Reading Time: < 1 minute
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಸಸ್ಟೈನ್ ಲ್ಯಾಂಡ್‌ಸ್ಕೇಪ್ ಯೋಜನೆ(Sustain Landscape Project)ಅಡಿಯಲ್ಲಿ ಕೊಡಗು ಜಿಲ್ಲೆಯ ದೇವರಕಾಡು ಪ್ರದೇಶದಲ್ಲಿ ಸ್ಥಳೀಯ ಮರಗಳನ್ನು ನೆಡುವ ಅಭಿಯಾನವನ್ನು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಿಂದ ಆಯೋಜಿಸಲಾಗುತ್ತಿದೆ.
ಕೊಡಗಿನ ದೇವರಕಾಡುಗಳಲ್ಲಿ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಕರಿಮರ, ಕರಡಿ ಮರ, ಬಿಳಿ ದೂಪ, ಕರಿ ದೂಪ, ಕಾಚಂಪುಳ್ಳಿ, ಅಂಟುವಾಳ, ನೇರಳೆ, ಹೊನ್ನೆ, ಬಳಂಜಿ, ಮುಂತಾದ ಮರಗಳನ್ನು ನೆಡಲಾಗುವುದು. ಈ ಉಪಕ್ರಮದ ಭಾಗವಾಗಲು ಆಸಕ್ತಿಯುಳ್ಳ ದೇವರಕಾಡು/ದೇವಸ್ಥಾನ ಸಮಿತಿಗಳು ತಮ್ಮ ದೇವರಕಾಡುಗಳಲ್ಲಿ ಯೋಜನೆಯನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ನಾಣಯ್ಯ ಕೋಣೇರಿರ, (8105919596) ಸಹಾಯಕ ಪ್ರಾಧ್ಯಾಪಕರು, ಅರಣ್ಯ ಮಹಾವಿದ್ಯಾಲಯ, (Forestry College) ಪೊನ್ನಂಪೇಟೆ ಅವರನ್ನು ಸಂಪರ್ಕಿಸಬಹುದು. ಈ ಯೋಜನೆಯನ್ನು ಕುಶಾಲನಗರದ ಸಕ್ಡೆನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SUCDEN India Pvt. LTD) ಪ್ರಾಯೋಜಿಸುತ್ತಿದೆ.