ನಾಪೋಕ್ಲು :ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಕಾನೂನುಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರಿಗೆ ಎಮ್ಮೆ ಮಾಡುವಿನಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಎಮ್ಮೆಮಾಡು ಶಾದಿ ಮಹಲ್ ನಲ್ಲಿ ಎಮ್ಮೆ ಮಾಡು ವಲಯ ಕಾಂಗ್ರೆಸ್, ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾತ್ ಹಾಗೂ ಪಡಿಯಾಣಿ ಜಮಾಅತ್ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಾಸಕ ಪೊನ್ನಣ್ಣ ಅವರಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಎ.ಇಸ್ಮಾಯಿಲ್, ಎಮ್ಮೆಮಾಡು ವಲಯ ಕಾಂಗ್ರೆಸ್ ಅಧ್ಯಕ್ಷ ಎಂ. ಎಂ.ಹಂಝ, ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಾಖಾಫಿ,
ಗ್ರಾಮ ಪಂಚಾಯಿತಿ ಸದಸ್ಯರು,ಎಮ್ಮೆಮಾಡು ವಲಯ ಕಾಂಗ್ರೆಸ್ ಕಾರ್ಯಕರ್ತರು, ಎಮ್ಮೆಮಾಡು ಜಮಾಅತ್, ಪಡಿಯಾಣಿ ಜಮಾಅತ್ ಸದಸ್ಯರು, ಎಮ್ಮೆಮಾಡು, ಪಡಿಯಾಣಿ ಬೂತ್ ಅಧ್ಯಕ್ಷರು ಮತ್ತಿತರ ಪ್ರಮುಖರು ಗ್ರಾಮಸ್ಥರು ಹಾಜರಿದ್ದರು.
✍️….ವರದಿ: ಝಕರಿಯ ನಾಪೋಕ್ಲು