇತಿಹಾಸ ಪ್ರಸಿದ್ದ ಗೌರಿ-ಗಣೇಶೋತ್ಸವ-2022
ತಾರೀಖು: 31-08-2022ನೇ ಬುಧವಾರ ಪೂರ್ವಾಹ್ನ 10.30ಗಂಟೆಗೆ ಶ್ರೀ ಗಣಪತಿ ಉತ್ಸವ ಮೂರ್ತಿ ಪ್ರತಿಷ್ಠಾಪನಾಪೂರ್ವಕ ಪ್ರಾರಂಭವಾಗಿ ತಾರೀಖು: 10-09-2022ನೇ ಶನಿವಾರ ವಿಸರ್ಜನಾಪರ್ಯಂತ ಜರುಗಲಿದೆ. ಸರ್ವರೂ ಬಂಧು ಮಿತ್ರರೊಡಗೂಡಿ ವಿರಾಜಪೇಟೆ ಗಣೇಶೊತ್ಸವಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ನಮ್ಮೆಲ್ಲರ ಅಪೇಕ್ಷೆ.
ಶ್ರೀ ಗಣಪತಿ ದೇವಸ್ಥಾನ
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ವಿರಾಜಪೇಟೆ – 571218, ಕೊಡಗು.
ಸುಮಾರು 1855ರ ಇಸವಿಯ ಆಸು ಪಾಸಿನಲ್ಲಿ ವಿರಾಜಪೇಟೆ ಪಟ್ಟಣದ ಹೃದಯ ಭಾಗದಲ್ಲಿ ಶ್ರೀ ಗಣಪತಿ ಗುಡಿಯನ್ನು ನಿರ್ಮಿಸಲಾಗಿದೆ ಎಂದು ಅಂದಾಜಿಸಲಾಗಿದೆ.
1855 ಕ್ಕಿಂತಲೂ ಕೆಲವೊಂದು ವರ್ಷಗಳ ಹಿಂದೆ ವ್ಯಾಪಾರದ ನಿಮಿತ್ತ ತಮಿಳುನಾಡಿನ ತಂಜಾವೂರಿನಿಂದ ಕೊಡಗಿನ ವೀರರಾಜೇಂದ್ರ ಪೇಟೆಗೆ ಬಂದಂತಹ ಶ್ರೀಯುತ ತಿರುಚಾನಪಳ್ಳಿ ರಾಮಸ್ವಾಮಿ ಪಿಳ್ಳೈ ಮತ್ತು ಶ್ರೀಮತಿ ನಾಗಮ್ಮ ದಂಪತಿಗಳಿಗೆ ಆದ ದೈವ ಪ್ರೇರಣೆಯಿಂದ ಈ ಸ್ಥಳದಲ್ಲಿ ಸುಮಾರು 1855ರ ಅಂದಾಜಿಗೆ ಶ್ರೀ ಗಣಪತಿ ದೇವರ ಗುಡಿ ನಿರ್ಮಿಸಿದರು ಎಂದು ಕೆಲವೊಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ನಂತರದ ದಿನಗಳಲ್ಲಿ ಅವರು ಮತ್ತು ಅವರ ಸಂಸಾರದವರು ಈ ದೇವಾಲಯವನ್ನು ಅಭಿವೃದ್ಧಿ ಪಡಿಸುತ್ತಾ ಪೌಳಿ ಇತ್ಯಾದಿಗಳನ್ನು ಕಟ್ಟಿಸಿದರು. 20ನೇ ಶತಮಾನದ ಆದಿ ಭಾಗದಲ್ಲಿ ದೇವಾಲಯದ ಮುಂಬಾಗದ ಪೌಳಿ ಪುನರ್ ನಿರ್ಮಾಣವಾಯಿತು. ಮುಂದೆ ಅವರ ಮಕ್ಕಳು ಮತ್ತು ಮೊಮ್ಮಕ್ಕಳಾದ ಶ್ರೀ ಟಿ. ತಿರುವೆಂಗಡು ಪಿಳ್ಳೈರವರು ಶ್ರೀ ಟಿ.ಟಿ. ರಾಮಸ್ವಾಮಿ ಪಿಳ್ಳೈರವರು ಮತ್ತು ಶ್ರೀ ಟಿ.ಟಿ. ಬಾಲಕೃಷ್ಣ ಪಿಳೈಯವರು ಈ ದೇವಾಲಯದ ಆಡಳಿತ ನಡೆಸುತ್ತಾ ಬಂದರು.
1981ರಲ್ಲಿ ದೇವಸ್ಥಾನದ ನಿರ್ವಹಣೆಗೆ ಸಮಿತಿ ರಚಿಸಿದ ಮೇಲೆ, ಈ ಸಮಿತಿಯವರು ಸರ್ವರ ಸಹಕಾರದೊಂದಿಗೆ ಎಲ್ಲಾ ಧಾರ್ಮಿಕ ಮತ್ತು ಸಾಂಪ್ರದಾಯಿಕ ಹಾಗೂ ದೇವಾಲಯದ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಕೊಂಡು ಬಂದು 1996 ಮತ್ತು 2002ರಲ್ಲಿ ಸುತ್ತಲೂ ಹೊಸದಾಗಿ ಕಟ್ಟಡ. ಪೌಳಿ, ಕಲಾಮಂಟಪ. ಸಭಾ ಭವನ, ನವಗ್ರಹ ಸ್ಥಾಪನೆ, ಇತ್ಯಾದಿ ಕೆಲಸಗಳನ್ನು ಮಾಡಿಸಿದರು.
ಆನಂತರ ಈ ದೇವಾಲಯವನ್ನು ಸರ್ವಾಂಗ ಸುಂದರವಾಗಿಸಲು ಮುಂಭಾಗದಲ್ಲಿ ಕಳಶಾಲಂಕೃತವಾದ 54 ಅಡಿ ಎತ್ತರದ ಚೋಳ ಶೈಲಿಯ ರಾಜಗೋಪುರಗಳ ನಿರ್ಮಾಣದ ಮಹತ್ಕಾರ್ಯವನ್ನು ಫೆಬ್ರವರಿ 2010ರಲ್ಲಿ ತಂಜಾವೂರಿನ ದೇವಶಿಲ್ಪಿ ಶ್ರೀ ರವಿಯವರ ಮೂಲಕ ಆರಂಭಿಸಿ ಮಾರ್ಚ್ 2012ರಲ್ಲಿ ಪೂರ್ಣಗೊಳಿಸಿ. ದಿನಾಂಕ 05-04-2012ನೇ ಗುರುವಾರ ಪ್ರಾತ: ಕಾಲ 9:24 ಗಂಟೆಗೆ ಹೊರನಾಡು ಶ್ರೀ ಅನ್ನ ಪೂರ್ಣೇಶ್ವರಿ ದೇವಸ್ಥಾನದ ಧರ್ಮ ಕರ್ತರಾದ ಮಾನ್ಯ ಶ್ರೀ ಭೀಮೇಶ್ವರ ಜೋಶಿ ಇವರಿಂದ ಉಧ್ಘಾಟಿಸಿ ದೇವಸ್ಥಾನಕ್ಕೆ ಸಮರ್ಪಿಸಲಾಯಿತು.
ಮಾಹಿತಿ ಸಂಗ್ರಹ: ಈ ಮೇಲಿನ ಮಾಹಿತಿಗಳನ್ನು ಶ್ರೀ ಗಣಪತಿ ದೇವಾಲಯದ ಆಡಳಿತ ಮಂಡಳಿಯಿಂದ ಸಂಗ್ರಹಿಸಲಾಗಿದೆ.
1. ಶ್ರೀ ಗಣಪತಿ ದೇವಸ್ಥಾನ, ಗಡಿಯಾರ ಕಂಬ, ವಿರಾಜಪೇಟೆ
170ನೇ ವರ್ಷದ ಗಣೇಶೋತ್ಸವ
ಈ ಗಣೇಶೋತ್ಸವ ಸಮಿತಿಯು ಕಳೆದ 169 ವರ್ಷಗಳಿಂದ ಅದ್ಧೂರಿಯ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ 170ನೇ ವರ್ಷದ ಗಣೇಶೋತ್ಸವ ಆಚರಣಾ ಸಂಭ್ರಮದಲ್ಲಿದೆ.
2. ಶ್ರೀ ಬಸವೇಶ್ವರ ದೇವಸ್ಥಾನ ತೆಲುಗರ ಬೀದಿ
ಅಧ್ಯಕ್ಷರು: ಗೋಪಾಲ ಕೃಷ್ಣ ಕಾಮತ್.
ಮಾರ್ಗ: ಬಸವನ ಗುಡಿ, ತೆಲುಗರ ಬೀದಿ, ಮಾರಿಯಮ್ಮ ದೇವಸ್ಥಾನ,ಗೌರಿಕೆರೆ
3. ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಡಿ. ದೇವರಾಜು ಅರಸು ನಗರ
42ನೇ ವರ್ಷದ ಗಣೇಶೋತ್ಸವ
ಈ ಗಣೇಶೋತ್ಸವ ಸಮಿತಿಯು ಕಳೆದ 41 ವರ್ಷಗಳಿಂದ ಅದ್ಧೂರಿಯ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ 42ನೇ ವರ್ಷದ ಗಣೇಶೋತ್ಸವ ಆಚರಣಾ ಸಂಭ್ರಮದಲ್ಲಿದೆ.
4. ಶ್ರೀ ವಿನಾಯಕ ಯುವಕ ಭಕ್ತ ಮಂಡಳಿ, ಅಂಗಳಾ ಪರಮೇಶ್ವರಿ ದೇವಸ್ಥಾನ, ತೆಲುಗರ ಬೀದಿ.
ಮಾರ್ಗ: ತೆಲುಗರ ಬೀದಿ, ಮಾರಿಯಮ್ಮ ದೇವಸ್ಥಾನ, ಗೌರಿಕೆರೆ
5. ಶ್ರೀ ಕಾವೇರಿ ಗಣೆಶೊತ್ಸವ ಸಮಿತಿ, ಮೂರ್ನಾಡು ರಸ್ತೆ
32ನೇ ವರ್ಷದ ಗಣೇಶೋತ್ಸವ
ಈ ಗಣೇಶೋತ್ಸವ ಸಮಿತಿಯು ಕಳೆದ 29 ವರ್ಷಗಳಿಂದ ಅದ್ಧೂರಿಯ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ 30ನೇ ವರ್ಷದ ಗಣೇಶೋತ್ಸವ ಆಚರಣಾ ಸಂಭ್ರಮದಲ್ಲಿದೆ.
ಮಂಟಪದ ಶೋಭಾಯಾತ್ರೆಯ ಮಾರ್ಗ:ಮೂರ್ನಾಡು ರಸ್ತೆ, ಚೌಕಿ, ತೆಲುಗರ ಬೀದಿ, ಮಾರಿಯಮ್ಮ ದೇವಸ್ಥಾನ, ವಾಪಾಸು ಗೌರಿಕೆರೆ.
6. ಶ್ರೀ ವಿಜಯ ವಿನಾಯಕ ಉತ್ಸವ ಸಮಿತಿ, ದಖ್ಖನಿ ಮೊಹಲ್ಲಾ
ಮಾರ್ಗ: ದಖ್ಖನಿಮೊಹಲ್ಲಾ, ಶಾಂತಾ ಥಿಯೇಟರ್, ಚೌಕಿ, ಮಾರಿಯಮ್ಮ ದೇವಸ್ಥಾನ, ಗೌರಿಕೆರೆ.
7. ಶ್ರೀ ಕಣ್ಣಣಿ ವಿನಾಯಕ ಉತ್ಸವ ಸಮಿತಿ, ಮಲೆತಿರಿಕೆ ಬೆಟ್ಟ.
28ನೇ ವರ್ಷದ ಗಣೇಶೋತ್ಸವ
ಮಂಟಪದ ಶೋಭಾಯಾತ್ರೆಯ ಮಾರ್ಗ: ಮಲೆತಿರಿಕೆ ಬೆಟ್ಟ, ಡೆಂಟಲ್ ಕಾಲೇಜ್, ಸುಂಕದ ಕಟ್ಟೆ, ದಖ್ಖನಿ ಮೊಹಲ್ಲಾ, ಶಾಂತಾ ಥಿಯೇಟರ್, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ
8. ಶ್ರೀ ವರದ ವಿನಾಯಕ ಸೇವಾ ಸಮಿತಿ, ಅಯ್ಯಪ್ಪ ಬೆಟ್ಟ
ಮಾರ್ಗ: ಅಯ್ಯಪ್ಪ ಬೆಟ್ಟ, ಮಾರಿಯಮ್ಮ ದೇವಸ್ಥಾನ,
9. ಶ್ರೀ ಸರ್ವಸಿದ್ಧಿ ವಿನಾಯಕ ಉತ್ಸವ ಸಮಿತಿ, ಸುಂಕದ ಕಟ್ಟೆ
ಮಾರ್ಗ: ಸುಂಕದ ಕಟ್ಟೆ, ಮಾರಿಯಮ್ಮ ದೇವಸ್ಥಾನ, ದಖ್ಖನಿ ಮೊಹಲ್ಲಾ, ಶಾಂತಾ ಥಿಯೇಟರ್, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.
10. ಶ್ರೀ ನೇತಾಜಿ ಗಣೇಶೋತ್ಸವ ಸಮಿತಿ ನೆಹರು ನಗರ
ಮಾರ್ಗ: ನೆಹರು ನಗರ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಮಟನ್ ಮಾರ್ಕೆಟ್, ಖಾಸಗಿ ಬಸ್ ನಿಲ್ದಾಣ, ಗಣಪತಿ ದೇವಸ್ಥಾನ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸು ಗೌರಿಕೆರೆ.
11. ಶ್ರೀ ಮಹಾಗಣಪತಿ ಸೇವಾ ಸಮಿತಿ, ಗಣಪತಿ ಬೀದಿ ಪಂಜರು ಪೇಟೆ.
ಮಾರ್ಗ: ಗಣಪತಿ ಬೀದಿ, ಪಂಜರು ಪೇಟೆ, ಮಟನ್ ಮಾರ್ಕೆಟ್, ಖಾಸಗಿ ಬಸ್ ನಿಲ್ದಾಣ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.
12. ಶ್ರೀ ವಿನಾಯಕ ಸೇವಾ ಸಮಿತಿ, ಪಂಜರು ಪೇಟೆ.
26ನೇ ವರ್ಷದ ಗಣೇಶೋತ್ಸವ
ಈ ಗಣೇಶೋತ್ಸವ ಸಮಿತಿಯು ಕಳೆದ 25 ವರ್ಷಗಳಿಂದ ಅದ್ಧೂರಿಯ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ 26ನೇ ವರ್ಷದ ಗಣೇಶೋತ್ಸವ ಆಚರಣಾ ಸಂಭ್ರಮದಲ್ಲಿದೆ.
ಮಂಟಪದ ಶೋಭಾಯಾತ್ರೆಯ ಮಾರ್ಗ:ಪಂಜರು ಪೇಟೆ, ಮಟನ್ ಮಾರ್ಕೆಟ್, ಕೆ.ಎಸ್.ಅರ್.ಟಿ.ಸಿ.ಬಸ್ ನಿಲ್ದಾಣ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.
13. ಶ್ರೀ ವಿಶ್ವವಿನಾಯಕ ಗಣೇಶೋತ್ಸವ ಸಮಿತಿ, ಮೀನುಪೇಟೆ
ಮಾರ್ಗ: ಮೀನುಪೇಟೆ, ಗಣಪತಿ ದೇವಸ್ಥಾನ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ
14. ಶ್ರೀ ಗಣಪತಿ ಸೇವಾ ಸಮಿತಿ, ಗಾಂಧಿನಗರ
30ನೇ ವರ್ಷದ ಗಣೇಶೋತ್ಸವ
ಮಂಟಪದ ಶೋಭಾಯಾತ್ರೆಯ ಮಾರ್ಗ: ಗಾಂಧಿನಗರ, ತಾಲ್ಲೂಕು ಮೈದಾನ, ಕಾರ್ ನಿಲ್ದಾಣ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.
15. ಶ್ರೀ ದೊಡ್ಡಮ್ಮ-ತಾಯಿ ವಿನಾಯಕ ಸಮಿತಿ, ಸುಣ್ಣದ ಬೀದಿ.
ಮಾರ್ಗ: ಸುಣ್ಣದ ಬೀದಿ. ಖಾಸಗಿ ಬಸ್ ನಿಲ್ದಾಣ, ಗಣಪತಿ ದೇವಸ್ಥಾನ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ
16. ಜಲದರ್ಶಿಣಿ ಗಣೇಶೊತ್ಸವ ಸಮಿತಿ, ಚಿಕ್ಕಪೇಟೆ.
ಮಾರ್ಗ: ಛತ್ರಕೆರೆ, ಚಿಕ್ಕಪೇಟೆ, ವಾಪಾಸು ಛತ್ರಕೆರೆ, ಮೂರ್ನಾಡುರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.
17. ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಕೆ, ಬೋಯಿಕೇರಿ.
ಮಾರ್ಗ: ಬೋಯಿಕೇರಿ, ಚಿಕ್ಕಪೇಟೆ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.
18. ಶ್ರೀ ವಿಘ್ಣೇಶ್ವರ ಸೇವಾ ಸಮಿತಿ, ಕುಕ್ಲೂರು
18ನೇ ವರ್ಷದ ಗಣೇಶೋತ್ಸವ
ಅಧ್ಯಕ್ಷರು: ಲವ ಪೊನ್ನಪ್ಪ
ಉಪಾಧ್ಯಕ್ಷರು: ರಮೇಶ್
ಪ್ರಧಾನ ಕಾರ್ಯದರ್ಶಿ: ಮೋಹನ್
ಖಜಾಂಜಿ: ವಿವೇಕ್ ಕಾರ್ಯಪ್ಪ
ಮಂಟಪದ ಶೋಭಾಯಾತ್ರೆಯ ಮಾರ್ಗ: ಅರಸುನಗರ, ದಖ್ಖನಿಮೊಹಲ್ಲಾ, ಶಾಂತಾ ಥಿಯೇಟರ್, ಚೌಕಿ, ಮಾರಿಯಮ್ಮ ದೇವಸ್ಥಾನ, ಗೌರಿಕೆರೆ.
19. ಪೌರಸೇವಾ ನೌಕರರ ಸಂಘ ಗಣಪತಿ ಸೇವಾ ಸಮಿತಿ, ಪುರಸಭೆ ಕಾರ್ಯಾಲಯ
15ನೇ ವರ್ಷದ ಗಣೇಶೋತ್ಸವ
ಮಂಟಪದ ಶೋಭಾಯಾತ್ರೆಯ ಮಾರ್ಗ: ಪಟ್ಟಣ ಪಂಚಾಯತಿ, ಕಾರು ನಿಲ್ದಾಣ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.
ಗೌರವ ಅಧ್ಯಕ್ಷರು: ಚಂದ್ರಕುಮಾರ್ .ಎ, ಹೇಮಂತ್ ಕುಮಾರ್ ಎನ್.ಪಿ.
ಅಧ್ಯಕ್ಷರು: ವೇಲ್ ಮುರು ಹೆಚ್. ಆರ್.
ಉಪಾಧ್ಯಕ್ಷರು: ಸುಬ್ರಮಣಿ ಹೆಚ್.ಎಸ್.
ಕಾರ್ಯದರ್ಶಿ: ವಿನೋದ್ ಹೆಚ್.ಸಿ.
ಖಜಾಂಚಿ: ಮುರುಗ ಹೆಚ್.ಜಿ
ನಿರ್ದೇಶಕರು: ಐವಾನ್, ಪ್ರತಾಪ, ಧನಂಜಯ, ಸಣ್ಣಕುಮಾರ್, ನವೀನ್ ಕುಮಾರ್. ಹೆಚ್.ಜಿ, ಮುರಳಿ
20. ಬಾಲಾಂಜನೇಯ ವಿನಾಯಕ ಉತ್ಸವ ಸಮಿತಿ, ಅಪ್ಪಯ್ಯ ಸ್ವಾಮಿ ರಸ್ತೆ.
6 ನೇ ವರ್ಷದ ಗಣೇಶೋತ್ಸವ
ಮಂಟಪದ ಶೋಭಾಯಾತ್ರೆಯ ಮಾರ್ಗ: ಅಪ್ಪಯ್ಯ ಸ್ವಾಮಿ ರಸ್ತೆ, ಕೀರ್ತಿ ಲೇಔಟ್, ಚಿಕ್ಕಪೇಟೆ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ
21. ಶ್ರೀ ಗೌರಿಕೆರೆ ಗಣಪತಿ ಸೇವಾ ಸಮಿತಿ, ಗೌರಿಕೆರೆ
ಮಾರ್ಗ ಗೌರಿಕೆರೆ ಗಣಪತಿ ದೇವಸ್ಥಾನ, ಮೂರ್ನಾಡುರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.