ಶ್ರೀ ಕೊದಂಡ ರಾಮ ದೇವಾಲಯ
ಮಡಿಕೇರಿ, ಕೊಡಗು
ಪ್ರಾಸ್ತಾವಿಕ
ಐತಿಹಾಸಿಕ ಮಡಿಕೇರಿ ದಸರಾ ಉತ್ಸವದಲ್ಲಿ 7ನೇ ಮಂಟಪವಾಗಿ ಉತ್ಸವದ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಶ್ರೀ ಕೊದಂಡರಾಮ ದೇವಾಲಯದ ಉತ್ಸವ ಸಮಿತಿಯು ಕಳೆದ 47 ವರ್ಷಗಳಿಂದ ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಇದೀಗ 48ನೇ ವರ್ಷದ ದಸರಾ ಉತ್ಸವದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಹಿನ್ನಲೆ – ಇತಿಹಾಸ
ಈ ದೇಗುಲವು ನಗರದ ಮಾರುಕಟ್ಟೆಯಿಂದ ಉತ್ತರಕ್ಕೆ ಕಾಲ್ನಡಿಗೆ ದೂರದಲ್ಲಿದೆ. ಮಡಿಕೇರಿಯ ತೋಟಗಾರಿಕಾ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೆಚ್.ನಿಂಗಪ್ಪ ಎಂಬುವರು ಸ್ಥಳೀಯ ಯುವಕರ ಗುಂಪನ್ನು ಕಟ್ಟಿಕೊಂಡು ಸಮಿತಿಯೊಂದನ್ನು ರಚಿಸಿ, ದಾನಿಗಳ ನೆರವಿನಿಂದ 1977 ರಲ್ಲಿ ಈ ದೇಗುಲವನ್ನು ನಿರ್ಮಿಸಿದರು. ಮೊದಲಿಗೆ ಶ್ರೀ ರಾಮನ ಚಿತ್ರಪಟವನ್ನು ಇಟ್ಟು ಪೂಜೆ ಮಾಡಲಾಗುತ್ತಿತ್ತು. ಇದನ್ನು ನಿಂಗಪ್ಪನವರೇ ನಿರ್ವಹಿಸುತ್ತಿದ್ದರು. ದೇಗುಲಕ್ಕೆ ಮೂರ್ತಿಯು ಬೇಕೆನಿಸಿದಾಗ ಹತ್ತಾರು ಕಡೆ ಅಲೆದು ಕೊನೆಗೆ ಮೈಸೂರು ಅರಮನೆ ಸಮೀಪವಿರುವ ಹಾಲ್ನಳ್ಳಿಯ ಶಿಲ್ಪಿಗಳಿಂದ ಸುಂದರವಾದ ಕೋದಂಡಧಾರಿರಾಮ ಜೊತೆಗೆ ಸೀತಾ ಮಾತೆ, ಲಕ್ಷ್ಮಣ ಮತ್ತು ಆಂಜನೇಯ, ಅಲ್ಲದೆ ವಿನಾಯಕನ ವಿಗ್ರಹವನ್ನು ಕೃಷ್ಣಶಿಲೆಯಿಂದ ನಿರ್ಮಿಸಿ ತರಲಾಯಿತು. ಅದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಸಹಕಾರವಿತ್ತು. ದೇವತಾ ವಿಗ್ರಹಗಳ ಪ್ರತಿಷ್ಠಾಪನೆಯು ವಿಜ್ರಂಭಣೆÉಯಿಂದ ನೆರವೇರಿತು. ಇದೇ ಸಂದರ್ಭದಲ್ಲಿ ದೇವಾಲಯದ ವತಿಯಿಂದ ದಸರಾ ಮಂಟಪವನ್ನು ಹೊರಡಿಸಲು ನಿರ್ಧರಿಸಲಾಯಿತು. ದೇವಸ್ಥಾನದ ಆಡಳಿತವನ್ನು ನಿರ್ವಹಿಸುತ್ತಿದ್ದ ನಿಂಗಪ್ಪನವರು ದೇವಸ್ಥಾನವನ್ನು ಸಾರ್ವಜನಿಕರÀ ಹೆಸರಿನಲ್ಲಿ ನೋಂದಾಯಿಸಿ ಹಾಗೆಯೇ ಆಡಳಿತವನ್ನು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಶ್ರೀ ರಾಮ ಸೇವಾ ಸಮಿತಿಯವರಿಗೆ ವಹಿಸಿಕೊಟ್ಟರು. ನವಗ್ರಹ ಮೂರ್ತಿಗಳನ್ನೂ ಹೊಂದಿರುವ ದೇಗುಲವು ಸುಂದರವಾಗಿದೆ. ರಾಮನವಮಿ, ನವರಾತ್ರಿ, ಮುಂತಾದ ಉತ್ಸವಗಳನ್ನು ವಿಜ್ರಂಭಣೆಯಿಂದ ಇಲ್ಲಿ ಆಚರಿಸಲಾಗುತ್ತದೆ.
ಮಂಟಪದ ವಿವರಗಳು – 2022
48ನೇ ವರ್ಷದ ಆಚರಣೆ
ಕಥೆ: ಷಣ್ಮುಖನಿಂದ ತಾರಕಾಸುರನ ವಧೆ
ತೀರ್ಪಿನ ಸಮಯ : 01.45 A.M
ಸ್ಥಳ: ಬಾಟಾ ಶೋರೂಂ ಮುಂಭಾಗ
ಅಧ್ಯಕ್ಷರು: ಹೆಚ್.ಎನ್ . ತಿಮ್ಮಯ್ಯ
ಕಥಾ ನಿರ್ವಹಣೆ: ಸಮಿತಿ ಸದಸ್ಯರು
ಲೈಟಿಂಗ್ ಬೋರ್ಡ್ : ದಿಂಡಿಗಲ್‌ನ ಸೆಲ್ವ
ಒಟ್ಟು ಕಲಾಕೃತಿಗಳು: 18
ಕಲಾ ಕೃತಿನಿರ್ಮಾಣ: ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್
ಧ್ವನಿವರ್ಧಕ : ಬೆಂಗಳೂರಿನ ಟ್ರೆಡಿಷನಲ್ ಈವೆಂಟ್
ಸ್ಟುಡಿಯೋ ಲೈಟ್ : ಗೌತಮ್ ತಂಡ
ಟ್ರ್ಯಾಕ್ಟರ್ ಸೆಟ್ಟಿಂಗ್ : ಮಡಿಕೇರಿಯ ಹೇಮರಾಜ್ ಮತ್ತು ತಂಡ ಮತ್ತು ಸಮಿತಿಯ ಸದಸ್ಯರು
ಸ್ಪೆಷಲ್ ಎಫೆಕ್ಸ್ :
ಒಟ್ಟು ವೆಚ್ಚ: 16 ಲಕ್ಷ
ಫ್ಲಾಟ್‍ಫಾರಂ ಸೆಟ್ಟಿಂಗ್: ಸಮಿತಿ ಸದಸ್ಯರು
ಮಂಟಪದ ಉಸ್ತುವಾರಿ : ಪ್ರಧಾನ ಕಾರ್ಯದರ್ಶಿ ನಂಜುಂಡ ,ಉಪಾಧ್ಯಕ್ಷ ಚಂದ್ರಶೇಖರ್ , ಖಜಾಂಚಿ ಕುಶಾಲ್
ಒಟ್ಟು ಸದಸ್ಯರು: 100
ಶ್ರೀ ಕೊದಂಡ ರಾಮ ದೇವಾಲಯ ದಸರಾ ಸಮಿತಿ ಸಮಿತಿ – 2022
ಅಧ್ಯಕ್ಷರು: ಹೆಚ್.ಎನ್ . ತಿಮ್ಮಯ್ಯ
ಕಾರ್ಯಾಧ್ಯಕ್ಷರು:
ಪ್ರಧಾನ ಕಾರ್ಯದರ್ಶಿ: ನಂಜುಂಡ
ಖಜಾಂಚಿ: ಕುಶಾಲ್
ಉಪಾಧ್ಯಕ್ಷರುಗಳು: ಚಂದ್ರಶೇಖರ್
ಕಾರ್ಯದರ್ಶಿಗಳು:
ಸದಸ್ಯರುಗಳು:
ಶ್ರೀ ಕೊದಂಡ ರಾಮ ದೇವಾಲಯ ಮತ್ತು ಶ್ರೀ ಕೊದಂಡ ರಾಮ ದೇವಾಲಯ ದಸರಾ ಸಮಿತಿ ಬಗೆಗಿನ ಹೆಚ್ಚಿನ ಮಾಹಿತಿ ಲಭ್ಯವಿದ್ದಲ್ಲಿ ನಮ್ಮ ವಾಟ್ಸಪ್ ನಂ. 94830 47519 ಅಥವಾ ನಮ್ಮ ಇ-ಮೇಲ್ searchcoorg@gmail.com ವಿಳಾಸಕ್ಕೆ ಕಳಿಹಿಸಿಕೊಡಿ.
ಮಂಟಪದ ವಿವರಗಳು – 2021
47 ನೇ ವರ್ಷ ಆಚರಣೆ
ಕಥೆ: “ಮಹಿಷಾಸುರಮರ್ದಿನಿ ಕಥಾ ಸಾರಾಂಶ ಕಲಾಕೃತಿ”
ಅಧ್ಯಕ್ಷರು:
ಕಥಾ ನಿರ್ವಹಣೆ:
ಸ್ಟುಡಿಯೋ ಸೆಟ್ಟಿಂಗ್ಸ್:
ಆರ್ಚ್‌ಲೈಟಿಂಗ್ಸ್ ಬೋಡ್ಸ್:
ಸೌಂಡ್ಸ್:
ಒಟ್ಟು ಕಲಾಕೃತಿಗಳು:
ಒಟ್ಟು ವೆಚ್ಚ:
ಚಲನವಲನ:
ಪ್ಲಾಟ್‌ಫಾರಂ ಸೆಟಿಂಗ್ಸ್:
ಕಲಾಕೃತಿ ನಿರ್ಮಾಣ:
ಒಟ್ಟು ಸದಸ್ಯರು: 200
ಮಂಟಪದ ವಿವರಗಳು – 2019
45 ನೇ ವರ್ಷ ಆಚರಣೆ
ಕಥೆ: “ತ್ರಿಪುರಾಸುರರ ವಧೆ”
ಅಧ್ಯಕ್ಷರು: ಮಹೇಶ್
ಕಥಾ ನಿರ್ವಹಣೆ: ಹೇಮರಾಜ್
ಸ್ಟುಡಿಯೋ ಸೆಟ್ಟಿಂಗ್ಸ್: ಚೆನೈ
ಆರ್ಚ್‌ಲೈಟಿಂಗ್ಸ್ ಬೋಡ್ಸ್: ಜೇಮ್ಸ್ ಎಲೆಕ್ಟ್ರೋನಿಕ್ಸ್, ದಿಂಡ್‌ಗಲ್
ಸೌಂಡ್ಸ್: ಲೋಬೋ, ಬೆಂಗಳೂರು.
ಒಟ್ಟು ಕಲಾಕೃತಿಗಳು: 21
ಒಟ್ಟು ವೆಚ್ಚ: 14 ಲಕ್ಷ
ಚಲನವಲನ: ಹೇಮರಾಜ್ ಮತ್ತು ತಂಡ
ಪ್ಲಾಟ್‌ಫಾರಂ ಸೆಟಿಂಗ್ಸ್: ಸಮಿತಿ ಸದಸ್ಯರು
ಕಲಾಕೃತಿ ನಿರ್ಮಾಣ: ಮಹದೇವ ಆಂಡ್ ಸನ್ಸ್ , ಮೈಸೂರು
ಒಟ್ಟು ಸದಸ್ಯರು: 200
2018
ಮಂಟಪದ ವಿವರಗಳು – 2018
44 ನೇ ವರ್ಷ ಆಚರಣೆ
ಕಥೆ: ಶ್ರಿ ದೇವಿ ಮಹಾತ್ಮೆಯಿಂದ, ಚಂಡ ಮುಂಡರ ವಧೇ
ಅಧ್ಯಕ್ಷರು: ಭರತ್
ಆರ್ಚ್ ಲೈಟಿಂಗ್ಸ್ ಬೋರ್ಡ್: ಸುನೀಲ್ ರಾಮನಾಥಪುರ
ಒಟ್ಟು ಕಲಾಕೃತಿಗಳು: 6
ಒಟ್ಟು ವೆಚ್ಚ: 7 ಲಕ್ಷ
ಕಥಾ ನಿರ್ವಹಣೆ: ಮಂಜುನಾಥ್ ಮತ್ತು ತಂಡ
ಫ್ಲಾಟ್‍ಫಾರಂ ಸೆಟ್ಟಿಂಗ್, ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಮತ್ತು ಚಲನವಲನ : ಸಮಿತಿ ಸದಸ್ಯರಿಂದ
ಸ್ಟುಡಿಯೋ ಸೆಟ್ಟಿಂಗ್ಸ್ : ಆನಂದ್ ಮಡಿಕೇರಿ
ಒಟ್ಟು ಸದಸ್ಯರು: 200
2017
ಮಂಟಪದ ವಿವರಗಳು – 2017
ಕಥೆ: ಕೊಲ್ಲೂರು ಮೂಕಾಂಬಿಕೆಯಿಂದ ಮೂಕಾಸುರನ ಸಂಹಾರ
ಅಧ್ಯಕ್ಷರು: ಭರತ್ ಮತ್ತು ಸುಧಾಕರ್
ಆರ್ಚ್ ಲೈಟಿಂಗ್ಸ್ ಬೋರ್ಡ್: ಆ್ಯಂಟನಿ ಎಲೆಕ್ಟೋನಿಕ್ಸ್, ದಿಂಡ್‍ಕಲ್
ಒಟ್ಟು ಕಲಾಕೃತಿಗಳು: 18
ಒಟ್ಟು ವೆಚ್ಚ: 13 ಲಕ್ಷ
ಕಥಾ ನಿರ್ವಹಣೆ: ಮಂಜುನಾಥ್
ಸ್ಟುಡಿಯೋ ಸೆಟ್ಟಿಂಗ್ಸ್: ಬೋಬಿ ಸೌಂಡ್ಸ್ ಆ್ಯಂಡ್ ಲೈಟ್ಸ್, ಬೆಂಗಳೂರು.
ಫ್ಲಾಟ್‍ಫಾರಂ ಸೆಟ್ಟಿಂಗ್: ರವೀಂದ್ರ ಮತ್ತು ತಂಡ
ಟ್ರ್ಯಾಕ್ಟರ್ ಸೆಟ್ಟಿಂಗ್ಸ್:
ಚಲನವಲನ: ಮೆಗಾ ಕ್ರಿಯೇಶನ್ಸ್, ಮಂಜಿ, ರವೀಂದ್ರ
ಸೌಂಡ್ಸ್: ಬೋಬಿ ಸೌಂಡ್ಸ್ ಆ್ಯಂಡ್ ಲೈಟ್ಸ್, ಬೆಂಗಳೂರು.
ಕಲಾಕೃತಿ ನಿರ್ಮಾಣ: ಮೆಗಾ ಕ್ರಿಯೇಶನ್ಸ್, ಮಂಜಿ, ರವೀಂದ್ರ
ಒಟ್ಟು ಸದಸ್ಯರು: 150
ಸಂದರ್ಶನ