ಚೇಲಾವರದಲ್ಲಿ ಗೇಟ್ ಗೆ ಹಾನಿ
ಜೀವ ಬಲಿ ಪಡೆಯುವ ಮುನ್ನ ಇಲಾಖೆ ಹೆಚ್ಚೆತ್ತು ಕೊಳ್ಳಬೇಕು
ಚೆಯ್ಯ0ಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಹಿಂಡು ನಿರಂತರ ದಾಳಿ ನಡೆಸುತ್ತಿದೆ.
ಅಪಾರ ಪ್ರಮಾಣದ ಪಸಲು ನಾಶವಾಗಿದೆ.
ಬರಿತಾ ಬಾಳೆ,ಅಡಿಕೆ,ಕಾಫಿ,ತೆಂಗು, ಒಳ್ಳೆಮೆಣಸು ಗಿಡಗಳಿಗೆ ಕಾಡಾನೆಗಳು ಹಾನಿಪಡಿಸಿದೆ ಕಳೆದವಾರ ಚೇಲಾವರದಲ್ಲಿ ಮಹಿಳೆ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು ಅದೃಷ್ಟ ವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾಳೆ.
ತೋಟಗಳಿಗೆ ಕಾರ್ಮಿಕರು ತೆರಳಲು ಹಿಂದೇಟು ಹಾಕುತ್ತಿದ್ದಾರೆ, ಕಾಫಿ ಗಿಡಗಳನ್ನು ತುಳಿದು ನಾಶ ಮಾಡಿ ಕಾಫಿ ಗಿಡ ಹಳಿವಿನಂಚಿಗೆ ತಳುಪಿದೆ. ಚೇಲಾವರದಲ್ಲಿ ತೋಟಕ್ಕೆ ತೆರಳುವ ಗೇಟ್ ಗೆ ತುಳಿದು ಹಾನಿ ಪಡಿಸಿದೆ.
ಕೂಡಲೇ ಅರಣ್ಯ ಇಲಾಖೆ ಕಾಡಾನೆ ಹಿಂಡನ್ನು ಕಾಡಿಗಟ್ಟಬೇಕು ಇಲ್ಲವೇ ತ್ವರಿತ ಗತಿಯಲ್ಲಿ ಆನೆಯನ್ನು ಸೆರೆ ಹಿಡಿಯ ಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮಸ್ಥ ಹಾಗೂ ಹಾನಿಗೊಳಪಟ್ಟ ತೋಟದ ಮಾಲೀಕ ಎಸ್.ಎಸ್. ಸುಮಂತ್ ಶಕ್ತಿಯೊಂದಿಗೆ ಪ್ರತಿಕ್ರಿಯಿಸಿ ವರ್ಷದಿಂದ ವರ್ಷಕ್ಕೆ ಕಾಡಾನೆ ಹಾವಳಿ ಮಿತಿಮೀರಿದ್ದು ಆನೆ ಹಿಂಡು ತೋಟಗಳಿಗೆ ಲಗ್ಗೆ ಇಟ್ಟು ಪಸಲು ಬರಿತಾ ಗಿಡಗಳನ್ನು ಹಾನಿಪಡಿಸುತ್ತಿದೆ,11 ಕ್ಕೂ ಹೆಚ್ಚು ಕಾಡಾನೆ ಹಿಂಡು ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಪಡಿಸಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ ಬಂದು ಮಾಹಿತಿ ಸಂಗ್ರಹಿಸಿ ತೆರಳುತ್ತಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಅರಣ್ಯ ಇಲಾಖೆ ಕೂಡಲೇ ಕಾಡಾನೆಯನ್ನು ಶಾಶ್ವತವಾಗಿ ಕಾಡಿಗಟ್ಟ ಬೇಕು ಇಲ್ಲವೇ ತ್ವರಿತ ಗತಿಯಲ್ಲಿ ಆನೆಯನ್ನು ಸೆರೆ ಹಿಡಿಯ ಬೇಕೆಂದರು.
ಚೇಲಾವರದ ಪಿ.ಪಿ.ಮಾಚಯ್ಯ ನವರ ಅಂಗಳಕ್ಕೆ ಕಾಡಾನೆ ನುಗ್ಗಿ ಇಂಟರ್ ಲಾಕ್ ಹಾನಿಪಡಿಸಿದೆ, ಸಮೀಪದಲ್ಲೇ ಇರುವ ಸುಧೀರ್ ರೆಡ್ಡಿಯವರ ತೋಟಕ್ಕೆ ತೆರಳುವ ಗೇಟ್ ಗೆ ಹಾನಿಪಡಿಸಿದೆ ಇದಲ್ಲದೆ ಕೊಕೇರಿಯಲ್ಲಿ ಮಚ್ಚ0ಡ ಸುಮತಿರವರ ತೋಟಕ್ಕೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಹಾನಿಪಡಿಸಿದಲ್ಲದೆ ನಿನ್ನೆ ರಾತ್ರಿ ವಾಹನದಲ್ಲಿ ತೆರಳುವ ಸವಾರರಿಗೆ 9 ಆನೆಗಳ ಹಿಂಡು ಚೆಯ್ಯ0ಡಾಣೆ ಕಕ್ಕಬೆ ರಸ್ತೆಯ ಮೂಲಕ ಸಂಚರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾದಚಾರಿಗಳು ವಾಹನ ಸವಾರರು ಮತ್ತು ಕಾರ್ಮಿಕರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಜೀವ ಪಣಕ್ಕಿಟ್ಟು ತಮ್ಮ ತಮ್ಮ ವೃತ್ತಿಯಾರ್ಥ ತೊಡಗಬೇಕಾದ ದಾರುಣ ಪರಿಸ್ಥಿತಿ ನಿರ್ಮಾಣವಾಗಿದೆ.
ಕೂಡಲೇ ಅರಣ್ಯ ಅಧಿಕಾರಿಗಳು ನೂತನ ಶಾಸಕರು ಕಾಡಾನೆಗಳ ಕಾಟಕ್ಕೆ ಖಾಯಂ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕಿದೆ.
ನೊಂದ ಕುಟುಂಬಗಳಿಗೆ ಪರಿಹಾರದ ಮೊತ್ತವನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ: ಅಶ್ರಫ್ ಸಿ.ಎ. ಚೆಯ್ಯ0ಡಾಣೆ