ಕೋಟೆಮಾರಿಯಮ್ಮ ದೇವಾಲಯ
ಮಡಿಕೇರಿ, ಕೊಡಗು
ಪ್ರಾಸ್ತಾವಿಕ
ಐತಿಹಾಸಿಕ ಮಡಿಕೇರಿ ದಸರಾ ಉತ್ಸವದಲಿ 4 ಶಕ್ತಿ ಕರಗ ದೇವತೆಗಳಲ್ಲಿ ಕೋಟೆಯ ರಕ್ಷಣೆಗೆಂದೇ ಕೊಡಗಿನ ರಾಜರಿಂದ ಪ್ರತಿಷ್ಠಾಪಿಸಲ್ಪಟ ಶ್ರೀ ಕೋಟೆಮಾರಿಯಮ್ಮ ದೇವಾಲಯದ ದಸರಾ ಉತ್ಸವ ಸಮಿತಿಯು ಕಳೆದ 46 ವರ್ಷಗಳಿಂದ ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು, ಇದೀಗ 47ನೇ ವರ್ಷದ ಸಂಭ್ರಮದಲ್ಲಿದ್ದಾರೆ.
ಹಿನ್ನಲೆ – ಇತಿಹಾಸ
ಶ್ರೀ ಕೋಟೆ ಮಾರಿಯಮ್ಮ ದೇವಾಲಯವು ಮಡಿಕೇರಿ ಕೋಟೆಯ ಹಿಂಭಾಗದ ಪೆನ್ಶನ್‍ಲೇನ್ ಬಳಿಯಿದೆ. ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾಗಿದ್ದು, ಭವ್ಯ ಇತಿಹಾಸವನ್ನು ಹೊಂದಿದೆ. ಈ ದೇವಿಯು ರಾಜನ ಆಸ್ಥಾನ ದೇವತೆಯಾಗಿ ರಾರಾಜಿಸುತ್ತಿದ್ದಳು. ಕ್ರಮೇಣ ರಾಜನ ದುರಾಡಳಿತ, ಅನಾಚಾರಗಳು ಎಲ್ಲೆ ಮೀರಿದಾಗ ದೇವಿಯು ಆತನಿಗೆ ಛೀಮಾರಿ ಹಾಕಿದಳು. ಇದಕ್ಕೆ ಕೋಪಗೊಂಡ ರಾಜನು ದೇವಿಯ ವಿಗ್ರಹವನ್ನು ಭಗ್ನಗೊಳಿಸಿ ಕೋಟೆಯ ಹಿಂಬದಿಯ ಬಾವಿಯಲ್ಲಿ ಎಸೆದನು. ಕೆಲ ಸಮಯದ ನಂತರ ಶ್ರೀ ಕೋಟೆ ಮಾರಿಯಮ್ಮ ತಾಯಿಯು ” ಮುತ್ತು-ಮುತ್ತು” ಎಂಬ ದಂಪತಿಗಳಿಗೆ ಕನಸಿನಲ್ಲಿ ಕಾಣಿಸಿಕೊಂಡು ತನ್ನ ವಿಗ್ರಹವು ಬಾವಿಯಲ್ಲಿ ಇರುವುದಾಗಿಯೂ ಅದನ್ನು ಹೊರತೆಗೆದು ಪೂಜಿಸಬೇಕೆಂದು ತಿಳಿಸಿದಳು. ಆಕೆಯ ಮಾತನ್ನು ಪಾಲಿಸಿದ ಮುತ್ತು ದಂಪತಿಗಳು ವಿಗ್ರಹವನ್ನು ಹೊರತೆಗೆದು ಪೂಜಿಸಿ ಬಾವಿಯ ಸಮೀಪದಲ್ಲಿಯೇ ಪ್ರತಿಷ್ಠಾಪಿಸಿದರು. ಈ ಸಂದರ್ಭದಲ್ಲಿ ತನ್ನನ್ನು ಕೋಟೆಯಿಂದ ಹೊರಗಟ್ಟಿದ ರಾಜನ ಮೇಲೆ ಕೋಪದಿಂದ ಕೋಟೆಯ ಕಡೆ ತಿರುಗಿಯೂ ನೋಡುವುದಿಲ್ಲವೆಂದು ಕೋಟೆಗೆ ವಿರುದ್ಧ ದಿಕ್ಕಿಗೆ ಅಂದರೆ ಉತ್ತರಾಭಿಮುಖವಾಗಿ ನೆಲೆ ನಿಂತಳು. ಪುರಾತನವಾದ ಈ ದೇವಾಲಯದಲ್ಲಿ ಉದ್ಭವಲಿಂಗ ಮತ್ತು ಹುತ್ತವಿದ್ದು ಇತ್ತೀಚಿನ ಕೆಲವು ವರ್ಷಗಳ ಹಿಂದೆ ದೇವಾಲಯದ ಮುಂಭಾಗದಲ್ಲಿರುವ ಅರಳಿ ಮರದ ಬುಡದಲ್ಲಿ ನಾಗ ಪ್ರತಿಷ್ಠಾಪನೆಯನ್ನು ಮಾಡಲಾಗಿದೆ. ನವರಾತ್ರಿ, ಷಷ್ಠಿ, ಹಬ್ಬ ಹರಿದಿನಗಳಂದು ವಿಶೇಷ ಪೂಜೆಗಳು ನಡೆಯುತ್ತದೆ. ನವರಾತ್ರಿಯಂದು ಕರಗವನ್ನು ಹೊರಡಿಸುತ್ತಾರೆ. ನಂತರ ಕುಂಭ ಪೂಜೆ, ಶಾಂತಿ ಪೂಜೆಗಳು ನಡೆಯುತ್ತದೆ. ಈ ದೇವಾಲಯದ ಪೂಜೆಯನ್ನು ಗೌಳಿ (ಯಾದವ) ಜನಾಂಗದವರು ನೆರವೇರಿಸುತ್ತಾರೆ.
ಮಂಟಪದ ವಿವರಗಳು – 2022
47 ನೇ ವರ್ಷ ಆಚರಣೆ
ಕಥೆ: ಸೀತಾಪಹರಣ ರಾವಣನ ಸಂಹಾರ
ತೀರ್ಪಿನ ಸಮಯ : 01.15 A.M
ಸ್ಥಳ: ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟ್ಯಾಂಡ್ ಮುಂಭಾಗ
ಅಧ್ಯಕ್ಷರು: ವಿ.ಬಿ. ಬ್ರಿಜೇಶ್
ಲೈಟಿಂಗ್ ಬೋರ್ಡ್ : ದಿಂಡಿಗಲ್‌ನ ಕಳೆಯಗಮ್
ಒಟ್ಟು ಕಲಾಕೃತಿಗಳು: 24
ಕಲಾ ಕೃತಿನಿರ್ಮಾಣ: ಹುದುಚೂರಿನ ಮಹದೇವಪ್ಪ ಅಂಡ್ ಸನ್ಸ್ ಕಲಾವಿದರು ಹಾಗೂ ಸಮಿತಿ ಸದಸ್ಯರು
ಧ್ವನಿವರ್ಧಕ ಸ್ಟುಡಿಯೋ ಲೈಟ್ :
ಸ್ಟುಡಿಯೋ ಲೈಟ್ : ಸಮಿತಿ ಸದಸ್ಯ ಪ್ರಶಾಂತ್ ಮತ್ತು ತಂಡ
ಟ್ರ್ಯಾಕ್ಟರ್ ಸೆಟ್ಟಿಂಗ್ , ಕಥಾ ನಿರ್ವಹಣೆ: ಬ್ರಿಜೇಶ್ , ಮಂಜುನಾಥ ಇಂಜಿನಿಯರಿಂಗ್ ವರ್ಕ್ಸ್‌ನ ಜಗದೀಶ್ ಹಾಗೂ ಸಮಿತಿ ಸದಸ್ಯರು
ಸ್ಪೆಷಲ್ ಎಫೆಕ್ಸ್ :
ಈ ಬಾರಿಯ ವಿಶೇಷ: 22 ಅಡಿ ಎತ್ತರದ ಕಲಾಕೃತಿ
ಒಟ್ಟು ವೆಚ್ಚ: 22 ಲಕ್ಷ
ಫ್ಲಾಟ್‍ಫಾರಂ ಸೆಟ್ಟಿಂಗ್: ಸಮಿತಿ ಸದಸ್ಯರು
ಒಟ್ಟು ಸದಸ್ಯರು: 100
ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಮತ್ತು ಕೋಟೆಮಾರಿಯಮ್ಮ ಯುವಕ ಮಿತ್ರ ಮಂಡಳಿ ಬಗೆಗಿನ ಹೆಚ್ಚಿನ ಮಾಹಿತಿ ಲಭ್ಯವಿದ್ದಲ್ಲಿ ನಮ್ಮ ವಾಟ್ಸಪ್ ನಂ. 94830 47519 ಅಥವಾ ನಮ್ಮ ಇ-ಮೇಲ್ searchcoorg@gmail.com ವಿಳಾಸಕ್ಕೆ ಕಳಿಹಿಸಿಕೊಡಿ.
ಮಂಟಪದ ವಿವರಗಳು – 2021
46 ನೇ ವರ್ಷ ಆಚರಣೆ
ಕಥೆ: ” ಗಣಪತಿ ಇಂದ ಶತ ಮಹಿಷಿ ಸಂಹಾರ ಕಥಾ ಸಾರಾಂಶ ಕಲಾಕೃತಿ”
ಅಧ್ಯಕ್ಷರು:
ಕಥಾ ನಿರ್ವಹಣೆ:
ಸ್ಟುಡಿಯೋ ಸೆಟ್ಟಿಂಗ್ಸ್:
ಆರ್ಚ್ ಲೈಟಿಂಗ್ ಬೋರ್ಡ್:
ಸೌಂಡ್ಸ್:
ಒಟ್ಟು ಕಲಾಕೃತಿಗಳು:
ಒಟ್ಟು ವೆಚ್ಚ:
ಚಲನವಲನ:
ಪ್ಲಾಟ್‌ಫಾರಂ:
ಕಲಾಕೃತಿ ನಿರ್ಮಾಣ:
ಒಟ್ಟು ಸದಸ್ಯರು : 200
ಮಂಟಪದ ವಿವರಗಳು – 2019
44 ನೇ ವರ್ಷ ಆಚರಣೆ
ಕಥೆ: ” ಹಯಗ್ರೀವನಿಂದ ಹಯಗ್ರೀವಾಸುರನ ವಧೆ”
ಅಧ್ಯಕ್ಷರು: ಯೋಗೇಶ್. ಎಚ್.ಎಲ್
ಕಥಾ ನಿರ್ವಹಣೆ: ಜಗತ್
ಸ್ಟುಡಿಯೋ ಸೆಟ್ಟಿಂಗ್ಸ್: ಡಿ.ಜೆ. ಪ್ರಶಾಂತ್ (ಕೆ.ಎಂ.ಟಿ. ಮೆಂಬರ್) ಮಡಿಕೇರಿ
ಆರ್ಚ್ ಲೈಟಿಂಗ್ ಬೋರ್ಡ್: ಕಲಾಯಾಗಂ ಲೈಟಿಂಗ್ಸ್, ದಿಂಡ್‌ಗಲ್
ಸೌಂಡ್ಸ್: ಪ್ರೀತಿ ಈವೆಂಟ್ಸ್, ಬೆಂಗಳೂರು
ಒಟ್ಟು ಕಲಾಕೃತಿಗಳು: 17
ಒಟ್ಟು ವೆಚ್ಚ: 15 ಲಕ್ಷ
ಚಲನವಲನ: ಕೆ.ಎಂ.ಟಿ. ತಂಡ
ಪ್ಲಾಟ್‌ಫಾರಂ: ಕೆ.ಎಂ.ಟಿ. ತಂಡ
ಕಲಾಕೃತಿ ನಿರ್ಮಾಣ: ಸುನಿಲ್, ಮನು, ರಾಕೇಶ್ ಮತ್ತು ತಂಡ, ಮಡಿಕೇರಿ ಮತ್ತು ಮಹದೇವಪ್ಪ ಆಂಡ್ ಸನ್ಸ್ ಹುದ್ಬೂರು.
ಒಟ್ಟು ಸದಸ್ಯರು : 200
2018
ಮಂಟಪದ ವಿವರಗಳು – 2018
43 ನೇ ವರ್ಷ ಆಚರಣೆ
ಕಥೆ: ದಕ್ಷ ಯಜ್ಞ
ಅಧ್ಯಕ್ಷರು: ಶುಶಾಂತ್ ನಾಯಕ್
ಆರ್ಚ್ ಲೈಟಿಂಗ್ಸ್ ಬೋರ್ಡ್: ಡೇವಿಡ್ ಮಂಗಳೂರು
ಒಟ್ಟು ಕಲಾಕೃತಿಗಳು: 12
ಒಟ್ಟು ವೆಚ್ಚ: 6 ಲಕ್ಷ
ಕಥಾ ನಿರ್ವಹಣೆ: ಸಮಿತಿಯಿಂದ
ಫ್ಲಾಟ್‍ಫಾರಂ ಸೆಟ್ಟಿಂಗ್ ಟ್ರ್ಯಾಕ್ಟರ್ ಸೆಟ್ಟಿಂಗ್ಸ್: ಚಂದ್ರಶೇಖರ್, ಸೀನಾ ಮತ್ತು ತಂಡ
ಚಲನವಲನ : ರಫೀಕ್, ಮನೋಜ್, ನಂದೀಶ್
ಕಲಾಕೃತಿ ನಿರ್ಮಾಣ: ಸುನೀಲ್, ಪ್ರಸಾದ್, ಜಗದೀಶ್ ಮತ್ತು ತಂಡ
ಒಟ್ಟು ಸದಸ್ಯರು : 150
2017
ಮಂಟಪದ ವಿವರಗಳು – 2017
ಕಥೆ: ಹಿರಣ್ಯಾಕ್ಷನ ವಧೆ ಮತ್ತು ದೀಪಾವಳಿ ಆಚರಣೆಯ ಹಿನ್ನಲೆ
ಅಧ್ಯಕ್ಷರು: ಮಂಡೀರ ಸದಾ ಮುದ್ದಪ್ಪ
ಆರ್ಚ್ ಲೈಟಿಂಗ್ಸ್ ಬೋರ್ಡ್: ಕಲೆಯಗಂ ಎಲೆಕ್ಟೋನಿಕ್ಸ್, ದಿಂಡ್‍ಗಲ್
ಒಟ್ಟು ಕಲಾಕೃತಿಗಳು: 30
ಒಟ್ಟು ವೆಚ್ಚ: 15 ಲಕ್ಷ
ಕಥಾ ನಿರ್ವಹಣೆ: ಟೀಂ ಕೆ.ಎಂ.ಟಿ
ಸ್ಟುಡಿಯೋ ಸೆಟ್ಟಿಂಗ್ಸ್: ಮಧುರ ಸೌಂಡ್ಸ್ ಆ್ಯಂಡ್ ಲೈಟ್ಸ್, ಬೆಂಗಳೂರು.
ಫ್ಲಾಟ್‍ಫಾರಂ ಸೆಟ್ಟಿಂಗ್: ಟೀಂ ಕೆ.ಎಂ.ಟಿ
ಟ್ರ್ಯಾಕ್ಟರ್ ಸೆಟ್ಟಿಂಗ್ಸ್: ಟೀಂ ಕೆ.ಎಂ.ಟಿ
ಚಲನವಲನ: ಟೀಂ ಕೆ.ಎಂ.ಟಿ
ಸೌಂಡ್ಸ್: ಮಧುರ ಸೌಂಡ್ಸ್ ಆ್ಯಂಡ್ ಲೈಟ್ಸ್, ಬೆಂಗಳೂರು.
ಕಲಾಕೃತಿ ನಿರ್ಮಾಣ: ಟೀಂ ಕೆ.ಎಂ.ಟಿ
ಒಟ್ಟು ಸದಸ್ಯರು: 150
ಸಂದರ್ಶನ