ನರಿಯಂದಡ ಗ್ರಾಮ ಪಂಚಾಯಿತಿಯ ವತಿಯಿಂದ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯಿತಿಯ ಕಾರ್ಯಾಲಯದ ಕಟ್ಟಡವನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು.
ಸುಸಜ್ಜಿತವಾಗಿ ನಿರ್ಮಾಣವಾದ ಕಟ್ಟಡದಲ್ಲಿ ಹಲವಾರು ವೈಶಿಷ್ಟತೆ ಇದೆ. ಅಂದಾಜು 45 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡ ಪಂಚಾಯಿತಿ ಕಟ್ಟಡವಾಗಿದೆಯಿದು.ಕೊಡಗಿನಲ್ಲಿ ಒಂದು ಮಾದರಿ ಗ್ರಾಮ ಪಂಚಾಯಿತಿ ಕಾರ್ಯಾಲಯವಾಗಿ ಇದು ನಿರ್ಮಾಣ ಗೊಂಡಿದೆ.
ನರಿಯಂದಡ ಗ್ರಾಮಪಂಚಾಯಿತಿಯು ಒಟ್ಟು 7 ಉಪಗ್ರಾಮಗಳನ್ನು ಒಳಗೊಂಡಿದ್ದು ನರಿಯಂದಡ, ಕೊಕೇರಿ, ಚೇಲಾವರ, ಕರಡ, ಪೊದವಾಡ, ಅರಪಟ್ಟು ಹಾಗೂ ಎಡಪಾಲ. ಒಟ್ಟು 15 ಸದಸ್ಯರನ್ನು ಗ್ರಾಮ ಪಂಚಾಯಿತಿ ಒಳಗೊಂಡಿದ್ದು. ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಕಟ್ಟಡ ಒಳಗೊಂಡಿದ್ದು ಅಧ್ಯಕ್ಷರು, ಉಪಾಧ್ಯಕ್ಷರು, ಅಭಿವೃದ್ಧಿ ಅಧಿಕಾರಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹಾಗೂ ದಾಖಲೆ ಕೊಠಡಿಗಳು ಪ್ರತ್ಯೇಕವಾಗಿದ್ದು ಉಳಿದ ಗ್ರಾಮ ಪಂಚಾಯಿತಿಗೆ ಹೋಲಿಸಿದರೆ ವಿಭಿನ್ನ ವಾಗಿದೆ.
ಗ್ರಾಹಕರು ಪಂಚಾಯಿತಿ ಕಟ್ಟಡಕ್ಕೆ ಪ್ರವೇಶಿಸಿದರೆ ಕರವಸೂಲಿ ಕೌಂಟರ್, ಹಾಗೂ ಗಣಕ ಯಂತ್ರ ನಿರ್ವಹಕರ ಕೌಂಟರ್ ಕಾಣಬಹುದು.
ಕಟ್ಟಡದ ಒಳಗಡೆ ವಿಭಿನ್ನವಾದ ಸಭಾಂಗಣ ಕೂಡ ನೋಡುಗರನ್ನು ಆಕರ್ಷಿಸುತ್ತದೆ. ಸಭಾಂಗಣದ ಒಳಗಡೆ ಎಲ್ ಸಿ ಡಿ ಟಿವಿ ಹಾಗೂ ಪ್ರಾಜೆಕ್ಟರ್ ಕೂಡ ಅಳವಡಿಸಲಾಗಿದೆ.
ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಇಡೀ ದೇಶಾದ್ಯಂತ ಪಂಚಾಯಿತಿಗಳಿಗೆ ಒಂದು ಸುಸಜ್ಜಿತ ವಾದ ಕೇಂದ್ರಗಳನ್ನು ನಿರ್ಮಾಣ ಮಾಡಬೇಕೆಂದು ಅದಕ್ಕೆ ಸರಕಾರದ ಅನುದಾನ ಕೊಡಬೇಕೆಂದು ಹೇಳಿ ನರೇಗಾ ಯೋಜನೆಯನ್ನು 2008 ರಲ್ಲಿ ಜಾರಿಗೆ ತಂದಾಗ ಒಂದು ಯೋಚನೆಗಳಿತ್ತು ಅಂದು ಅನುದಾನ 11.25 ಲಕ್ಷ ಮಾತ್ರ ಇದರಲ್ಲಿ ಒಂದು ಪಂಚಾಯಿತಿ ಕೇಂದ್ರವನ್ನ ನಿರ್ಮಾಣ ಮಾಡುವುದು ಬಹಳ ಕಷ್ಟವಾಗಿತ್ತು ಈ ಯೋಜನೇ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರವಾಗಿ ಪ್ರಾರಂಭ ವಾಗಿದ್ದರು ಕೂಡ ಎಲ್ಲೂ ಕೂಡ ಸೇವಾಕೇಂದ್ರಗಳು ನಿರ್ಮಾಣವಾಗಲಿಲ್ಲ ಹಳೇ ಕಟ್ಟಡಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ದೈನಂದಿನ ಕೆಲಸಗಳು ಮುಂದುವರಿಯುತಿತ್ತು.ನಮ್ಮ ರಾಜ್ಯ ಸರಕಾರ ಬಾಪೂಜಿ ಸೇವಾ ಕೇಂದ್ರ ಮೂಲಕ 150 ಕ್ಕೂ ಹೆಚ್ಚು ಸೇವಾ ಕೇಂದ್ರಗಳನ್ನ ಪಂಚಾಯಿತಿಯಲ್ಲೇ ಕೊಡಬೇಕು ಎಂಬ ತೀರ್ಮಾನ ಮಾಡಿದಾಗಲು ಕೂಡ ಸುಸಜ್ಜಿತ ವಾದ ಕಟ್ಟಡದ ಕೊರೆತ ಇತ್ತು, ಇಂಟರ್ ನೆಟ್ ಅಲಭ್ಯತೆ ಕೂಡ ಇತ್ತು.,2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಬಂದನಂತರ ಪಂಚಾಯಿತಿಗಳಿಗೆ ಕೊಡುವ ಅನುದಾನವನ್ನು 18.75 ಸಾವಿರಕ್ಕೆ ಏರಿಸಿದರು ಎಂದು ಕೇಂದ್ರ ಸರಕಾರದ ಕಾರ್ಯವೈಖರಿಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವಿರಾಜಪೇಟೆ ಕ್ಷೇತ್ರದ ಶಾಸಕರು, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ನವರು ಅಧ್ಯಕ್ಷರ ಕೊಠಡಿ ಉದ್ಘಾಟಿಸಿ ಮಾತನಾಡಿ ಸಂವಿದಾನವನ್ನು 72 ತಿದ್ದು ಪಡಿಯ ಮೂಲಕ ಗ್ರಾಮಪಂಚಾಯಿತಿಯನ್ನ 1992 ರಲ್ಲಿ ಮಾಜಿ ಪ್ರಧಾನಿ ನರಸಿಂಹರಾವ್ ಸರಕಾರ ಇದ್ದಾಗ ಸಂವಿದಾನಿಕ ಉದ್ದೇಶ ಎಂಬ ತಿದ್ದುಪಡಿಯ ಮೂಲಕ ತಂದರು.
ಬಹುಶ ಆ ತಿದ್ದುಪಡಿಯೇ ಇಲ್ಲದಿದ್ದರೆ ಇವತ್ತು ನಾವು ನೋಡುತ್ತಿರುವ ಕಟ್ಟಡಗಳು ಇರುತ್ತಿರಲಿಲ್ಲ, ಗ್ರಾಮ ಪಂಚಾಯಿತಿಯಿಂದ ನಡೆಸುವ ಅಧಿಕಾರ ಇರಬಹುದು,ಕಾಮಗಾರಿಗಳು ಇರಬಹುದು ಯಾವುದು ಸಾಧ್ಯ ವಾಗುತ್ತಿರಲಿಲ್ಲ. ಇವತ್ತು ಒಂದು ಸಂವಿಧಾನಿಕವಾದ ಕಚೇರಿ ಎಲ್ಲಾ ಗ್ರಾಮಪಂಚಾಯಿತಿ ಗಳಲ್ಲೂ ಆಗಿರುದರಿಂದ ಬಹಳ ದೊಡ್ಡ ಜವಾಬ್ದಾರಿ ಗ್ರಾಮ ಪಂಚಾಯಿತಿಯ ಮೇಲಿದೆ, ನೇರವಾಗಿ ಜನರಿಗೆ ಮುಟ್ಟುವಂತಹ ಕಾರ್ಯಕ್ರಮಗಳು ಮತ್ತು ಜನರ ಕಷ್ಟಗಳಿಗೆ ಸ್ವಂದಿಸುವಂತಹ ಹೊಣೆಗಾರಿಕೆ ಮರೆಯುವಂತಿಲ್ಲ. ಕಚೇರಿ ಬಹಳ ಉತ್ತಮವಾಗಿದೆ ಒಳ್ಳೆಯ ಕಚೇರಿ ಇದ್ದರೆ ಫೀಲ್ಡ್ ವರ್ಕ್ ಮಾಡಲು ಬಲು ಉಪಯುಕ್ತ.ಉತ್ತಮವಾಗಿ ಜನರ ಸೇವೆ ಮಾಡಲು ಸಾಧ್ಯವಾಗಲೆಂದು ಶುಭ ಹಾರೈಸಿದರು.
ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಮಾತನಾಡಿ ಗ್ರಾಮ ಪಂಚಾಯಿತಿಯ ಹೊಸ ಕಟ್ಟಡ ನಿರ್ಮಾಣ ವಾಗುತ್ತಿರುವುದು ದೇಶದ ಅಭಿವೃದ್ಧಿಯ ಸಂಕೇತ,ಕಡು ಬಡವರು ವಿದ್ಯಾವಂತರಿಗೆ ಉತ್ತಮ ರೀತಿಯಲ್ಲಿ ಸ್ವಂದಿಸಲು ಹಲವಾರು ಯೋಜನೆಗಳಿವೆ ಅದನ್ನು ಸದುಪಯೋಗ ಪಡಿಸುವಂತೆ ಕರೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಪ್ರಾಸ್ತಾವಿಕ ನೀಡಿಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಅಚ್ಚಯ್ಯ ಎರಡುವರೆ ವರ್ಷದ ಆಡಳಿತ ನನಗೆ ತೃಪ್ತಿ ತಂದಿದೆ.
2020 ನೇ ಇಸವಿಯಲ್ಲಿ ಚುನಾಹಿತನಾಗಿ ಬಂದಾಗ ಮೊದಲ ಅನುಭವಗಳನ್ನು ಹಂಚಿಕೊಂಡರು.ನಮ್ಮ ಗ್ರಾಮ ಪಂಚಾಯಿತಿಯ 15 ಸದಸ್ಯರ ಸಹಕಾರದಿಂದ ಅಧ್ಯಕ್ಷನಾಗಿ ಆಯ್ಕೆ ಯಾಗಿ ಮೊದಲ ಸಭೆಯಲ್ಲಿ ನಮಗೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಬೇಕೆಂದಾಗ ಸರ್ವ ಸದಸ್ಯರು ಒಪ್ಪಿಕೊಂಡು ಒಗ್ಗಟ್ಟುವಿನಿಂದ ಕಾರ್ಯರಂಗಕ್ಕಿಳಿದ ಪರಿಣಾಮ ಇಂದು ನೂತನ ಕಟ್ಟಡ ಸಂಸ್ಥಾಪನೆಯಾಗಿದೆ. ಉತ್ತಮ ಕಟ್ಟಡದ ಸಂಸ್ಥಾಪನೆಯಲ್ಲಿ ಮುನ್ನೆಲೆಯಲ್ಲಿ ಕಾರ್ಯಾಚರಿಸಿದ ಗುತ್ತಿಗೆದಾರರ ಸಬಿಲ್ ರವರ ಗುಣಗಾಣ ಸಹ ಮಾಡಿದರು. ಈ ಸಂದರ್ಭದಲ್ಲಿ ಹಿಂದಿನ ಶಾಸಕರು, ಕಂದಾಯ ಇಲಾಖೆಯವರು, ತಾಲೂಕು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರನ್ನ ಸ್ಮರಿಸಿದರು.
ಗುತ್ತಿಗೆದಾರ ಸಬಿಲ್ ಗೆ ಸನ್ಮಾನ:
ಉತ್ತಮವಾಗಿ ಪಂಚಾಯಿತಿ ಕಟ್ಟಡ ನಿರ್ಮಿಸಲು ಸಹಕರಿಸಿದ ಗುತ್ತಿಗೆ ದಾರ ಸಬಿಲ್ ಕಡಂಗ ರವರನ್ನು ಇದೇ ಸಂದರ್ಭದಲ್ಲಿ ಸಂಸದರು ಕಿರು ಕಾಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭ ಕೊಡಗು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಆಕಾಶ್ ಎಸ್,ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶೇಖರ್,ಯೋಜನಾ ನಿರ್ದೇಶಕರಾದ ಜಗದೀಶ್,ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಿ ಎಸ್ ಪುಷ್ಪ,ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ಪಮಿಕ ಹಾಗೂ ನವಾನಿ, ಸ್ವಾಗತ ವನ್ನು ಕೋಡಿರ ವಿನೋದ್ ನಾಣಯ್ಯ ಹಾಗೂ ವಂದನೆಯನ್ನು ದ್ವಿತೀಯ ದರ್ಜೆಯ ಲೆಕ್ಕ ಸಹಾಯಕ ಬಿದ್ದಪ್ಪ ನೆರವೇರಿಸಿದರು.
ವರದಿ: ಅಶ್ರಫ್ ಸಿ.ಎ. ಚೆಯ್ಯ0ಡಾಣೆ