ಭಾರತದ ಸಂವಿಧಾನ ಬಗ್ಗೆ ಒಂದು ನೋಟ:
• ಭಾರತದಲ್ಲಿ ಸಂವಿಧಾನವನ್ನು ೧೯೪೯ರ ನವೆಂಬರ್ ೨೬ರಂದು ಸ್ವೀಕರಿಸಲಾಯಿತು. ಇದು ೧೯೫೦ರ ಜನವರಿ ೨೬ರಂದು ಅನುಷ್ಠಾನಕ್ಕೆ ಬಂತು.
• ಭಾರತದ ಸಂವಿಧಾನವು ಟೈಪ್ ಮಾಡಿರುವುದಲ್ಲ ಅಥವಾ ಮುದ್ರಿತವೂ ಅಲ್ಲ. ಅದನ್ನು ಕೈಯಲ್ಲಿ ಬರೆಯಲಾಗಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿದೆ.
• ಭಾರತ ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷ ಹೀಲಿಯಂ ತುಂಬಿದ ಕವಚಗಳಲ್ಲಿ ಸಂರಕ್ಷಿಸಲಾಗಿದ್ದು, ಇದು ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿದೆ.
• ಭಾರತ ಸಂವಿಧಾನವನ್ನು ಬೇರೆ ಕಡೆಗಳಿಂದ ಪಡೆದ ಅಂಶಗಳ ಚೀಲ ಎಂದು ಕರೆಯಲಾಗುತ್ತಿದೆ.
• ಸ್ವಾತಂತ್ರ‍್ಯ, ಸಮಾನತೆ ಹಾಗೂ ಭ್ರಾತೃತ್ವದ ಪರಿಕಲ್ಪನೆಗಳನ್ನು ಫ್ರಾನ್ಸ್ ಸಂವಿಧಾನದಿಂದ ಪಡೆಯಲಾಗಿದೆ.
• ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಸೋವಿಯತ್ ಒಕ್ಕೂಟದಿಂದ ಪಡೆಯಲಾಗಿದೆ.
• ರಾಜ್ಯ ನಿರ್ದೇಶನ ತತ್ವಗಳು ಐರ್ಲೆಂಡ್ ಸಂವಿಧಾನದ ಕೊಡುಗೆ
• ಸುಪ್ರೀಂಕೋರ್ಟ್ ಕಾರ್ಯನಿರ್ವಹಣೆಯ ಕಾನೂನನ್ನು ಜಪಾನ್‌ನಿಂದ ಎರವಲು ಪಡೆಯಲಾಗಿದೆ.
• ಇದು ವಿಶ್ವದ ಯಾವುದೇ ಸ್ವತಂತ್ರ‍್ಯ ದೇಶಗಳ ಅತಿ ಉದ್ದವಾದ ಸಂವಿಧಾನವಾಗಿದೆ.
• ಭಾರತದ ಸಂವಿಧಾನದಲ್ಲಿ ೪೪೮ ವಿಧಿಗಳು, ೨೫ ಭಾಗಗಳು, ೧೨ ಶೆಡ್ಯೂಲ್, ೫ ಅನುಬಂಧಗಳು, ೯೮ ತಿದ್ದುಪಡಿಗಳಿವೆ.
• ಸಂವಿಧಾನ ರಚನಾ ಸಮಿತಿಯಲ್ಲಿ ೨೮೪ ಮಂದಿ ಸದಸ್ಯರಿದ್ದರು. ಅವರಲ್ಲಿ ೧೫ ಮಂದಿ ಮಹಿಳೆಯರು.
• ಇದರ ಕರಡನ್ನು ೧೯೪೯ರ ನವೆಂಬರ್‌ನಲ್ಲಿ ಸಲ್ಲಿಸಲಾಯಿತು. ಸಲ್ಲಿಕೆ ಬಳಿಕ ಅದನ್ನು ಪೂರ್ಣಗೊಳಿಸಲು ಮೂರು ವರ್ಷ ಬೇಕಾಯಿತು.
• ಸಂವಿಧಾನ ರಚನಾ ಸಮಿತಿಯಲ್ಲಿದ್ದ ಎಲ್ಲ ೨೮೪ ಮಂದಿ ಸದಸ್ಯರು ೧೯೫೦ರ ಜನವರಿ ೨೪ರಂದು ಈ ದಾಖಲೆಗೆ ಸಹಿ ಮಾಡಿದರು.
• ೧೯೫೦ರ ಜನವರಿ ೨೬ರಂದು ಇದು ಅಸ್ತಿತ್ವಕ್ಕೆ ಬಂತು.
• ಭಾರತದ ರಾಷ್ಟ್ರಲಾಂಛನವನ್ನೂ ಅದೇ ದಿನ ಅಳವಡಿಸಿಕೊಳ್ಳಲಾಯಿತು.
• ಭಾರತದ ಸಂವಿಧಾನವನ್ನು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲೊಂದು ಎಂದು ಹೇಳಲಾಗಿದೆ. ಏಕೆಂದರೆ ಅದಕ್ಕೆ ಕೇವಲ ೯೪ ತಿದ್ದುಪಡಿಗಳನ್ನು ತರಲಾಗಿದೆ.
✍. ಕಾನತ್ತಿಲ್ ರಾಣಿ ಅರುಣ್
Author Profile
Latest News
EventsAugust 30, 2022ಮಡಿಕೇರಿ ದಸರಾ 2022 Madikeri Dasara 2022
EventsAugust 15, 2022Shanthinikethana Youth Club, Madikeri ಶಾಂತಿನಿಕೇತನ ಯುವಕ ಸಂಘ, ಮಡಿಕೇರಿ
EventsAugust 14, 2022Virajpet Ganesha Utsava 2022
Madikeri DasaraAugust 6, 2022History of Karaga Madikeri Dasara ಕರಗ ಶಕ್ತಿ ದೇವತೆಗಳ ಹಿತಿಹಾಸ