Flower Farming & Garden Construction ಹೂವಿನ ಬೇಸಾಯ ಮತ್ತು ಉದ್ಯಾನ ನಿರ್ಮಾಣ

ಹೂವಿನ ಪರಿಚಯ Flower Introduction

ಹೂವಿನ ಪರಿಚಯ ಹೂವಿನ ಬೇಸಾಯ ಮತ್ತು ಅಲಂಕಾರಿಕ ಹೂತೋಟ, ತೋಟಗಾರಿಕೆಯ ಒಂದು ಭಾಗವಾಗಿದೆ. ಅಲಂಕಾರಕ್ಕಾಗಿ ಹೂವಿನ ಗಿಡಗಳನ್ನು ಬೆಳೆಸುವುದು, ಹೂತೋಟ, ಮನೆ, ಉದ್ಯಾನವನವನ್ನು ಸುಂದರವಾಗಿಸುವುದರ ಬಗ್ಗೆ ಅಧ್ಯಯನ ನಡೆಸುವುದನ್ನು ಒಳಗೊಂಡಿದೆ. ಹೂವಿನ ಮತ್ತು ಅಲಂಕಾರಿಕ ಸಸಿಗಳನ್ನು ಕೇವಲ ಅಂದಗೊಳಿಸಲು ಮಾತ್ರವಲ್ಲದೆ ದೇಶಿಯ ಮಾರಾಟ ಮಾಡಲು ಮತ್ತು ರಫ್ತಿಗಾಗಿ ಬೆಳೆಯಲ್ಪಡುತ್ತದೆ. ಕೆಲವೊಂದು ಹೂಗಳನ್ನು ಪರಿಮಳ, ಸುಗಂಧದ ಎಣ್ಣೆ ಮತ್ತು ಪನ್ನೀರಿಗಾಗಿ ಬಳಸುತ್ತಿದ್ದಾರೆ. ಭಾರತದಲ್ಲಿ ವೇದಗಳ ಕಾಲದಲ್ಲೂ ಹೂವಿನ ಬೇಸಾಯ ಪ್ರಚಲಿತದಲ್ಲಿತ್ತು. ನಾಗರೀಕತೆಯ ಪ್ರಾರಂಭದಿಂದಲೂ ಹೂವಿನ ಬೇಸಾಯ ಮತ್ತು ಅಲಂಕಾರಿಕ [...]

ವಾರ್ಷಿಕ ಹೂಗಳು Annual Flowers

ವಾರ್ಷಿಕ ಹೂಗಳು ವಾರ್ಷಿಕ ಹೂಗಳು ತಮ್ಮ ಜೀವನ ಚಕ್ರವನ್ನು ಒಂದೇ ಋತುವಿನಲ್ಲಿ ಪೂರೈಸುತ್ತದೆ. ಕೆಲವೊಂದು ಬೇಗನೆ ಹೂ ಬಿಡುವ ಬಹುವಾರ್ಷಿಕ ಹೂಗಳನ್ನು ವಾರ್ಷಿಕದಂತೆ ಬೆಳೆದು ಋತುವಿನ ಅಂತ್ಯದಲ್ಲಿ ಕಿತ್ತುಹಾಕಲಾಗುತ್ತದೆ. ವಾರ್ಷಿಕ ಹೂಗಳು ಉದ್ಯಾನವನಕ್ಕೆ ಶೋಭೆಯನ್ನು ಕೊಡುತ್ತದೆ. ಬಗೆ ಬಗೆಯ ಬಣ್ಣಗಳಿಂದ ಕೂಡಿದ ಹಲವಾರು ವಿಧದ ವಾರ್ಷಿಕ ಹೂಗಳನ್ನು ನಿಶ್ಚಿತ ಋತುವಿನಲ್ಲಿ ಬೆಳೆಯಲ್ಪಡುತ್ತವೆ ಮತ್ತು ಇವುಗಳನ್ನು ಸಾಧಾರಣವಾಗಿ ಗುಂಪಾಗಿ ನೆಡುವುದರಿಂದ ಸುಂದರವಾಗಿ ಗೋಚರಿಸುತ್ತದೆ. ಹೂಗಳನ್ನು 1) ಚಳಿಗಾಲದ 2) ಬೇಸಿಗೆಗಾಲದ 3) ಮಳೆಗಾಲದ ಹೂಗಳೆಂದು 3 ವಿಭಾಗಗಳಾಗಿ ವಿಂಗಡಿಸಲಾಗಿದೆ. [...]

ಉದ್ಯಾನವನ The park

ಉದ್ಯಾನವನ ಉದ್ಯಾನವನ ಹೊರಾಂಗಣದಲ್ಲಿ ನಿರ್ಮಿತವಾದ ವ್ಯವಸ್ಥಿತ ಸ್ಥಳವಾಗಿದ್ದು, ಅಲ್ಲಿ ಪ್ರದರ್ಶನ, ಅಭಿವೃದ್ಧಿ ಮತ್ತು ಮನೋರಂಜನೆಗಾಗಿ ಸಸಿಗಳನ್ನು ಹಾಗು ಪ್ರಕೃತಿಯ ಇತರ ವಸ್ತುಗಳನ್ನು ಪೋಷಿಸಲಾಗುತ್ತದೆ. ಉದ್ಯಾನವನ ಪ್ರಕೃತಿಯಲ್ಲಿ ದೊರೆಯುವ ಮತ್ತು ಮಾನವ ನಿರ್ಮಿತ ವಸ್ತುಗಳನ್ನು ಒಳಗೊಂಡಿರುತ್ತದೆ. ಇತ್ತೀಚೆಗೆ ಮನೆ ಮನೆಗಳಲ್ಲಿ ಹೂ ತೊಟ ಸಾಮಾನ್ಯವಾಗಿ ಕಂಡುಬರುತ್ತವೆ. ಕೆಲವು ಉದ್ಯಾನವನಗಳು ಅಲಂಕಾರಿಕ ಉದ್ಧೇಶ ಹೊಂದಿದ್ದರೆ, ಕೆಲವು ಆಹಾರ ಉತ್ಪಾದನೆಗಾಗಿ ಸಹ ಬಳಸಲ್ಪಡುತ್ತದೆ. ಉದ್ಯಾನವನದಲ್ಲಿ ಆಹಾರ ಉತ್ಪಾದನೆಗಾಗಿ ಬೇರೆ ಎಡೆಗಳಿರಬಹುದು ಅಥವಾ ಹೂಗಿಡಗಳೊಂದಿಗೆ ಮಿಶ್ರವಾಗಿ ಬೆಳೆಯಬಹುದು. ಆಹಾರ ಉತ್ಪಾದನೆಯ ಉದ್ಯಾನವನ ತನ್ನ [...]

ಪೊದರು subshrub

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಪೊದರು ಪೊದರು ಹಲವಾರು ಕೊಂಬೆಗಳಿಂದ ಕೂಡಿದ್ದು, 5-6 ಮೀಟರ್ ಎತ್ತರವಿದ್ದು ಮರಗಳಿಗಿಂತ ಭಿನ್ನವಾಗಿದೆ. ಬೆಳೆಯುವ ಗುಣವನ್ನು ಅವಲಂಬಿಸಿ ಹಲವಾರು ಜಾತಿಯ ಮರಗಳು ಪೊದೆ ಅಥವಾ ಮರಗಳಾಗುತ್ತವೆ. ಅತೀ ಕುಳ್ಳ ಪೊದೆ 2 ಮೀ.ಗಿಂತ ಕಡಿಮೆ ಎತ್ತರವಿರುತ್ತದೆ. ಒಂದು ಪ್ರದೇಶದ ಅಥವಾ ಉದ್ಯಾನವನದಲ್ಲಿರುವ ಅನೇಕ ಪೊದರುಗಳನ್ನು ಕುರುಚಲ ತೋಪು ಎಂದು ಕರೆಯುತ್ತಾರೆ. ಹಲವು ಜಾತಿಯ ಪೊದರನ್ನು ಮೇಲಿನಿಂದ ಸವರಿದಾಗ ದಟ್ಟ ಎಲೆ ಮತ್ತು ಒತ್ತೊತ್ತಾಗಿ ಬೆಳೆಯುವ ಚಿಕ್ಕ ಕೊಂಬೆಗಳನ್ನು ಬಿಡುತ್ತದೆ. ಅಗಲ ಎಲೆಯ ಪೊದರಿನ ಗಿಡಗಳನ್ನು ಸಾಮಾನ್ಯವಾಗಿ ಹೂತೋಟದಲ್ಲಿ [...]

ಬೇಲಿ Fence

ಬೇಲಿ ಬೇಲಿ ಹೂತೋಟದ ಒಂದು ಮುಖ್ಯ ಭಾಗವಾಗಿದೆ. ಇವುಗಳನ್ನು ಗಡಿ ಗುರುತಿಸಲು ಮತ್ತು ಹೂತೋಟಗಳನ್ನು ವಿವಿಧ ಭಾಗವಾಗಿ ವಿಂಗಡಿಸಲು ಬಳಸುತ್ತಾರೆ. ಬೇಲಿಯ ಮುಖ್ಯ ಉದ್ಧೇಶ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ರೀತಿಯಾಗಿದ್ದು ಈ ಕೆಳಗಿನಂತಿದೆ. • ರಕ್ಷಣೆ: ಪ್ರಾಣಿಗಳಿಂದ ಕಾಪಾಡಲು ಸಾಮಾನ್ಯವಾಗಿ ಮುಳ್ಳು ಗಿಡಗಳನ್ನು ಬಳಸಲಾಗುತ್ತದೆ. • ಸುಂದರಗೊಳಿಸಲು: ಅಂದ ಕಾಣುವ ಗಿಡಗಳನ್ನು ಬಳಸಿ ಬೇಲಿ ಮಾಡಲಾಗುತ್ತದೆ. ಇವುಗಳ ಎಲೆಗಳು ಸುಂದರವಾಗಿದ್ದು ಸುವಾಸನೆಯುಕ್ತ ಹೂವು ಹೊಂದಿರುತ್ತದೆ. • ಮುಚ್ಚಲು: ಬೇಗ ಬೆಳೆಯುವ ಗಿಡಗಳು ದಟ್ಟ ಎಲೆಗಳನ್ನು ಹೊಂದಿದ್ದು [...]

ಹುಲ್ಲು ಹಾಸು Grass

ಹುಲ್ಲು ಹಾಸು ಹುಲ್ಲು ಹಾಸನ್ನು ಉದ್ಯಾನದ ಹೃದಯವೆಂದು ಕರೆಯಬಹುದು ಮತ್ತು ರಾಜನ ಆಸ್ಥಾನಕ್ಕೆ ಹೋಲಿಸಲಾಗುತ್ತದೆ. ರಾಜನ ಸುತ್ತ ಇತರ ದೂತರು ಕುಳಿತ ಹಾಗೆ ಹುಲ್ಲು ಹಾಸಿನ ಸುತ್ತ ವಿವಿಧ ಹೂಗಿಡಗಳನ್ನು ನೆಡಲಾಗುವುದು. ಹುಲ್ಲು ಹಾಸಿನಿಂದ ಉದ್ಯಾನದ ಅಂದವು ಹೆಚ್ಚುವುದು. ಸದಾ ಹಸಿರಾಗಿ ಇರುವ ದಟ್ಟವಾಗಿ ಬೆಳೆದ ಹುಲ್ಲಿನ ಗುಂಪಿನ ಸ್ಥಳವನ್ನು ಹುಲ್ಲುಹಾಸು ಎಂದು ಕರೆಯುವರು. ಚೆನ್ನಾಗಿ ಬೆಳೆದ ಹುಲ್ಲು ಹಾಸನ್ನು ಮಖಮಲ್ಲು ರತ್ನಕಂಬಳಿಗೆ ಹೋಲಿಸುತ್ತಾರೆ. ಸುಂದರ ಹುಲ್ಲು ಹಾಸನ್ನು ನೋಡುವುದು ಮತ್ತು ಸ್ಪರ್ಶಿಸುವುದರಿಂದ ಮನಸಿಗೆ ಮುದ ನೀಡುತ್ತದೆ. [...]

ಆಂಥೂರಿಯಂ Anthurium

ಆಂಥೂರಿಯಂ ಆಂಥೋರಿಯಂ ಉಷ್ಣ ವಲಯದ ಸುಂದರವಾದ ಹೂವಿನ ಬೆಳೆಯಾಗಿದ್ದು ಇದನ್ನು ಕತ್ತರಿಸಿದ ಹೂವು ಮತ್ತು ಅದರ ಆಕರ್ಷಕ ಅಗಲವಾದ ಎಲೆಗಳಿಗಾಗಿ ಬೆಳೆಯಲಾಗುತ್ತಿದೆ. ಆಂಥೋರಿಯಂ ಹೂವನ್ನು ಮತ್ತು ಅದರ ಎಲೆಗಳನ್ನು ಹೂದಾನಿಗಳಲ್ಲಿ ದೀರ್ಘ ಕಾಲದವರೆಗೆ ಆಕರ್ಷಕವಾಗಿ ಇರುವಂತೆ ಜೋಡಿಸಲು ಹಾಗು ಹೆಚ್ಚಿನ ಬೆಲೆಯ ಹೂ ಗುಚ್ಛಗಳನ್ನು ತಯಾರಿಸಲು ಕೂಡ ಉಪಯೋಗಿಸುತ್ತಾರೆ. ಹೂವು ಮತ್ತು ಎಲೆಗೆ ಅಂತರರಾಷ್ಟ್ರೀಯ ಪುಷ್ಪ ಮಾರುಕಟ್ಟೆಯಲ್ಲಿ ಅಂದರೆ ಹಾಲೆಂಡ್, ಜಪಾನ್, ಅಮೇರಿಕಾ ಮುಂತಾದ ದೇಶಗಳಲ್ಲಿ ಬಾರಿ ಬೇಡಿಕೆ ಇದೆ. ಇದಲ್ಲದೆ ನಮ್ಮ ದೇಶದ ಪ್ರಮುಖ ನಗರಗಳಲ್ಲೂ [...]

ಪಾಪಾಸು ಕಳ್ಳಿ Cactus

ಪಾಪಾಸು ಕಳ್ಳಿ ಪಾಪಾಸು ಕಳ್ಳಿ ಕ್ಯಾಕ್ಟೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಕೆಲವು ತಳಿಗಳನ್ನು ಅಲಂಕಾರಿಕ ಸಸ್ಯವಾಗಿ, ಮೇವಿಗಾಗಿ ಮತ್ತು ಇನ್ನು ಕೆಲವನ್ನು ಹಣ್ಣಿಗಾಗಿ ಬೆಳಸುತ್ತಾರೆ. ಸಾಮಾನ್ಯವಾಗಿ ಒಣ ವಾಯುಗುಣದಲ್ಲಿ ಬೆಳೆಯುತ್ತದೆ. ಕೆಲವು ವಿಪರೀತ ಒಣ ವಾತಾವರಣದಲ್ಲಿ ಬೆಳೆಯುವುದರಿಂದ ನೀರನ್ನು ಹಿಡಿದಿಟ್ಟುಕೊಳ್ಳಲು ಅನೇಕ ಮಾರ್ಪಾಡುಗಳಿಂದ ಕೂಡಿದೆ. ಹೆಚ್ಚಿನ ಪಾಪಾಸ್‍ಕಳ್ಳಿಯ ಎಲೆಗಳು ಮುಳ್ಳುಗಳಾಗಿ ಮಾರ್ಪಾಡು ಹೊಂದಿದೆ. ಎಲೆಗಳು ಇಲ್ಲದಿರುವುದರಿಂದ ಕಾಂಡವು ದಪ್ಪವಾಗಿದ್ದು ಹರಿತನ್ನು ಹೊಂದಿರುವುದರಿಂದ ಆಹಾರವನ್ನು ತಯಾರಿಸುತ್ತದಲ್ಲದೆ ನೀರನ್ನು ಸಹ ಶೇಖರಿಸುತ್ತದೆ. ಹಲವಾರು ರೀತಿಯ ಗಾತ್ರ ಮತ್ತು ಆಕಾರವನ್ನು ಪಾಪಾಸ್‍ಕಳ್ಳಿಗಳು [...]

ಸಕ್ಕುಲೆಂಟು

ಸಕ್ಕುಲೆಂಟು ಅಲಂಕಾರಿಕ ಗಿಡಗಳಲ್ಲಿ, ಸಕ್ಕುಲೆಂಟ್‍ಗಳು ತಮ್ಮ ವಿಭಿನ್ನ ಮತ್ತು ಆಕರ್ಷಕ ಗುಣಗಳಿಂದ ಜನರಿಂದ ಮೆಚ್ಚುಗೆ ಪಡೆದಿದೆ ಮತ್ತು ಅಲಂಕಾರಿಕ ಗಿಡಗಳ ಪರಿಣತರ ವಿಶೇಷ ಗಮನ ಸೆಳೆದಿದೆ. ಸಕ್ಕುಲೆಂಟ್‍ಗಳು ಸುಮಾರು 50 ಕುಟುಂಬಗಳಲ್ಲಿ ಹಂಚಿಹೋಗಿದೆ ಹಾಗು 11 ತಳಿಗಳು ಕ್ಯಾಕ್ಟೇಸಿ ಕುಟುಂಬದಲ್ಲಿ ಒಳಗೊಂಡಿದೆ. ಆದ್ದರಿಂದ ಎಲ್ಲಾ ಪಾಪಸುಕಳ್ಳಿ ಗಿಡಗಳು ಸಕ್ಕುಲೆಂಟ್‍ಗಳಾಗಿವೆ, ಆದರೆ ಎಲ್ಲಾ ಸಕ್ಕುಲೆಂಟ್ ಗಿಡಗಳು ಪಾಪಸುಕಳ್ಳಿಗಳಲ್ಲ. ಗಡುಸಾಗಿರುವ ಎಡೆನಿಯಮ್ಸ್ ಎಲೊಸ್, ಅಗಾವೆಸ್, ಬ್ಯೂಕಾರ್ಡಿಯಸ್, ಸೆರೋಪ್‍ಜಿಯನ್ಸ್, ಸಡಮ್ಸ್, ಕ್ರುಸುಲಾಸ್, ಕಪ್‍ಹರ್ಬಿಯಾಸ್, ಫ್ಯುರೆರಿಯಾಸ್, ಹಾವರ್ಡಿಯಾಸ್, ಕಲಾಂಚೋಸ್, ಪೇಚಿಪೋಡಿಯಮ್ಸ್, ಯಕ್ಕಾಸ್ ಮುಂತಾದವುಗಳನ್ನು [...]

ರಜನಿಗಂಧ

ರಜನಿಗಂಧ ರಜನಿಗಂಧ ರಜನಿಗಂಧ (Polianthes tuberosa Fam:Agavaceae) ಉಷ್ಣವಲಯದ ಜನರಲ್ಲಿ ಮತ್ತು ಬೆಳಗಾರರಲ್ಲಿ ಇತ್ತೀಚೆಗೆ ಆಸಕ್ತಿ ಹುಟ್ಟಿಸಿದ ಹೂವಿನ ಬೆಳೆ. ವಾಣಿಜ್ಯವಾಗಿ ಇದನ್ನು ಹೆಚ್ಚಾಗಿ ಕರ್ನಾಟಕ, ಪ.ಬಂಗಾಳ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಬೆಳೆಯುತ್ತಾರೆ. ಉತ್ತರ ಈಶಾನ್ಯದ ತ್ರಿಪುರದಲ್ಲೂ ಈ ಬೆಳೆಯು ಜನಪ್ರಿಯವಾಗುತ್ತಿದೆ. ತನ್ನ ಆಕರ್ಷಣೀಯ ಸೌಂದರ್ಯ ಮತ್ತು ಸುವಾಸನೆಯಿಂದ ಪುಷ್ಪಪ್ರಿಯರನ್ನು ಆಕರ್ಷಿಸುತ್ತದೆ. ಹೂಗುಚ್ಛ, ಹೂವಿನಹಾರ ತಯಾರಿಕೆ ಮತ್ತು ಸುಗಂಧ ಭರಿತ ಎಣ್ಣೆ ತಯಾರಿಕೆಯಲ್ಲಿ ಉತ್ತಮ ಭವಿಷ್ಯ ಹೊಂದಿದ ಹೂವಿನ ಬೆಳೆ. ಸುಗಂಧರಾಜ ಹೂವಿನ ಕೊಯ್ಲು ಮಾಡಿದನಂತರ ಹೆಚ್ಚು ಸಮಯ [...]

ಹಂಚಿಕೊಳ್ಳಿ
error: Content is protected !!