ಭಾರತೀಯ ವಾಯುಸೇನೆಯ ರಾಷ್ಟ್ರೀಯ ಅಭಿಯಾನ

Reading Time: 3 minutes

ವೈಭವದಿಂದ ಆಕಾಶವನ್ನು ಸ್ಪರ್ಶಿಸು (Touch the sky with Glory) ಎಂಬ ಭಗವದ್ಗೀತೆಯ 11ನೇ ಅಧ್ಯಾಯದ ಸೂಕ್ತಿಯಂತೆ “ನಭಃ ಸ್ಪರ್ಶಃ ದೀಪ್ತಃ” ಎಂಬ ಭಾರತೀಯ ವಾಯುಸೇನೆಯು ಧ್ಯೇಯ ವಾಕ್ಯವು ಯುವ ತಲೆಮಾರಿಗೆ ಪ್ರೇರಣಾದಾಯಕವಾಗಿದೆ. ಆ ಮೂಲಕ ಯುವ ತಲೆಮಾರು ಜೀವನಸ್ಪೂರ್ತಿಯ ರೆಕ್ಕೆ ಕಟ್ಟಿಕೊಂಡು ಆಕಾಶದೆತ್ತರಕ್ಕೆ ಹಾರುವ ಕನಸುಗಳನ್ನು ಕಾಣಬೇಕು ಎಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ. ರಾಘವ ಬಿ ಅವರು ಅಭಿಪ್ರಾಯಪಟ್ಟರು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಲ್ಲಿ ಭಾರತೀಯ ವಾಯು ಸೇನೆಯಲ್ಲಿನ ವೃತ್ತಿ ಮಾರ್ಗದರ್ಶನವನ್ನು ಕುರಿತಾದ ಅಭಿಯಾನವನ್ನು ಹಮ್ಮಿಕೊಳ್ಳಲಾದ ಸಂದರ್ಭದಲ್ಲಿ ಅವರು ಮಾತನಾಡುತ್ತಾ ನಮ್ಮ ಗುರಿ ದೇಶಸೇವೆಯ ಕಡೆಗಿರಲಿ, ಭೂಸೇನೆಯಲ್ಲಿ ಕೊಡಗಿನ ವೀರರು ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿಯಲ್ಲಿ ವಾಯುಸೇನೆಯಲ್ಲಿಯೂ ಯುವ ತಲೆಮಾರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಮಾತ್ರವಲ್ಲ ಭಾರತೀಯ ವಾಯುಸೇನಯ ಅಧಿಕಾರಿ ವಿಂಗ್ ಕಮಾಂಡರ್ ಭಾನುಪ್ರಕಾಶ್ ಸಿ ಎ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆದಿದೆ ಅವರು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪ್ಲೈಟ್ ಲೆಪ್ಟಿನೆಂಟಲ್ ಗೌರವ್ ಶರ್ಮ ಅವರು ವಾಯುಸೇನೆಯಲ್ಲಿನ
ಉದ್ಯೋಗ ಅವಕಾಶಗಳ ಕುರಿತ ಸಮಗ್ರ ಮಾಹಿತಿಗಳನ್ನು ನೀಡುವ ಮೂಲಕ ಭಾರತೀಯ ವಾಯು ಸೇನೆಯ ಇತಿಹಾಸ, ವಾಯು ಸೇನೆ ನಡೆಸಿದ ಯುದ್ಧಗಳ ಮಾಹಿತಿ, ವಿಶಿಷ್ಟ ಬಗೆಯ ಯುದ್ಧ ವಿಮಾನಗಳ ಕುರಿತ ಅಂಶಗಳನ್ನು ವಿಶಿಷ್ಟ ಸ್ಲೈಡ್ ಮತ್ತು ದೃಶ್ಯಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿಯನ್ನಿತ್ತರು.

ಜೊತೆಯಲ್ಲಿ ಭಾರತೀಯ ವಾಯುಸೇನೆಯ ವಿಶಿಷ್ಟ ಬಸ್ಸಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಎಲ್ ಇ ಡಿಯ ಮೂಲಕ ವಿಮಾನ ಚಲಾವಣೆ ಮಾಡುವ ವಿಧಾನಗಳನ್ನು, ಯುದ್ಧ ವಿಮಾನಗಳಲ್ಲಿನ ತಂತ್ರಜ್ಞಾನಗಳ ಪರಿಚಯವನ್ನು ಮಾಡಿಕೊಡಲಾಯಿತು.

ಸ್ಕ್ವಾಡ್ರನ್ ಲೀಡರ್ ಹಾಗೂ ಸೈನಿಕ ಶಾಲೆಯ ಉಪಪ್ರಾಂಶುಪಾಲರಾದ ಮನ್ ಪ್ರೀತ್ ಸಿಂಗ್ ಅವರು ಹಾಗೂ
19ನೇ ಕರ್ನಾಟಕ ಬೆಟಾಲಿಯನ್ ಕೊಡಗು ಇಲ್ಲಿನ ಕರ್ನಲ್ ಗಿಲ್ಬರ್ಟ್ ಅವರು ಕಾರ್ಯಕ್ರಮದಲ್ಲಿದ್ದರು. ಮಡಿಕೇರಿಯ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು, ಅಧ್ಯಾಪಕರು ಈ ಮಾರ್ಗದರ್ಶನ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಗಣಕವಿಜ್ಞಾನದ ಸಹ ಪ್ರಾಧ್ಯಾಪಕರಾದ ಶ್ರೀ ರವಿಶಂಕರ್ ಅವರು ನಿರೂಪಿಸಿದರು.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
5 1 vote
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments