ಲಿಂಗ ತಾರತಮ್ಯದ ಧೃಷ್ಠಿಕೋನ ಬದಲಾಗಲು ಇನ್ನೇಷ್ಟು ಶತಮಾನಗಳು ಬೇಕು?
ಈಕೆಯ ಧೀಮಂತ ಧೈರ್ಯಕ್ಕೆ ಸರಿಸಾಟಿ ಯಾರು!
ಇತ್ತೀಚೆಗೆ ಪತ್ರಿಕೆಯಲ್ಲಿ ಬಂದಂತಹ ಸುದ್ದಿಯನ್ನು ಓದಿ ಹೃದಯ ಆದ್ರ್ರವಾಯಿತು. ಹೆಣ್ಣು ಮಗು ಹುಟ್ಟಿದ ಕಾರಣ ತಂದೆ-ತಾಯಿ ಸೇರಿ ಗುಂಡಿಯೊಂದನ್ನು ತೋಡಿ ಅದರಲ್ಲಿ ಹಾಕಿ ಮುಚ್ಚುತ್ತಿದ್ದರು. ‘ಹೆಣ್ಣು ಹುಣ್ಣು’ ಎಂಬುದು ಅವರ ಅಭಿಪ್ರಾಯ, ಕುಲೋದ್ಧಾರಕನಾದ ಗಂಡು ಮಗ ಹುಟ್ಟಲಿಲ್ಲ ಎಂಬ ಕಾರಣಕ್ಕೆ ಆ ಹೆಣ್ಣು ಮಗುವನ್ನು ಸಾಯಿಸುವ ನಿರ್ಧಾರಕ್ಕೆ ಬಂದಿದ್ದರು. ಲಿಂಗ ತಾರತಮ್ಯದ ದೃಷ್ಠಿಕೋನ ನಮ್ಮ ದೇಶದ ಸಮಾಜದಲ್ಲಿ ಬದಲಾಗಲು ಇನ್ನೇಷ್ಟು ಶತಮಾನಗಳು ಬೇಕಿದೆ ಎಂಬುದು ಯಕ್ಷಪ್ರಶ್ನೆ. ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಮಾಡುವ ತಂದೆ ತಾಯಿಗಳು ಈ ಘಟನೆಯನ್ನೊಮ್ಮೆ ಓದಿ.
ಅದೊಂದು ದಿನ ಪದ್ಮಾವತಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಲಕ್ನೋದಿಂದ ದೆಹಲಿಗೆ ಸಿ.ಐ.ಎಸ್.ಎಫ್. ಸಂದರ್ಶನಕ್ಕೆ ಹೋಗುತ್ತಿರುವಾಗ ಏಕಾಏಕಿಯಾಗಿ 4-5 ಜನ ದರೋಡೆಕೋರರು ಆಕೆಯÀ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ದುಡ್ಡನ್ನು ಕಿತ್ತುಕೊಂಡು ಆಕೆಯನ್ನು ರೈಲಿನಿಂದ ಕೆಳಕ್ಕೆ ದೂಡಿದರು. ರೈಲಿನಿಂದ ಬಿದ್ದ ಅಘಾತದಿಂದ ಎಚ್ಚೆತುಕೊಳ್ಳಬೇಕೆನಿಸುವಷ್ಟರಲ್ಲಿ ಮತ್ತೊಂದು ರೈಲು ಆಕೆಯ ಕಾಲಿನ ಮೇಲೆ ಹರಿದುಹೋಯಿತು. ಹಾಗೆ ಕುಸಿದು ಬಿದ್ದ ಆಕೆಯನ್ನು ಯಾರೂ ಗಮನಿಸದೆ ಅಲ್ಲಿಯೇ 45 ರಿಂದ 50 ರೈಲು ಹಾದು ಹೋಗುವವರೆಗೂ ಬಿದ್ದಿರಬೇಕಾಯಿತು, ರಾತ್ರಿಯಿಡೀ ರೈಲು ಹಳಿಯಲ್ಲಿದ್ದ ಇಲಿಗಳು ತುಂಡಾಗಿದ್ದ ಕಾಲಿನ ಮಾಂಸಗಳನ್ನು ಕಿತ್ತು ಕಿತ್ತು ತಿನ್ನುತ್ತಿದ್ದವು. ಮಾರನೆಯ ದಿನ ಕುರಿ ಮೇಯಿಸುವವನೊಬ್ಬ ನೋಡಿ ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿದ. ಜೀವ ಉಳಿದರೂ, ಒಂದು ಕಾಲನ್ನು ಯಾವುದೇ ಮತ್ತು ಬರಿಸುವ ಇಂಜೆಕ್ಷನ್ ಇಲ್ಲದೇ ಕತ್ತರಿಸಲಾಯಿತು. ಮತ್ತೊಂದು ಕಾಲಿಗೆ ರಾಡನ್ನು ಅಳವಡಿಸಬೇಕ್ಕಾಗಿತು, ಬೆನ್ನಿನಲ್ಲಿ ಮೂರು ಕಡೆ ಮೂಳೆ ಮುರಿದು ಹೋಗಿತು.
2011 ಜುಲೈ 11ರವರೆಗೂ ನೇಷನಲ್ ಲೆವಲ್ ವಾಲಿಬಾಲ್ ಮತ್ತು ಫುಟ್ಬಾಲ್ ಆಟಗಾರತಿಯಾಗಿದ್ದ ಆಕೆ ತನ್ನ ಜೀವನದಲ್ಲಿ ಬಂದೆರಗಿದ ಆ ಘೊರ ದುರಂತದಿಂದ ತನ್ನ ಸೊಂಟದ ಭಾಗ ಮತ್ತು ಒಂದು ಕಾಲನ್ನು ಕಳೆದುಕೊಂಡು ಆಸ್ಪತ್ರೆಯ ಐ.ಸಿ.ಯುನಲ್ಲಿ ಮಲಗಿದ್ದಳು. ನೆಂಟರಿಷ್ಟರು, ಬಂದುಗಳು ಬಂದು ಅಯ್ಯೋ ಕಾಲಿಲ್ಲದ ಹುಡುಗಿಯನ್ನು ಯಾರು ಮದುವೆಯಾಗುತ್ತಾರೆ? ಛೆ ಹೀಗಾಗಬಾರದಿತು, ಎನ್ನುತ್ತಾ ಹೋಗುತ್ತಿದ್ದರೆ, ಆಕೆ ಮಾತ್ರ ಕಾಲಿಲ್ಲದಿದ್ದರೆನಂತೆ ತಾನು ದೂರದಲ್ಲಿರುವ ಮೌಂಟ್ ಎವರೆಷ್ಟ್ ಏರಬೇಕೆಂದು ಮನಸ್ಸಿನಲ್ಲಿ ಧೃಡ ನಿರ್ಧಾರ ಮಾಡಿಯಾಗಿತ್ತು. ಕೈ, ಕಾಲು, ಮನಸ್ಸು, ಶರೀರ ಸರಿಯಾಗಿರುವ ಎಂಟೆದೆ ಬಂಟರೂ ಕೂಡಾ ಎವರೆಷ್ಟ್ ಏರಬೆಕೆಂದರೆ, ಒಂದು ಹೆಜ್ಜೆ ಹಿಂದೆ ಸರಿಯುತ್ತಾರೆ, ಅಬ್ಬಾ ಆ ಚಳಿ, ಅಲ್ಲಿನ ಹಿಮ, ಮೇಲಕ್ಕೆ ಏರುತ್ತಾ ಹೋದರೆ ಉಸಿರಾಡಲು ಗಾಳಿಯ ಅಭಾವ, ಆಗಾಗ್ಗೆ ಬೀಳುವ ಹಿಮದ ಬಂಡೆ ಕಲ್ಲುಗಳು, ಜೊತೆಗಾರರೆ ಕಣ್ಣು ಮುಂದೆ ಮೃತ್ಯುವಾಗುವುದು ನೆನೆದರೆ ಮೈ ಜುಮ್ಮೆನಿಸುತ್ತದೆ. ಅಂತಹದರಲ್ಲಿ ಒಂದು ಕಾಲನ್ನು ಕತ್ತರಿಸಿ ತೆಗೆಯಲಾಗಿದೆ, ಸೊಂಟಕ್ಕಾದ ಗಾಯ ಇನ್ನೂ ವಾಸಿಯಾಗಿಲ್ಲ ಈ ರೀತಿಯ ಕನಸ್ಸನ್ನು ಕಾಣಲೂ ನಮ್ಮಿಂದ ಸಾಧ್ಯವಾಗಲಿಕ್ಕಿಲ್ಲ, ಆದರೆ ಛಲವಾದಿಯಾದ ಆಕೆ ತನಗಾದ ಅಪಘಾತವನ್ನು ಲೆಕ್ಕಿಸದೆ ಆಸ್ಪತ್ರೆಯಿಂದ ಮರಳಿದ ಕೂಡಲೆ ತೆರಳಿದ್ದು, ಭಾರತದ ಮೊದಲ ಎವರೆಷ್ಟ್ ಏರಿದ ಮಹಿಳೆ ಬಚೇಂದ್ರಿಪಾಲ್ ರವರನ್ನು ಭೇಟಿ ಮಾಡಲು. ಆಕೆಗೆ ಬೆನ್ನೆಲುಬಾಗಿ ನಿಂತು ಸಹಕರಿಸಿದ್ದು ಆಕೆಯ ತಾಯಿ ಮತ್ತು ಸಹೋದರ. ಒಂದು ಕಾಲನ್ನು ಕತ್ತರಿಸಿದರೂ, ತಲೆ, ಶರೀರಪೂರ್ತಿ ಆದ ಗಾಯಗಳಾಗಲಿ, ಸೊಂಟದ ಭಾಗದ ಪೆಟ್ಟಾಗಲಿ, ಆಕೆಯನ್ನು ಧೃತಿಗೆಡುವಂತೆ ಮಾಡಲಿಲ್ಲ, ಅಂದು ಮೇ21 2013 10.55 ನಿಮಿಷ ಭಾರತಾಂಬೆ ತನ್ನ ಒಂದು ಕಾಲಿಲ್ಲದ ಪುತ್ರಿ ಅತೀ ಉತ್ಕøಷ್ಟ ಸಾಧನೆಯಿಂದ ಹರ್ಷಭರಿತಳಾಗಿ, ಮೂಕಸ್ಮಿತಳಾಗಿ ನಿಂತಿದ್ದಳು.
ನೆಹರು ಇನ್ಸಿಟ್ಟ್ಯೂಟ್ ಆಫ್ ಮೌಂಟನೆರಿಂಗ್ ಅಕಾಡೆÀಮಿಯಿಂದ ತರಬೇತಿ ಪಡೆದು, ಟಾಟಾ ಸ್ಟೀಲ್ ಅಡ್ವೇಂಚರ್ ಫೌಂಡೇಶನ್ ನಿಂದ ಸಹಾಯದನವನ್ನು ಪಡೆದು, ತನ್ನ ಎಡ ಕಾಲಿಗೆ ತಾತ್ಕಾಲಿಕ ಕಾಲನ್ನು ಅಳವಡಿಸಿ ಭಾರತದ ಪತಾಕೆಯ ಜೊತೆಗೆ ಸ್ವಾಮಿ ವಿವೇಕಾನಂದರ ಪರಮ ಅಭಿಮಾನಿಯಾಗಿದ್ದ ಆಕೆÀ ಅವರ ಫೋಟೋ ವೊಂದನ್ನು ತೆಗೆದುಕೊಂಡು 2013 ರಲ್ಲಿ 52ದಿನಗಳ ಕಾಲದ ನಡೆಗೆಯಿಂದ 2013 ಮೇ 21ರಂದು ಅತೀ ಎತ್ತರದ ಪರ್ವತವಾದ ಮೌಂಟ್ ಎವರೆಷ್ಟ್‍ನ ತುತ್ತ ತುದಿಯಲ್ಲಿ ನಿಂತು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ತನ್ನ ಜೀವನವನ್ನು ಸಾರ್ಥಕ ಮಾಡಿಕೊಂಡಳು. ಅಂತಹ ಧೀಮಂತ ಧೈರ್ಯವಂತೆಯಾದ ಭಾರತಾಂಬೆಯ ಹೆಮ್ಮೆಯ ಪುತ್ರಿ ಅರುಣೀಮಾ ಸಿನ್ಹಾ.
ಇಂದು ಮಹಿಳೆಯರು ಯುದ್ಧವಿಮಾನ ಚಲಾಯಿಸುವುದರಿಂದ ಹಿಡಿದು ಬಾಹ್ಯಾಕಾಶದಲ್ಲಿಯೂ ತಿಂಗಳಾನುಗಟ್ಟಲೆ ಉಳಿದು ತಮ್ಮ ಸಾಮಥ್ರ್ಯ ತೋರಿಸಿದ್ದಾರೆ. ಆದರೆ ಅವರೆಲ್ಲರಿಗಿಂತ ಭಿನ್ನವಾಗಿ ನಿಲ್ಲ್ಲುತ್ತಾರೆ ಅರುಣಿಮಾ. ತನ್ನ 3 ವರ್ಷ ಪ್ರಾಯದಲ್ಲಿಯೇ ಆರ್ಮಿಯಲ್ಲಿ ಇಂಜಿನಿಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಂದೆಯನ್ನು ಕಳೆದುಕೊಂಡರು. ತಾಯಿಯೇ ಎಲ್ಲಾ ರೀತಿಯಲ್ಲ್ಲಿ ಆಸರೆಯಾಗಿದ್ದರು. ವಾಲಿಬಾಲ್ ಆಟಗಾರ್ತಿಯಾಗಿದ್ದರೂ, ಅರುಣಿಮಾ ಜಗತ್ತಿಗೆ ಭಿನ್ನವಾಗಿ ಪರಿಚಯವಾಗಿದ್ದು ಮಾತ್ರ 2013ರಲ್ಲಿ. ಈಗ ದೇಶ ವಿದೇಶಗಳಲ್ಲಿ ಓಡಾಡಿ ಯುವಜನತೆಗೆ ಉತ್ತೇಜನ ನೀಡುವಂತಹ ‘ವ್ಯಕ್ತಿತ್ವ ವಿಕಸನದ’ ಬಗ್ಗೆ ಭಾಷಣಗಳನ್ನು ಮಾಡುತ್ತಿದ್ದಾರೆ. ಅರುಣಿಮಾರವರ ಈ ಸಾಧನೆಯಿಂದ ಅನೇಕ ಸಂಘ ಸಂಸ್ಥೆಗಳು ಇವರನ್ನು ಕರೆದು ಸನ್ಮಾನಿಸಿದರು. * ತೇನ್ ಸಿಂಗ್ ನಾರ್ಗೆ ಅವಾರ್ಡ್.* ಸಲಾಂ ಇಂಡಿಯಾ ಅವಾರ್ಡ್. * ಅಮೇಂಸಿಂಗ್ ಇಂಡಿಯಾ ಅವಾರ್ಡ್. * ನೇಷನಲ್ ಅಡ್ವೆಂಚರ್ ಅವಾರ್ಡ್. * ಭಾರತ ಸರ್ಕಾರವು ದೇಶದ 4ನೇ ಅತೀ ಉತ್ತಮ ಗೌರವವಾದ ‘ಪದ್ಮಶ್ರೀ’ ನೀಡಿ ಗೌರವಿಸಲಾಯಿತು.
ಅಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಶ್ರೀ ಅಖಿಲೇಶ್ ಯಾದವ್ ಸರಕಾರದ ವತಿಯಿಂದ ರೂ.25 ಲಕ್ಷವನ್ನು ನೀಡಿ ಗೌರವಿಸಿದರು. ಸ್ಪೋಟ್ರ್ಸಮಿನಿಷ್ಟ್ರಿಯಿಂದ ರೂ25ಸಾವಿರ ಮುಂತಾದವುಗಳನ್ನು ಒಟ್ಟುಗೂಡಿಸಿ ತನ್ನಂತಿರುವವರಿಗಾಗಿಯೂ, ಬಡ ಮಕ್ಕಳಿಗಾಗಿಯೂ ಪಂಡಿತ ಚಂದ್ರಶೇಖರ್ ಅಜಾದ್ ವಿಕಲಾಂಗ ಖೇಲ್ ಅಕಾಡೆಮಿಯನ್ನು ಸ್ಥಾಪಿಸಿ ನೂರಾರು ಜನರಿಗೆ ಪ್ರೇರೆಪಣೆ ನೀಡುತ್ತಿದ್ದಾರೆ. ಅರುಣೀಮಾ ಸಿನ್ಹರವರು ಮೌಂಟ್ ಎವರೆಷ್ಟ್ ಏರಿದ್ದು ಮಾತ್ರವಲ್ಲದೆ ಜಗತ್ತಿನ ಇತರೆÀ ಹಲವಾರು ಪರ್ವತಗಳನ್ನು ಏರಿ ದಾಖಲೆ ಮಾಡಿದ್ದಾರೆ. ಕಿಲಿಮಂಜಾರೋ (ಆಫ್ರಿಕ), ಎಲ್ಬ್ರೋಸ್ (ಯೂರೋಪ್), ಕೋಸಿಸಿಕೋ (ಆಸ್ಟ್ರೇಲಿಯಾ), ಅಕೋನ್‍ಕಾಗ (ಸೌತ್ ಆಫ್ರೀಕಾ),
ಸ್ತ್ರೀಯರ ಬಗ್ಗೆ ಸ್ವಾಮಿ ವಿವೇಕಾನಂದರ ಒಂದು ಮಾತು ಇಲ್ಲಿ ಪ್ರಸ್ತುತ
“ಒಂದು ಜನಾಂಗ ಎಷ್ಟು ಮುಂದುವರಿದಿದೆ ಎಂಬುದನ್ನು ಪರೀಕ್ಷಿಸುವುದಕ್ಕೆ ಇರುವ ಒರೆಗಲ್ಲೆ ಅವರು ಸ್ತ್ರೀಯರನ್ನು ಹೇಗೆ ನೋಡುತ್ತಿರುವರು ಎಂಬುದು. ಸ್ತ್ರೀಯರ ಸ್ಥಿತಿ ಉತ್ತಮವಾಗುವ ತನಕ ಪ್ರಪಂಚ ಉತ್ತಮವಾಗಲಾರದು.” ಈ ಲೇಖನವನ್ನು ಓದಿದ ಮೇಲೆಯೂ ಹೆಣ್ಣು ಮಗು ಬೇಡ ಗಂಡು ಮಗುವೆ ಬೇಕೆಂದು ಹಂಬಲಿಸುವ ದಂಪತಿಗಳು ಇದ್ದರೆ ಅದು ನಿಮ್ಮ ಮನಸ್ಥಿತಿಯಷ್ಟೇ. ಆಯ್ಕೆ ನಿಮಗೆ ಬಿಟ್ಟಿದ್ದು.
✍. ಕಾನತ್ತಿಲ್ ರಾಣಿ ಅರುಣ್