ರಾಷ್ಟ್ರಿಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ.
ಗೇರು ಮತ್ತು ಕೊಕ್ಕೋ ಅಭಿವೃದ್ಧಿ ನಿರ್ದೇಶನಾಲಯ, ಕೊಚ್ಚಿನ್ ಪ್ರಾಯೋಜಕತ್ವದ ರಾಷ್ಟೀಯ ಗೇರು ಸಂಶೋಧನಾ ನಿರ್ದೇಶನಾಲಯದ ಯೋಜನೆ “ಹೊಸ ಗೇರು ತಳಿಗಳ ಮುಂಚೂಣಿ ತಂತ್ರಜ್ಞಾನ ಪ್ರಾತ್ಯಕ್ಷಿಕೆ”ಅಡಿಯಲ್ಲಿ 2023-24 ನೇಸಾಲಿನ ಗೇರು ಕೃಷಿಗೆ ಆರ್ಥಿಕ ಸಹಾಯದ ವಿವರ.
ವ್ಯಾಪ್ತಿ: ದೇಶದ ವಿವಿಧ ಗೇರು ಬೆಳೆಯುವ ಪ್ರದೇಶಗಳು
ದಯವಿಟ್ಟು ಗಮನಿಸಿ: 1) ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ : ಜುಲೈ 31, 2023
2) ಮೊದಲು ಬಂದವರಿಗೆ ಆದ್ಯತೆ
ಆರ್ಥಿಕ ಸಹಾಯಕ್ಕೆ ನಿಬಂಧನೆಗಳು:
1. ಮುಂಚೂಣಿ ತಂತ್ರಜ್ಞಾನ ಪ್ರಾತ್ಯಕ್ಷಿಕೆ (FLTD) ಯನ್ನು ಒಂದು ಎಕರೆ ಪ್ರದೇಶದಲ್ಲಿ 7 ಮೀ x 7 ಮೀ ಅಂತರದಲ್ಲಿ ಪ್ರತಿ ಎಕರೆಗೆ 80 ಗಿಡಗಳೊಂದಿಗೆ ಕೈಗೊಳ್ಳಬೇಕು.
2. ನೇತ್ರ ಗಂಗಾ (H-130), ನೇತ್ರ ಜಂಬೋ-1, ನೇತ್ರ ಉಭಯ ಮತ್ತು ಭಾಸ್ಕರ ಎಂಬ ನಾಲ್ಕು ತಳಿಗಳನ್ನು ನೆಡುವುದು ಕಡ್ಡಾಯವಾಗಿದೆ ಮತ್ತು ಈ ತಳಿಗಳ ಕಸಿಗಿಡಗಳನ್ನು ರಾಷ್ಟ್ರಿಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು ಇಲ್ಲಿನ ನರ್ಸರಿಯಿಂದ ಪಡೆಯಬೇಕು.
3. ಪ್ರತಿಯೊಂದು ತಳಿಯ ಇಪ್ಪತ್ತು ಕಸಿಗಿಡಗಳನ್ನು ನೆಡಬೇಕು (4 x 20=80).
4. ಒಂದು ಎಕರೆಗೆ ರೂ.8000 ಆರ್ಥಿಕ ನೆರವು ನೀಡಲಾಗುವುದು.
5. ಹಣಕಾಸಿನ ನೆರವು ನೆಟ್ಟ ಕಸಿಗಿಡಗಳ ಖರೀದಿ ವೆಚ್ಚ ಮತ್ತು ಪೋಷಕಾಂಶ ಮತ್ತು ಕೀಟ ನಿರ್ವಹಣೆಯ ವಸ್ತುಗಳ ವೆಚ್ಚಕ್ಕೆ ಸೀಮಿತವಾಗಿದೆ ಮತ್ತು 2023-24 ಹಣಕಾಸು ವರ್ಷಕ್ಕೆ ಮಾತ್ರ ಅನ್ವಯಿಸುತ್ತದೆ.
6. DCCD ಮೂಲಕ MIDH ಅಡಿಯಲ್ಲಿ ನೀಡಲಾದ ಯೋಜನೆಯ ಹೆಸರು ಮತ್ತು ಹಣಕಾಸಿನ ನೆರವನ್ನು ಬಿಂಬಿಸುವ ಕ್ಷೇತ್ರ ಫಲಕವನ್ನು ಹಾಕಬೇಕು.
7. ಕ್ಷೇತ್ರಭೇಟಿ ಹಾಗೂ ಪರಿಶೀಲನೆಯ ನಂತರ ಸಹಾಯಧನವನ್ನು ಬ್ಯಾಂಕ್ ಖಾತೆಗೆ ಹಾಕಲಾಗುವುದು.
ಅರ್ಜಿಗಳನ್ನು ಈ ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು: https://cashew.icar.gov.in/wp-content/uploads/2023/06/Frontline-demonstration.pdf ಅಥವಾ ಕೆಳಗಿನ ಅರ್ಜಿಯನ್ನು ಬಳಸಿಕೊಳ್ಳಬಹುದು
ಹೆಚ್ಚಿನ ಮಾಹಿತಿಗೆ: 9916074454 or email: era.dasappa@gmail.com
ರಾಷ್ಟ್ರಿಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು, ಕರ್ನಾಟಕ
“ಹೊಸ ಗೇರು ತಳಿಗಳ ಮುಂಚೂಣಿ ತಂತ್ರಜ್ಞಾನ ಪ್ರಾತ್ಯಕ್ಷಿಕೆ” ಯೋಜನೆ ಅಡಿಯಲ್ಲಿ 2023-24ನೇ ಸಾಲಿನ ಗೇರು ಕೃಷಿಗೆ ಆರ್ಥಿಕ ಸಹಾಯಕ್ಕೆ ಅರ್ಜಿ
ಹೆಸರು:
ವಿಳಾಸ:
ಸಂಪರ್ಕ ಸಂಖ್ಯೆ (ಮೊಬೈಲ್/ಲ್ಯಾಂಡ್ ಲೈನ್):
ಇ-ಮೈಲ್(ಇದ್ದರೆ):
ಬ್ಯಾಂಕ್ ಹೆಸರು :
ಖಾತಾದಾರರ ಹೆಸರು:
ಬ್ಯಾಂಕಿನ ಬ್ರಾಂಚ್ ಇರುವ ಸ್ಥಳ:
ಖಾತೆ ನಂಬರ್ :
ಐಎಫ್ ಎಸ್ ಸಿ ಕೋಡ್:
ಅರ್ಜಿದಾರರ ಸಹಿ
ಲಗತ್ತಿಸಬೇಕಾದ ದಾಖಲೆಗಳು:
ಆಧಾರ್ ಕಾರ್ಡ್ ,ಆರ್ ಟಿಸಿ, ಬ್ಯಾಂಕ್ ಪಾಸ್ ಪುಸ್ತಕದ ಝೆರಾಕ್ಸ್ ಹಾಗೂ ನರ್ಸರಿಯಿಂದ ಗಿಡ ಖರೀದಿಸಿದ ಮೂಲ ರಸೀದಿ, ಪಾಸ್ಪೋರ್ಟ್ ಅಳತೆಯ ಫೋಟೋ ಅಂಟಿಸಿ
ಅರ್ಜಿ ಕಳುಹಿಸಬೇಕಾದ ವಿಳಾಸ ಮತ್ತು ಹೆಚ್ಚಿನ ಮಾಹಿತಿಗೆ:
ಡಾ. ಈರದಾಸಪ್ಪ,
ಹಿರಿಯ ವಿಜ್ಞಾನಿ
ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ , ಪುತ್ತೂರು -574 202
ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ
ಮೊಬೈಲ್: 99160 74454
ಕೊನೆಯ ದಿನಾಂಕ : ಜುಲೈ 31, 2023