ಕೊಡವ ರೈಡರ್ಸ್ ಕ್ಲಬ್ ತಂಡದಿಂದ ಕೋಣಂಗೇರಿಯಲ್ಲಿ ಅದ್ಧೂರಿಯಿಂದ ನಡೆದ 5ನೇ ವರ್ಷದ ವನಮಹೋತ್ಸವ

Reading Time: 5 minutes

ಜಿಲ್ಲೆಯ ಶ್ರೀಮಂತ ಸಂಸ್ಕೃತಿಯ ಮೇಲೆ ಅತ್ಯಾಚಾರ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಸಾಮಾಜಿಕ ಅಭದ್ರತೆ ಕಾಡುತ್ತಿದೆ. ಯಾವುದೇ ಕಾರಣಕ್ಕೂ ಕೊಡವರು ತಮ್ಮ ಜಾಗವನ್ನು ಹೊರಗಿನವರಿಗೆ ಮಾರಾಟ ಮಾಡಿ ಹೋಗದಂತೆ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಕರೆ ನೀಡಿದರು.

ಕೊಡವ ರೈಡರ್ಸ್ ಕ್ಲಬ್ ಮುಂದಾಳತ್ವದಲ್ಲಿ ಬಾಂಡಿಂಗ್ ಬ್ಲೂಮ್ಸ್ ಕೊಡಗು ಸಂಸ್ಥೆ ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜು ಸಹಯೋಗದಲ್ಲಿ ಕೋಣಂಗೇರಿ ತುಪ್ಪನಾಣಿ ಭಗವತಿ ದೇವಸ್ಥಾನದ ಅವರಣದಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಜಿಲ್ಲೆಯ ಪರಿಸ್ಥಿತಿ ಹಿಂದಿನಂತಿಲ್ಲ ಜಿಲ್ಲೆಯಲ್ಲಿ ಸಾಮಾಜಿಕ ಅಭದ್ರತೆ ಕಾಡುವುದರ ಜೊತೆಗೆ ಪ್ರಾಕೃತಿಕ ಅಸಮತೋಲನ ಎದುರಾಗಿದೆ, ಒಂದೆಡೆ ಗಿಡ ನೆಡುವ ಕೆಲಸವಾಗುತ್ತಿದ್ದರೆ ಮತ್ತೊಂದೆಡೆ ಕಾಡಿನಲ್ಲಿ ಮಾತ್ರವಲ್ಲ ನಾಡಿನಲ್ಲಿ ಕೂಡ ಮರಗಳ ಹನನವಾಗುತ್ತಿದೆ. ಸ್ಥಳೀಯರಿಂದ ಅರಣ್ಯವನ್ನು ಕಾಪಾಡುವ ಕೆಲಸವಾದರೆ, ಹೊರಗಿನ ಮರಗಳ್ಳರಿಂದ ಅರಣ್ಯ ನಾಶವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಮತ್ತೋರ್ವ ಮುಖ್ಯ ಅತಿಥಿ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾತನಾಡಿ ಒಂದು ಸಮಯದಲ್ಲಿ ಭತ್ತದ ಕಣಜವಾಗಿದ್ದ ಕೊಡಗಿನಲ್ಲಿ ಭತ್ತ ಬೆಳೆಯುವ ಪ್ರದೇಶಗಳು ಮಾಯವಾಗಿದೆ, ಇದಕ್ಕೆ ಮೂಲ ಕಾರಣ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿರುವುದು ರೈತರ ಭತ್ತ ಬೆಳೆಯುವ ಪ್ರದೇಶಕ್ಕೆ ಇಂತಿಷ್ಟು ಸಹಾಯಧನ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟ ಅವರು ನಮ್ಮ ಪೂರ್ವಿಕರ ತಿಳುವಳಿಕೆ ಜ್ಞಾನ ಇಂದಿನ ಯಾವುದೇ ವಿಜ್ಞಾನಿಗಳಿಗೂ ಕಡಿಮೆ ಇಲ್ಲ, ಭತ್ತದ ಗದ್ದೆಗಳಿಗೆ ನೀರುಣಿಸುವ ಬರೆಕಾಡ್ ಹಾಗೂ ದೇವರಕಾಡು ಹೀಗೆ ಒಂದೊಂದು ಅರಣ್ಯಕ್ಕೂ ಒಂದೊಂದು ಹೆಸರಿಟ್ಟು ಅರಣ್ಯ ರಕ್ಷಣೆ ಮಾಡುವ ಜೊತೆಗೆ ನೀರಿನ ಸೆಲೆಯನ್ನು ಕಾಪಾಡಿದ ವಿಜ್ಞಾನಿಗಳು ನಮ್ಮ ಹಿರಿಯರು. ಇದನ್ನು ನಮ್ಮ ಇಂದಿನ ಪೀಳಿಗೆ ನಾವು ಮಾಡಿದೆ, ಆದರೆ ನಂತರದ ದಿನಗಳಲ್ಲಿ ಕಾಡಿನ ಬಗ್ಗೆ ಮಾಹಿತಿ ಇಲ್ಲದವರು ಕೂಡ ಅರಣ್ಯ ಮಂತ್ರಿಗಳಾಗಿ ಆಯ್ಕೆಯಾಗುತ್ತಿರುವುದು ನಮ್ಮ ದುರ್ದೈವ, ಅವರಿಗೆ ಕಾಡಿನ ಬಗ್ಗೆ ಜ್ಞಾನ ಎಲ್ಲಿರಬೇಕು, ಬೆಂಗಳೂರಿನ ಹವಾ ನಿಯಂತ್ರಣ ಕೊಠಡಿಯಲ್ಲಿ ಕುಳಿತು ಅರಣ್ಯದ ಬಗ್ಗೆ ಕಾನೂನು ರೂಪಿಸುವ ಮಂದಿಯಿಂದ ಇಂದು ಅರಣ್ಯ ನಾಶವಾಗಿದೆ, ಇದರಿಂದಲೇ ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ಕಾಡನ್ನು ಕುಡಿದು ತೇಗ, ಬೀಟಿ ಹಾಗೂ ನೀಲಗಿರಿ ತೋಪುಗಳಾಗಿ ಪರಿವರ್ತನೆ ಮಾಡಿರುವುದರ ಫಲ ಇವತ್ತು ವನ್ಯಮೃಗಗಳು ಆಹಾರ ಹರಿಸಿ ನಾಡಿಗೆ ಬರುವಂತಾಗಿದೆ ಎನ್ನುತ್ತಾ ಇವುಗಳನ್ನು ನಮ್ಮ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಸರಿಪಡಿಸಬೇಕಿದೆ, ಭವ್ಯ ಭಾರತದ ಭವಿಷ್ಯ ಯುವಕ ಯುವತಿಯರ ಹೆಗಲ ಮೇಲಿದೆ ಎಂದರು.

ಮತ್ತೋರ್ವ ಅತಿಥಿ ಹಾಗೂ ಸಾಮಾಜ ಸೇವಕರಾದ ಅಜ್ಜಿಕುಟ್ಟೀರ ಕಮಲ ಪೂಣಚ್ಚ ಮಾತನಾಡಿ ಕಾಡು ಪ್ರಾಣಿಗಳಿಗೆ ಕಾಡಿನಲ್ಲಿ ಸರಿಯಾದ ಆಹಾರ ದೊರಕದೆ ಅವು ನಾಡಿಗೆ ಲಗ್ಗೆ ಇಡುತ್ತಿದ್ದು, ಕಾಡಿನಲ್ಲಿ ಸರಿಯಾದ ನೀರಿನ ವ್ಯವಸ್ಥೆ ಹಾಗೂ ಆಹಾರ ದೊರೆತರೆ ಅವು ಖಂಡಿತಾ ನಾಡಿಗೆ ಬರುವುದಿಲ್ಲ. ಕಾಡಿನೊಳಗೆ ಇವುಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ಮಾಡಬೇಕಿದೆ ಎನ್ನುತ್ತಾ, ಬಹುತೇಕ ಅರಣ್ಯ ನಾಶವಾಗಿದ್ದೆ ವನ್ಯಮೃಗಗಳು ನಾಡಿಗೆ ಬರಲು ಕಾರಣವಾಗಿದೆ ಎಂದರು. ನಾವು ತಿಂದು ಬಿಸಾಡುವ ಹಣ್ಣಿನ ಬೀಜಗಳನ್ನು ಕಾಡಿಗೆ ಬಿಸಾಡುವುದರ ಮೂಲಕ ಮತ್ತೆ ಕಾಡನ್ನು ಸೃಷ್ಟಿಸಬಹುದು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ರೈಡರ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಕ್ಲಬ್ ಬೆಳೆದು ಬಂದಿರುವ ಹಾದಿಯ ಬಗ್ಗೆ ತಿಳಿಸಿ, ಗಿಡನೆಡುವ ಉದ್ದೇಶಗಳನ್ನು ಹಾಗೂ ಪ್ರತಿವರ್ಷ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಕೊರೋನ ಸಮಯದಲ್ಲಿ ಕೂಡ ಮನೆಯಲ್ಲಿಯೇ ಕುಳಿತು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು, ಇದರಿಂದ ಸಾವಿರಾರು ಪರಿಸರ ಪ್ರೇಮಿಗಳು ಗಿಡನೆಟ್ಟು ವಿಡಿಯೋ ಹಂಚಿಕೊಂಡರು ಎಂದು ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭ ದಾನಿಗಳು ಹಾಗೂ ಸಮಾಜ ಸೇವಕ ಅಜ್ಜಿಕುಟ್ಟೀರ ಶಾಂತು ಪೂಣಚ್ಚ, ಬಾಂಡಿಂಗ್ ಬ್ಲೂಮ್ಸ್ ಕೊಡಗು ಅಧ್ಯಕ್ಷೆ ಬಾಚಮಾಡ ಲಿಜೇಟ್ ಭವಿ ಕುಮಾರ್, ತುಪ್ಪನಾಣಿ ಭಗವತಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕುಪ್ಪಣಮಾಡ ಗಣೇಶ್, ಅಂಜಿಕೇರಿ ನಾಡ್ ಜೋಡಿ ತಕ್ಕರಲ್ಲಿ ಒಬ್ಬರಾದ ಚಕ್ಕೇರ ರಾಜೇಶ್, ಕಾವೇರಿ ಕಾಲೇಜು ಎನ್, ಎಸ್,ಎಸ್ ವಿಭಾಗದ ಅಧಿಕಾರಿ ಮಂದೆಯಂಡ ವನಿತ್ ಕುಮಾರ್ ಉಪಸ್ಥಿತರಿದ್ದು ಮಾತನಾಡಿದರು. ದೇವಸ್ಥಾನ ಅವರಣದಲ್ಲಿ ಗಿಡ ನೆಡುವುದರ ಬಳಿಕ ಹುದಿಕೇರಿ ಸಮುದಾಯ ಆರೋಗ್ಯ ಕೇಂದ್ರ ಅವರಣದಲ್ಲಿ ಗಿಡ ನೆಡಲಾಯಿತು ಕೊಡವ ರೈಡರ್ಸ್ ಕ್ಲಬ್ ಸದಸ್ಯರು, ಬಾಂಬಿಂಗ್ ಬ್ಲೂಮ್ಸ್ ಸದಸ್ಯರು ಸೇರಿದಂತೆ ಊರಿನವರು ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜು ಎನ್ ಎಸ್ ಎಸ್ ವಿಭಾಗದ ವಿದ್ಯಾರ್ಥಿಗಳು, ವಿರಾಜಪೇಟೆ ತ್ರೀವೇಣಿ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚೆನ್ನಪಂಡ ಕಲ್ಪನ ತಿಮ್ಮಯ್ಯ ನಿರೂಪಿಸಿದರು. ಕೊಡವ ಜನಾಂಗದ ಕಾರೋಣ ಹಿಡಿಯುವ ಗೆಜ್ಜೆತಂಡ್ ಬಳಕೆಯ ಕರಿಮರ ಸೇರಿದಂತೆ, ಹಣ್ಣಿನ ಗಿಡಗಳು, ಕಾಡು ಜಾತಿಯ ಗಿಡಗಳನ್ನು ನೆಡಲಾಯಿತು.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments