ಕಿರುತೆರೆ ಧಾರಾವಾಹಿಗಳಲ್ಲಿ ಹಿನ್ನೆಲೆ ಧ್ವನಿ ನೀಡುತ್ತಿರುವ ಕೊಡಗಿನ ಕಲಾವಿದ “ನಿಶ್ಚಿತ್ ತಾಕೇರಿ”
ಸೋಮವಾರಪೇಟೆ:-ಸಮೀಪದ ತಾಕೇರಿ ಗ್ರಾಮದ ಯುವಪ್ರತಿಭೆಯೊಬ್ಬರು ಪೌರಾಣಿಕದಂತಹ ಕಿರುತೆರೆ ಧಾರಾವಾಹಿಗಳಲ್ಲಿ ಹಿಂದಿ ಪಾತ್ರಧಾರಿಗಳ ಪಾತ್ರಕ್ಕೆ ಕನ್ನಡಲ್ಲಿ ಹಿನ್ನೆಲೆ ಧ್ವನಿ ನೀಡುತ್ತಿರುವುದು ಈ ನಡುವೆ ಮನೆ ಮಾತಾಗಿದೆ.
ತಾಲ್ಲೂಕಿನ ತಾಕೇರಿ ಗ್ರಾಮದ ನಿಶ್ಚಿತ್ ತಾಕೇರಿ ಎಂಬುವವರೆ ಹಿನ್ನೆಲೆ ದ್ವನಿ ನೀಡುತ್ತಿರುವ ಹೊಸ ಪ್ರತಿಭೆ. ಇವರು ಜೀ ಕನ್ನಡಲ್ಲಿ ರಾತ್ರಿ 7 ಗಂಟೆಗೆ ಪ್ರಸಾರ ವಾಗುತ್ತಿರುವ “ಶ್ರೀ ಕೃಷ್ಣ” ಧಾರಾವಾಹಿಯಲ್ಲಿ “ಭದ್ರಾಕ್ಷಾ” ಎಂಬ ನಟನೆಯ ಪಾತ್ರದಾರಿಯ ವ್ಯಕ್ತಿಗೆ ಇವರು ಹಿನ್ನೆಲೆ ಧ್ವನಿ ನೀಡುತ್ತಿದ್ದು, ಕಲರ್ಸ್ ಕನ್ನಡದ “ಚಕ್ರವರ್ತಿ ಅಶೋಕ” ಧಾರಾವಾಹಿಯಲ್ಲೂ ಕೂಡ “ರಾಧಾಗುಪ್ತ” ಪಾತ್ರಕ್ಕೆ ಹಿನ್ನೆಲೆ ಧ್ವನಿ ಹಾಗೂ ಹಾಲಿವುಡ್ ಫಿಲಂ “ಟರ್ಮಿನೆಟರ್ ಡಾರ್ಕ್ ಪೆಟ್” ಎಂಬ ಸಿನಿಮಾದ ನಟರೊಬ್ಬರಿಗೆ ಡಬ್ಬಿಂಗ್ ಮಾಡಿದ್ದಾರೆ.
ತಾಕೇರಿ ಗ್ರಾಮದ ಹೊಸೂರುಕಳ್ಳಿಯ ಲಕ್ಶ್ಮಯ್ಯ ಹಾಗೂ ಚಿನ್ನಮ್ಮ ದಂಪತಿಯ ಪುತ್ರರಾಗಿರುವ ನಿಶ್ಚಿತ್ ತಾಕೇರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವ್ಯಾಸಾಂಗ ಮಾಡಿ ಪಿ.ಯು.ಸಿ. ಯನ್ನು ಸೋಮವಾರಪೇಟೆಯ ಸಂತ ಜೋಷೆಪ್‌ರ ಕಾಲೇಜಿನಲ್ಲಿ ಮುಗಿಸಿ, ಜೆ.ಎಸ್.ಎಸ್ ಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಮೈಸೂರಿನಲ್ಲಿ ಮಂಡ್ಯ ರಮೇಶ್ ಅವರ ಗರಡಿಯಲ್ಲಿ ರಂಗಭೂಮಿ ಕಲಾವಿದರಾಗಿ ಹೊರ ಹೊಮ್ಮಿದರು.
ಇವರು ಕಿರುತೆರೆಯ “ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ”, “ಸಾರ್ವಜನಿಕರಿಗೆ ಸುವರ್ಣ ಚಲನಚಿತ್ರ” ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಹ ನಟರಾಗಿ ಪಾತ್ರವಹಿಸಿದ್ದಾರೆ. ಇವರು ಚಿಕ್ಕ ವಯಸ್ಸಿನಿಂದಲು ನಟನಾಗುವ ಆಸೆ ಹೊಂದಿದ್ದು, ಅದು ಈ ನಡುವೆ ಅವರ ಕನಸು ನನಸಾಗುತ್ತಿದ್ದೆ. “ನಾನು 3 ವರ್ಷದಿಂದ ಸಿನಿಮಾ, ಕಿರುತೆರೆಯಲ್ಲಿ ಸಹ ನಟನಾಗಿ ನಟಿಸುತ್ತಿದ್ದು, ಈ ನಡುವೆ ಡಬ್ಬಿಂಗ್‌ನಲ್ಲಿ ನನ್ನ ಧ್ವನಿಯನ್ನು ನೀಡುತ್ತಿದ್ದೇನೆ” ಎಂದು ನಿಶ್ಚಿತ್ ಪತ್ರಿಕೆಯೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಲೇಖಕರು: ✍. ಲಕ್ಷ್ಮೀಕಾಂತ್ ಕೋಮರಪ್ಪ